ಪಾಪಿಯ ಪಾಡು – ೨೧

ಪಾಪಿಯ ಪಾಡು – ೨೧

ಅನೇಕ ದಿನಗಳವರೆಗೆ ಮೇರಿಯಸ್ಸನು ಬದುಕಿದವನೂ ಅಲ್ಲ, ಸತ್ಯವನೂ ಅಲ್ಲದೆ ; ಹೀಗೆ ಜೀವಚ್ಛವವಾಗಿ ಬಿದ್ದಿದ್ದನು. ಅವನಿಗೆ ಜ್ವರವು ಬಂದು ಬಹು ದಿನಗಳವರೆಗೆ ಸನ್ನಿ ಮುಚ್ಚಿಕೊಂಡು ಕಳವಳವು ಹುಟ್ಟಿತ್ತು. ರಾತ್ರಿಯಲ್ಲೆಲ್ಲ ಕೋಸೆಟ್ಟಳ ಪಾರಾ ಯಣವೇ ಆಗಿತ್ತು.

ಪ್ರತಿ ನಿತ್ಯವೂ, ಕೆಲವು ವೇಳೆ ದಿನಕ್ಕೆ ಎರಡಾವೃತ್ತಿಯೂ, ಅಂದವಾಗಿ ಉಡುಪನ್ನು ಧರಿಸಿದ್ದ, ಬಿಳಿಯ ಕೂದಲಿನ ದೊಡ್ಡ ಮನುಷ್ಯನೊಬ್ಬನು ಬಂದು ಇವನ ಸ್ಥಿತಿಯನ್ನು ಕುರಿತು ಬಾಗಿಲು ಕಾಯುವವನನ್ನು ವಿಚಾರಿಸಿ ತಿಳಿದುಕೊಂಡು ಹೋಗುತ್ತಿದ್ದು ದಲ್ಲದೆ, ಗಾಯಗಳಿಗೆ ಔಷಧ ಹಾಕಿ ಕಟ್ಟಲು ಉಪಯೋಗಿಸುವು ದಕ್ಕಾಗಿ, ಹತ್ತಿಯ ನಯವಾದ ಬಟ್ಟೆಯ ಕಟ್ಟನ್ನು ಕೊಟ್ಟು ಹೋಗುತ್ತಿದ್ದನು.

ಮೇರಿಯಸ್ಸನ ತಾತ, ಜಿಲ್ಲೆ ನಾರ್ಮಂಡನ ಮನಸ್ಸಿನಲ್ಲಿ, ಮೊದಲು ಬಹು ಚಿಂತೆ ಹುಟ್ಟಿದ್ದುದು, ಬರಬರುತ್ತ ಸಂತೋಷ ವುದಯಿಸಿತು. ಮೇರಿಯಸ್ಸನಿಗೆ ಪ್ರಾಣಭಯವು ತಪ್ಪಿತೆಂದು ವೈದ್ಯನು ಹೇಳಿದಾಗ ಅವನಿಗೆ ಸಂತೋಷದಿಂದ ಹುಚ್ಚು ಹಿಡಿ ದಂತಾಯಿತು. ಆಗ ಅವನು ಬಾಗಿಲು ಕಾಯುವವನಿಗೆ ಮೂರು ಲೂಯಿಗಳನ್ನು ಬಹುಮಾನವಾಗಿ ಕೊಟ್ಟನು.

ಅವನು ಪ್ರತಿ ಕ್ಷಣದಲ್ಲಿಯ, ‘ ಇನ್ನೆನೂ ಪ್ರಾಣಭಯ ವಿಲ್ಲವಷ್ಟೆ ? ಇದೆಯೇ ? ‘ ಎಂದು ವೈದ್ಯನನ್ನು ಕೇಳುತ್ತಿದ್ದನು. ಈಗ ಮೇರಿಯಸ್ಸನನ್ನು ಕಂಡರೆ ಅವನಿಗೆ ಮುತ್ತಜ್ಜಿಗಿದ್ದಷ್ಟು ಪ್ರೇಮ, ಊಟಮಾಡುವಾಗಲೂ ಅವನ ಹಂಬಲೇ, ತಾನು ಯಾರೆಂಬುದನ್ನೇ ಮರೆತನು, ಮೇರಿಯಸ್ಸನೇ ಮನೆಗೆ ಯಜ ಮಾನನಾದನು ; ತಾನು ಮೊಮ್ಮಗನಿಗೆ ಮೊಮ್ಮಗನಾದನು.

