ಥಾಮಸ್ ಮಾನ್‌ನ Death in Venice ಕಲಾವಿದನ ಬದುಕಿನ ದುರಂತ

ಥಾಮಸ್ ಮಾನ್‌ನ Death in Venice ಕಲಾವಿದನ ಬದುಕಿನ ದುರಂತ

ಕಲಾಕಾರ ಇಲ್ಲವೇ ಬರಹಗಾರರ ಸೃಜನಶೀಲತೆ ಹಾಗೂ ಸಮಾಜದ ಕಟ್ಟುಪಾಡುಗಳು ಹೊರ ಜಗತ್ತಿನ ನಡುವಿನ ಅವನ ಅನುಸಂಧಾನ ಹೇಗೆ ಸಮತೋಲನದೊಂದಿಗೆ ಸಾಗಬೇಕಾದ ಅನಿವಾರ್ಯತೆ ಮಧ್ಯೇ ಆತ ಹೇಗೆ ಕಳೆದು ಹೋಗುತ್ತಾನೆ ಎಂಬುದ ಕಲಾತ್ಮಕತೆಯ ಮೇರೆಯಲ್ಲಿಯೇ ಹೆಣೆದು ಕಟ್ಟಿರುವ ಕಾದಂಬರಿ ಥಾಮಸ್ ಮಾನ್‌ನ Death In Venice. ಇದೊಂದು ಕಿರು ಕಾದಂಬರಿ (Novella) ಸಂಕೀರ್ಣ ನಿರೂಪಣೆಯಿಂದ ಗಮನ ಸೆಳೆಯುತ್ತದೆ.

Aschenbach ಪ್ರಸಿದ್ಧ ಜರ್ಮನ ಬರಹಗಾರ. ತನ್ನ ಅಚ್ಚುಕಟ್ಟಾದ ಶುದ್ಧ ನಿಯಂತ್ರಿತ ಬರಹಗಳಿಂದ ಹೆಸರುವಾಸಿಯಾದವ. ಕಾದಂಬರಿಯ ಮೊದಲ ಹಂತದಲಿ ಯುರೋಪಿನ ನೆತ್ತಿಯ ಮೇಲೆ ಯುದ್ಧ ಭೀತಿಯ ವಿಪತ್ತಿನ ಮೋಡ ಕವಿದಿದೆ. Aschenbach ಮುನಿಚ್ ಎಂಬಲ್ಲಿ ವಾಸವಿದ್ದಾನೆ. ತನ್ನ ಬದುಕಿನ ಆಕಾಂಕ್ಷೆಗಳನ್ನೆಲ್ಲಾ ಸಾಧಿಸಿದ ಆತ ಈ ಯುದ್ಧದ ವಿಘಟನಾತ್ಮಕ ಸಂಗತಿಗಳ ಇಷ್ಟಪಡುವುದಿಲ್ಲ. ಆತ ಬರಹಗಾರ ಕಲಾಕಾರ ತನ್ನ ಒತ್ತಡದ ಕಾರ್ಯ ಬಾಹುಳ್ಯದಿಂದ ಬಸವಳಿದಿದ್ದಾನೆ. ಯುದ್ಧ ಆತನಿಗೆ ಒಗ್ಗದು. ಆತನಿಗೆ ಕೊಂಚ ವಿಶ್ರಾಂತದ ಬಯಕೆ ಇದೆ. ಹಾಗಾಗಿ ತನ್ನ ಯಾಂತ್ರಿಕ ಬಣ್ಣರಹಿತ ಬದುಕಿನಿಂದ ಸ್ವಲ್ಪ ಹೊಸ ಆಹ್ಲಾದಭರಿತ, ಆನಂದ ಉಕ್ಕಿಸುವ ಹೊಸ ಅನುಭವಗಳ ಕಟ್ಟಿಕೊಡುವ ಸ್ಥಳದ ಹುಡುಕಾಟದಲ್ಲಿ ಇದ್ದಾನೆ. ಆ ಹೊಸ ಹುರುಪ ಹೊದ್ದು ಕೊಳ್ಳುವ ಆಕಾಂಕ್ಷೆಯಿಂದ ಅದೊಂದು ದಿನ ದಣಿವಿನಿಂದ ಉಲ್ಲಾಸಗೊಳ್ಳಲು ಉತ್ತರದ ಆ ರುಧ್ರಭೂಮಿಯತ್ತ ಕಾಲ್ನಡಿಗೆ ಹೊರಡುತ್ತಾನೆ. ಅಲ್ಲಿ ಒಳ ಸ್ಮಶಾನದ ಗುಡಿಯತ್ತ ಹೋಗುತ್ತಲೆ ಆತನಿಗೆ ಎದುರಾಗುವ ಆ ಭಯಂಕರ ರೂಪದ ಅಪರಿಚಿತನ ನೋಡಿ ಒಮ್ಮೇಲೆ ವಿಹ್ವಲಿತನಾಗುತ್ತಾನೆ. ಹೊರ ಚಹರೆಯಲ್ಲಿ ಆತನೊಬ್ಬ ಕ್ರೂರಿ ಕಟುಕನಂತೆ ಕೆಂಪು ಕಣ್ಣ ರೆಪ್ಪೆಗಳ ಹೊಂದಿದ ಭಯಂಕರ ಆಕಾರದ ಆತನತ್ತ ನೋಡುತ್ತಲೇ ಆತನೂ ದ್ವೇಷದ ದೃಷ್ಟಿ ಬೀರುತ್ತಾನೆ. ಆ ಕ್ಷಣಕ್ಕೆ Aschenbach ನಲ್ಲಿ ಹೊಸ ಯೌವನದ ಬಯಕೆಗಳ ಹೊತ್ತ ಹೊಸ ದಾಹ ಮೂಡುತ್ತದೆ, ಮರುಕ್ಷಣ ದೃಷ್ಟಿ ಬದಲಿಸಿದರೂ ದೂರದ ದೃಶ್ಯಗಳ ಹೊಸ ಉತ್ಸುಕತೆಗೆ, ಸ್ವಚ್ಛಂದ ಬದುಕಿನ ಹಂಬಲಕ್ಕೆ ಬಿಡುಗಡೆಯ ಬದುಕಿಗೆ ಎಲ್ಲ ಮರೆತು ಏಕಾಂತತೆಯ ಬಯಸುವ, ಆತನ ಒಳತುಡಿತದ ರೆಕ್ಕೆಗೆ ಬಣ್ಣ ಕಟ್ಟುತ್ತದೆ. ಆವರಿಗೂ ಆತ ಆರಿಸಕೊಂಡ ಸಾಂಪ್ರದಾಯಿಕ, ಶಿಸ್ತುಬದ್ಧ, ಕಳೆಗುಂದಿದ ಜೀವನವು ಬೇಸರವೆನಿಸುತ್ತದೆ.

