ಒಮ್ಮೆ ಆಫ್ರಿಕಾದ ಒಂದು ಕರಿಯ ಪುಟ್ಟ ಬಾಲಕಿ ಬಲೂನ್ ಮಾರುವವನ ಹತ್ತಿರ ಹೋಗಿ ಕೇಳಿದಳು- “ನಿನ್ನ ಹಾರುವ ಬಲೂನ್‌ಗಳಲ್ಲಿ ಎಲ್ಲಾ ಬಣ್ಣಗಳಿವೆ. ಆದರೆ ಕರಿಯ ಬಣ್ಣವೇಕಿಲ್ಲ? ಕಪ್ಪು ಬಣ್ಣದ ಬಲೂನ್ ಕೂಡ ಹಾರ ಬಲ್ಲದೆ?” ಎಂದಳು.

“ಮಗು! ಹಾರಲು ಬೇಕಾಗಿರುವುದು ಹೈಡ್ರೋಜೆನ್ ಅನಿಲ, ಬಣ್ಣವಲ್ಲ. ಯಾವ ಬಣ್ಣವಾದರು ಬಲೂನ್ ಹಾರುತ್ತದೆ. ಕರಿಯ ಬಲೂನ್ ನಲ್ಲೂ ಈ ಅನಿಲವಿದ್ದರೆ ಅದೂ ಹಾರುತ್ತದೆ” ಎಂದ.

ಕರಿಯ, ಬಿಳಿಯ ಎಲ್ಲಾ ಮಾನವ ಜನಾಂಗಗಳಲ್ಲಿ ನಾವು ಗುರಿತಿಸಬೇಕಾದುದು ಉಸಿರು, ಪ್ರಾಣ ಚೈತನ್ಯ, ಶಕ್ತಿ, ಅವರ ಆಂತರಿಕ ಪ್ರೀತಿ, ಸ್ನೇಹ. ಬಣ್ಣವಲ್ಲ, ರೂಪವಲ್ಲ, ಆಕಾರವಲ್ಲ ಎಂಬತತ್ವ ತನಗರಿವಿಲ್ಲದೆ ಬಲೂನ್ ಮಾರುವವ ಪ್ರತಿಪಾದಿಸಿದ್ದ. ತತ್ವದ ತಳ ಬುಡ ಅರಿವಾಗದೆಯು ಪುಟ್ಟ ಬಾಲಕಿಗೆ ಅತೀವ ಆನಂದವಾಗಿತ್ತು.
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)