ಪಾಪಿಯ ಪಾಡು – ೨೩

ಪಾಪಿಯ ಪಾಡು – ೨೩

ಮಾರನೆಯ ದಿನ ಪ್ರಾತಃಕಾಲದಲ್ಲಿ ಮೇರಿಯಸ್ಕನ ಮನೆಗೆ ಹೋಗಿ, ಅವನಲ್ಲಿ ಏಕಾಂತವಾಗಿ ಜೀನ್ ವಾಲ್ಜೀನನು ಮಾತ ನಾಡಬೇಕಾಗಿರುವುದೆಂದು ಕೇಳಿದನು. ಸಂತೋಷದಿಂದ ಅವನನ್ನು ಗೌರವಿಸಿ, ಮೇರಿಯಸ್ಸು, ‘ ತಂದೆ, ನಿಮ್ಮನ್ನು ನೋಡಿ ನನಗೆ ಬಹಳ ಸಂತೋಷವಾಯಿತು ! ನೀವು ನಿನ್ನೆಯ ದಿನ ಬಾರದೆ ಇದ್ದುದು ನಮ್ಮೆಲ್ಲರಿಗೂ ವ್ಯಸನಕ್ಕೆ ಕಾರಣವಾಗಿತ್ತು. ಈಗ ನಿಮ್ಮ ಕೈ ನೋವ್ರ ಹೇಗಿದೆ ? ಸ್ವಲ್ಪ ಕಡಿಮೆಯಾಗಿರಬಹು ದಲ್ಲವೇ ? ‘ ಎಂದನು.

ಅದಕ್ಕೆ ಜೀನ್‌ ವಾಲ್ಜೀನನು, ‘ ಅಯ್ಯಾ, ನಾನು ನಿನ ಗೊಂದು ವಿಷಯವನ್ನು ತಿಳಿಸಬೇಕಾಗಿದೆ. ನಾನೊಬ್ಬ ಶಿಕ್ಷಿತ ನಾದ ಹಳೆಯ ಅಪರಾಧಿಯು,’ ಎಂದನು.

ಮೇರಿಯಸ್ಸನು ಇದನ್ನು ಗಮನಿಸಿ ಕೇಳಲಿಲ್ಲ. ಅವನು ಏನೋ ಹೇಳಿದನಾದರೂ ಅದರ ಭಾವವೇನೆಂಬುದು ಅವನಿಗೆ ತಿಳಿಯಲೇ ಇಲ್ಲ. ಆದರೂ ಅವನಿಗೆ ಗಾಬರಿಯಾಯಿತು. ತನ್ನೊ ಡನೆ ಮಾತನಾಡುತ್ತಿದ್ದ ಮನುಷ್ಯನು ಮಹಾ ಕಠೋರನೂ ಭಯಂಕರನೂ ಆದ ವ್ಯಕ್ತಿಯೆಂದು ಅವನಿಗೆ ತೋರಿತು. ಅವನ ಮನಸ್ಸು ಗಾಬುಗೊಂಡಿದ್ದರೂ, ಮುಖ ಮಾತ್ರ ಈವರೆಗೂ ಹೀಗೆ ಭಯದಿಂದ ಯಾವಾಗಲೂ ಕಳೆಗೆಟ್ಟಿರಲಿಲ್ಲ.

ಜೀನ್ ವಾಲ್ಜೀನನು ತನ್ನ ಬಲದೊಳಿಗೆ ಕಟ್ಟಿದ್ದ ಕೊರಳ ಪಟ್ಟಿಯನ್ನು ಬಿಚ್ಚಿ, ಕೈಗೆ ಸುತ್ತಿದ್ದ ಬಟ್ಟೆಯನ್ನು ತೆಗೆದುಹಾಕಿ, ಬರಿಯ ಹೆಬ್ಬೆರಳನ್ನು ಮೇರಿಯಸ್ಸನಿಗೆ ತೋರಿಸಿದನು.