ಅದುವರೆಗೂ Aschenbach ಬರವಣಿಗೆಗಳು ಆತನ ಬದುಕನ್ನು ಪ್ರತಿಫಲಿಸುತ್ತಿತ್ತು. ಅವು ಸದಾ ಒಂದೇ ಗೊಡ್ಡು ತತ್ವಗಳ ಸಾರುವ, ಕಟ್ಟುನಿಟ್ಟಾದ, ಸಂಸ್ಕಾರಭರಿತ ಮೂಲಭೂತತ್ವದ ಸಂಗತಿಗಳಿಂದ ಆತನಿಗೆ ಹೆಸರು ಗೌರವ ತಂದುಕೊಟ್ಟಿದ್ದವು. ಆದರೆ ಆ ದಿನ ಸ್ಮಶಾನದ ದಾರಿಯಲ್ಲಿ ಆತನ ಅಪರಿಚಿನೊಂದಿಗಿನ ಮುಖಾಮುಖಿಯೊಂದಿಗೆ ಆತ ತನ್ನ ಆ ಹಳೆಯ ಜೀವನಕ್ರಮ, ಗೌರವದ ಆಸೆಗಳ ಹಿಂದೆ ತಳ್ಳಿ ಒಳತುಡಿತದ ಅಂತರ್ಗತ ತುಡಿತದ ಹೊಳೆಯ ಹರಿವಿಗೆ ನಿಧಾನಕ್ಕೆ ತಳ್ಳಲಲ್ಪಡುತ್ತಾನೆ. ಅದಕ್ಕಾತ ತನ್ನ ಬಹುದಿನಗಳ ಬಯಕೆಯಂತೆ ಸದಾ ಪುಟಿಯುವ ಕನಸುಗಳ ಹೊತ್ತ, ಶೃಂಗಾರಮಯ ನಗರವೆಂದೆ ಹೆಸರಾದ ವೆನಿಸ್‌ಗೆ ಹೋಗಲು ನಿರ್ಧರಿಸುತ್ತಾನೆ. ಹಡಗಿನ ಪ್ರಯಾಣದಲ್ಲಿ ಯುವಕನಂತೆ ಕಾಣಲು ಕೃತಕವಾಗಿ ಸಿಂಗರಿಸಿಕೊಂಡ, ಹದಿಹರೆಯದವನಂತೆ ವೇಷತೊಟ್ಟ ಮುದುಕನೊಬ್ಬನ ಕಂಡು ವಿಚಿತ್ರ ಭಾವಕ್ಕೊಳಗಾಗುತ್ತಾನೆ. ಇವೆಲ್ಲವೂ ಸಂದಿಗ್ಧ ಮನಸ್ಥಿತಿಯ ಪ್ರತಿಬಿಂಬಗಳು.

