“ಅವಳ್ಯಾರು ವಾಗ್ದೇವಿಯೇ? ಆಹಾ! ಸಾಕ್ಷಾತ್ ಅಜನರಾಣಿಯೇ ಸರಿ.”
“ಪರಾಕೆ! ಅಜನರಾಣಿಗಾದರೂ ನಾಸಿಕನಾಸ್ತಿ. ವಾಗ್ದೇವಿಗೆ ಆ ಅಂಗವು ಸಂಪೂರ್ಣತೆಯುಳ್ಳದ್ದಾಗಿದೆ ಆದಕಾರಣ ಬೊಮ್ಮನ ಪತ್ನಿಗಿಂತ ವಾಗ್ದೇವಿಯೇ ಹೆಚ್ಚು ರೂಪವತಿಯೆಂದು ನನ್ನ ಅಭಿಪ್ರಾಯ.”
“ಪೂರ್ವಾಶ್ರಮದಲ್ಲಿ ನಮ್ಮ ಆಣ್ಣಗೆ ಇವಳು ನಾದಿನಿ. ನಾವು ಸನ್ಯಾಸ ಪಡಕೊಂಡ ತರುವಾಯ ಅವಳನ್ನು ಇದು ಮೊದಲು ನೋಡಲಿಲ್ಲವು. ಇವಳ ರೂಪಲಾವಣ್ಯವನ್ನು ಈಗ ನೋಡಿದರೆ, ಷಡ್ವೈರಿಗಳನ್ನು ನಿಗ್ರಹಮಾಡಿದ ಯತಿಯಾದರೂ ಸೋಥೋಗನೇ?”
“ಪರಾಕೆ! ಸೃಷ್ಟಿಸ್ಥಿಲಯಕ್ಕೆ ಕಾರಣಭೂತರಾದ ಅಜ ಹರಿ ರುದ್ರ– ಇವರೇ ಒಬೊಬ್ಬರನ್ನು ಕಟ್ಟಿಕೊಂಡ ಮೇಲೆ, ಮಾನನ ಜನ್ಮದಲ್ಲಿ ಹುಟ್ಟಿ ದವನ ಪಾಡೇನು?”
ಈ ಸಂಭಾಷಣೆಯು ಕುಮುದಪುರದಲ್ಲಿ ಕಾಳಿಕಾ ನದಿಯ ತೀರದಲ್ಲಿ ಸ್ವಾನವನ್ನು ಗೈದು, ಶುಚಿರ್ಭೂತರಾಗಿರುತ್ತಿದ್ದ ಚಂಚಲನೇತ್ರ ಶ್ರೀಪಾದಂ ಗಳಿಗೂ ಅವರ ಅಚ್ಚುಮೆಚ್ಚಿನ ಪಾರುಪತ್ಯಗಾರ ವೆಂಕಟಪತಿಯಾಚಾರ್ಯಗೂ ನಡೆಯುತ್ತಲಿತ್ತು. ಪರಿಚಾರಕನಾದ ಹಯಗ್ರೀವಮಾಣಿಯು ಒಂದು ಶಬ್ದ ವಾದರೂ ಕಿವಿಗೆ ಕೇಳದವನಂತೆ ಅತ್ತಿತ್ತ ನೋಡುತ್ತಾ ನಿಂತುಕೊಂಡಿದ್ದನು. ಅವನನ್ನು ನೋಡಿ ವೆಂಕಟಪತಿಯು ಶ್ರೀಪಾದಂಗಳೊಡನೆ, “ಪರಾಕೆ! ಹುಟ್ಟು ಕಿವುಡನಾದ ಈ ಮಾಣಿಯ ಅವಸ್ಥೆಯು ನಿಜವಾಗಿ ಕನಿಕರಪಡಲಿಕ್ಕೆ ಯೋಗ್ಯವಾದ್ದೇ. ನಾವು ಏನೇನು ಮಾತಾಡಿವೆನೆಂದು ಅವನಿಗೆ ಸ್ವಲ್ಪವಾದರೂ ಗೊತ್ತಾಯಿತೇ? ಶ್ರೀಹರಿ! ನಿನ್ನ ಮಹಿಮೆಯು ಅಪಾರವಾದದ್ದು. ಇಷ್ಟು ಒಳ್ಳೇ ಹುಡುಗನಿಗೆ ಕರ್ಣದೋಷವನ್ನು ನೀನು ಕೊಟ್ಟ ದೆಸೆಯಿಂದ ಅವನ ಜನ್ಮವೇ ವ್ಯರ್ಧವಾಯಿತು” ಎಂದನು. “ಇಂಧಾ ಕುಂದು ಈ ಯೌವನ ನಸ್ಥನಿಗೆ ಇದ್ದಿಲ್ಲವಾದರೆ ಈಗ ನಮ್ಮಿಬ್ಬರಿಗಾದ ಸಂಭಾಷಣೆಯನ್ನು ಅವನು ಊರಲ್ಲೆಲ್ಲಾ ಲವಮಾತ್ರದಲ್ಲಿ ಪ್ರಕಟಪಡಿಸಿ ನಾಚಿಗೆಗೇಡು ಮಾಡಿಬಿಡುತಿದ್ದ ನಲ್ಲವೇ? ಇವನಂತಿರುವ ಚಾಕರನು ದೇವರ ದಯದಿಂದಲೇ ನಮಗೆ ದೊರಕಿ ದನು” ಎಂದು ಚಂಚಲನೇತ್ರರು ಹೇಳಿದರು. ಆಗ ವೆಂಕಟಪತಿಯು “ಸತ್ಯ ಸತ್ಯ ತ್ರಿವಾಚಾ” ಎಂದು ಉದ್ದಂಡ ನಮಸ್ಕಾರ ಮಾಡಿದನು.
*****
ಮುಂದುವರೆಯುವುದು