ಸ್ವಾವಲಂಬನೆ

ಸ್ವಾವಲಂಬನೆ

ಚಿತ್ರ: ಲಾರೆನ್ಸ್ ಲೆಡಾನೊಯ್ಸ್
ಚಿತ್ರ: ಲಾರೆನ್ಸ್ ಲೆಡಾನೊಯ್ಸ್

ಪ್ರಾಚೀನಕಾಲದ ಅರಬೀಜನರಲ್ಲಿ ಹಾತೀಮತಾಯಿಯು ತನ್ನ ಉದಾರತೆಯ ಸಲುವಾಗಿಯೂ, ದಾನಶೀಲತೆಯ ಸಲುವಾಗಿಯೂ ಬಹು ಪ್ರಸಿದ್ಧನಾಗಿದ್ದನು.

ಒಮ್ಮೆ ಅವನ ಮಿತ್ರರು ಅವನನ್ನು ಕೇಳಿದರು-ನಿನಗಿಂತ ಹೆಚ್ಚು ಉದಾರರಾದ ಮನುಷ್ಯರು ನಿನಗೆಂದಾದರೂ ಸಿಕ್ಕಿರುವರೇ?

“ಅಹುದು” ಎಂದವನು ಮರುನುಡಿದನು.

“ಅವರು ಯಾರು?”

“ಒಮ್ಮೆ ನಾನೊಂದು ಔತಣವನ್ನಿತ್ತೆನು. ಅದರ ಸಲುವಾಗಿ ನಾಲ್ವತ್ತು ಒಂಟೆಗಳನ್ನು ಕೊಯ್ಯಲಾಗಿತ್ತು. ಯಾರು ಬೇಕಾದವರು ಆ ಆಮಂತ್ರಣದಲ್ಲಿ ಸಹಭಾಗಿಗಳಾಗಬಹುದಿತ್ತು. ನಾನು ನನ್ನ ಕೆಲವು ಸರದಾರರನ್ನು ಕರಕೊಂಡು ದೂರದ ಅತಿಥಿಗಳನ್ನು ಆಮಂತ್ರಿಸಲು ಹೊರಟೆನು. ದಾರಿಯಲ್ಲಿ ನನಗೊಬ್ಬ ಕಟ್ಟಿಗೆಯವನು ಸಿಕ್ಕನು. ಅವನು ತನ್ನ ಮಾರಾಟಕ್ಕಾಗಿ ರಭಸದಿಂದ ಬೆಳೆದ ಒಂದು ಗಿಡದ ಕಟ್ಟಿಗೆಗಳನ್ನು ಕಡಿದು ಮುಗಿಸಿದ್ದನು. ಅವನ ಉಪಜೀವನದ ಸಾಧನವು ಅದೇ ಆಗಿತ್ತು. ಆ ಬಡವನನ್ನು ನೋಡಿ ನಾನು- “ಹಾತೀಮತಾಯಿಯು ಇಷ್ಟೊಂದು ಔತಣ ಕೊಡುತ್ತಿದ್ದಾನೆ. ನೀನು ಅಲ್ಲಿಗೆ ಯಾಕೆ ಹೋಗುವದಿಲ್ಲ?” ಎಂದು ಕೇಳಿದನು. ಅವನು ಮಾರುನುಡಿದದ್ದೇನೆಂದರೆ- “ಯಾವನು ತನ್ನ ರೊಟ್ಟಿ ಯನ್ನು ತಾನು ಸಂಪಾದಿಸುವನೋ ಅವನಿಗೆ ಹಾತೀಮತಾಯಿಯ ಔದಾರ್ಯದ ಅವಶ್ಯಕತೆಯಿಲ್ಲ.”

ಹಾತೀಮತಾಯಿಯು ಹೀಗೇಕೆ ಹೇಳಿದನು? ಆ ಕಟ್ಟಿಗೆಯವನು ತನಗಿಂತ ಒಳ್ಳೆಯ ಮನುಷ್ಯನಿದ್ದನೇ?

ಕಾಣಿಕೆಯೊಂದು ಹೆರರಿಗೇನಾದರೂ ಕೊಡುವುದಕ್ಕಿಂತ ಸ್ವಂತದ ಕೆಲಸ ಮಾಡಿಕೊಂಡು ತನ್ನ ಆವಶ್ಯಕತೆಗಳನ್ನು ಪೂರಯಿಸಿಕೊಳ್ಳುವುದು ಅವನಿಗೆ ತುಸು ಒಳ್ಳೆಯದೆನಿಸಿತು. ಯಾಕಂದರೆ ತೆಗೆದುಕೊಳ್ಳುವವರಿಗೆ ಅದರಲ್ಲಿ ಏನೂ ಪರಿಶ್ರಮವಾಗುವದಿಲ್ಲ. ಹಾಗೂ ಅದರ ಸಲುವಾಗಿ ಅವರು ಯಾವ ತ್ಯಾಗವನ್ನೂ ಮಾಡುವದಿಲ್ಲ. ಇಷ್ಟೇ ಅಲ್ಲ; ಆ ವರ್ತನವು ಪರರನ್ನು ಅವಲಂಬಿಸುವ ಪಾಠವನ್ನು ಹೆರವರಿಗೂ ಕಲಿಸುತ್ತದೆ.

