ಜಂಗಮವೆ ಜಗತ್ಪಾವನವಯ್ಯ!
ಜಂಗಮದ ನೆನಹೆ ಲಿಂಗವಾಯಿತ್ತು.
ಅವರ ತನುವೆ ಎನ್ನ ಕಾಯವಾಯಿತ್ತು.
ಅವರ ದರ್ಶನವೆನಗೆ ಪರುಷವಾಯಿತ್ತು.
ಆ ಪರುಷವಿಡಿದು ಮನ ಲಿಂಗದಲ್ಲಿ ಬೆರಸಿ,
ಕನಸು ಕಳವಳಿಕೆ ಹೆಸರುಗೆಟ್ಟು
ಹೋದವಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ.
*****