‘ ನನ್ನ ಕೈಗೆ ಏನೂ ಆಗಿರಲಿಲ್ಲ. ನಿಮ್ಮ ಮದುವೆಯ ಸಮಯದಲ್ಲಿ ನಾನು ಅಲ್ಲಿ ಇಲ್ಲದಿರುವುದೇ ಉತ್ತಮವೆಂದು ಆಲೋಚಿಸಿ, ಸಾಧ್ಯವಾದ ರೀತಿಯಿಂದ ತಪ್ಪಿಸಿಕೊಂಡೆನು. ನಾನು ಸುಳ್ಳು ರುಜುವನ್ನು ಮಾಡದಿರುವುದಕ್ಕಾಗಿಯೂ ವಿವಾಹದ ಕಾನೂನು ರದ್ಯಾಗಲು ಅವಕಾಶಕೊಡದಿರುವುದಕ್ಕಾ ಗಿಯ ಮತ್ತು ನಾನ, ರುಜುವಾಡದಿದ್ದರೆ ಯಾರೂ ಅಸಮಾ ಧಾನಪಡದೆ ನನ್ನನ್ನು ಕ್ಷಮಿಸಬೇಕೆಂತಲೂ ಸಹ ನನ್ನ ಕೈ ಗಾಯ ವಾಗಿದೆ ಎಂದು ನಟನೆಮಾದೆನು,’ ಎಂದನು.

ಮೇರಿಯಸ್ಸನು ಇದನ್ನು ಕೇಳಿ, ತೊದಲ್ನು ಡಿಯಿಂದ, ‘ ಇದರ ಭಾವವೇನೋ ನನಗೆ ತಿಳಿಯಲಿಲ್ಲ,’ ಎಂದನು.

ಅದಕ್ಕೆ ಜೀನ್ ವಾಲ್ಜೀನನು, ಇದರ ಭಾವವು ನಾನು ಗ್ಯಾಲಿಯಲ್ಲಿ ಶಿಕ್ಷಿತನಾಗಿದ್ದ ಅಪರಾಧಿಯು, ಎಂದು,’ ಎಂದುತ್ತರ ಕೊಟ್ಟನು.

ಮೇರಿಯಸ್ಸನು ಇದನ್ನು ಕೇಳಿ ಭಯದಿಂದ, ” ಏನದು ? ನಿಮ್ಮ ಮಾತಿನಿಂದ ನನಗೆ ಹುಚ್ಚು ಹಿಡಿಸುತ್ತಿರುವಿರಲ್ಲಾ!’ ಎಂದನು.

ಅದಕ್ಕೆ ಜೀನ್ ವಾಲ್ಜೀನನ್ನು, ‘ ನಾನು ಕಳ್ಳತನ ಮಾಡಿ ಹತ್ತೊಂಭತ್ತು ವರ್ಷಗಳ ಕಾಲ, ಗಾಲಿಯಲ್ಲಿ ಶಿಕ್ಷಿತನಾಗಿದ್ದೆನು. ಮತ್ತೆ ಎರಡನೆಯ ಸಲ ಕಳ್ಳತನಮಾಡಿದ ಅಪರಾಧಕ್ಕಾಗಿ ನನಗೆ ಆಮರಣಾಂತ ಶಿಕ್ಷೆಯ ವಿಧಿಸಲ್ಪಟ್ಟಿತ್ತು. ಈಗ ನಾನು ಆಜ್ಞೋ ಲ್ಲಂಘನ ಮಾಡಿ ತಪ್ಪಿಸಿಕೊಂಡು ಬಂದಿದ್ದೇನೆ,’ ಎಂದು ಹೇಳಿ, ಒಂದು ಕ್ಷಣಕಾಲ ಸುಮ್ಮನೆ ತರ್ಜನಿಯ ಬೆರಳನ್ನು ಹೆಬ್ಬೆಟ್ಟಿನ ಉಗುರಿನ ಮೇಲೆ ಆಡಿಸುತ್ತ, ಆಲೋಚನೆಯಲ್ಲಿದ್ದು, ಅನಂತರ ಗಟ್ಟಿಯಾಗಿ, ‘ ಇನ್ನೇನು ! ಎಲ್ಲವೂ ಕೊನೆಗಂಡಂತಾಯಿತು. ಇನ್ನೊಂದು ಮಾತ್ರ ಉಳಿದಿದೆ’ ಎನ್ನುವಷ್ಟರಲ್ಲಿ, ಮೇರಿ ಯಸ್ಸನ್ನು, ” ಏನು ?’ ಅಂದನು.