ಇರಲಿ. ಒಬ್ಬನು ತನ್ನ ಮಿತ್ರನಿಗೆ ಕಾಣಿಕೆ ಕೊಡುವುದೇನೋ ಸ್ವಾಭಾನಿಕವೇ ಆಗಿದೆ. ಬಲಶಾಲಿಯು ದೀನದುಃಖಿಯಾದ ಮನುಷ್ಯನಿಗೆ ಸಹಾಯ ಮಾಡುವುದಕ್ಕಾಗಿ ಮುಂದುವರಿಯಬೇಕನ್ನುವುದೂ ಒಳ್ಳೆಯದೇ. ಆದರೆ ಒಬ್ಬ ಬಲಿಷ್ಟನೂ ಚಟುವಟಕೆಯುಳ್ಳವನೂ ಆದ ಮನುಷ್ಯನು ತನ್ನ ಕೈಯಿಂದಲೇ ಕೆಲಸ ಮಾಡುವುದು ಒಳ್ಳೆಯದು. ದಾನ ತಕ್ಕೊಳ್ಳುವ ಸಲುವಾಗಿ ಹೆರರ ಮುಂದೆ ಕೈಚಾಚುವುದು ಒಳ್ಳೆಯದಲ್ಲ. ಇರಲಿ. ಯಾರು ತಮ್ಮ ಜೀವನವನ್ನು ಸತ್ಯಸಂಶೋಧನ ಹಾಗೂ ಗಂಭೀರ ವಿಚಾರಗಳಲ್ಲಿಯೇ ಕಳಯುವರೋ ಅವರ ಮಾತು ಬೇರೆ. ಅವರು ನಿಸ್ಸಂಕೋಚವಾಗಿ ಹೆರರ ಕೊಡುಗೆಗಳನ್ನು ಸ್ಪೀಕರಿಸಬಲ್ಲರು.

ಕಟ್ಟಿಗೆಯವನ ನಡವಳಿಕೆಯು ಅದಷ್ಟು ಒಳ್ಳೆಯದಾದರೂ ಇರಾಣದ ಗುಶ್ತಾಸ್ಪನದು ಅವನಗಿಂತಲೂ ಹೆಚ್ಚಿನದಾಗಿದೆ. ಅವನ ಕಥೆ ಹೀಗಿದೆ-

ಪ್ರಾಚೀನಕಾಲದಲ್ಲಿ ಗುಶ್ತಾಸ್ಪ ಎಂಬ ರಾಜಕುಮಾರನಿದ್ದನು. ಅವನ ತಂದೆಯು ಅವನನ್ನು ರಾಜಸಿಂಹಾಸನದಿಂದ ವಂಚಿತಗೊಳಿಸಿದನು. ಅದರಿಂದ ಅವನು ಬಹಳ ದುಃಖಿತನಾದನು. ಮತ್ತು ತನ್ನ ಜನ್ಮಭೂಮಿಯನ್ನು ಬಿಟ್ಟು ಪಶ್ಚಿಮದ ಕಡೆಗೆ ನಡೆದನು. ಒಂಟಿಗನೂ ಹಸಿದು ನೀರಡಿಸಿದವನೂ ಆದ ಗುಶ್ತಾಸ್ಪನು, ಜೀವನದ ಸಲುವಾಗಿ ತನ್ನಬಾಹುಬಲವನ್ನೇ ಅವಲಂಬಿಸ ಬೇಕಾಗುವದೆಂದು ತಿಳಕೊಂಡುಬಿಟ್ಟನು. ಅವನು ತಲುಪಿದ ದೇಶದ ಪ್ರಮುಖನ ಬಳಿಗೆ ಹೋಗಿ-“ನಾನೊಬ್ಬ ಜಾಣನಾದ ಲೇಖಕನು. ನೀನು ಕೃಪೆಮಾಡಿ ನನ್ನನ್ನು ಯಾವುದಾದರೂ ಕರಣಿಕ ಕೆಲಸಕ್ಕೆ ತೆಗೆದುಕೊಳ್ಳಿರಿ” ಎಂದು ನುಡಿದನು. ಪ್ರಮುಖನಿಗೆ ಆ ಸಮಯಕ್ಕೆ ಯಾವ ಲೇಖಕನ ಅವಶ್ಯಕತೆಯೂ ಇರಲಿಲ್ಲವಾದ್ದರಿಂದ ಅವನು ಗುಶ್ತಾಸ್ಪನಿಗೆ ಕೆಲವು ದಿನ ತಡೆಯಲಿಕ್ಕೆ ಹೇಳಿದನು. ಆದರೆ ಅವನು ಅದೆಷ್ಟು ಹಸಿದಿದ್ದನೆಂದರೆ ಪ್ರತೀಕ್ಷಿಸುವುದು ಅವನಿಗೆ ಶಕ್ಯವೇ ಇರಲಿಲ್ಲ. ಅಲ್ಲಿಂದ ಹೊರಟು ಅವನು ಕೆಲವು ಕಾರವಾನರ ಬಳಿಗೆ ಹೋಗಿ ಯಾವುದಾದರೂ ಕೆಲಸ ಕೊಡಿರೆಂದು ಅವರನ್ನು ಪ್ರಾರ್ಥಿಸಿದನು. ಅವರಿಗೂ ಇನ್ನಾವ ಹೊಸ ಮನುಷ್ಯನ ಆವಶ್ಯಕತೆಯಿರಲಿಲ್ಲ. ಆದರೆ ಅವನ ದರಿದ್ರತೆಯನ್ನೂ ಗತಿಗೇಡಿತನವನ್ನೂ ಕಂಡು ಅವರು ಅವನಿಗೆ ತುಸುತಿನ್ನಲಿಕ್ಕೆ ಕೊಟ್ಟರು.

