ಸೂರು

ನಂಬಿ ಕೆಟ್ಟವರಿಲ್ಲವೋ ಹರಿಯ; ದಾಸರೆಂದರು ನಂಬಿ ಕೆಟ್ಟೆ ನಾ ಮಾರಿ ಮನೆ ಮಾರು ಮಾಡಿದ ಊರಿಂದೂರಿಗೆ ಗಡಿಪಾರು ಆದರೂ ಕಳಿಸಿರುವೆ ಅವಸರದಿ ತಾರು ಬೇಕೇಬೇಕೆಂದು ನೆಮ್ಮದಿಯ ಸೂರು *****

ವಿಘಟನೆ

ಚಿನ್ನವೆಂಬ ಹೆಣ್ಣು ಕಬ್ಬಿಣವೆಂಬ ಗಂಡು ತಾಮ್ರವೆಂಬ ಶ್ರೀಮಂತ ಹಿತ್ತಾಳೆಯೆಂಬ ಬಡವಿ ಬೇಧವಿಲ್ಲದೆ ಬೆರೆತು ಒಂದಾಗುವುದು ಕರಗಿ ಕುಲುಮೆಯ ಕುದಿವಂತ ಮೂಸೆಯೊಳಗೆ ದ್ರವವಲ್ಲದ ಖನಿಜವಲ್ಲದ ಕೂಡಿ ಬಾಳಲೂ ತಿಳಿಯದ ಪಾದರಸ ಮಧ್ಯೆ ಬಂದರೆ ವಿರಸ ವಿಚ್ಛೇದನವಾಗಿ...