ಶಿರಿಯ ರಾಮರಾಡೂ ಕೋಲೇಲೋ ದ್ಯೇವರೇ

ಶಿರಿಯ ರಾಮರಾಡೂ ಕೋಲೇಲೋ ದ್ಯೇವರೇ
ಕೋಲು ಕೋಲೇಲೋ ಅದು ಕೋಲೇ ದ್ಯೇವರೇ || ೧ ||

ಶಿನ್ನದೊಂದು ಕೋಲೇಲೋ ಅದು ಕೋಲೇ ದ್ಯೇವರೇ
ರಾಜದೇವಿಂದ್ರಾಡೂ ಕೋಲೇಲೋ ದ್ಯೇವರೇ || ೨ ||

ಕೋಲು ಕೋಲೇ ಕೋಲೇಲೋ ದ್ಯೇವರೇ
ಹೊಂಗಿನೊಂದು ಕೋಲೇಲೋ ಅದು ಕೋಲೇ ದ್ಯೇವರೇ || ೩ ||

ಕೋಲು ಕೋಲೇ ಕೋಲೇಲೋ ದ್ಯೇವರೇ
ಕೃಷ್ಣದ್ಯೇವರಾಡೂ ಕೋಲೇಲೋ ದ್ಯೇವರೇ || ೪ ||

ವಜ್ಜಿರೊಂದು ಕೋಲೇಲೋ ಅದು ಕೋಲೇ ದ್ಯೇವರೇ
ದೀವರ ಮಕ್ಕಳಾಡೂ ಕೋಲೇಲೋ ದ್ಯೇವರೇ || ೫ ||

ಹಿಂದೀನೊಂದು ಕೋಲೇಲೋ ಅದು ಕೋಲೇ ದ್ಯೇವರೇ
ಗಾಡಿಗ್ರ ಮಕ್ಕಳಾಡೂ ಕೋಲೇಲೋ ದ್ಯೇವರೆ
ಕಾರೆವಂದು ಕೋಲೇಲೋ ಅದು ಕೋಲೇ ದ್ಯೇವರೇ || ೬ ||
*****
ಹೇಳಿದವರು: ಬುದ್ದು ಗೌಡ, ಬಿಣಗಾ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಪಿಯ ಪಾಡು – ೨೧
Next post ಹಣದ ಚೈತನ್ಯವನು ಜೀವನ ಚೈತನ್ಯವೆನಬಹುದೇ?

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…