ಲತಾ ಗುತ್ತಿ

ಪುಸ್ತಕಗಳನೋದದೇ ಮುನ್ನುಡಿ ಬರೆದ ಪುಟಗಳ ನೋಡಿ ಪತ್ರಿಕೆಗಳಿಗೆ ಬರೆದು ಹೆಸರುಗಳಿಸಿಕೊಳ್ಳಬಹುದು – ಬೇಡವೆಂದರೆ ಒಂದಿಷ್ಟು ಅಣಕಿಸಿ ಕೂಗಾಡಿಕೊಂಡರೂ ಸಾಕು – ಪ್ರಸಿದ್ಧಿಗೆ ಏರಿಬಿಡುತ್ತಾನೆ (ಳೆ). *****

Read More

ತಲೆಬುರುಡೆಯಲ್ಲಿ ಏನೆಲ್ಲ ತುಂಬಿಕೊಂಡಂತೆ ಕಪಾಟಿನಲ್ಲಿಯೂ ಕೂಡಾ – ಆಸ್ತಿ ಅಂತಸ್ತಿಗೆ ತಕ್ಕಹಾಗೆ ಅವುಗಳವುಗಳದೇ ಧಿಮಾಕು ಹೆಚ್ಚಾದರೆ ತಲೆಸಿಡಿಯುತ್ತದೆ ತುಂಬಿ ಓವರ್‌ಲೋಡ್ ಆದರೆ ಕಚಡಾ ಹೊರಬೀಳುತ್ತದೆ. *****

Read More

ಬಲೆ ಹಾಕಬೇಡ ಹುಡುಗ ಆಕ್ಟೋಪಸ್ ಕೈಗಳಂತೆ ಎಲ್ಲೆಂದರಲ್ಲಿ – ಪ್ರೀತಿ ಅಷ್ಟೊಂದು ಹಗುರಾದುದಲ್ಲ ಸಹನೆ ತ್ಯಾಗ ಮನುಷ್ಯತ್ವ ತಳ್ಳಿ ಹಾಕಿದರೆ, ಚಿಲ್ಲರೆಯಾಗಿ ನಾಲ್ಕು ಜನರ ನಾಲಿಗೆಗೆ ಆಹಾರವಾಗುತ್ತದೆ.

Read More

ಏನೆಲ್ಲ ಅರ್‍ಥ ಒಂದು ಸರಪಳಿಗೆ ನಾಯಿಕೊರಳು, ಕಳ್ಳರ ಕೈಕೊಳ ಹೆಣ್ಣಿನ ಮಾಂಗಲ್ಯ ಮಾನವೀಯತೆಯ ಬಂಧನ ಕೆಲವು ಕಳಚುತ್ತ ಹೋದರೆ ಉಳಿದವು ಬಿಗಿಯಾಗುತ್ತಲೇ ಇರುತ್ತವೆ ಅನುವಂಶಿಕ ಸರಪಳಿ. *****

Read More