ಸ್ವಲ್ಪ ದೂರ ಮುಂದೆ ಹೋಗಿ ಗುಶ್ತಾಸ್ಪನು ಒಬ್ಬ ಕಮ್ಮಾರನ ಎದುರಿಗೆ ನಿಂತನು ಮತ್ತು ಕಮ್ಮಾರನಿಗೆ ಕೆಲಸ ಕೇಳಿದನು.

ಕಮ್ಮಾರನು- “ಬಾ. ನೀನು ನನಗೆ ಈ ಕಬ್ಬಿಣವನ್ನು ಬಡಿಯಲಿಕ್ಕೆ ನೆರವಾಗಬಲ್ಲಿ” ಎ೦ದು ನುಡಿದು ಒಂದು ಸುತ್ತಿಗೆಯನ್ನು ಗುಶ್ತಾಸ್ಪನ ಕೈಯಲ್ಲಿ ಒಪ್ಪಿಸಿದನು.

ರಾಜಕುಮಾರನಲ್ಲಿ ಬಹಳ ಬಲವಿತ್ತು. ಅವನು ಆ ದೊಡ್ದ ಸಮಟಿಗೆಯನ್ನು ಎತ್ತಿಹಿಡಿದು ಒಂದು ಏಟು ಕೊಟ್ಟನು. ಮೊದಲ ಪೆಟ್ಟಿಗೇ ಅಡಿಗಲ್ಲು ಎರಡು ತುಣುಕು ಆಯಿತು. ಸಿಟ್ಟಿನಿಂದ ತುಂಬಿದ ಕಮ್ಮಾರನು ಆಗಲೇ ಅವನಿಗೆ ಬಾಗಿಲ ದಾರಿ ತೋರಿಸಿಬಿಟ್ಟನು. ಅತ್ಯಂತ ಗಂಭೀರವಾದ ವ್ಯಥೆಯಲ್ಲಿಯೂ, ಶೋಕದಲ್ಲಿಯೂ ಮುಳುಗಿದ ಗುಶ್ತಾಸ್ಪನು ಪುನಃ ಕೆಲಸ ಹುಡುಕುವುದಕ್ಕೆ ಹೊರಬಿದ್ದನು. ಎಲ್ಲಿ ಹೋದರೂ ಅವನು ನಿರುಪಯೋಗಿಯೆಂದೇ ನಿಶ್ಚಯವಾಯಿತು. ಕೊನೆಯಲ್ಲಿ ಅವನು ಒಬ್ಬ ಒಕ್ಕಲಿಗನನ್ನು ಕಂಡನು. ಅವನು ಒಂದು ಧಾನ್ಯದ ಹೊಲದಲ್ಲಿ ಕೆಲಸ ಮಾಡುತ್ತಿದ್ದನು. ಗುಶ್ತಾಸ್ಪನ ಅವಸ್ಥೆಯನ್ನು ಕಂಡು ಅವನಿಗೆ ದಯೆ ಬಂತು. ಅವನು ಆತನಿಗೆ ಇರಲಿಕ್ಕೆ ತಿನ್ನುಣ್ಣುವುದಕ್ಕೂ ಅನುಕೂಲ ಮಾಡಿಕೊಟ್ಟನು.

