ಪಾಪಿಯ ಪಾಡು – ೨೦

ಪಾಪಿಯ ಪಾಡು – ೨೦

ಜೀನ್ ವಾಲ್ಜೀನನು, ಮೇರಿಯಸ್ಸಿನ ಮೇಲೆ ಬಾಗಿ, ತನ್ನ ಬೊಗಸೆಯಲ್ಲಿ ಸ್ವಲ್ಪ ನೀರನ್ನು ತೆಗೆದು, ಅವನ ಮುಖದಮೇಲೆ ಮೆಲ್ಲನೆ ಚಿಮುಕಿಸಿದನು.

ಮತ್ತೊಂದಾವೃತ್ತಿ ನದಿಯೊಳಕ್ಕೆ ತನ್ನ ಕೈಯನ್ನು ಇಡು ತಿರುವಾಗ, ಹಠಾತ್ತಾಗಿ ಅವನ ಮನಸಿಗೆ ಏನೋ ಹೇಳಲಾಗ ದಂತಹ ಕಳವಳವುಂಟಾಯಿತು. ತಿರುಗಿ ಸುತ್ತಲೂ ನೋಡಲು ಜೇವರ್ಟನು ಕಣ್ಣಿಗೆ ಬಿದ್ದನು.

ಈ ಹಿಂದೆ ಹೇಳಿದಂತೆ ಜೀನ್ ವಾನನ ಮುಖಭಾವವೇ ವ್ಯತ್ಯಾಸ ಹೊಂದಿದ್ದುದರಿಂದ ಜೀವರ್ಟನಿಗೆ ಇವನ ಗುರುತು ತಟ್ಟನೆ ಸಿಕ್ಕಲಿಲ್ಲ. ಆದಕಾರಣ ಅವನು ಶಾಂತಭಾವದಿಂದ ತಟ್ಟನೆ, ‘ನೀನು ಯಾರು ?’ ಎಂದನು.

‘ ನಾನೇ ?’ ‘ ಅಹುದು, ನೀನೇ ! ‘ ‘ ಜೀನ್ ವಾಲ್ಜೀನ್‌. ‘

ಜೇವರ್ಟನು ತನ್ನ ಬೆತ್ತವನ್ನು ಹಲ್ಲುಗಳಿಂದ ಕಚ್ಚಿ, ಮೊಣ ಕಾಲನ್ನು ಬಾಗಿಸಿ, ಶರೀರವನ್ನು ತಗ್ಗಿಸಿ ತನ್ನ ಬಲವಾದ ಕೈಗಳನ್ನು ಜೀನ್ ವಾನನ ಭುಜಗಳ ಮೇಲೆ ಇಟ್ಟು ಅವನನ್ನು ಪರೀಕ್ಷಿಸಿ ಅವನ ಗುರುತನ್ನು ಹಿಡಿದನು. ಅವರ ಮುಖಗಳೆರಡೂ ಪರಸ್ಪರ ಮುಟ್ಟುವಂತೆ ಇದ್ದುವು. ಜೇವರ್ಟನ ಮುಖಭಾವವು ಬಹಳ ಭಯಂಕರವಾಗಿದ್ದಿತು.

ಶರಭದ ಉಗುರಿನ ಹಿಡಿತಕ್ಕೆ ಸಿಕ್ಕಿದ ಸಿಂಹದಂತೆ ಜೀನ್ ವಾಲ್ಜೀನನು, ಜೇವರ್ಟನ ಹಿಡಿತದಿಂದ ನಿಶ್ಚೇಷ್ಟಿತನಾಗಿ ನಿಂತು,