ಜೀನ್‌ ವಾಲ್ಜೀನನು ಬಹಳವಾಗಿ ಅನುಮಾನಿಸಿ, ಮಾತ ನಾಡಲು ಉಸಿರಿಲ್ಲದವನಾಗಿ, ತೊದಲುತ್ತ, “ಅಯ್ಯಾ ! ಎಲ್ಲ ವಿಷಯಗಳೂ ನಿನಗೆ ಗೊತ್ತಾದುವಷ್ಟೆ ! ಈಗ ನೀನು ಯಜಮಾನ ನಾಗಿರುವೆ. ನಾನು ಮತ್ತೆ ಕೋ ಸೆಟ್ಟಳನ್ನು ನೋಡಕೂಡ ದೆಂದು ನಿನ್ನ ಅಭಿಪ್ರಾಯವಿರುವುದೇ ?’ ಎಂದು ಕೇಳಿದನು. ಅದಕ್ಕೆ ಮೇರಿಯಸ್ಸನು, ‘ ಅದೇ ಉತ್ತಮ,’ ಎಂದು ನಿರ್ದಾ ಕ್ಷಿಣ್ಯವಾಗಿ ನುಡಿದನು.

ಜೀನ್‌ ವಾಲ್ಜೀನನು, “ ಇನ್ನು ನಾನು ಅವಳನ್ನು ನೋಡಲೇ ಕೂಡದು!’ ಎಂದು ಗೊಣಗುಟ್ಟಿಕೊಂಡು ಬಾಗಿಲ ಕಡೆಗೆ ಹೋಗಿ ಚಿಲುಕವನ್ನೆಳೆದು, ತಾನು ಹೊರಗೆ ಹೋಗುವಮಟ್ಟಿಗೆ ಕದವನ್ನು ತೆರೆದು, ಒಂದು ಕ್ಷಣಕಾಲ ಸಬ್ಬ ನಾಗಿ ನಿಂತು, ಮೇರಿಯಸ್ಸನ ಕಡೆಗೆ ತಿರುಗಿದನು. ಅವನ ಮುಖವು ಕಳೆಗೆಡದಿದ್ದರೂ ಮನಸ್ಸು ಮಾತ್ರ ಕುಂದಿತ್ತು. ಕಣ್ಣಿನಲ್ಲಿ ನೀರು ಬಾರದಿದ್ದರೂ, ದೃಷ್ಟಿ ಯಲ್ಲಿ ದುಃಖಸೂಚಕವಾದ ಉರಿಯು ಕಾಣುತ್ತಿತ್ತು. ಅವನ ಧ್ವನಿಯು ಮತ್ತೆ ಒಂದು ವಿಚಿತ್ರವಾದ ಶಾಂತ ರೀತಿಯನ್ನು ಪಡೆಯಿತು.