ಒಂದು ದಿನ ರೂಮದ ರಾಜನ ಮಗಳು ವಿವಾಹಯೋಗ್ಯಳಾಗಿದ್ದಾಳೆಂಬ ಸುದ್ದಿ ಬಂದಿತು. ರಾಜವಂಶದ ಯುವಕರೆಲ್ಲರೂ ಆ ಉತ್ಸವದಲ್ಲಿ ಅಮಂತ್ರಿತರಾದರು. ಗುಶ್ತಾಸ್ಪನೂ ಅಲ್ಲಿಗೆ ಹೋಗುವ ನಿಶ್ಚಯಮಾಡಿದನು. ಎಲ್ಲರ ನಡುವೆ ಅವನೂ ಮೇಜಿನ ಎದುರಿಗೆ ಹೋಗಿ ಕುಳಿತನು. ರಾಜಕುಮಾರಿಯ ಹರಿಕಾರನು ಅತನನ್ನು ಕಂಡು  ಮೋಹಿತನಾಗಬಿಟ್ಟನು. ತನ್ನ ಅನುರಾಗದ ದ್ಯೋತಕವೆಂದು ಗುಲಾಬಿ ಹೂವಿನ ಗುಚ್ಛವೊಂದನ್ನು ಅವನಿಗೆ ಕಾಣಿಕೆ ಕೊಟ್ಟನು.

ಗುಶ್ತಾಸ್ಪನ ದರಿದ್ರತೆಯ ಸಲುವಾಗಿ ರಾಜನು ತೀವ್ರವಾದ ಅರುಚಿಯನ್ನು ತೋರ್ಪಡಿಸಿದನು. ಆದರೆ ಅವನು ಅದರಿಂದ ತನ್ನ ಮಗಳ ಮದುವೆಯನ್ನು ನಿಲ್ಲಿಸಿಬಿಡುವ ಸಾಹಸ ಮಾಡಲಿಕ್ಕೆ ಸಾಧ್ಯವಿರಲಿಲ್ಲ. ಹೇಗೋ ಅವರ ಮದುವೆ ಮಾಡಿ ಮುಗಿಸಿದನು. ರಾಜನು ಅವರನ್ನು ತನ್ನ ಮಂದಿರದಿಂದ ಹೊರಡಿಸಿಬಿಟ್ಟನು. ಅವರಿಬ್ಬರೂ ಅರಣ್ಯದಲ್ಲಿರಬೇಕೆಂದು ಹೊರಬಿದ್ದರು. ಅಲ್ಲಿ ಅವರು ನದಿಯ ಹತ್ತಿರವೇ ತಮ್ಮ ಸಲುವಾಗಿ ಒಂದು ಗುಡಿಸಲವನ್ನು ಕಟ್ಟಿಕೊಂಡರು.

ಗುಶ್ತಾಸ್ಪನು ಒಳ್ಳೆಯ ದೊಡ್ಡ ಬೇಟೆಗಾರನಾಗಿದ್ದನು. ದಿನಾಲು ಅವನು ನಾವೆಯ ಮೇಲೆ ನದಿಯನ್ನು ದಾಟಿ ಅಲ್ಲಿಂದ ಒಮ್ಮೆ ಕಡವೆಗಳನ್ನೂ ಇನ್ನೊಮ್ಮೆ ಕಾಡುಕತ್ತೆಗಳನ್ನೂ ಹಿಡಕೊಂಡು ತರುವನು. ತನ್ನ ಬೇಟೆಯೊಳಗಿಂದ ಅರ್ಧವನ್ನು ಅಂಬಿಗನಿಗೆ ಕೊಟ್ಟು ಉಳದಿದನ್ನು ತನ್ನ ಹೆಂಡತಿಯ ಬಳಿಗೆ ತಕ್ಕೊಂಡು ಬರುತ್ತಿದ್ದನು.

