ನೋಡಿಹೆನೆಂದರೆ ನೋಟವಿಲ್ಲ.
ಕೇಳಿಹೆನೆಂದರೆ ಕಿವಿ ಇಲ್ಲ.
ವಾಸಿಸಿಹೆನೆಂದರೆ ನಾಸಿಕವಿಲ್ಲ.
ನುಡಿದಿಹೆನೆಂದರೆ ಬಾಯಿಲ್ಲ.
ಹಿಡಿದಿಹೆನೆಂದರೆ ಹಸ್ತವಿಲ್ಲ.
ನಡೆದಿಹೆನೆಂದರೆ ಕಾಲಿಲ್ಲ.
ನೆನೆದಿಹೆನೆಂದರೆ ಮನವಿಲ್ಲ.
ಇಂತು ನೆನಹು ನಿಷ್ಪತ್ತಿಯಾಗಿ,
ಶರಣರ ಪಾದಲ್ಲಿಯೆ ಬೆರೆದು
ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ.
*****