ತಂದೇ ಪಾಲಿಸೋ

ತಂದೆ ಶ್ರೀ ವಿಶ್ವಕರ್ಮ ಪಾಲಿಸೊ | ವಂದೇ ಶ್ರೀಪರ ಬೊಮ್ಮ || ಪ ||

ಹರಿಹರ ನೀ ವಿಶ್ವಕರ್ಮಾ ವಿಶ್ವದ ಎಲ್ಲ ಧರ್ಮಗಳ ಮರ್ಮಾ || ಅ.ಪ. ||

ಸೃಷ್ಟಿಯ ಶಕ್ತಿಗೆ ಮೂಲಾ ವಿಧವಿಧ | ಸೃಷ್ಟಿಸ್ಥಿತಿ ಲಯ ಜಾಲಾ
ಆತ್ಮದ | ಅಗಣಿತ ರೂಪ ಸಲೀಲಾ
ಮಾನಸ ಲೋಕದ ಮತಿಯ ಮಂದಿರದಿ | ನೀನೇ ನೀನಾಗಿ ತುಂಬಿ
ಮೆರೆವಂಥ | ನಿರ್ಮಾಯ ನಿರಾವಲಂಬಿ || ೧ ||

ಹಂಸಾ ನಾಥಾ ಆದೀ ನಾಥಾ | ಚಿದಂಬರಾ ಜಿನದೇವಾ
ಜೈನರು | ನೆನೆಯುವ ನಿರ್ವಾಣ ಭಾವಾ
ಮಾರಾರಿ ಮಾಯಾರಿ ಶೂನ್ಯದಿ ಸಂಚಾರಿ | ಬುದ್ಧನ ಬುದ್ಧಿಗೆ ಹೊಳೆದೆ
ಮಿಂಚಂತೆ | ಇದ್ದವನಿದ್ದಲ್ಲೆ ಇಳಿದೆ || ೨ ||

ಇಹದಲ್ಲಿ ನಿನ್ನಯ ಪ್ರೇಮದ ಸಲಿಲವ | ಹರಿಸಿದ ಕ್ರೈಸ್ತನ ಪ್ರಭುವೆ
ಸಮತೆಯ ಲೋಕವ ತೆರೆದಂಥ ವಿಭುವೆ
ಗುಡ್ಡದ ಗವಿಯಲಿ ಪೈಗಂಬರನಿಗೆ | ಕಾಣಿಸಿ ಕಣ್ಣಾದ ಅಲ್ಲಾ
ಈಶ್ವರ | ಮುಸ್ಲಿಂ ಧರ್ಮದ ಬೆಲ್ಲಾ || ೩ ||

ರಾಮನ ಕೃಷ್ಣನ ಹತ್ತವತಾರದ | ವಿಷ್ಟು ನಾರಾಯಣ ವಂದೇ
ಸಂತರ | ಭಕ್ತರ ಪೊರೆಯುವ ತಂದೇ
ಶಿವಶಿವ ಹರಹರ ಶಂಭೋಶಂಕರ | ಗಿರಿಜಾಧವನೆಂದು ಕರೆವೆ
ಶೈವರ | ವಿಶ್ವೇಶ್ವರನೆಂಬ ವರವೇ || ೪ ||

ಆದಿಶಕ್ತಿ ಆದಿಮಾಯೆ ಸರ್ವೇಶ್ವರಿ | ಶಾಂಭವಿ ಪಾರ್ವತಿ ಲಕುಮೀ
ಶಾರದೆ | ದೇವಿಯ ರೂಪದ ಸ್ವಾಮಿ
ಸರ್ವಧರ್ಮ ಸಮಲೋಚನ ಸರ್ವೇಶ | ಸರ್ವಾಗಮ ವಂದ್ಯ ಬಂಧು
ದೇವನೆ | ದೇಶಕಾಲಾತೀತ ಸಿಂಧು || ೫ ||

ಸಕಲ ನಿಷ್ಕಲ ರೂಪ ಸಕಲ ಕಲಾಧೀಶ | ಸಕಲಾತ್ಮ ಪರಿಪೂರ್ಣಶಿಲ್ಪಿ
ವಿಶ್ವದ | ರಚನೆಯ ಮಾಡಿದ ಶಿಲ್ಪಿ
ವೇದಾಗಮಗಳೆ ಹೊಗಳಲರಿಯದ ನಿನ್ನ | ಬಣ್ಣಿಸ ಹೋಗುವ ಮರುಳ
ಅಲ್ಪನು | ಅರಿಯನು ನಿನ್ನಯ ತಿರುಳ || ೬ ||

ಬೈಬಲು ಭಗವದ್ ಗೀತೆ ಕುರಾನು | ಎಲ್ಲವು ಹಾಡಿದ ಗುರುವೆ
ಮನಗಳ | ಮಂದಿರಗಳಲೆಲ್ಲ ಇರುವೆ
ಸಣ್ಣ ದೇವರುಗಳು ನೂರಾರು ಇರುವಾಗ | ಸಣ್ಣದಾಯಿತು ಮನವು ತಂದೇ
ತೋರಿಸು | ಎಲ್ಲರ ದೇವರು ಒಂದೇ || ೭ ||

ವಿಶ್ವ ವಿಶ್ವಗಳನ್ನೆ ತುಂಬಿ ತೋರುವ ನಿನ್ನ| ವಿಶ್ವರೂಪವ ತೋರು ದೇವಾ
ಸೃಷ್ಟಿಯ ಪ್ರತಿರೂಪ ನಿನ್ನ ಪ್ರಭಾವ || ೮ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಡು ಕನ್ನಡ
Next post ಜೈ MONEY ಭಾರತ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…