ಒಂದು ದಿನ ನಾವಿಕನು ಮಾಬರೀನ ಎಂಬ ಹೆಸರಿನ ಒಬ್ಬ ಯುವಕನನ್ನು ತನ್ನ ಸಂಗಡ ಕರೆತಂದನು. ಅವನು ಗುಶ್ತಾಸ್ಪನನ್ನು ಕಾಣಬಯಸುತ್ತಿದ್ದನು. ಮಾಬರೀನನು ನುಡಿದದ್ದೇನಂದರೆ- “ನಾನು ರಾಜನ ಮರುಚಲ ಮಗಳು ಅಂದರೆ ನನ್ನ ಹೆಂಡತಿಯ ತಂಗಿಯೊಡನೆ ಮದುವೆ ಯಾಗಬೇಕೆನ್ನುತ್ತೇನೆ. ರಾಜನ ದೇಶದಲ್ಲಿ ಒಂದು ಕರಡಿಯು ಬಹಳ ಕಾಟ ಕೊಡುತ್ತಿದೆ. ನಾನು ಅದನ್ನು ಕೊಂದು ಹಾಕುವವರೆಗೆ ಆ ಹುಡಿಗೆಯೊಡನೆ ನನ್ನ ಮದುವೆಯಾಗಲಾರದು. ನಾನು ಹೇಗೆ ಮಾಡಬೇಕನ್ನುವುದು ನನಗೆ ತಿಳಿಯಲೊಲ್ಲದು.”

ಬೇಟೆಗಾರನಾದ ಗುಶ್ತಾಸ್ಪನು- “ನನ್ನ ಸಲುವಾಗಿ ಆ ಕೆಲಸವನ್ನು ನಾನು ಮಾಡಿಕೊಡುವೆನು” ಎಂದು ಮರುನುಡಿದನು.

ಅವನು ಅರಣ್ಯದ ಕಡೆಗೆ ಹೊರಟನು. ಆಲ್ಲಿ ಅವನು ಕರಡಿಯನ್ನು ನೋಡಿದನು. ಎರಡು ಬಾಣಗಳನ್ನು ಆದಕ್ಕೆ ಹೊಡೆದು ಬಳಿಕ ತನ್ನ ಬೇಟೆಯ ಚಾಕುವಿನಿಂದ ಅದರ ಕತ್ತನ್ನು ಕತ್ತರಿಸಿದನು.

ರಾಜನು ಸತ್ತುಬಿದ್ದ ಪ್ರಾಣಿಯನ್ನು ನೋಡುವುದಕ್ಕೆ ಬಂದನು- ಅವನು ಸಂತೋಷಪೂರ್ವಕವಾಗಿ ತನ್ನ ಮರುಚಲ ಮಗಳನ್ನು ಮಾಬರೀನನಿಗೆ ಕೊಟ್ಟುಬಿಟ್ಟನು.

ಕೆಲವು ದಿನಗಳಾದ ಬಳಿಕ ಅಂಬಿಗನು ಬೇರೊಬ್ಬ ಯುವಕನನ್ನು ಗುಶ್ತಾಸ್ಪನ ಬಳಿಗೆ ಕರೆತಂದನು. ಅವನ ಹೆಸರು ಅಹರುನ. ಅವನು ರಾಜನ ಮೂರನೇ ಮಗಳನ್ನು ಮದುವೆಯಾಗಲು ಇಚ್ಛಿಸುತ್ತಿದ್ದನು. ಆದರೆ ಅದಕ್ಕೆ ಮೊದಲು ಅವನು ಒಂದು ಅಜಗರ ಹಾವನ್ನು ಹೊಡೆಯಬೇಕಿತ್ತು. ಗುಶ್ತಾಸ್ಪನು ಆ ಹೊಸ ದುಷ್ಕರ ಕಾರ್ಯವನ್ನು ಮಾಡುವ ಬಗ್ಗೆ ಅವನಿಗೂ ಮಾತು ಕೊಟ್ಟುಬಿಟ್ಟನು.

ಅವನು ಚೂರಿಗಳಿಂದ ಒಂದು ದಂಡು ರಚಿಸಿದನು. ಅದರ ಸುತ್ತಲೂ ಹರಿತವಾದ ಮೊಳೆಗಳನ್ನು ಬಡಿಯಲಾಯಿತು. ಬಳಿಕ ಆ ಹಾವನ್ನು ಹುಡುಕುವುದಕ್ಕೆ ಹೊರಟನು. ಅಡವಿಗೆ ಹೋಗಿ ಗುಶ್ತಾಸ್ಪನು ನೋಡಿದರೆ ಹಾವಿನ ಶ್ವಾಸದಿಂದ ಬೆಂಕಿ ಹೊರಡುತ್ತಿದ್ದಿತು. ಅವನು ಅದರ ದೇಹದಲ್ಲಿ ಬಹಳಷ್ಟು ಬಾಣಗಳನ್ನು ನಿಲ್ಲಿಸಿದನು. ಅದು ಅವನ ಮುಷ್ಟಿಯೊಳಿಗಿಂದ ಉಳದುಕೊಳ್ಳುವ ಸಲುವಾಗಿ ಅತ್ತ ಇತ್ತ ಜಿಗಿದಾಡುತಿತ್ತು. ಅದರೂ ಅವನು ಒಂದು ಬರಚಿಯ ತುದಿಗೆ ಚೂರಿಗಳ ಚಂಡು ಸಿಕ್ಕಿಸಿ ಅದನ್ನು ಹಾವಿನ ತೆರೆದ ಬಾಯಲ್ಲಿ ತುರುಕಿದನು. ಅದು ತನ್ನ ಬಾಯಿ ಮುಚ್ಚಿ ಕೊಂಡು ಹೊರಳಿಬಿತ್ತು. ಅಗ ರಾಜಕುಮಾರನು ತನ್ನ ಕೈಗತ್ತಿಯಿಂದ ಅದರ ಕೆಲಸವನ್ನು ಮುಗಿಸಿದನು.

