ಶುದ್ಧ ಕರ್‍ಮವ ಮಾಡು ಮನುಜನೆ
ಶುದ್ಧ ಕರ್‍ಮವೆ ನಿನ್ನ ಸಂಪತ್ತು
ನಾಳಿನ ಬದುಕಿಗೆ ಇವತ್ತಿನ ಕರ್‍ಮ
ಇವತ್ತಿ ಬಾಳೇ ನಿನ್ನೆಯ ನಿನ್ನ ಕರ್‍ಮ

ದೇವನ ಭೂಮಿ ಇದು ವಿಚಿತ್ರ
ನೀನು ಕೊಟ್ಟಿದ್ದೆ ನಿನಗೆ ಕೊಡುವುದು
ನೀನು ಮಾಡಿಟ್ಟದೆ ನಿನ್ನ ಧರಿಸುವುದು
ಎಲ್ಲಕ್ಕೂ ನೀನೇ ಕಾರಣ ಮಾಡುವುದು

ಕ್ಷಣಿಕ ಬದುಕು ಇದು ನಗ್ನ ಸತ್ಯ
ಸುಖ ನೆಮ್ಮದಿಗಳೆಲ್ಲ ಭಗ್ನ ಸ್ವಪ್ನ
ನಾಳಿನ ಬಾಳಿಗೆ ಇಂದೇಕೆ ಪೀಠಿಕೆ
ಬದುಕಿಗೆ ನೂರೆಂಟು ಮೋಸಗಳೇಕೆ!

ಗೆಳೆಯ ಮನಸ್ಸಾಗಿ ನಿನ್ನದು ಬತ್ತಲೆ
ಬಾಳಬೇಕು ತನ್ನ ಅನುಸುರಿಸತ್ತಲೆ
ದೈವ ಬಿಟ್ಟರೆ ಎಲ್ಲವೂ ಕತ್ತಲೆ
ಮಾಣಿಕ್ಯ ವಿಠಲನಾಗು ಯೋಚಿಸುತ್ತಲೆ
*****