ಪ್ರಶ್ನೆ

ಸಿಂಗಲ್ ಡಬಲ್ ಬೆಡ್‌ರೂಂಗಳ ಹೌಸಿಂಗ್ ಕಾಂಪ್ಲೆಕ್ಸ್ ಗಗನಚುಂಬಿ ಮನೆಗಳಲಿ ಒಂದೊಂದೇ ಸಂತಾನ ತೊಟ್ಟಿಲು ಅಮ್ಮನ ಎದೆಹಾಲು ಗೊತ್ತಿಲ್ಲ ಬೇಬಿ ಸಿಟ್ಟಿಂಗ್ ನರ್ಸರಿಯ ಸ್ನೇಹಿತರೊಂದಿಗೆ ಮಾತನಾಡಿ ದಿನ ಕಳೆಯುವಾಗ ದುಡಿದ ಮಮ್ಮಿ ಸುಸ್ತಾಗಿ ಮನೆ ಸೇರುತ್ತಾಳೆ....

ಲಿಂಗಮ್ಮನ ವಚನಗಳು – ೧೦೦

ಬೆಟ್ಟ ಬೆಂದಿತ್ತು. ಬಿದಿರುಗಣ್ಣು ಒಡೆದಿತ್ತು. ಸುತ್ತನೋಡಿದರೆ ನಿರಾಳವಾಯಿತ್ತು. ಕತ್ತಲೆ ಹರಿಯಿತ್ತು. ಮನ ಬತ್ತಲೆಯಾಯಿತ್ತು. ಚಿತ್ತ ಮನ ಬುದ್ಧಿ ಏಕವಾದವು. ಎಚ್ಚತ್ತು ನೋಡಿದರೆ, ಬಚ್ಚಬರಿಯ ಬೆಳಗಲ್ಲದೆ, ಕತ್ತಲೆಯ ಕಾಣಬಾರದು ಕಾಣಾ ಅಪ್ಪಣಪ್ರಿಯ ಚನ್ನಬಸವಣ್ಣಾ. *****