ಈ ಪ್ರಕಾರವಾಗಿ ಅಹರುನನಿಗೆ ರಾಜನ ಮೂರನೇ ಮಗಳು ಸಿಕ್ಕುಬಿಟ್ಟಳು.

ಮುಂದೆ ಶೀಘ್ರವೇ ಅ ವೀರನಾದ ರಾಜಕುಮಾರನು ಉತ್ತರಾಧಿಕಾರಿಯ ರೂಪದಲ್ಲಿ ಇರಾಣದ ರಾಜನಾದನೆಂಬುದನ್ನು ತಿಳಿದು ನೀವು ಚಕಿತರಾಗಲಾರಿರಿ. ಗುಶ್ತಾಸ್ಪನ ರಾಜ್ಯಕಾಲದಲ್ಲಿಯೇ ಜರದುಶ್ತ ಇಲ್ಲವೆ ಜೊರೋಸ್ಟರ ಎಂಬ ಹೆಸರಿನ ಪಾರಸೀ ಸತ್ಪುರುಷನಿದ್ದನು. ಅವನು ಇರಾಣೀ ಜನರಿಗೆ ಅಹುರ್ಮಜ್ದ ಎಂಬ ಧರ್ಮವನ್ನು ಕಲಿಸಿದನು. ಅಹುರ್ಮಜ್ದವೆಂದರೆ ಪ್ರಕಾಶ, ಸೂರ್ಯ, ಅಗ್ನಿ, ಸತ್ಯತೆ ಹಾಗೂ ನ್ಯಾಯ ಇವುಗಳ ಪ್ರಭು ವೆಂದುತಿಳಿಯಲಾಗುತ್ತದೆ.
.                 .                       .                     .

ಗುಶ್ತಾಸ್ಪನಿಗೆ ಜಗತ್ತಿನಲ್ಲಿ ಒಮ್ಮೆಲೆ ಸ್ಥಾನವೂ ಸಿಗಲಿಲ್ಲ. ಕೆಲಸವೂ ಸಿಗಲಿಲ್ಲವೆಂಬುದನ್ನು ನೀವು ಕಂಡುಕೊಂಡೇ ಇರುವಿರಿ. ಅವನು ಕೆಲಸಗಳ ಸಲುವಾಗಿ ಅದೆಷ್ಟೋ ಪ್ರಯತ್ನಿಸಿ ವಿಫಲನಾದನು. ಇಷ್ಟೇ ಅಲ್ಲ; ಮೊದಮೊದಲಿಗಾದರೋ ಅವನು ಕೆಲವು ಜನರ ಅಂದರೆ ಆ ಕಮ್ಮಾರನಂಥವರ ತಿರಸ್ಕಾರಕ್ಕೂ ಕಾರಣನಾದನು.

ಕೊನೆಯಲ್ಲಿ ಅವನಿಗೆ ತನ್ನ ಪದವಿಯು ಪ್ರಾಪ್ತವಾಗಿಬಿಟ್ಟಿತು ಮತ್ತು ಈ ಪ್ರಕಾರ ಅವನು ಪ್ರಜೆಗಳನ್ನು ಬುದ್ಧಿವಂತಿಕೆಯಿಂದ ಆಳಿ ಅವರಿಗೆ ಸಹಾಯ ಮಾಡುವುದಕ್ಕೆ ಸಮರ್ಥನಾದನು.