ಅವನು ಮೇರಿಯಸ್ಸನನ್ನು ನೋಡಿ, ” ಅಯ್ಯಾ, ನೀನಿಷ್ಟ ಪಟ್ಟರೆ, ನಾನು ಬಂದು ಅವಳನ್ನು ನೋಡುವೆನು. ನನಗೆ ಅವಳನ್ನು ನೋಡಬೇಕೆಂಬ ಹಂಬಲು ನಿಜವಾಗಿಯೂ ಬಹಳವಾಗಿರುವುದು. ಈ ಆತುರವು ನನ್ನನ್ನು ಬಾಧಿಸದಿದ್ದರೆ ನಾನು ನಿನ್ನನ್ನು ಹೀಗೆ ಬೇಡಿಕೊಳ್ಳುತ್ತಿರಲಿಲ್ಲ. ಹಾಗೆಯೇ ಹೊರಟು ಹೋಗುತ್ತಿದ್ದೆನು. ಆದರೆ, ಕೋಸೆಟ್ಟಳು ಇರುವ ಸ್ಥಳದಲ್ಲಿಯೇ ಇದ್ದು, ಅವಳನ್ನು ಆಗಾಗ ನೋಡುತ್ತಿರಬೇಕೆಂಬ ಆಸೆಯಿಂದ ನಾನು ಸತ್ಯವಾಗಿಯೂ ಎಲ್ಲವನ್ನೂ ನಿನ್ನೊಡನೆ ಹೇಳಬೇಕಾಗಿ ಬಂತು. ನಾನು ಹೇಳುವ ಭಾವವು ನಿನಗರ್ಥವಾಯಿತೇ ? ನೋಡು, ಈಗ ಕಳೆದ ಒಂಭತ್ತು ವರ್ಷಗಳಿಂದಲೂ ನಾನು ಅವಳನ್ನು ನನ್ನ ಬಳಿಯಲ್ಲಿಯೇ ಇಟ್ಟು ಕೊಂಡಿದ್ದೆನು. ನಾವಿಬ್ಬರೂ ಒಬ್ಬರನೊಬ್ಬರು ಅಗಲಿದುದೇ ಇಲ್ಲ. ನಾನು ಅವಳಿಗೆ ತಂದೆಯಂತೆ ಇದ್ದನು ; ಅವಳು ನನ್ನ ಮಗುವಾಗಿ ದ್ದಳು. ಪಾಂಟ್ ಮರ್ಸಿ, ನಾನು ಹೇಳುವುದು ನಿನ್ನ ಮನಸ್ಸಿಗೆ ಬರುವುದೋ ಇಲ್ಲವೋ ಕಾಣೆ. ಇಲ್ಲಿಂದ ಮುಂದಕ್ಕೆ ಅವಳನ್ನು ನೋಡದೆಯೂ, ಅವಳ ಸಂಗಡ ಮಾತನಾಡದೆಯ ತ್ಯಜಿಸುವುದು ಬಹಳ ಕಷ್ಟವಾಗುವುದು. ನೀನು ಅಪರಾಧವೆಂದು ತಿಳಿಯದಿದ್ದರೆ, ನಾನು ಆಗಾಗ ಸೆಟ್ಟಳನ್ನು ನೋಡುವುದಕ್ಕೆ ಬರುವೆನು. ಆದರೆ, ಪದೇ ಪದೇ ಬರುವುದಿಲ್ಲ. ಬಹಳ ಹೊತ್ತು ಇರುವುದೂ ಇಲ್ಲ. ಕೆಳಗಣ ಅಂತಸ್ತಿನ ತಗ್ಗಾದ ಚಿಕ್ಕ ಕೋಣೆಯಲ್ಲಿ ಅವಳು ನನ್ನನ್ನು ಕಾಣುವಂತೆ ನೀನು ಏರ್ಪಡಿಸಬಹುದು. ಅಯ್ಯಾ ! ಇನ್ನೂ ಕೋಸೆಟ್ಟಳನ್ನು ನೋಡಬೇಕೆಂಬ ಆಸೆಯು ನನಗೆ ನಿಜ ವಾಗಿಯೂ ಇರುವುದು, ಅದೂ, ನೀನು ಎಷ್ಟು ದಿನಗಳಿಗೊಂದಾ ವೃತಿ ಇಷ್ಟಪಟ್ಟರೆ ಅದರಂತೆ ಆಗಲಿ. ನೀನು ನನ್ನ ಸ್ಥಾನದಲ್ಲಿ ರುವೆಯೆಂದು ತಿಳಿ. ನನಗೆ ಬೇಕಾದುದು ಅಷ್ಟೆ. ಅಲ್ಲದೆ, ನಾವೂ ಬಹಳ ಜಾಗರೂಕರಾಗಿರಬೇಕು. ನಾನು ಬಾರದೆಯೇ ಇದ್ದರೆ ಅದರಿಂದ ಕೆಡುಕು೦ಟು. ಇದೇನೋ ವಿಚಿತ್ರ ವಿಷಯವೆಂದು ಜನರು ಭಾವಿಸಲು ಅವಕಾಶವಾಗುವುದು. ಒಂದು ವೇಳೆ ನಾನು ಸಂಧ್ಯಾಕಾಲ ಕತ್ತಲಾಗುವ ಸಮಯದಲ್ಲಿ ಬರಬಲ್ಲೆನು,’ ಎಂದನು.

