ಆಡು ಕನ್ನಡ

ಆಡು ಕನ್ನಡ ಹಾಡು ಕನ್ನಡ
ಮಾತಾಡು ಕನ್ನಡವೇ

ಪಂಪನ ಪೆಂಪಿನ ಗೊಟ್ಟಿಯಲಂಪಿನ
ಮೃದು ಪದಬಂಧದ ಚಂದದ ಕನ್ನಡ
ಆದಿ ಕಾವ್ಯದಲೆ ಅನಾದಿ ಕಂಡ ಕನ್ನಡ
ಮಹಾ ಕನ್ನಡ

ರನ್ನನ ಜನ್ನನ ಪೊನ್ನನ ಹೊನ್ನಿನ
ರಾಘವ ಲಕ್ಷ್ಮೀಶ ಕುಮಾರವ್ಯಾಸರ
ಗಟ್ಟಿ ಕನ್ನಡ ಬಟ್ಟ ಕನ್ನಡ
ಅಚ್ಚಕನ್ನಡ ಮಿಶ್ರಕನ್ನಡ
ಆಳ ಕನ್ನಡ ವಿಶಾಲ ಕನ್ನಡ
ಆಲದಂತೆ ಊರ್ಧ್ವಮುಖಿ
ಅಧಃ ಶಾಖ
ಆಡು ಕನ್ನಡ

ಕಿಸುವೊಲ ಪೊಳಲ ಕನ್ನಡ
ಪುಲಿಗೆರೆಯ ತಿರುಳ ಕನ್ನಡ
ಬನವಾಸಿಯ ಕರುಳ ಕನ್ನಡ
ಕವಿಶೈಲದ ಡಿಂಡಿಮ ಕನ್ನಡ
ಸಾಧನ ಕೇರಿಯ ಭೇರಿ ಕನ್ನಡ
ಅಕ್ಕನ ಅಣ್ಣ ಕನ್ನಡ
ಕೂಡಲಸಂಗಮ ದೇವ ಕನ್ನಡ
ಶ್ರೀಗಂಧದ ಕಂಪು ಕನ್ನಡ

ಸಹ್ಯಾದ್ರಿಯ ತಂಪು ಕನ್ನಡ
ಹಂಪಿಯ ನೋಂಪಿಯ ಸಮಸ್ತ ಕನ್ನಡ

ಚಂಪು ಕನ್ನಡ ಷಟ್ಪದಿ ಕನ್ನಡ
ವಚನ ಕನ್ನಡ ಛಂದ ಕನ್ನಡ
ಬಂಧಮುಕ್ತ ಹೊಸ ಅಂದ ಕನ್ನಡ

ದೇಸಿ ಕನ್ನಡ ಮಾರ್ಗ ಕನ್ನಡ
ಆ ಕನ್ನಡ ಈ ಕನ್ನಡ ಓ ಕನ್ನಡ
ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಕನ್ನಡ

ಅರಿತ ಕನ್ನಡ ಮರೆತ ಕನ್ನಡ ನಿರತ ಕನ್ನಡ ಎಲ್ಲ ಕನ್ನಡ
ಆಡು ಕನ್ನಡ ಹಾಡು ಕನ್ನಡ
ಮಾತಾಡು ಕನ್ನಡವೇ

ಸುಖ ಕನ್ನಡ ಶುಭ ಕನ್ನಡ ಕ್ರಾಂತಿ ಕನ್ನಡ ಶಾಂತಿ ಕನ್ನಡ
ಆಡು ಕನ್ನಡ ಹಾಡು ಕನ್ನಡ
ಮಾತಾಡು ಕನ್ನಡವೇ

ಅಮಿತ ಕನ್ನಡ ಅಮೃತ ಕನ್ನಡ ಅನವರತ ಕನ್ನಡ
ಆಡು ಕನ್ನಡ ಹಾಡು ಕನ್ನಡ
ಮಾತಾಡು ಕನ್ನಡವೇ

ಮಾತಾಡು ಕನ್ನಡವೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗೇವಿ – ೧
Next post ತಂದೇ ಪಾಲಿಸೋ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…