ನಾನು ಇದೇ ಈಗ ಹೇಳಿದ ಕಟ್ಟಿಗೆಯವನು ಇದೇ ವಿಷಯದಲ್ಲಿ ಬಲ್ಲಿದನಾಗಿದ್ದನು. ಯಾಕೆಂದರೆ ಅವನು ಹೆರರಿಗೆ ಸಹಾಯ ಮಾಡುತ್ತಿದ್ದನು. ಯಾವಾಗ? ಕಟ್ಟಿಗೆಯವನು ಕೇವಲ ತನ್ನ ಸಲುವಾಗಿ ಕೆಲಸ ಮಾಡುತ್ತಿದ್ದಾಗ, ಗುಶ್ತಾಸ್ಪನು ಉದಾರನಾದ ಹಾತೀಮತಾಯಿಗಿಂತಲೂ ಶ್ರೇಷ್ಟನು. ಯಾಕಂದರೆ ಅವನಂತೆ ತನ್ನ ಹೊರತಾಗಿ ದ್ರವ್ಯವನ್ನು ಕೊಟ್ಟುಬಿಡುವ ಬದಲು ಇರಾಣದ ರಾಜಕುಮಾರನು ತನ್ನ ಬಾಹುಬಲವನ್ನು ಕೊಟ್ಟನು. ಹಾಗೂ ಹೆರರ ಕಲ್ಯಾಣದ ಸಲುವಾಗಿ ತನ್ನ ಪ್ರಾಣವನ್ನು ಸಹ ಗಂಡಾಂತರದಲ್ಲಿ ಹಾಕಿಬಿಟ್ಟನು.

ಯಾವಾತನು ತನ್ನನ್ನೇ ಅವಲಂಬಿಸಿ ತನ್ನ ಶಕ್ತಿಯಿಂದ ಕೇವಲ ತನ್ನ ಅವಶ್ಯಕತೆಗಳನ್ನು ಮಾತ್ರ ಪೂರ್ತಿಗೊಳಿಸಿಕೊಳ್ಳಲಾರದೆ ಅದರೊಂದಿಗೆ ತನ್ನ ನೆರೆಯವರ ಸಮೃದ್ಧಿ ಹಾಗೂ ಕಲ್ಯಾಣಗಳನ್ನು ಬೆಳೆಸುತ್ತಾನೋ ಅವನಷ್ಟು ಸನ್ಮಾನಯೋಗ್ಯರು ಮತ್ತಾರೂ ಅಲ್ಲ.

ಯಾರು ತಮ್ಮ ಕಾರ್ಯಗಳಿಂದ ತಮ್ಮ ನೆರೆಯವರ ಸುಖಸಮೃದ್ಧಿಗಳಿಗೆ ಕಾರಣಾರಾಗುವರೋ ಅವರೆಲ್ಲರ ಮುಂದೆ ನಾನು ತಲೆಬಾಗಿಸುತ್ತೇನೆ; ಅವನು ಧರ್ಮಾಚಾರ್ಯನಿರಲಿ, ಇಂಜನಿಯರನಿರಲಿ ಇಲ್ಲವೆ ಕಟ್ಟಿಗೆ ಮಾರುವವನಿರಲಿ, ಲೇಖಕನಿರಲಿ, ಕೈಕೂಲಿಯವನಿರಲಿ, ಒಕ್ಕಲಿಗ, ಕಮ್ಮಾರ, ಆಡಳಿತಗಾರ ಯಾರೇ ಇರಲೊಲ್ಲರೇಕೆ. ಯಾರು ತಮ್ಮ ಹಾಗೂ ತಮ್ಮೊಡನೆ ತಮ್ಮ ಸಂಗಡಿಗರ ಲಾಭದ ಸಲುವಾಗಿ ಪಾಲಿನ ಕಾರಖಾನೆ, ಅಂಗಡಿ, ಕಂಪನಿ ಹಾಗೂ ಸಿಂಡಿಕೇಟಗಳನ್ನು ನಡೆಸುವರೋ ಪ್ರತಿ ಒಬ್ಬರಿಗೆ ತಮ್ಮ ಅಧಿಕಾರದ ಹಕ್ಕು ಬಾಧ್ಯತೆಗಳನ್ನು ಪಡೆಯಲು ಅನುಕೂಲಿಸುವರೋ ಅಂಥವರನ್ನು ನಾನು ಆದರಿಸುತ್ತೇನೆ. ಈ ಪ್ರಕಾರ ಒಬ್ಬ ಒಂಟಿಗನಾದ ವ್ಯಕ್ತಿಯ ದುರ್ಬಲ ಹಾಗೂ ಪ್ರಾರ್ಥಕಧ್ವನಿಯ ಸ್ಥಾನದಲ್ಲಿ ಸಮೂಹದ ಶಕ್ತಿಶಾಲಿ ಯಾದ ಧ್ವನಿಯು ಕೇಳಿಬರುತ್ತದೆ.

ಇಂಥ ಕಾರ್ಯನಿರತರಾದ ಪಾಲುಗಾರರು ಈ ಪ್ರಕಾರ ಶ್ರಮಜೀವಿಗಳಿಗೆ ತಮ್ಮ ಶಕ್ತಿಯ ಮೇಲೆ ಭರವಸೆಯಿಡುವುದಕ್ಕೂ ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡುವುದಕ್ಕೂ ಕಲಿಸುತ್ತಾರೆ.