ಅದಕ್ಕೆ ಮೇರಿಯಸ್ಸನು, ‘ ನೀವು ಪ್ರತಿ ನಿತ್ಯವೂ ಸಾಯಂ ಕಾಲದಲ್ಲಿ ಬರಬಹುದು. ಕೋಸೆಟ್ಟಳು ನಿಮಗಾಗಿ ಕಾದಿರುವಳು.’ ಎಂದನು.

ಜೀನ್ ವಾಲ್ಜೀನನು, ” ಅಯ್ಯಾ, ನೀನು ಬಹು ದಯಾ ಶಾಲಿಯು,’ ಎಂದು ಸಂತೋಷದಿಂದ ಉತ್ತರ ಹೇಳಿದನು.

ಇಷ್ಟಾದಮೇಲೆ, ಮೆರಿಯಸ್ಸನು ಜೀನ್ ವಾಲ್ಜೀನನಿಗೆ ಬಾಗಿ ನಮಸ್ಕರಿಸಿ, ಆ ಸುಖಿಯು ದುಃಖಿಯನ್ನು ಬಾಗಿಲವರೆಗೂ ಕರೆತಂದುಬಿಟ್ಟನು. ಇಬ್ಬರೂ ಪರಸ್ಪರ ಅಗಲಿದರು.

