ಕರುಳು ಒಣಗಿತ್ತು. ತನು ಕರಗಿತ್ತು.
ಮನ ನಿಂದಿತ್ತು. ವಾಯು ಬರತ್ತಿತ್ತು.
ಅಪ್ಪು ಅರತಿತ್ತು. ಹಿಪ್ಪೆ ಉಳಿಯಿತ್ತು.
ನೆನಹು ನಿಷ್ಪತ್ತಿಯಾಗಿ,
ಬೆಳಗನೆ ಬೆರೆದ ಶರಣರ
ಜನನ ಮರಣಕ್ಕೊಳಗಾದ ಮನುಜರೆತ್ತ
ಬಲ್ಲರೊ ಅಪ್ಪಣಪ್ರಿಯ ಚನ್ನಬಸವಣ್ಣಾ?
*****