ಮುಂದೆ ಆತ ಹೋದ ವೆನಿಸ್‌ನ ಒಂದು ಲಿಡೋ ಹೋಟೆಲ್ಲಿನ ಸಲೂಲಿನಲ್ಲಿ ಹಲವು ಯುರೋಪಿನ ಜನರಿದ್ದಾರೆ. ಅವರಲ್ಲಿ ಸುಸಂಸ್ಕೃತ ಕುಟುಂಬ ಆತನ ಮನಸೆಳೆಯುತ್ತದೆ. ತಾಯಿ ಮಗಳು ಮನೆಪಾಠದ ಶಿಕ್ಷಕಿ, ಅವರೊಂದಿಗೆ ತಿದ್ದಿತೀಡಿ ನಿರ್ಮಿಸಿದ ಸುಂದರ ಕಲಾಕೃತಿಯನ್ನೆ ಹೋಲುವಂತಹ ಮುದ್ದಾದ ೧೪ರ ಹರೆಯದ ಹುಡುಗ Tadzio ಆತನ ಮನಸ್ಸನ್ನು ಆಕರ್ಷಿಸುತ್ತಾನೆ. ಅದರಲ್ಲೂ ಆ ಹುಡುಗ ಅವನ ದಿನಚರಿಯನ್ನೆ ಬದುಕಿನ ದಿಕ್ಕನ್ನೆ ಬದಲಿಸಿ ಬಿಡುತ್ತಾನೆ. ಆತನ ಅಪೂರ್ವ ಅದ್ವಿತೀಯ ರೂಪ ಕಾಡುವ ಕಾಮನ ಬಿಲ್ಲಾಗುತ್ತದೆ. ನಿರ್ದಿಷ್ಟ ಗುರಿ ಅಸಾಮಾನ್ಯ ಶಿಸ್ತಿನ ಚೌಕಟ್ಟಿನೊಳಗೆ ಬಂಧಿಯಾಗಿದ್ದ ನಿಲುವು ಸಡಿಲಗೊಳ್ಳುತ್ತದೆ.