ಗಾಯಗಳಿಗೆ ಅವರು ಔಷಧವನ್ನು ಹಾಕಿ ಕಟ್ಟಿ ತನ್ನನ್ನು ಉಪಚರಿಸುತ್ತಿದ್ದಾಗ ಮೇರಿಯಸ್ಕನ ಮನಸ್ಸು ಮಾತ್ರ ಕೋಸೆಟ್ಟ ಳಲ್ಲಿಯೇ ಲೀನವಾಗಿರುತ್ತಿತ್ತು.

ಅವನಿಗೆ ಜ್ವರವೂ ಸನ್ನಿ ಯ ನಿಂತಮೇಲೆ ಕೋಸೆಟ್ಟಳ ಹೆಸರು ಹೇಳುವುದನ್ನು ಬಿಟ್ಟನು. ಇದರಿಂದ ಅವನಿಗೆ ಕೋಸೆ ಟ್ಯಳ ಚಿಂತೆ ಅಡಗಿತೆಂದು ಅವರು ಊಹಿಸುವಂತಾಯಿತು. ಆದರೆ ಅವನು ಮನಸ್ಸನ್ನು ಶಾಂತ ಸ್ಥಿತಿಗೆ ತಂದುಕೊಂಡಿದ್ದನು.

ತನ್ನ ಪ್ರಾಣವನ್ನು ಉಳಿಸಿದವರು ಯಾರೆಂಬುದಾಗಲಿ, ಹೇಗೆ ಉಳಿಸಿದರೆಂಬುದಾಗಲಿ ಅವನಿಗೆ ಗೊತ್ತಿರಲಿಲ್ಲ. ಅಲ್ಲದೆ, ಅವನ ಸುತ್ತುಮುತ್ತಲಿದ್ದವರಿಗೂ ಸಹ ಈ ವಿಚಾರವೇ ತಿಳಿಯದು. ಅವ ನನ್ನು ರಾತ್ರಿಯ ಕಾಲದಲ್ಲಿ ಯಾರೋ ಬಂಡಿಯಲ್ಲಿ ಹಾಕಿಕೊಂಡು ರೂ ಡೆಸ್ ಫೈಲ್ಸ್ ಡ್ಯೂ ಕಲ್ವೇರ್ ಬೀದಿಗೆ ತಂದು ಬಿಟ್ಟರೆಂದು ಮಾತ್ರವೇ ಅವರು ಅವನಿಗೆ ಹೇಳುತ್ತಿದ್ದರು.

ಅನಂತರ, ಮೇರಿಯಸ್ಸನಿಗೆ ಸ್ವಲ್ಪ ಗುಣತೋರಿ ಶಕ್ತಿ, ಕೂಡಿದಮೇಲೆ, ಒಂದು ದಿನ, ಅಂದವಾಗಿ ಉಡುಪನ್ನು ಧರಿಸಿದ್ದ ಬಿಳಿಯ ಕೂದಲಿನ ಆ ದೊಡ್ಡ ಮನುಷ್ಯನು ಬಂದನು. ಈ ಸಲಮಾತ್ರ ಅವನು ಒಂಟಿಯಾಗಿ ಬರಲಿಲ್ಲ. ಆದಕಾರಣ ಈಗ ಕೋಸೆಟ್ಟಳಿಗೂ ಮೇರಿಯಸ್ಸನಿಗೂ ಪರಸ್ಪರ ಭೇಟಿಯಾಗಲು ಅವ ಕಾಶವಾಯಿತು.

