ಒಮ್ಮೆ ಸುಭಾಷ್ಚಂದ್ರ ಬೋಸರು ಪ್ರಥಮ ದರ್ಜೆಯ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅದೇ ಡಬ್ಬಿಯಲ್ಲಿ ಆಂಗ್ಲ ಮಹಿಳೆಯೊಬ್ಬಳು ಇದ್ದಳು. ಆಕೆಯ ಮನಸ್ಸು ಒಂದು ಕೆಟ್ಟ ಯೋಚನೆ ಮಾಡಿತು. “ಎಲ್ಲಿ ತೆಗೆಯಿರಿ, ನಿಮ್ಮಲ್ಲಿರುವ ಹಣವನ್ನೆಲ್ಲಾ ಕೊಡದಿದ್ದರೆ ನಿಮ್ಮ ಮಾನ ಮರ್ಯಾದೆ ಹರಾಜಾಗಿಬಿಡುತ್ತದೆ.” ಶಾಂತಚಿತ್ತ ಬೋಸರು, “ಏನು ಹೇಳಿದೆ ನನಗೆ ಕೇಳಿಸುತ್ತಿಲ್ಲ. ಈ ಚೀಟಿಯಲ್ಲಿ ಬರಿ ಓದಿ ಅರ್ಥಮಾಡಿಕೊಳ್ಳುತ್ತೇನೆ,” ಎಂದರು. ಅದೂ ಸರಿ ಎಂದು ಚೀಟಿಯಲ್ಲಿ ಮೇಲೆ ಹೇಳಿದಂತೆ ಬರೆದು ರುಜುಮಾಡಿ ಕೊಟ್ಟಳು. ಅದನ್ನು ಓದುತ್ತಾ ನಗಾಡತೊಡಗಿದ್ದರು ಬೋಸರು. ತಕ್ಷಣ ಮಹಿಳೆಗೆ ತಾನು ತಪ್ಪು ಮಾಡಿ ಸಿಕ್ಕಿಕೊಂಡೆ ಎಂದೆನಿಸಿ ಧೀನತೆಯಿಂದ ಸುಭಾಸರ ಕ್ಷಮೆ ಬೇಡಿದಳು!
***
Related Post
ಸಣ್ಣ ಕತೆ
-
ಮನೆ “ಮಗಳು” ಗರ್ಭಿಣಿಯಾದಾಗ
ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…
-
ಅವರು ನಮ್ಮವರಲ್ಲ
ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…
-
ಗುಲ್ಬಾಯಿ
ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…
-
ಗೃಹವ್ಯವಸ್ಥೆ
ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…
-
ಇಬ್ಬರು ಹುಚ್ಚರು
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…