ಇವರಿಬ್ಬರ ನಡುವಿನ ಸಂಬಂಧ ಹಾಗೂ Tadzioನ ಮೇಲೆ Aschenbach ಗಿರುವ ಉನ್ಮತ್ತ ಆಕರ್ಷಣೆಯನ್ನು ಮುಂದಿಟ್ಟುಕೊಂಡು ಕಲೆ ಸೌಂದರ್ಯ, ಸತ್ಯ, ಯೌವನ, ನವನವೀನತೆಯ ಬಯಕೆ, ನೈತಿಕ ಭ್ರಷ್ಟತೆ ಇತ್ಯಾದಿ ಸ್ವಭಾವಗಳ ಸಂಕೀರ್ಣ ಸಂಬಂಧವನ್ನು ವಿಶ್ಲೇಷಿಸುತ್ತಾನೆ ಮಾನ್. ಸೌಂದರ್ಯ ಬರಿಯ ಕಣ್ಣಿನ ತುತ್ತಾಗಿ ಸೆಳೆದರೆ ಆಗುವ ಅನಾಹುತ ಪ್ರತಿಬಿಂಬಿತವಾಗಿದೆ. Tadzio ಕಲಾಕಾರ ಕೆತ್ತಿದ ಪರಿಪೂರ್ಣ ಸೌಂದರ್ಯದ ಪ್ರತೀಕದಂತೆ ಕಾಣುತ್ತಾನೆ. ಗ್ರೀಕ್ ಶಿಲ್ಪದ ಕಟೆದ ಮೂರ್ತರೂಪದಂತೆ ಕಾಣುವ Tadzio ಉನ್ಮತ್ತತೆಯ ಮೂಲ ಪ್ರೇರಕಬಿಂಬ. Aschenbach ನಲ್ಲಿ ಪಿತ್ರತ್ವದ ಸೆಲೆಯನ್ನು ಉಕ್ಕಿಸುತ್ತಾನೆ. ಆತ ಎಲ್ಲಿ ಹೋದರೂ ಹಿಂಬಾಲಿಸುತ್ತಾನೆ. ಸದಾ ಅವನ ನೆನೆಯುತ್ತ ಮತ್ತಿನಲ್ಲಿ ಮೈಮರೆಯುತ್ತಾನೆ. ಆದರೆ ಅ ಹುಡುಗನೊಂದಿಗೆ ಎಂದಿಗೂ ಮಾತನಾಡುವುದಿಲ್ಲ.

ಮನುಷ್ಯನಲ್ಲಿ ಇರುವ ಪ್ರಾಪಂಚಿಕ ಜಗತ್ತಿನ ಆಸಕ್ತಿ, ಬಯಕೆ, ಮೋಹ ಇದರೊಂದಿಗೆ ಸ್ವಯಂ ನಿಯಂತ್ರಣ ಇವುಗಳ ನಡುವೆ ನಿರಂತರ ತೊಳಲಾಟ. ಇವೆಲ್ಲವೂ ಮನುಷ್ಯನ ನಿರಂತರ ಕಾಡುತ್ತವೆ. ಪಾತ್ರದ ಮೂಲಕವೇ ಹಂತಹಂತವಾಗಿ ಕಥಾ ಹಂದರ ಬಿಚ್ಚಿಕೊಳ್ಳುವುದು. ಸಮಾಜದೊಂದಿಗೆ ರಾಜಿಯಾಗುತ್ತ ಕಲಾವಿದ ಹೇಗೆ ತನ್ನ ಜೀವನದ ಆಕಾಂಕ್ಷೆಗಳ ಕೈಬಿಡುತ್ತಾ ಹೋಗುತ್ತಾನೆ. ಮನಸ್ಸಿನ ಆಂತರಿಕ ಸಂಘರ್ಷಕ್ಕೆ ಹೇಗೆ ವಿಚಿತ್ರ ಸಂದಿಗ್ಧ ಸಂಬಂಧ ಸೃಷ್ಟಿಸುತ್ತದೆ. Tadzio ದೇಹ ಸೌಂದರ್ಯ ವರ್ತನೆಗಳೆಲ್ಲವೂ ಮೇಲೆ ಅಪಾರ ಪ್ರಭಾವ ಬೀರುತ್ತವೆ. Aschenbach ಸ್ವತಃ ತರುಣನಂತೆ ತನ್ನನ್ನು ಅಲಂಕರಿಸಿಕೊಂಡು Tadzio ನ ಆಕರ್ಷಿಸಲು ಆತ ಹೆಣಗುವ ಪರಿ ಅವನ ಅಸ್ವಾಭಾವಿಕ ಮನಸ್ಥಿತಿಗೆ ಸಾಂಕೇತಿಕವಾಗುವುದು.

