ರಾಜ ಒಡೆಯರ ಬಲವು ದಿನೇ ದಿನೇ ಹೆಚ್ಚುತ್ತಿದ್ದುದನ್ನು ಕಂಡು ಶ್ರೀರಂಗಪಟ್ಟಣದ ಅಧಿಕಾರಿಗಳು ಹೇಗಾದರೂ ರಾಜ ಒಡೆಯರನ್ನು ಕೊನೆಗಾಣಿಸಬೇಕೆಂದು ಯೋಚಿಸಿದರು. ಗೋಪ್ಯವಾಗಿ ಪ್ರಯತ್ನ ಮಾಡುವುದೇ ಲೇಸೆಂದು ಅವರು ಆಲೋಚಿಸಿ ಮೈಸೂರಿನ ಅರಮನೆಯಲ್ಲಿ ಒಡೆಯರಿರುವಾಗಲೇ ಅವರನ್ನು ವಧೆ ಮಾಡಿಸುವ ತಂತ್ರವನ್ನು ಹೆಣೆದರು.
ಶ್ರೀರಂಗಪಟ್ಟಣದಿಂದ ರಾಜ ಒಡೆಯರ ಆಸ್ಥಾನಕ್ಕೆ ರಾಜಕಾರ್ಯನಿಮಿತ್ತವಾಗಿ ಒಬ್ಬ ಅಧಿಕಾರಿಯು ಕೆಲವು ಸೈನಿಕರೊಡನೆ ಹೊರಡಬೇಕಾಗಿತ್ತು. ಇದೇ ಸಮಯವೆಂದು ಆ ಅಧಿಕಾರಿಯು ಏಕಾಂತವಾಗಿ ರಾಜ ಒಡೆಯರೊಡನೆ ಮಾತನಾಡುವ ಹಾಗೂ, ಆ ಆಧಿಕಾರಿಯು ಅದೇ ವೇಳೆಯಲ್ಲಿ ಒಡೆಯರನ್ನು ಸಂಹರಿಸುವ ಹಾಗೂ ಕೂಡಲೆ ಅಧಿಕಾರಿಯ ಜೊತೆಯಲ್ಲಿದ್ದ ಸೈನಿಕರು ಆತನನ್ನು ರಕ್ಷಿಸುವ ಹಾಗೂ ಏರ್ಪಡಿಸಿದರು. ಅಧಿಕಾರಿಯು ಮೈಸೂರಿಗೆ ಬಂದು ಒಡೆಯರೊಡನೆ ಏಕಾಂತವಾಗಿ ಆಲೋಚನೆ ಮಾಡುವ ಸಂದರ್ಭವಿದೆ. ಆದ್ದರಿಂದ ನಾನು ಬಂದಿದ್ದೇನೆ” ಎಂದು ಹೇಳಲು ರಾಜ ಒಡೆಯರು ಏನೂ ಅನುಮಾನಪಡದೆ ತಮ್ಮ ಪರಿವಾರದವರನ್ನು ದೂರ ಹೋಗಿರೆಂದು ಅಪ್ಪಣೆ ಮಾಡಿದರು. ಆದರೆ ಎಲ್ಲರೂ ದೂರ ಹೋಗಲಿಲ್ಲ. ಒಬ್ಬ ಸೇವಕನು ಅನುಮಾನಪಟ್ಟು ಒಂದು ಕಂಬದ ಹಿಂದೆ ಅವಿತುಕೊಂಡು ನೋಡುತಿದ್ದನು. ಹಾಗೆಯೇ ನೋಡುತ್ತಿರಲಾಗಿ ಅಧಿಕಾರಿಯು ಮಾತನಾಡುತ್ತ ಹತ್ತಿರ ಬರುತ್ತ, ತನ್ನ ಕೈಯ್ಯನ್ನು ಸೊಂಟದಲ್ಲಿದ್ದ ಕಠಾರಿಯ ಮೇಲಿಟ್ಟುದನ್ನು ಕಂಡನು. ಕೂಡಲೇ ಸೇವಕನು ಚಂಗನೆ ಹಾರಿ ಅಧಿಕಾರಿಯನ್ನು ಹಿಡಿದು ನೆಲಕ್ಕೆ ಕೆಡಹಿ ತನ್ನ ಕಠಾರಿಯಿಂದ ಇರಿದನು. ಅಧಿಕಾರಿಯು ಮಾತಿಲ್ಲದೆ ಪ್ರಾಣಬಿಟ್ಟನು. ಬೆಂಗಾವಲಿಗೆ ಬಂದಿದ್ದ ಸೈನಿಕರು ಚದರಿ ಓಡಿಹೋದರು. ರಾಜ ಒಡೆಯರ ಪ್ರಾಣವು ಈ ಸೇವಕನ ಜಾಗರೂಕತೆಯಿಂದ ಉಳಿಯಿತು.
*****
[ಮಿಲ್ಕ್ಸ್ ಸಂ, ೧, ಪುಟ ೨೫]