ಕೋಸೆಟ್ಟಳು ಒಳಗೆ ಬಂದೊಡನೆ, ಬಾಸ್ಕ್‌ ಮತ್ತು ನಿಕೋ ಲೆಟ್ ಮೊದಲಾಗಿ ಸಂಸಾರದ ಜನರೆಲ್ಲರೂ ಮೇರಿಯಸ್ಸನ ಕೊಠಡಿ ಯೊಳಕ್ಕೆ ಬಂದು ಸೇರಿದರು.

ಕೋಸೆಟ್ಟಳು ಬಾಗಿಲಿಗೆ ಬಂದಾಗ ಏನೋ ಮಂಕುಮುಚ್ಚಿ ಕೊಂಡಂತೆ ಇದ್ದಳು.

ಮೇರಿಯಸ್ಸನ ತಾತನು ಆಗ ಸೀನುವಷ್ಟರಲ್ಲಿದ್ದನು, ಕರವಸ್ತ್ರ ದಿಂದ ಮೂಗನ್ನು ಹಿಡಿದು, ಸ್ವಲ್ಪ ಹಾಗೆಯೇ ನಿಂತು, ವಸ್ತ್ರದ ಮೇಲಿನಿಂದಲೇ ಕೋಸೆಟ್ಟಳನ್ನು ನೋಡಿ, ಆಹಾ ! ಎಂತಹ ದೇವಕನ್ಯೆ !’ ಎಂದು ಹೇಳಿ ಗಟ್ಟಿಯಾಗಿ ಮಗನ್ನು ಸೀತನು. ಕೂದಲು ಬೆಳ್ಳಗಾಗಿದ್ದ, ಮರ್ಮಭೇದಕವಾದ ಗಂಭೀರದ ಮುಗುಳಗೆಯಿಂದ ಕೂಡಿದ ಆ ಮನುಷ್ಯನೂ ಕೋಸೆಟ್ಟಳ ಹಿಂದೆ ಒಳಹೊಕ್ಕನು.

ಇವನೇ ಜೀನ್’ ವಾಲ್ಜೀನನು. ಬಾಗಿಲುಕಾಯುವವನು ಹಿಂದೆ ಹೇಳಿದ್ರಂತೆ, ಇವನು ಹೊಸದಾದ ಕಪ್ಪುಬಣ್ಣದ ಉಡುಪು ಗಳನ್ನೂ ಬಿಳಿಯ ಕೊರಳುಪಟ್ಟಿಯನ್ನೂ ಅಂದವಾಗಿ ಧರಿಸಿಕೊಂಡು ಬಂದಿದ್ದನು.

ಜೂನ್ ೭ ನೆಯ ತಾರೀಖಿನ ರಾತ್ರಿ ಹರಕುಬಟ್ಟೆಗಳನ್ನು ಧರಿಸಿ, ಮೈಯೆಲ್ಲ ಕೊಚ್ಚೆಯಿಂದ ತುಂಬಿ, ಭಯಂಕರನಾಗಿಯೂ, ಬಡವಾಗಿಯೂ, ಮುಖವೆಲ್ಲವೂ ರಕ್ತಮಯವಾಗಿಯೂ, ಮೂರ್ಛೆ ಹೋಗಿದ್ದ ಮೇರಿಯಸ್ಸನನ್ನು ಎತ್ತಿಕೊಂಡು ಬಾಗಿಲಿಗೆ ಬಂದ ಆ ಭೀಕರಸ್ವರೂಪನಾದ ಹೆಣಹೊರುವ ಮನುಷ್ಯನನ್ನು ನೋಡಿದ್ದ ಆ ಬಾಗಿಲುಕಾಯುವವನು, ಈಗ ಬಂದ ಜೀನ್ ವಾಲ್ಜೀನನನ್ನು ಅವನ ನಿಜ ಸ್ವರೂಪದಲ್ಲಿ ನೋಡಿ, ಗುರುತುಹಿಡಿಯುವುದೆಂದರೆ ಸಾಧ್ಯವೇ ! ಆ ರೂಪಕ್ಕೂ ಈ ರೂಪಕ ಎಷ್ಮ ಅಂತರವಿತ್ತು. ಆದರೂ ಅವನ ಮನಸ್ಸಿನಲ್ಲಿ ಸ್ವಲ್ಪ ಸಂದೇಹವೇ ಹುಟ್ಟಿತು. ಫಾಚೆಲ್ ವೆಂಟ್ ಎಂದು ಹೆಸರಿಟ್ಟುಕೊಂಡಿದ್ದ ಇವನು ಕೋಸೆಟ್ಟ ಳೊಡನೆ ಬಂದಾಗ ಆ ಬಾಗಿಲಿನ ಆಳು ತನ್ನ ಹೆಂಡತಿಯೊಡನೆ ಗುಟ್ಟಾಗಿ, ‘ ನಾನು ಈ ಮುಖವನ್ನು ಎಲ್ಲಿಯೋ ನೋಡಿರುವಂತೆ ನನ್ನ ಮನಸ್ಸಿಗೆ ತೋರುತ್ತಿರುವುದಾ ! ಕಾರಣವೇನು ?’ ಎಂದು ಹೇಳಲೇ ಬೇಕಾಯಿತು.