ಅಧಿಕಾರಿಯಾದ ಜೀವರ್ಟ್, ನಾನೇನೋ ಸಿಕ್ಕಿದೆ. ಅಲ್ಲದೆ, ಈ ದಿನ ಪ್ರಾತಃಕಾಲ ಮೊದಲಾಗಿ ನಾನು ನಿನ್ನ ಬಂದಿ ಯೆಂದೇ ತಿಳಿದುಕೊಂಡಿದ್ದೇನೆ. ನಿನಗೆ ನನ್ನ ವಿಳಾಸವನ್ನು ತಿಳಿಸಿದುದು ನಿನ್ನಿಂದ ನಾನು ತಪ್ಪಿಸಿಕೊಳ್ಳಬೇಕೆಂಬ ಉದ್ದೇಶದಿಂದ ಅಲ್ಲ. ಇನ್ನು ನನ್ನನ್ನು ಹಿಡಿದುಕೊ. ಆದರೆ, ದಯವಿಟ್ಟು ನನಗೆ ಒಂದು ವಿಷಯವನ್ನು ಮಾತ್ರ ನಡೆಸಿ ಕೊಡು, ಈ ಗಾಯ ಪಟ್ಟ ಮನುಷ್ಯನನ್ನು ಮನೆಗೆ ಕರೆದುಕೊಂಡು ಹೋಗಿಬಿಡಲು ನನಗೆ ಸಹಾಯಮಾಡು,’ ಎಂದನು.

ಜೀನ್ ವಾಲೀ ನನು ಮೇರಿಯಸ್ಸನ ಅಂಗಿಯಲ್ಲಿದ್ದ ಕೈಪುಸ್ತಕವನ್ನು ತೆಗೆದು, ಮೇರಿಯಸ್ಸನು ಸೀಸದ ಕಡ್ಡಿಯಲ್ಲಿ ಬರೆದಿದ್ದ ಪುಟವನ್ನು ತೆರೆದು, ಅದನ್ನು ಬೇವರ್ಟನ ಕೈಗೆ ಕೊಟ್ಟನು. ಮೇರಿಯಸ್ತ ನು ಬರೆದಿದ್ದ ಬರೆವಣಿಗೆಯನ್ನು ಜೇವರ್ಟನು ವಿವರವಾಗಿ ಓದಿಕೊಂಡು, ಜಿಲ್ಲೆರ್ನಾಂಡ್, ರೂ ಡೆಸ್ ಫೈಲ್ಸ್ ಡ್ಯೂ ಕಲ್ವೇರ್, ನಂಬರು ೬,’ ಎಂದು ಗೊಣಗಟ್ಟಿದನು.

ತರುವಾಯ ಬಂಡಿಯವನನ್ನು ಕೂಗಲು, ಒಂದು ಕ್ಷಣದ ಮೇಲೆ, ನೀರು ತುಂಬುವ ಸ್ಪದಿಂದ, ಒಂದು ಒ೦ಡಿಯು ಇಳಿದು ನದೀತೀರಕ್ಕೆ ಬಂತು. ಮೇರಿಯಸ್ಸನನ್ನು ಹಿಂದಣ ಭಾಗದಲ್ಲಿ ಮಲಗಿಸಿ ಜೇವರ್ಟನು ಮುಂದುಗಡೆಯಲ್ಲಿ ಜೀನ್ ವಾಲ್ಜೀನ ಪಕ್ಕದಲ್ಲಿ ಕುಳಿತುಕೊಂಡನು.

ಬಾಗಿಲನ್ನು ಮುಚ್ಚಿದಮೇಲೆ ಬಂಡಿಯು ಬಾಸ್ಟಿಲ್ ಬೀದಿಯ ಮಾರ್ಗವಾಗಿ ವೇಗವಾಗಿ ಹೋಯಿತು.

ಅವರು ಮೇರಿಯಸ್ಸನ ತಾತನ ಮನೆಯನ್ನು ಸೇರಿದಾಗ, ಅಲ್ಲಿ ಎಲ್ಲರೂ ನಿದ್ದೆ ಮಾಡುತ್ತಿದ್ದರು. ಆಗ ಗಂಟೆಯನ್ನು ಹೊಡೆದು, ಬಾಗಿಲು ಕಾಯುವವನನ್ನು ಎಚ್ಚರಗೊಳಿಸಿ, ಪ್ರಜ್ಞೆಯಿಲ್ಲದೆ ಇದ್ದ ಮೇರಿಯಸ್ಸನನ್ನು ಅವನ ವಶಕ್ಕೆ ಕೊಟ್ಟು ಮತ್ತೆ ಬಂಡಿಯನ್ನು ಹತ್ತಿದರು.

ಜೀನ್ ವಾಲ್ಜೀನನ್ನು, ಜೀವರ್ಟ್, ಇನ್ನೊಂದು ಕೆಲಸವನ್ನು ದಯೆಯಿಟ್ಟು ನಡೆಯಿಸಿ ಕೊಡಬೇಕು,’ ಎಂದನು.

