
ವಿಜಯ ವಿಲಾಸ – ಅಷ್ಟಮ ತರಂಗ
ಈಕಡೆ ವೇದವತೀ ನಗರದಲ್ಲಿ ಕಾರಾಗೃಹದಲ್ಲಿದ್ದ ಶೀಲವತೀ ದೇವಿಗೆ ವಿಜಯನ ಪ್ರತಿಜ್ಞೆ ಮತ್ತು ಪ್ರಯಾಣಗಳ ವಿಚಾರವು ಕಾವಲುಗಾರರಿಂದ ತಿಳಿದಿತ್ತು. ಆಕೆಯು, ತನ್ನ ಸುಕುಮಾರನು ಕ್ಷಿಪ್ರದಲ್ಲಿ ವಿಜಯಶಾಲಿಯಾಗಿ ಬಂದು ಸತ್ಯಧರ್ಮಗಳನ್ನು ಆರಿಸಿ ತನ್ನನ್ನು ಮೃತ್ಯುವಿನಿಂದಲೂ ನಿರ್ಬಂಧದಿಂದಲೂ ಬಿಡಿಸುವಂತೆ ಅನುಗ್ರಹಿಸಬೇಕೆಂದು ಸದಾ ಕಾಲದಲ್ಲಿಯೂ ತಮ್ಮ ಕುಲದೇವತೆಯಾದ ಅಂಬಿಕೆಯನ್ನು ಪ್ರಾರ್ಥಿಸುತ್ತ ವಿಜಯಕುಮಾರನ ಸುಖಾಗಮನವನ್ನೇ ಎದುರುನೋಡುತ್ತಿದ್ದಳು. ಸೌದಾಮಿನಿ ಕಾದಂಬಿನಿಯರಾದರೋ ವಿಜಯನು ಹಿಂದಿರುಗದೆ ಹಾಗೆಯೇ […]