ಮಾನ್ ಸಿಯುರಫಾಚೆಲ್ ವೆಂಟನು ಮೇರಿಯಸ್ಸನ ಕೊಠಡಿ ಯಲ್ಲಿ, ಬಾಗಿಲಿನ ಬಳಿಯಲ್ಲಿ ದೂರವಾಗಿ ನಿಂತನು. ಅವನ ಕಂಕುಳಲ್ಲಿ ಯಾವುದೋ ಪುಸ್ತಕವನ್ನು ಕಾಗದದಲ್ಲಿ ಸುತ್ತಿದಂತೆ ಇದ್ದ ಒಂದು ಕಟ್ಟು ಇತ್ತು. ಅದರ ಮೇಲಿನ ಕಾಗದವು ಹಸುರು ಬಣ್ಣವಾಗಿಯ ಮಣ್ಣಾಗಿ ಬೂಜು ಹಿಡಿದಂತೆಯೂ ಇತ್ತು.

ಮಾನ್ಸಿಯರ್ ಜಿಲ್ಲೆ ನಾರ್ಮಂಡನು, ಇವನನ್ನು ಕುರಿತು, ಮಾನ್ಸಿಯರ್ ಫಾಚೆಲ್ವೆಂಟ್, ನನ್ನ ಮೊಮ್ಮಗ ಮಾನ್‌ಸಿ ಯುರ್ ಬ್ಯಾರನ್ ಮೇರಿಯಸ್ ಪಾಂಟ್ ಮರ್ಸಿಗೆ ಈ ಕನ್ಯಾಮಣಿ ಯನ್ನು ಪಾಣಿಗ್ರಹಣಮಾಡಿಕೊಡಬೇಕೆಂದು ವಿನಯದಿಂದ ಕೇಳಿ ಕೊಳ್ಳುವೆನು,’ ಎಂದನು.

ಮಾನ್ಸಿಯರ್ ಫಾಚೆಲ್ ವೆಂಟನು ತಲೆಬಾಗಿ ನಮ ಸ್ಕರಿಸಿದನು.

ಜಿಲ್ಲೆ ನಾರ್ಮಂಡನು, ‘ ಒಪ್ಪಿಗೆಯಾಯಿತು.’ ಎಂದು, ಮೇರಿ ಯಸ್ಸನನ್ನೂ ಕೋಸೆಟ್ಟಳನ್ನೂ ನೋಡಿ, ಕೈಗಳನ್ನು ನೀಡಿ ಆಶೀ ರ್ವದಿಸಿ, ‘ ಒಬ್ಬರನ್ನೊಬ್ಬರು ವರಿಸಲು ಅನುಜ್ಞೆ ಕೊಟ್ಟೆನು,’ ಎಂದು ಆನಂದಪರವಶನಾಗಿ ಕೂಗಿ, ಒಂದು ಕ್ಷಣ ಕಾಲ ಸುಮ್ಮ ನಿದ್ದು, ಹೀಗೆಂದನು :