ಅದಕ್ಕೆ ಜೇವರ್ಟನ್ನು, ಕಠಿಣವಾಗಿ, ಏನದು?’ ಎಂದನು.

‘ ಒಂದು ಕ್ಷಣಕಾಲ ಮನೆಗೆ ಹೋಗಲು ನನಗೆ ಅವಕಾಶ ಕೊಡು ; ಅನಂತರ ನೀನು ನನ್ನ ವಿಷಯದಲ್ಲಿ ನಿನ್ನ ಇಷ್ಟ ಬಂದಂತೆ ಮಾಡು.’

ಜೇವರ್ಟನು ಸ್ವಲ್ಪ ಹೊತ್ತು ಮಾತನಾಡದೆ ಸುಮ್ಮನಿದ್ದು, ಗಡ್ಡವನ್ನು ತನ್ನ ನಿಲುವಂಗಿಯ ಕೊರಳ ಪಟ್ಟಿಯೊಳಕ್ಕೆ ಎಳೆದು ಕೊಂಡು, ಮುಂದೆ ಇದ್ದ ಕಿಟಿಕಿಯನ್ನು ತೆರೆದು, ‘ ಗಾಡಿಯವನೇ, ರೂ ಡಿ ಎಲ್ ‘ಹೋಂ ಆರಂ, ನಂಬರ ೭,’ ಎಂದನು.

ರೂ ಡಿ ಎಲ್ ‘ಹೋಂ ಆರರ ಬೀದಿಯು ಬಹಳ ಚಿಕ್ಕದಾ ದುದರಿಂದ ಬಂಡಿಗಳು ಪ್ರವೇಶಿಸಲು ಅವಕಾಶವಿರಲಿಲ್ಲ. ಆದಕಾರಣ ಬಂಡಿಯು ಆ ಬೀದಿಯ ಬಾಗಿಲಲ್ಲಿಯೇ ನಿಂತಿತು. ಜೆವರ್ಟನೂ ಜೀನ್ ವಾಲ್ಜೀನನೂ ಬಂಡಿಯಿಂದ ಇಳಿದು, ಬೀದಿಯೊಳಕ್ಕೆ ಪ್ರವೇ ಶಿಸಿದರು. ಎಂದಿನಂತೆ, ಅಲ್ಲಿ ಯಾರೂ ಇರಲಿಲ್ಲ. ಜೇವರ್ಟನು ಜೀನ್ ವಾಲ್ಜೀನನ ಹಿಂದೆಯೇ ಹೋದನು. ಅವರು ೭ನೇ ನಂಬರು ಮನೆಗೆ ತಲಸಿದರು. ಜೀನ್ ವಾಲ್ಜೀನನು ಕದವನ್ನು ತಟ್ಟಿದನು. ಬಾಗಿಲು ತೆರೆಯಿತು.

ಜೇವರ್ಟನು, ‘ ಒಳ್ಳೆಯದು, ಆಗಲಿ,’ ಎಂದು ಹೇಳಿ, ‘ ನಾನು ಇಲ್ಲಿಯೇ ನಿನಗಾಗಿ ಕಾದಿರುವೆನು,’ ಎಂದು ಹೇಳುವನೋ ಎಂಬಂ ತಹ ವಿಚಿತ್ರ ಮುಖಭಾವದಿಂದ, ಹೋಗು,’ ಎಂದನು.

ಜೇವರ್ಟನ ನಡೆವಳಿಕೆಗಳಲ್ಲಿ ಇಂತಹ ರೀತಿಯ ಹಿಂದೆ ಇರಲೇ ಇಲ್ಲ. ಆದರೂ, ಬೆಕ್ಕು ಇಲಿಗೆ, ತನ್ನ ಕೈ ಎಟಕುವ ವರೆಗೂ ಹೋಗುವಂತೆ ಬಿಡುವ ರೀತಿಯಿಂದ, ಜೀನ್ ವಾಲ್ಜೀ ನನ ವಿಷಯದಲ್ಲಿ ಜೇವರ್ಟನು, ಅಹಂಕಾರದಿಂದ ನಂಬಿಕೆ ತೋರಿಸಿ ಕಳುಹಿಸಿಕೊಟ್ಟುದು ಜೀನ್ ವಾಲ್ಜೀನನಿಗೆ ಅಷ್ಟೇನೂ ಆಶ್ಚರ್ಯ ವಾಗಿ ಕಾಣಲಿಲ್ಲ. ಅವನು ಬಾಗಿಲನ್ನು ತೆರೆದು ಮನೆಯೊಳಕ್ಕೆ ಹೋಗಿ ಬಾಗಿಲು ಕಾಯುವವನನ್ನು ಕುರಿತು, ” ನಾನು ಬಂದಿರು ವೆನು,’ ಎಂದು ಕೂಗಿ ಹೇಳಿ, ಮಹಡಿಯ ಮೇಲಕ್ಕೆ ಹತ್ತಿದನು.

