ಲಿಂಗಮ್ಮ

ಲಿಂಗಮ್ಮನ ವಚನಗಳು – ೧೦೦

ಬೆಟ್ಟ ಬೆಂದಿತ್ತು. ಬಿದಿರುಗಣ್ಣು ಒಡೆದಿತ್ತು. ಸುತ್ತನೋಡಿದರೆ ನಿರಾಳವಾಯಿತ್ತು. ಕತ್ತಲೆ ಹರಿಯಿತ್ತು. ಮನ ಬತ್ತಲೆಯಾಯಿತ್ತು. ಚಿತ್ತ ಮನ ಬುದ್ಧಿ ಏಕವಾದವು. ಎಚ್ಚತ್ತು ನೋಡಿದರೆ, ಬಚ್ಚಬರಿಯ ಬೆಳಗಲ್ಲದೆ, ಕತ್ತಲೆಯ ಕಾಣಬಾರದು […]

ಲಿಂಗಮ್ಮನ ವಚನಗಳು – ೯೯

ಮನ ಮಂಕಾಯಿತ್ತು. ತನುವು ಮರೆಯಿತ್ತು. ವಾಯು ಬರತಿತ್ತು. ಉರಿ ಎದ್ದಿತ್ತು. ಹೊಗೆ ಹರಿಯಿತ್ತು. ಸರೋವರವೆಲ್ಲ ಉರಿದು ಹೋಯಿತ್ತು. ಒಳಗೆ ಹೊಕ್ಕು ಕದವ ತೆಗೆದು ಬಯಲ ನೋಡಿ, ಬೆಳಗಕೂಡಿದಲ್ಲದೆ […]

ಲಿಂಗಮ್ಮನ ವಚನಗಳು – ೯೮

ನೋಡಿಹೆನೆಂದರೆ ನೋಟವಿಲ್ಲ. ಕೇಳಿಹೆನೆಂದರೆ ಕಿವಿ ಇಲ್ಲ. ವಾಸಿಸಿಹೆನೆಂದರೆ ನಾಸಿಕವಿಲ್ಲ. ನುಡಿದಿಹೆನೆಂದರೆ ಬಾಯಿಲ್ಲ. ಹಿಡಿದಿಹೆನೆಂದರೆ ಹಸ್ತವಿಲ್ಲ. ನಡೆದಿಹೆನೆಂದರೆ ಕಾಲಿಲ್ಲ. ನೆನೆದಿಹೆನೆಂದರೆ ಮನವಿಲ್ಲ. ಇಂತು ನೆನಹು ನಿಷ್ಪತ್ತಿಯಾಗಿ, ಶರಣರ ಪಾದಲ್ಲಿಯೆ […]

ಲಿಂಗಮ್ಮನ ವಚನಗಳು – ೯೭

ಅಂಗವ ಮರೆದಂಗೆ ಲಿಂಗದ ಹಂಗೇಕೊ? ಅರವ ಕಂಡವಂಗೆ ಕುರುಹಿನ ಹಂಗೇಕೊ? ತಾನು ತಾನಾದವಂಗೆ ಧ್ಯಾನದ ಹಂಗೇಕೊ? ಮನಮುಗ್ಧವಾದವಂಗೆ ಮಾನವರ ಹಂಗೇಕೊ? ಆಸೆಯನಳಿದವಂಗೆ ರೋಷದ ಹಂಗೇಕೊ? ಕಾಮನ ಸುಟ್ಟವಂಗೆ […]

ಲಿಂಗಮ್ಮನ ವಚನಗಳು – ೯೫

ಅದೇನು ಕಾರಣವೆಂದರೆ ಘನಕ್ಕೆ ಘನವಾದರು. ಮನಕ್ಕೆ ಮನವಾದರು. ತನುವಿಂಗೆ ತನುವಾದರು. ನಡೆನುಡಿಗೆ ಚೈತನ್ಯವಾದರು. ನೋಡುವುದಕ್ಕೆ ನೋಟವಾದರು. ಕೂಡುವದಕ್ಕೆ ಲಿಂಗವಾದರು. ಈ ಒಳಹೊರಗೆ ಬೆಳಗುವ ಬೆಳಗು ನೀವೆಯಾದ ಕಾರಣ […]

ಲಿಂಗಮ್ಮನ ವಚನಗಳು – ೯೪

ಹೊತ್ತು ಹೊತ್ತಿಗೆ ಕಿಚ್ಚನೆ ಬರಿಸಿದರೆ, ಕಲೆ ಉರಿದುದೆಂದು, ಹೊತ್ತು ಹೊತ್ತಿಗೆ ಪ್ರಾಣಕ್ಕೆ ಪ್ರಸಾದವ ಸ್ಥಾಪ್ಯವ ಮಾಡಿ, ತನುವ ಖಂಡಿಸದೆ, ಕಾಯವ ಮರಗಿಸದೆ, ಭಾವವನೆ ಬಯಲು ಮಾಡಿ, ಭವಕೆ […]

ಲಿಂಗಮ್ಮನ ವಚನಗಳು – ೯೩

ಮನವೆಂದರೆ ಮರವೆಗೆ ಒಳಗು ಮಾಡಿತ್ತು. ತನುವೆಂದರೆ ತಾಮಸಕ್ಕೊಳಗು ಮಾಡಿತ್ತು. ಧನವೆಂದರೆ ಆಸೆ ಎಂಬ ಪಾಶಕ್ಕೊಳಗು ಮಾಡಿತ್ತು. ಇವು ಮಾಯಾ ಪಾಶವೆಂದು ಬಿಟ್ಟು ಹುಟ್ಟನರಿದು, ಬಟ್ಟಬಯಲಲ್ಲಿ ನಿಂದು, ಚಿತ್ತ […]