‘ ಈ ಮುದ್ದು ಕನ್ಯಾಮಣಿಯು ಪರಮ ಸೌಂದರ್ಯ ವತಿಯು. ಈ ಕೋಸೆಟ್ಟಳು. ದೈವ ಸೃಷ್ಟಿಯಲ್ಲಿ ಅತ್ಯುತ್ತಮಳಾದ ವಧಮಣಿಯು. ಚಿಕ್ಕ ಕನೈಯಾದರೂ ಮುಂದೆ ಘನತೆಗೇರುವ ಸ್ತ್ರೀಯು. ರಾಜಪುತ್ರಿಯಂತೆ ಹುಟ್ಟಿರುವಳಾದರೂ ಒಬ್ಬ ಸಾಮಾನ್ಯ ಸಭುವಿನ ಪತ್ನಿ’ (a baroness) ಯಾಗಲೊಪ್ಪಿದಳು,’ ಎಂದು ಹೇಳಿ, ಅವರಿಬ್ಬರನ್ನೂ ನೋಡಿ, ‘ ಮಕ್ಕಳಿರಾ ! ನೀವು ಒಬ್ಬರನ್ನೊಬ್ಬರು ನೋಡಿ, ಪರಸ್ಪರ ತಕ್ಕ ವರೆಂದು ಮನಸ್ಸಿನಲ್ಲಿ ಒಪ್ಪಿ ವರಿಸಿ, ಪರಸ್ಪರ ಪ್ರೇಮಪರವಶರಾಗಿರಿ, ಪ್ರೇಮವೆಂಬುದು ಒಂದು ವೇಳೆ ಜನರ ಅವಿವೇಕ ಮನೋಭಾವವೇ ಆದರೂ ಅದು ಭಗವಂತನ ಸುವಿವೇಕ ಸೃಷ್ಟಿಯು. ಅದರಿಂದ ಇಬ್ಬರೂ ಸತಿಪತಿ ಗಳೆನಿಸಿ ಪರಸ್ಪರ ಭೂಷಣಗಳಾಗಿರಿ,’ ಎಂದನು. ಅನಂತರ, ಸ್ವಲ್ಪ ಚಿಂತಿಸಿ, ” ಅಯ್ಯೋ ! ಎಂತಹ ದುರದೃಷ್ಟ ! ನನಗೀಗ ಒಂದು ಆಲೋಚನೆಯ ಹುಟ್ಟಿತು. ನನಗಿರತಕ್ಕ ಆಸ್ತಿಯಲ್ಲಿ ಅರ್ಧ ಕ್ಕಿಂತಲೂ ಹೆಚ್ಚು ಭಾಗವು ನನಗೆ ವರ್ಷಾಶನವಾಗಿ ಬರತಕ್ಕೆ ಹಣವು. ನಾನು ಜೀವಿಸಿರುವವರೆಗೂ ಎಲ್ಲವೂ ಸರಿಯಾಗಿರು ವುದು. ನಾನು ಸತ್ತನಂತರ, ಎಂದರೆ ಇಂದಿನಿಂದ ಇಪ್ಪತ್ತು ವರ್ಷಗಳಮೇಲೆ, ಅಯ್ಯೋ ! ಮಕ್ಕಳಿರಾ, ನಿಮಗೆ ಒಂದು ಕಾಸಿನ ಆಸ್ತಿಯ ಇರುವುದಿಲ್ಲವಲ್ಲಾ ! ಪ್ರಭುಸತ್ನಿ ಯಾಗುವ ತಾಯೀ, ಕಷ್ಟ ಕೆಲಸವನ್ನರಿಯದೆ ಸುಖದಿಂದಿದ್ದವಳು ನೀನು ಸಂಸಾರ ಪಿಶಾಚದೊಡನೆ ಎಷ್ಟು ಹೆಣಗಬೇಕಾಗುವುದೋ !’