ವೆನಿಸ್ ನಗರ ಆ ಸಮಯದಲ್ಲಿ ಪ್ಲೇಗ್‌ನ ಸಾಂಕ್ರಾಮಿಕ ರೋಗಕ್ಕೆ ಬಸವಳಿದಿದೆ. ಎಲ್ಲ ಕಡೆಯಲ್ಲೂ ಸಾವಿನ ಛಾಯೆ. ವೆನಿಸ್ ತ್ಯಜಿಸಿ ಮರಳಿ ಹೋಗಲು ಬಯಸುತ್ತಾನೆ. ಫ್ಲೈಟ್ ಗಾಗಿ ಸಿದ್ದನಾಗುತ್ತಾನೆ. ಆದರೆ ಆ ಹುಡುಗನ ಆಕರ್ಷಣೆಗೆ ಒಳಗಾದ ಆತ ನಿರ್ಧಾರ ಬದಲಿಸಿ ಅಲ್ಲಿಯೇ ಉಳಿಯುತ್ತಾನೆ. ವೆನಿಸ್‌ನ ಸುಡುವ ಬಿಸಿಲಿಗೆ ಬಸವಳಿಯುತ್ತಾನೆ. ಅನಾರೋಗ್ಯ ಕಾಡುತ್ತದೆ ಆದರೆ ಆತ ಅಲ್ಲಿಂದ ಹೊರಟುಹೋಗುವುದಿಲ್ಲ. ಅದೊಂದು ದಿನ ಸಮುದ್ರ ತೀರದಲ್ಲಿ ಅವರಿಬ್ಬರ ಕಣ್ಣುಗಳು ಸಂಧಿಸುತ್ತವೆ. ಮುಖಾಮುಖಿಯಾಗುತ್ತವೆ. Aschenbach ನೋಡುತ್ತಾ Tadzio ಮರಳಿನ ಉದ್ದಕ್ಕೂ ನಡೆಯುತ್ತಾ ನಿಧಾನ ಸಮುದ್ರಕ್ಕೆ ಇಳಿದುಬಿಡುತ್ತಾನೆ. ಅಲ್ಲಿಯೇ ಕುಸಿದ Aschenbach ಮತ್ತೆ ಮೇಲೆಳುವುದಿಲ್ಲ.

ಈ ಕಾದಂಬರಿಯಲ್ಲಿ ಬರಹಗಾರ ಇಲ್ಲವೇ ಕಲಾಕಾರ ತನ್ನ ಅಂತಃಪ್ರಜ್ಞೆ ಅದರ ಒಳಬೇಗುದಿಗೆ ವಿರುದ್ಧವಾಗಿ ಹೊರ ಸಮಾಜದ ತೋರಿಕೆಗೆ ಧರಿಸಿದ ಪೂರ್ಣಪ್ರಜ್ಞತೆಯ ಪೋಷಾಕು ಧರಿಸಿ ಮಾದರಿ ಪಾತ್ರವಾಗಲು ಬಯಸುತ್ತಾ ಕೊನೆಯಲ್ಲಿ ತಾನೆ ಹೇಗೆ ದುರಂತಕ್ಕೊಳಗಾಗುತ್ತದೆ ಎಂಬುದು ಒಳಗರ್ಭಿತ ಮರ್ಮ. ಕಲಾಕಾರನನ್ನು ಸೌಂದರ್ಯ ಇಲ್ಲವೇ ಲಲಿತಕಲೆ ಹೇಗೆ ಮಾನವ ಮೂರ್ತ ಚಿಂತನೆಯಲ್ಲಿ ಹಂತಹಂತವಾಗಿ ಮುತ್ತಿಕೊಳ್ಳುತ್ತದೆ. ಬರಹಗಾರನ ಹೇಗೆ ಬರವಣಿಗೆಗೆ ಪಕ್ಕಾಗುತ್ತಾ ತನ್ನ ತಾನೆ ಮರೆತುಬಿಡುತ್ತಾನೆ. ಕಲ್ಪನೆಯ ಉತ್ಪ್ರೇಕ್ಷೆಗಳ ಸುಳಿಯಲ್ಲಿ ತೇಲಾಡುವ ಕಲಾವಿದ ಇಲ್ಲವೇ ಬರಹಗಾರನೊಬ್ಬನ ಬದುಕಿನಲ್ಲಿ {ಸತ್ಯಂ ಶಿವಂ ಸುಂದರಂ} ಸೌಂದರ್ಯ ಕಲೆ ಮತು ಸತ್ಯ ಇವುಗಳ ಅನನ್ಯತೆ ಅದರೊಂದಿಗೆ ಹೊರಜಗತ್ತಿನ ಸಂಬಂಧ ಹೇಗೆ ಸಮ್ಮಿಳಿತಗೊಂಡಿದೆ ಎಂಬುದನ್ನು ಕಾದಂಬರಿ ಪರಿಶೋಧಿಸುತ್ತದೆ.