ಮಾರನೆಯ ದಿನ ರಾತ್ರಿ, ಜೇನ್ ವಾಲ್ಜೀನನು ಕೋಸೆಟ್ಟ ಳನ್ನು ನೋಡಲು ಬಂದನು. ಮೊದಲುಮೊದಲು ಅವನು ಪರಕೀಯ ನಂತೆ ಮರ್ಯಾದೆಯಿಂದ ದೂರ ದೂರವಾಗಿಯೇ ಇದ್ದನು. ಇನ್ನು ಮುಂದೆ ತಾನು ಕೋಸೆಟ್ಟಳನ್ನು ಮೇಡೆಮ್‌ ಎಂದು ಸಂಬೋಧಿಸು ವುದಾಗಿಯೂ, ಅವಳು ತನ್ನ ನ್ನು ಮಾನ್ ಸಿಯುರ್ ಜೀನ್ ಎಂದು ಕರೆಯಬೇಕೆಂತಲೂ ಅವಳಿಗೆ ಹೇಳಿದನು. ಅಲ್ಲದೆ, ಕೋಸೆಟ್ಟಳು, ತಾನೂ ಮೇರಿಯಸ್ಸನೂ ಇದ್ದ ಕಡೆಗೇ ಬಂದು ತಮ್ಮ ಸಂಗಡವೇ ವಾಸವಾಗಿರಬೇಕೆಂದು ಜೀನ್ ವಾನನನ್ನು ಕರೆಯಲು ಅವನು ಅದಕ್ಕೆ ಒಪ್ಪಲಿಲ್ಲ. ಕೋಸೆಟ್ಟಳು ಏನೂ ತೋರದೆ, ದುಃಖದಿಂದ ಜೀನ್ ವಾಲ್ಜೀನನ್ನು ಕುರಿತು ಗಟ್ಟಿಯಾಗಿ, ‘ ಈ ವಿಚಾರವು ನನಗೆ ಸ್ವಲ್ಪವೂ ಅರ್ಥವಾಗಲಿಲ್ಲ. ಇದೆಲ್ಲವೂ ಬುದ್ದಿಯಿಲ್ಲದ ಮಾತು, ನಿನ್ನನ್ನು ‘ ಮಾನ್ಸಿಯರ ಜೀನ್ ” ಎಂದು ಕರೆಯಲು ನನ್ನ ಗಂಡನ ಅಪ್ಪಣೆಯನ್ನು ಕೇಳುವೆನು. ಆತನು ಅದಕ್ಕೆ ಒಪ್ಪ ಲಾರನೆಂದು ನನಗೆ ನಂಬಿಕೆಯಿದೆ. ನೀನು ನನಗೆ ಬಹಳ ವ್ಯಥೆ ಯನ್ನುಂಟುಮಾಡುತ್ತಿರುವೆ. ನಿನಗೇನೋ ಕ್ಷಣಕ್ಕೊಂದು ವಿಧ ವಾಗಿ ಬುದ್ದಿಯು ವ್ಯತ್ಯಾಸವಾಗಬಹುದು ; ಆದರೆ ನಿನ್ನ ಮುದ್ದು ಮಗಳಾದ ಕೋಸೆಟ್ಟಳನ್ನು ನೀನು ವ್ಯಥೆಪಡಿಸಬಾರದು. ಹಾಗೆ ಮಾಡುವುದು ತಪ್ಪು. ನೀನು ಹೀಗೆ ಕಾಡಿಸುವುದು ತಕ್ಕುದಲ್ಲ. ನೀನು ಬಹಳ ಒಳ್ಳೆಯವನು,’ ಎಂದು ಅತ್ತಳು.

ಜೀನ್ ವಾಲ್ಜೀನನು ಉತ್ತರವನ್ನೇ ಹೇಳಲಿಲ್ಲ.

ಕೋಸೆಟ್ಟಳು ಆತುರದಿಂದ ಅವನ ಎರಡು ಕೈಗಳನ್ನೂ ಹಿಡಿದು, ಬೇಗನೆ ತನ್ನ ಹಣೆಯ ವರೆಗೂ ಎತ್ತಿ, ತನ್ನ ಗಲ್ಲದ ಕೆಳಗಿ ನಿಂದ ಕುತ್ತಿಗೆಗೆ ಒತ್ತಿ ಹಿಡಿದುಕೊಂಡು, ಅವನಲ್ಲಿ ಅತ್ಯಂತ ಪ್ರೀತಿ ಯನ್ನು ಪ್ರಕಟಿಸಿ, ಅಯ್ಯೋ ! ಒಳ್ಳೆಯವನಾಗಿರಪ್ಪಾ ! ಒಳ್ಳೆಯವ ನಾಗಿರುವುದೆಂದರೆ, ನೀನು ನನ್ನ ತಂದೆಯಾಗಿ ಇಲ್ಲಿಯೇ ಬಂದು ಇರು; ನಮ್ಮವನಾಗಿ ಇದ್ದುಕೊಂಡು, ನಮ್ಮ ಮನೆಯಲ್ಲಿ ನಮ್ಮ ಜೊತೆಯಲ್ಲಿಯೇ ಊಟಮಾಡಬೇಕು. ತಿಂಡಿಯನ್ನು ತಿನ್ನಬೇಕು,’ ಎಂದಳು.