ಮೊದಲನೆಯ ಅಂತಸ್ತನ್ನು ಹಚ್ಚಿ ಸ್ವಲ್ಪ ನಿಂತನು. ನೆಲದ ವರೆಗೂ ಇದ್ದ ಕಿಟಿಕಿಯ ಬಾಗಿಲು ತೆರೆದಿತ್ತು. ಜೀನ್ ವಾಲ್ಮೀನನು ಸ್ವಲ್ಪ ಉಸಿರಾಡುವುದಕ್ಕಾಗಿಯೋ ಅಥವಾ ಅಕಾರಣ ವಾಗಿಯೋ ನಿಂತು ಈ ಕಿಟಿಕಿಯಿಂದ ಹೊರಗೆ ನೋಡಿದನು.

ಅಲ್ಲಿ ಯಾರೂ ಇರಲಿಲ್ಲ. ಜೀವರ್ಟನು ಹೊರಟು ಹೋ ಗಿದ್ದನು !

ಜೇವರ್ಟನು ರೂ ಡಿ ಎಲ್ ‘ಹೊ೦ ಆರಂ ಬೀದಿಯಿಂದ ಹೊರಟು. ಮೆಲ್ಲನೆ ನಡೆದುಕೊಂಡು, ನದಿಯ ಮೇಲಣ ಒಂದು ಸೇತುವೆಯ ಬಳಿಗೆ ಬಂದನು. ಸೇನ್ ನದಿಯ ಈ ಭಾಗವನ್ನು ಕಂಡರೆ ನಾವಿಕರಿಗೇ ಬಹಳ ಹೆದರಿಕೆ, ಅತಿ ವೇಗವಾಗಿ ನೀರು ಹರಿಯುತ್ತಿದ್ದ ಈ ಸ್ಥಳಕ್ಕಿಂತಲೂ ಹೆಚ್ಚು ಅಪಾಯದ ಸ್ಥಳವೇ ಇರಲಿಲ್ಲ. ಇಲ್ಲಿ ಬಿದ್ದವರನ್ನು ಮತ್ತೆ ಕಾಣಲು ಸಾಧ್ಯವಿರಲಿಲ್ಲ. ಅತ್ಯಂತ ಚತುರರಾದ ಈಜುಗಾರರೂ ಸಹ ಇಲ್ಲಿ ಮುಳುಗಿ ಸಾಯುತ್ತಿದ್ದರು.

ಜೇವರ್ಟನು ತನ್ನ ಎರಡು ಕೈಗಳಲ್ಲಿಯ ಗಲ್ಲವನ್ನು ಹಿಡಿದು, ಎರಡು ಮೊಣಕೈಗಳನ್ನೂ ಸೇತುವೆಯ ಗೋಡೆಯ ಮೇಲೆ ಊರಿ, ಬೆರಳುಗಳಿಂದ, ದಟ್ಟವಾದ ತನ್ನ ಮೀಸೆಯನ್ನು ಸುಮ್ಮನೆ ಸವರುತ್ತಾ, ಆಲೋಚಿಸುತ್ತ ನಿಂತನು.