ವಿದ್ಯಾರ್ಥಿಗಳೇ, ನೀವು ಸಹ ಅಧ್ಯಾಪಕರಿಂದ ಕೊಡಲಾದ ಕೆಲಸದಲ್ಲಿ ನಿಮ್ಮ, ಬುದ್ಧಿಯನ್ನು ಬೆಳಸುವ ಸಲುವಾಗಿ ಜ್ಞಾನಸೋಪಾನದ ಉಚ್ಚಾತಿ‌ಉಚ್ಚವಾದ ತುದಿಗೇರುತ್ತ ನೀವು ಯಾವಾಗಲೂ ನಿಮ್ಮ ಸಂಗಡಿಗರಿಗೆ ನೆರವಾಗುವ ಪ್ರಸಂಗವನ್ನು ಹುಡುಕಿರಿ. ಯಾಕಂದರೆ ಅವರು ನಮಗಿಂತ ಕಡಿಮೆ ತಿಳುವಳಿಕೆಯುಳ್ಳವರೂ ಮಂದರೂ ಆಗಿರುತ್ತಾರೆ.

ಯಕ್ಷಿಣಿ ಕಥೆಗಳಲ್ಲಿ ಕೇವಲ ಒಂದು ಹೆಸರು ತಕ್ಕೊಳ್ಳುವುದು, ಲೇಪನದಿಂದ ತಿಕ್ಕುವುದು, ಕೋಲು ತಿರುವುವುದು ಇವುಗಳಿಂದ ಭೂತವೊಂದು ಪ್ರಕಟವಾಗಿಬಿಡುವದು. ಅದು ಮನುಷ್ಯರನ್ನು ಮುಗಿಲಿಗೆತ್ತಿಕೊಂಡು ನೆಗೆಯುತ್ತದೆ. ಕಣ್ಣುಬಡಿದು ಮಂದಿರಗಳನ್ನು ಹುಟ್ಟಿಸುತ್ತದೆ. ನೆಲದೊಳಗಿಂದ ಕುದುರೆಸ್ವಾರರನ್ನು ಅನೆಯ ಮಾವುತರನ್ನೂ ಹೊರಪಡಿಸುತ್ತದೆ.

ಆದರೆ ಸ್ವಪ್ರಯತ್ನವು ಇದಕ್ಕಿಂತಲೂ ಹೆಚ್ಚು ಚಮತ್ಕಾರವನ್ನು ಹುಟ್ಟಿಸುತ್ತದೆ. ಅದು ಪೃಥ್ವಿಯನ್ನು ಉತ್ತಮವಾದ ಬೆಳೆಯಿಂದ ಮುಚ್ಚಿ ಬಿಡುತ್ತದೆ. ಕಾಡುಪಶುಗಳನ್ನು ವಶಪಡಿಸಿಕೊಳ್ಳುತ್ತದೆ. ಪರ್ವತಗಳನ್ನು ಒಡೆದುಕೊಡುತ್ತದೆ. ಒಡ್ಡುಗಳನ್ನು ಹಾಯಗಡಗಳನ್ನೂ ನಿರ್ಮಿಸಿಕೊಡುತ್ತದೆ. ನೀರಲ್ಲಿ ಹಡಗಿಗೂ ಆಕಾಶದಲ್ಲಿ ನಡೆಮಾಡುಗಳಿಗೂ ಗತಿ ಕೊಡುತ್ತದೆ. ಸರ್ವರಿಗೂ ಕಲ್ಯಾಣದ ಹಾಗೂ ಸುಸಂರಕ್ಷಣೆಯ ಇಷ್ಟೊಂದು ಸಾಧನಗಳನ್ನು ಅಣಿಗೊಳಿಸಿಕೊಡುತ್ತದೆ.

ಈ ಪ್ರಯತ್ನದಿಂದಲೇ ಮನುಷ್ಯನು ಹೆಚ್ಚು ಸಜ್ಜನನೂ, ಹೆಚ್ಚು ಯೋಗ್ಯನೂ, ಹೆಚ್ಚು ದಯಾಶೀಲನೂ ಆಗುತ್ತಾನೆ. ನಿಜವಾದ ಉನ್ನತಿಯು ವಾಸ್ತವಿಕವಾಗಿ ಇದರಲ್ಲಿಯೇ ಅದೆ.

ಹಿಂದಿ ಮೂಲ: ಶ್ರೀ ತಾಯಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಳು
Next post ಮಾತು-ಮೌನ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

cheap jordans|wholesale air max|wholesale jordans|wholesale jewelry|wholesale jerseys