ಹೀಗೆಂದ ಒಡನೆಯೇ ‘ ಯುಫ್ರೈ ಫಾಚೆರ್’ವೆಂಟಳಿಗೆ ಆರು ಲಕ್ಷ ಫಾಂಕುಗಳ ಆಸ್ತಿಯಿರುವುದು, ‘ ಎಂದ ಗಂಭೀರವಾದ ಶಾಂತ ಧ್ವನಿಯು ಕೇಳಿಸಿತು. ಹೀಗೆಂದವನು ಜೀನ್ ವಾಲ್ಜೀನನು. ಈವರೆಗೂ ಅವನು ಒಂದು ಮಾತನ್ನೂ ಆಡಿರಲಿಲ್ಲ. ಅವನು ಅಲ್ಲಿದ್ದನೆಂಬುದೂ ಸಹ ಅಲ್ಲಿ ಯಾರಿಗೂ ಜ್ಞಾಪಕವೇ ಇದ್ದಂತೆ ಕಾಣಲಿಲ್ಲ. ಆನಂದಮಗ್ನರಾಗಿದ್ದ ಇವರೆಲ್ಲರ ಹಿಂದೆ, ಅವನು ಅಲುಗದೆ ನಿಂತಿದ್ದನು.

– ತಾತನು ಬೆಚ್ಚಿ, ‘ಸದ್ಯಕ್ಕೆ ಈ ಕನ್ಯಾಮಣಿ, ಮೇಡಮಾಯಿ ಸೆಲ್ ಯೂಫ್ರೈಳ ಸ್ಥಿತಿಯು ಎಂತಹುದು ?’ ಎಂದು ಕೇಳಿದನು. ಅದಕ್ಕೆ ಕೋಸೆಟ್ಟಳು, ‘ಅವಳೇ ನಾನು,’ ಎನ್ನಲು, ಜಿಲ್ಲೆ ನಾರ್ಮಂಡನು, ” ಏನು ? ನಿನ್ನ ಬಳಿಯಲ್ಲಿ ಆರು ಲಕ್ಷ ಫ್ರಾಂಕು ಗಳಿವೆಯೇ ? ‘ ಎಂದು ಪ್ರಶ್ನೆ ಮಾಡಿದನು.

ಅದಕ್ಕೆ ಜೀನ್ ವಾಲ್ಜೀನನು, ‘ ಸುಮಾರು ಹದಿನಾಲ್ಕು ಹದಿನೈದು ಸಾವಿರ ಫಾಂಕುಗಳು ಕಡಿಮೆಯಾಗಿರಬಹುದು? ಎಂದು ಹೇಳಿ ಪುಸ್ತಕದಂತೆ ಕಾಣುತ್ತಿದ್ದ ಆ ಕಟ್ಟನ್ನು ತೆಗೆದು ಮೇಜಿನ ಮೇಲೆ ಇಟ್ಟು, ಬಿಚ್ಚಿದನು. ಅದು ಬ್ಯಾಂಕಿನ ಹಣದ ನೋಟುಗಳ ಕಟ್ಟೆ೦ಬುದು ಸ್ಪಷ್ಟವಾಯಿತು. ನೋಟುಗಳನ್ನು ನೋಡಿ ಎಣಿಸಿದರು. ಅದರಲ್ಲಿ ಒಂದೊಂದೂ ಒಂದು ಸಾವಿರ ಫಾಂಕುಗಳ ಬೆಲೆಯುಳ್ಳ ಐದುನೂರು ನೋಟುಗಳೂ, ಮತ್ತು ಪ್ರತಿಯೊಂದೂ ಐದುನೂರು ಫಾಂಕುಗಳ ಬೆಲೆಯುಳ್ಳ ಒಂದುನೂರ ಅರವತ್ತೆಂಟು ನೋಟುಗಳೂ ಇದ್ದುವು. ಅಂತೂ ಒಟ್ಟಿನಲ್ಲಿ ಐದು ಲಕ್ಷದ ಎಂಭತ್ತನಾಲ್ಕು ಸಾವಿರ ಫ್ರಾಂಕುಗಳಿದ್ದವು.