ಅವನ ಸ್ಥಿತಿಯಲ್ಲಿ ಒಂದು ನವೀನ ವಿಚಾರವು, ಒಂದು ವ್ಯತ್ಯಾಸವು ಅಥವಾ ಒಂದು ಅನರ್ಥವೇ ಉಂಟಾಗಿತ್ತು. ಜೇವ ರ್ಟನು ಬಹಳವಾಗಿ ಬೆದರಿ ಹೋಗಿದ್ದನು. ಅವನ ಜೀವಮಾನ ದಲೆ ಲ, ಅಪರಾಧಿಗಳನ್ನು ಬೆನ್ನು ಹತ್ತಿ ಹಿಡಿಯುವುದೇ ಅವನ ನಿತ್ಯಕರ್ಮವಾಗಿದ್ದಿತು. ಈಗ, ಅವನು ಒಬ್ಬ ಅಪರಾಧಿಯನ್ನು ತಪ್ಪಿಸಿಕೊಂಡು ಇರುವಂತೆ ಬಿಟ್ಟನು. ಇದರಿಂದ ಅವನ ಮನ ಸ್ಸಾಕ್ಷಿಯು ಅವನನ್ನು ಚಿತ್ರಹಿಂಸೆಗೆ ಗುರಿಮಾಡಿದ್ದಿತು.

ಈಗ ಅವನು ಏನು ಮಾಡಬೇಕು ? ಜೀನ್ ವಾಲ್ಜೀನನನ್ನು ಹಿಡಿದು ಸರಕಾರಕ್ಕೆ ಒಪ್ಪಿಸಿಬಿಡುವದೇ ? ಅದು ಮಾನವ ಧರ್ಮ ದಿಂದ ತಪ್ಪಿತವಾಗುವುದು ; ಏತಕ್ಕೆಂದರೆ, ಅದೇ ದಿನವೇ, ಜೀನ್ ವಾಲ್ಜೀನನು ತನ್ನ ಪ್ರಾಣವನ್ನು ಉಳಿಸಿದ್ದನು. ಜೀನ್ ವಾಲ್ಜೀನ ನನ್ನು ಸ್ವತಂತ್ರನನ್ನಾಗಿ ಬಿಟ್ಟಿರುವುದೇ ? ಅದು ನ್ಯಾಯಶಾಸ್ತ್ರ ರೀತಿಯಿಂದ ತಪ್ಪಾಗುವುದು.

ಜೇವರ್ಟನು ಕೆಲವು ನಿಮಿಷಗಳ ಕಾಲ ಆ ಅಂಧಕಾರಮಯ ವಾದ ಕಮರಿಯನ್ನು ಗುರಿಯಿಟ್ಟು ನೋಡುತ್ತ, ನಿಶ್ಚೇಷ್ಟಿತನಾಗಿ ನಿಂತುಬಿಟ್ಟನು. ಆದರೆ ಈ ಮನಸ್ಸಿನ ಭಾವಗಳ ಬಡಿದಾಟವನ್ನು ಸಹಿಸಲು ಅಸಾಧ್ಯವಾಯಿತು. ತಟ್ಟನೆ ಅವನು ತನ್ನ ಟೋಪಿ ಯನ್ನು ತೆಗೆದು ಆ ಗೋಡೆಯ ಅಂಚಿನಲ್ಲಿಟ್ಟನು, ಒಂದು ನಿಮಿಷದ ತರುವಾಯ ಎತ್ತರವಾದ ಕಪ್ಪನೆಯ ವ್ಯಕ್ತಿಯೊಂದು ಸೇತುವೆಯ ಗೋಡೆಯ ಮೇಲೆ ನಿಂತು ಸೇನ್ ನದಿಯ ಕಡೆಗೆ ಬಾಗಿ ನೆಗೆದು ನೆಟ್ಟಗೆ ಆ ಅಂಧಕಾರದೊಳಕ್ಕೆ ಬಿದ್ದುಬಿಟ್ಟಿತು. ನೀರು ಕಲಕಿ, ಫಳ್ ಎಂದು ಶಬ್ದವಾಯಿತು. ನೀರಿನಲ್ಲಿ ಮಾಯವಾದ ಆ ಆಕೃ ತಿಯು ಜಲತರಂಗಗಳಲ್ಲಿ ಅದಿರುತ್ತಿರುವಾಗ ಅದರ ಛಾಯೆ ಮಾತ್ರವೇ ಗೋಚರವಾಯಿತು.
*****
ಮುಂದುವರೆಯುವುದು

ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್‌”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗ್ರಹಚಾರ
Next post ಕೋಲು ಕೋಲೇ ಕೋಲೆನ್ನ ಕೋಲೇ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…