ಅವನು ಕೈಗಳನ್ನು ಬಿಡಿಸಿಕೊಂಡು, ಅವಳನ್ನು ಕುರಿತು, ‘ ಇನ್ನು ನಿನಗೆ ತಂದೆಯ ಆವಶ್ಯಕತೆಯಿಲ್ಲ ; ನಿನಗೆ ಗಂಡನಿರುವ ನಷ್ಟೆ !’ ಎಂದನು.

ಕೋಸೆಟ್ಟಳಿಗೆ ದುಃಖವು ಉಕ್ಕಿತು. ಅವಳು, ” ಏನು ? ನನಗೆ ತಂದೆಯು ಆವಶ್ಯಕವಿಲ್ಲವೇ ? ಸಾಮಾನ್ಯವಾದ ಲೋಕವ್ಯವ ಹಾರ ಬುದ್ದಿಯಿಲ್ಲದವರಿಗೆ ಏನನ್ನು ಹೇಳಬೇಕೆಂಬುದೇ ನನಗೆ ತೊರದಾಗಿದೆ,’ ಎಂದು ಹೇಳಿ, ತಟ್ಟನೆ ರೇಗಿ, ಜೀನ್ ವಾಲ್ಮೀ ನನ ಕಡೆಗೆ ದುರದುರನೆ ನೋಡಿ, ‘ ಹಾಗಾದರೆ ನಾನು ಸುಖವಾ ಗಿರಬೇಕಾದುದು ನಿನಗೆ ಇಷ್ಟವಿಲ್ಲವಲ್ಲವೇ ? ‘ ಎಂದಳು.

ಅರಸಿಕತನದ ಭಾಷಣವು ಕೆಲವು ವೇಳೆ ಆಡಿದವರಿಗೆ ಗೋಚರ ವಿಲ್ಲದೆಯೋ, ಈಟಿಗಳಂತೆ ಇರಿಯುವುದುಂಟು. ಈ ಪ್ರಶ್ನೆಯು ಕೋಸೆಟ್ಟಳಿಗೆ ಸಾಮಾನ್ಯವಾಗಿ ಕಂಡರೂ ಜೀನ್ ವಾಲ್ಜೀನನಿಗೆ ಮಾತ್ರ ಬಹು ಕಠೋರವಾಗಿತ್ತು. ಕೋಸೆಟ್ಟಳು ಉಗುರಿನಿಂದ ಕರಪಲಮಾಡಬೇಕೆಂದು ಹೋಗಿ, ಶಸ್ತ್ರದಿಂದ ಸೀಳಿದಳು.

ಜೀನ್ ವಾಲಿ ನನ ಮುಖವು ಕಳೆಗೆಟ್ಟಿತು. ಒಂದು ಕ್ಷಣ ಕಾಲ ಏನೆಂದು ಪ್ರತ್ಯುತ್ತರವನ್ನೂ ಹೇಳದೆ, ಇಬ್ಬನಾಗಿದ್ದು, ಅನಂತರ ತನ್ನಲ್ಲಿ ತಾನು ಒಂದು ವಿಚಿತ್ರ ರೀತಿಯಿಂದ ‘ ಅವಳ ಸುಖವೇ ನನ್ನ ಜೀವನದ ಗುರಿಯಾಗಿತ್ತು. ಇನ್ನು ದೇವರು ನನ್ನನ್ನು ತನ್ನ ಸನ್ನಿಧಿಗೆ ಕರೆದುಕೊಳ್ಳಬಹುದು. ಕೋಸೆಟ್, ನೀನು ಸುಖವಾಗಿದ್ದೀಯೆ. ನನಗೆ ಕಾಲವು ಸಮೀಪಿಸಿತು,’ ಎಂದು ಗೊಣಗುಟ್ಟಿದನು.

