“ಏ, ಗುಡುಗೆ! ಗುಡಿಗಿ ಬಡಬಡಸ ಬೇಡ” ಎಂದು ಮಿಂಚು ಹೇಳಿತು. “ಏ, ಮಿಂಚೆ! ನೀಕುಣಿಕುಣಿದು ಕುಪ್ಪಳಿಸ ಬೇಡ.” ಎಂದಿತು ಗುಡುಗು. “ನಾ ಗುಡುಗಿ ಹನಿಹನಿ ಸೃಷ್ಟಿಸಿ ಮಳೆಯಾಗಿ ಸುರಿಸುವೆ. ನೀ ಕುಣಿಕುಣಿದು ಏನು ಮಾಡುವೆ?” ಎಂದಿತು ಗುಡುಗು. ನಾನು ತೋರುವ ಕ್ಷಣದ ಬೆಳಕನ್ನಾದರು ನೀನು ತೋರ ಬಲ್ಲೆಯಾ?” ಎಂದು ಮಿಂಚು ಹಂಗಿಸಿತು. ಗುಡುಗು ಒಮ್ಮಿಂದೊಮ್ಮೆಗೆ ಸುಮ್ಮನಾಗಿ ಬಿಟ್ಟಿತು.
*****