೧೮೭೫ರಲ್ಲಿ ಜರ್ಮನಿಯ ವ್ಯಾಪಾರಿ ಕುಟುಂಬ ಜನಿಸಿದ Thomas Mann ತನ್ನ ತಾಯಿಯ ಕಲಾನೈಪುಣ್ಯತೆಯ ವ್ಯಕ್ತಿತ್ವದಿಂದ ಪ್ರಭಾವಿತನಾಗಿದ್ದ. ಮುಂದೆ ಕಲೆ ಹಾಗೂ ಸಾಹಿತ್ಯದ ಅದ್ಯಯನಕ್ಕಾಗಿ ಮುನಿಚ್ ವಿಶ್ವವಿದ್ಯಾಲಯ ಸೇರಿದ. ರೋಮನಲ್ಲಿ ವರ್ಷಗಳ ಕಾಲ ಕಳೆದ ಮಾನ್ ಅಲ್ಲಿಯೇ ತನ್ನ ಬರವಣಿಗೆಗೆ ಅರ್ಪಿಸಿಕೊಂಡಿದ್ದ. ಜರ್ಮನ್ ಸಂಸ್ಕೃತಿಯ ಮೂಲ ಸೆಲೆಯಲ್ಲಿ ಬೆಳೆದ ಮಾನ್ ನಾಜಿ ಹೊಸ ಸಂಪ್ರದಾಯದ ವಿರುದ್ಧ ಕೆರಳಿದ್ದ. ಮೊದಲ ಮಹಾಯುದ್ಧದ ಸಂದರ್ಬದಲ್ಲಿ ನಾಝಿ ಸರಕಾರದ ವಿರುದ್ಧ ತನ್ನ ಬರವಣಿಗೆ ತೀವ್ರಗೊಳಿಸಿದ್ದರೂ ಸರಕಾರ ಆತನ ಬಂಧಿಸಲಿಲ್ಲ. ಆದರೆ ಆತನ ಆಸ್ತಿಪಾಸ್ತಿಗಳ ಮುಟ್ಟುಗೋಲು ಹಾಕಿಕೊಂಡಿತು. ೧೯೩೬ರಲ್ಲಿ ಅಮೇರಿಕಾಕ್ಕೆ ಹೋದ ಈತ ಅಲ್ಲಿಯ ಪೌರತ್ವ ಪಡೆದಕೊಂಡ. ಜೀವನದಲ್ಲಿ ಬೌಧ್ಧಿಕತೆ ಸೌಂದರ್ಯ ಲಲಿತಕಲೆಗಳ ಒಳಗೊಳ್ಳುವಿಕೆ ಅದರ ವಿಮರ್ಶೆಯ ಅಗತ್ಯತೆ ಇತ್ಯಾದಿಗಳಿಂದ ಬದುಕಿನ ಸಾರ್ಥಕತೆಯ ಕಂಡುಕೊಂಡಿದ್ದ. ಅದನ್ನೆ ತನ್ನ ಕಾದಂಬರಿಯಲ್ಲಿ ವಿಸ್ತೃತ ಗೊಳಿಸಿದ. ಮಾನ್ ಯುರೋಪಿನ ಸಮಕಾಲೀನ ರೋಗಗ್ರಸ್ತ ನಾಗರೀಕತೆಯ ಚಿತ್ರಣವನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತಾನೆ. ಮಾನ್ ಬಹುತೇಕ ಗಯಟೆಯ ಶೈಲಿಯಿಂದ ಪ್ರಭಾವಿಸಲ್ಪಟ್ಟಿದ್ದು, ಆತನ ಕಾದಂಬರಿಗಳು ತಮ್ಮದೇ ಆದ ಧ್ವನಿಪೂರ್ಣ ನಿರೂಪಣೆಯಿಂದ ಹೇಳಬೇಕಾದದ್ದನ್ನು ವಿಭಿನ್ನ ನಮೂನೆಯಿಂದ ಹೇಳುವ ವಿಧಾನದಿಂದ ಜರ್ಮನ ಸಾಹಿತ್ಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರೀ ಕೃಷ್ಣರಾಜ ರಜತಮಹೋತ್ಸವ ಪ್ರಗಾಥ
Next post ಹೊಸ ಬಾಳು

ಸಣ್ಣ ಕತೆ

 • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

  ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

 • ಯಿದು ನಿಜದಿ ಕತೀ…

  ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

cheap jordans|wholesale air max|wholesale jordans|wholesale jewelry|wholesale jerseys