ಮುನಿಯನ್ ಮೊಕ್ಕ್ ಮುಸ್ಟಿ

ಬೆಂಕೀನ್ ಇಟ್ಟಿದ್ಲಂತೆ ಯಿಂದ್ ಅಡಗೂಲಜ್ಜಿ-
ಮುನಿಯನ್ಗು ಆತ್ಕೋಂತ ಔಳೀಗಿದ್ ಕಜ್ಜಿ!
ಕೋಳಿ ಕೂಗ್ದಿದ್ರೆಲ್ಲು ಬೆಳಕೇ ಆಗಾಲ್ವ!
ಯೆಂಡ ಇಲ್ದೋಯ್ತಂದ್ರೆ ಆಡಾಕಾಗಾಲ್ವ? ೧

ಝುಮ್ಮಂತ್ ಇರಬೇಕಾದ್ರೆ ಪದಗೊಳ್ದು ಗತ್ತು
ಏನಾರ ಬೇಕೇ ಬೇಕ್ ಅದಕೊಂದು ಮತ್ತು.
ಇದುವರ್‍ಗೂ ಇತ್ ನಂಗೆ ಈಚ್ಲೆಂಡದ್ ಮತ್ತು.
ಇನ್ ಮ್ಯಾಗ್ ಏನೈತೇಂತ ನಿಂಗೇನೊ ಗೊತ್ತು! ೨

ಯೆಂಡಿಲ್ದೆ ಉಡಗೋದ ರತ್ನ ಅಂತೇಳಿ
ಪುಕ್ಕಾ ಕೆದರ್ ಬೇಡೋ-ಏ ಜಂಬದ್ಕೋಳಿ!
ಪುಟ್ನಂಜಿ ನಂಗೌಳೆ-ಪಾಯ್ಸ ಪರಮಾನ್ನ!
ಯೆಂಡ್ ಯಾಕ್ ಅದರ್‍ಮುಂದೆ? ಅಳಸಿದ್ ತಂಗ್ಳನ್ನ! ೩

ಉತ್ತಮ್ ಜನ್ಮಕ್ ಬರೋದ್ ಮನ್ಸನ್ ಪ್ರಯತ್ನ!
ಸತ್ತೋಗ್ ದಫನ್ನಾದ ಯೆಂಡದಯ್ಯ ರತ್ನ!
ಮಳ್ಳಿ ಚಿಗತ್ಕೊಂಡೌನೆ ಪುಟ್ನಂಜೀ ರತ್ನ!
ನೋಡು ಯೆಂಡ್ ಇಲ್ದೇನೆ ಔನಾಡೊ ಗತ್ನ! ೪
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾರುಡಿಗ
Next post ಸ್ತ್ರೀ ಶೋಷಣೆ- ವಿಕೃತಿಯ ನಾನಾ ಮುಖಗಳು

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…