ಜಿಲ್ಲೆರ್ನಾಂಡನು, 1 ಇದು ಒಳ್ಳೆಯ ಸೊಗಸಾದ ಪುಸ್ತಕ,’ ಎಂದನು. ಮೇರಿಯಸ್ಸನೂ ಕೋಸೆಟ್ಟಳೂ ಈ ಕಾಲ ದಲ್ಲಿ ಒಬ್ಬರನ್ನೊಬ್ಬರು ನೋಡಿ ಆನಂದಪಡುತ್ತಿದ್ದರೇ ಹೊರತು, ಈ ಹಣದ ವಿಚಾರವು ಅವರ ಕಿವಿಗೇ ಬೀಳಲಿಲ್ಲ.

ಆರು ಲಕ್ಷದ ಮೂವತ್ತು ಸಾವಿರ ಫ್ರಾಂಕುಗಳ ಬೆಲೆಯು ಬ್ಯಾಂಕು ನೋಟುಗಳ ಕಟ್ಟು, ಗಾತ್ರದಲ್ಲಿ ಚಿಕ್ಕದಾದುದರಿಂದ ಅದು ಒಂದು ಪೆಟ್ಟಿಗೆಯಲ್ಲಿ ಹಿಡಿಸಿತ್ತು. ಆ ಪೆಟ್ಟಿಗೆಗೆ ತೇವವು. ತಗುಲದ ಹಾಗೆ ಅದನ್ನು ಜೀನ್ ವಾಲ್ಜೀನನು ಒಂದು ಓಕ್ ಮರದ ಪೆಟ್ಟಿಗೆಯಲ್ಲಿ ಚೆಸ್ಟ್ನಟ್ ಮರದ ಹೊಟ್ಟನ್ನು ಹಾಕಿ, ಅದರೊಳಗೆ ಇಟ್ಟಿದ್ದನು. ಇದೇ ಪೆಟ್ಟಿಗೆಯಲ್ಲಿಯೇ ತನ್ನ ಮತ್ತೊಂದು ನಿಧಿಯೆಂದು ಅವನು ಭಾವಿಸಿದ್ದ ಪಾದ್ರಿಯು ಕೊಟ್ಟ ಮೇಣದಬತ್ತಿಯ ಕೊಳವೆಯನ್ನೂ ಇಟ್ಟಿದ್ದನು. ಇದಾದ ಮೇಲೆ ಜೀನ್ ವಾಲ್ಜೀನನಿಗೆ ಹಣವು ಬೇಕಾದಾಗಲೆಲ್ಲ ಅದನ್ನು ತರುವುದಕ್ಕಾಗಿ ಬ್ಲೇರು ಪಟ್ಟಣದ ಅರಣ್ಯಕ್ಕೆ ಹೋಗಿ ಬರು ತಿದ್ದನು. ಇವನು ಆಗಾಗ ಮನೆಯಲ್ಲಿರದೆ ಇದ್ದುದಕ್ಕೆ ಇದೇ ಕಾರಣ. ಇವನು ಒಂದು ನೆಲವನ್ನ ಗೆಯುವ ಗುದ್ದಲಿಯನ್ನು ಪೊದೆಗಳ ಮಧ್ಯದಲ್ಲಿ ಗೋಪ್ಯವಾಗಿ ಇಟ್ಟಿದ್ದನು. ಈ ಗೋಪ್ಯ ಸ್ಥಳವೂ ಇವನಿಗಲ್ಲದೆ ಮತ್ತೆ ಯಾರಿಗೂ ಗೊತ್ತಿರಲಿಲ್ಲ, ಮೇರಿ ಯಕೃನು ಆರೋಗ್ಯ ಹೊಂದಿದ ಮೇಲೆ, ಈ ಹಣವು ಉಪ ಯೋಗವಾಗುವ ಸಮಯವು ಒದಗಿತೆಂದು ತಿಳಿದು, ಅವನು ಅದನ್ನು ತರಲು ಹೋಗಿದ್ದನು.
*****
ಮುಂದುವರೆಯುವುದು

ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್‌”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೋಚಿಸುತ್ತಲೆ
Next post ಶಿರಿಯ ರಾಮರಾಡೂ ಕೋಲೇಲೋ ದ್ಯೇವರೇ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…