ಇದನ್ನು ಕೇಳಿ ಕೋಸೆಟ್ಟಳು ( ಆಹಾ ! ಅಪ್ಪಾ, ನನ್ನನ್ನು ‘ ಕೋಸೆಟ್ ” ಎಂದು ಕರೆದೆಯಲ್ಲವೆ !’ ಎಂದು ಸಂತೋಷದಿಂದ ಓಡಿಬಂದು ಅವನ ಕುತ್ತಿಗೆಯನ್ನು ಬಾಚಿ ತಬ್ಬಿದಳು.

ಜೀನ್ ವಾಲ್ಜೀನನು, ಜೀವನದಲ್ಲಿ ನಿರಾಶನಾಗಿ ಅವಳನ್ನು ತನ್ನ ಹೃದಯಕ್ಕೆ ಬಲವಾಗಿ ಒತ್ತಿ ಬಿಗಿದಪ್ಪಿದನು. ಅವಳನ್ನು ತಾನು ಮತ್ತೆ ಹಿಂದಕ್ಕೆ ಕರೆದುಕೊಂಡು ಹೋಗುತ್ತಿರುವೆನೆಂಬಂತೆ ಅವನಿಗೆ ತೋರಿತು.

ಕೋಸೆಟ್ಟಳು, : ‘ಅಪ್ಪಾ, ನನಗೆ ಬಲು ಸಂತೋಷ, ನಿನಗೆ ನಮಸ್ಕಾರಪ್ಪಾ,’ ಎಂದಳು, ಈಗ ಜೀನ್ ವಾಲ್ಜೀನನಿಗೆ ಅವ ಳನ್ನು ಅಗಲಿ ಹೋಗುವುದು ಬಹು ದುಃಖಕರವಾಗುತ್ತ ಬಂತು. ಮೆಲ್ಲನೆ ಕೋಸೆಟ್ಟಳ ತೋಳನ್ನು ಬಿಡಿಸಿಕೊಂಡು, ತನ್ನ ಟೋಪಿ ಯನ್ನು ಕೈಗೆ ತೆಗೆದುಕೊಂಡನು. ಕೋಸೆಟ್ಟಳು, “ ಒಳ್ಳೆಯದು. ! ಇನ್ನೇನು : ” ಎಂದಳು. ಜೀನ್ ವಾಲ್ಜೀನನ್ನು, “ಮೇಡೆವು, ನಾನು ಹೊರಡು ತ್ತೇನೆ. ಅವರು ನಿಮಗಾಗಿ ಕಾದಿವರು,’ ಎಂದು ಉತ್ತರ ಕೊಟ್ಟು, ಬಾಗಿಲ ಬಳಿಗೆ ಹೋಗಿ, ‘ ನಾನು ನಿಮ್ಮನ್ನು ” ಕೋ ಸೆಟ್ ” ಎಂದು ಕರೆದೆನು. ಇನ್ನೊಂದಾವೃತ್ತಿ ಹಾಗೆ ಕರೆಯುವು ದಿಲ್ಲವೆಂದು ನಿಮ್ಮ ಯಜಮಾನರಿಗೆ ಹೇಳಿ, ನನ್ನನ್ನು ಕ್ಷಮಿಸಿ,’ ಎಂದು ಮತ್ತೆ ಹೇಳಿ ಹೊರಕ್ಕೆ ಹೊರಟುಹೋದನು.

ಈ ರೀತಿಯಾಗಿ ಅವನು ಹೊರಟುಹೋದುದು ಭಾವ ವೇನೆಂಬುದನ್ನರಿಯದೆ ಕೋಸೆಟ್ಟಳು ದಿಗ್ದಾಂತಳಾದಳು.
*****
ಮುಂದುವರೆಯುವುದು

ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್‌”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆತ್ಮ ಪೂಜೆ
Next post ಬಾರೇ ಬಾರೇ ನನ್ನವಳೇ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys