ದ್ರವ್ಯದ ಬಡತನ

“ಸಂಸಾರದಲ್ಲಿ ಅಡಿಗಡಿಗೂ ದುಡ್ಡು ಬೇಕು. ದುಡ್ಡಿಲ್ಲದಾಗ ಬಾಳು ಕಂಗೆಡಿಸುವದು. ದ್ರವ್ಯವೇ ಬಾಳಿನ ಜೀವಾಳವಾಗಿರುವದು. ದುಡ್ಡಿದ್ದ “ಬದುಕು ಕೊಳಲು ನುಡಿದಂತೆ; ದುಡ್ಡಿಲ್ಲದ ಬಾಳುಪೆ ಕೊಳವೆಯ ಊದಾಟ.
ದುಡ್ಡಿಲ್ಲದ ಸ್ಥಿತಿಯು ಬಡತನವೆನಿಸಿ, ದುಡ್ಡಿಲ್ಲದವನು ಬಡವ-ದರಿದ್ರನಾಗು ವನು. ಕಣ್ಣಿಗೆ ಕಾಣುವ ಭೋಗ್ಯವಸ್ತುಪು ನಮ್ಮದಾಗಲಿಕ್ಕೆ ದುಡ್ಡು ಮೊದಲು ಜೀವಕ್ಕೆ ನೆಲೆಯಾಗಿ ಶರೀರವಿರುವಂತೆ, ಶರೀರಕ್ಕೆ ಬೆಲೆಯಾಗಿ ದ್ರವ್ಯವಿರುವುದು. ಆದ್ದರಿಂದ ದ್ರವ್ಯವನ್ನು ಕುರಿತು ತಾರತಮ್ಯವನ್ನು ವಿವರಿಸಿ; ನಮ್ಮಲ್ಲಿ ಧೈರ್ಯವನ್ನೂ ಕೆಚ್ಚನ್ನೂ ತುಂಬಿರೆಂ’ದು ಬಿನ್ನಹ ಮಾಡಲಾಯಿತು.

ಸಂಗನುಶರಣನು ಅದಕ್ಕೆ ಸಾವಧಾನವಾಗಿ ಕೊಡುವ ಉತ್ತರನೇನಂದರೆ: ” ನೀವು ಅನ್ನುವಂತೆ ದುಡ್ಡಿಗೆ ಹಿರಿಮೆಯಿದೆ. ಅದು ಮಹಿಮಾಪೂರ್ಣ ವಾಗಿದೆ. ಶರೀರವು ಮಂತ್ರಮಾಟದಿಂವ ಮೈತಾಳಿದಂತೆ, ದ್ರವ್ಯವು ಸಹ
ದೇವನಿಂದಲೇ ತೂರಲ್ಪಟ್ಟ ಠೌಳಿ. ಅವನ್ನು ಹಿಡಿದವನು ಹುಚ್ಚನಾಗುವನು; ಬಿಟ್ಟವನು ಪೆಚ್ಚನಾಗುವನು. ಹಿಡಿದವನು ಹೆಡ್ಡನಾಗುವನು; ಕಳಕೊಂಡವನು ದಡ್ಡನಾಗುವನು.

ಮನುಷ್ಯನಾದವನಿಗೆ ಆಯುಷ್ಯವಿದಿದ್ಧರೆ ಸಾಗೀತು; ಆದರೆ ದ್ರವ್ಯವಿಲ್ಲದೆ ಸಾಗಲಾರದು. ಬುದ್ಧಿಯಿಲ್ಲದ ಮೊದ್ದನು ಸಹ ಬದುಕಬಲ್ಲನು. ಆದರೆ ದ್ರವ್ಯವಿಲ್ಲದ ದರಿದ್ರನು ಬದುಕಲಾರನು.  ಕ್ಷೀಣತೆಯನ್ನು ದುಡ್ಡು ತುಂಬಿಕೊಡಬಲ್ಲದು; ಶರೀರದ ಊನತೆಯನ್ನು ದುಡ್ಡು ಸಂಗಳಿಸಬಲ್ಲದು. ಆದರೆ ದುಡ್ಡಿಲ್ಲದೆ ಗಟ್ಟಿಶರೀರವಾಗಲಿ, ಶಕ್ತಪ್ರಾಣನಾಗಲಿ, ಮೇಧಾವಿ ಬುದ್ಧಿ
ಯಾಗಲಿ ಏತಕ್ಕೂ ಬರಲಾರವು–ಎನ್ನುವುದು ಜಗತ್ತಿಗೆ ಈ ವರೆಗೆ ಬಂದ ಅನುಭವವಾಗಿದೆ. ದುಡ್ಡು ಶರೀರಕ್ಕೆ ನವ್ಯತೆಯನ್ನು, ಪ್ರಾಣಕ್ಕೆ ಸುತ್ರಾಣತೆ ಯನ್ನೂ, ಬುದ್ಧಿಗೆ ಭವ್ಯತೆಯನ್ನೂ ತಂದುಕೊಡಬಹುದು. ಮುಪ್ಪನ್ನು ಕಾಯ
ಕಲ್ಪದಿಂದ ಪ್ರಾಯಕ್ಕೇರಿಸುವುದು ದುಡ್ಡು. ಕುರೂಪಕ್ಕೆ ಬಣ್ಣಬಣ್ಣಗಳಿಂದ ಸಿಂಗಾರದ ಚೆಲುವಿಕೆಯನ್ನು ತೋರಿಸುವದು ದುಡ್ಡು. ದಡ್ಡನನ್ನು ಪಂಡಿತ ಸ್ಥಾನಕ್ಕೊಯ್ಯುವುದು ದುಡ್ಡು. ನೀತಿಗೆಟ್ಟವನನ್ನು ಆದರ್ಶಜೀವಿಯೆಂದು
ಮಾಡಿನಿಲ್ಲಿಸುವುದು ದುಡ್ದು.

ದುಡ್ಡು ಮಾಡುವ ಮಾಯಾರಾಕ್ಷಸನ ಕೃತಿಯನ್ನು ಕಂಡವರು ಆದರೆ ಭಯಂಕರತೆಗೆ ಬೆರಗಾದರು. ಅದರ ಸಹವಾಸ ಬೇಡವೆಂದರು. ದುರಳರನ್ನು ಕಂಡಂತೆ ದೂರಹಾಯತೊಡಗಿದರು. ಸಿರಿವಂತಿಕೆಯ ಮೋಡಿಯ ಸಿಂಗಾರವೆಂದು, ಅದರಿಂದ ಕೇಡಾಗುವ ಮೊದಲೇ ಕಡೆಗೆ ಹಾರಿದರು. ಬಡತನವೇ ಬಾಳ್ವೆವಂತನಿಗೆ ನಿರಾಭರಣಸೌಂದರ್ಯವೆಂದರು. ಅದನ್ನೇ ಅಪ್ಪಿದರು. ಬಡತನವೇ ಕಡೆತನಕ ಇರಲೆಂದು ಹಾರಯಿಸಿದರು. ದುಡ್ಡು ಕಣ್ಣಿಗೆ ಕಾಣಿಸದಷ್ಟು ದೂರ ಓಡಿ ಹೋಗಿ ಗುಹೆ ಸೇರಿದರು. ಅದರ ಆಲಾಪವು ಕೇಳಿಸದಿರಲೆಂದು ಕಿವಿಯಲ್ಲಿ ಬೊಟ್ಟುಹಾಕಿಕೊಂಡು ನಿಂತರು. ಅವರ ವಾಸನೆ ಕೂಡ ಬೇಡವೆಂದು ಮೂಗು ಹಿಡಿದುಕೊಂಡು ಕುಳಿತರು. ಬಟ್ಟೆಗೆ ತಗಲೀತೆಂದು ಬರಿಮೈಯಲ್ಲಿ ಕುಳಿತರು. ಕತ್ತಲೆಯ ಕಾಲಕ್ಕೆ ಬಂದು ಕೊರಳಿಗೆ ಬಿದ್ದೀತೆಂದು ಅಗ್ನಿಹೊತ್ತಿಸಿಕೊಂಡು ಕುಳಿತರು. ಬೂದಿಬಳಿದುಕೊಂಡು ಮೈ
ಅಡಗಿಸಿದರು. ಆದರೇನು?

ಕುಸ್ತಿಯಾಡಿ ಎದುರಾಳಿಯನ್ನು ಕೆಡಹಿದಾಗಲೇ ಗೆಲವು; ಅಲ್ಲವೇ? ಕುಸ್ತಿಯಾಡವೆ, ಎದುರಾಳಿಯ ಸಂಬಂಧ ತಪ್ಪಿಸಿಕೊಂಡರೆ ಒಂಮ ವೇಳೆ ಸೋಲಲಿಲ್ಲನೆನ್ನಲಿಕ್ಕಾಗುವುವೇ ಹೊರತು ಗೆದ್ದೆನೆಂದು ಹೇಳಲಿಕ್ಕೆ ದಾರಿಯಿಲ್ಲ.

ದ್ರವ್ಯದೊಡನೆ ಮೊದಲು ಕೈಕೈ ಹತ್ತಲಿ; ಹೋರಾಟ ನಡೆಯಲಿ; ಸೋಲಿನ ಮೇಲೆ ಸೋಲು ಬರಲಿ; ಆದ್ದರಿಂದ ಎದುರಾಳಿಯ ಗುಟ್ಟು ಗೊತ್ತಾಗುತ್ತದೆ. ಗೆಲುವೇ ನಮ್ಮ ಗುರಿಯಾಗಲಿ, ಸೋಲಿಗಿಂತ ಸೋಲಿನ ಚಿಂತೆಯ
ಸಂಗಡವೇ ಸೊರಗುವುದು ಬೇಡ.

ಬಡತನವೆಂದರೆ, ಸಿರಿವಂತಿಕೆಯಿಲ್ಲದಿರುವ ಸ್ಥಿತಿಯೆಂದು ಜಗತ್ತು ಅರ್ಥ ಹೇಳುತ್ತದೆ. ಸಿರಿವಂತಿಕೆಯೆಂದರೆ ದ್ರವ್ಯವೊಂದೇ ಎಂದು ಲೋಕವು ಭಾವಿಸಿದೆ. ಆರೋಗ್ಯವು ಭಾಗ್ಯವಲ್ಲವೇ? ಶಕ್ತಿವಂತಿಕೆಯು ಕ್ಷಾತ್ರಸಂಪತ್ತಲ್ಲವೇ? ಬುದ್ಧಿವಂತಿಕೆಯು  ಜ್ಞಾನೈಶ್ವರ್ಯವಲ್ಲವೇ ? ಐಶ್ವರ್ಯಗಳೆಲ್ಲ ಈಶ್ವರನ ಒಡವೆಗಳು. ಅಷ್ಟೈಶ್ವರ್ಯಗಳ ಸಲುವಾಗಿ ಕಷ್ಟಪಡುವುದಕ್ಕಿಂತ ಅಷ್ಟೈಶ್ವರ್ಯಗಳ ಒಡೆಯನಾದ ಈಶ್ವರನೊಬ್ಬನನ್ನು ಪಡೆಯುವುಮ ಹಗುರಾದೀತಲ್ಲವೇ? ಸರ್ವ
ಐಶ್ವರ್ಯಗಳೆಲ್ಲ ಕೈವಶಕ್ಕೆ ಬರುವ ಮುಹೂರ್ತವು ಸನ್ನಿಹಿತವಾದಾಗ ದ್ರವ್ಯ ದಾರಿದ್ರ್ಯಕ್ಕೆ ಸೊಪ್ಪು ಹಾಕುವರೇ? ಬಡತನಕ್ಕೆ ಬೆಂದೋಡುವರೇ?

ಹೊರಗಣ್ಣು ಮುಚ್ಚಿದಾಗ ಒಳಗಣ್ಣಿನಿಂದ ನೋಡುವುದಕ್ಕಾಗುತ್ತದೆನ್ನುವುಧು ಸರಿಯಷ್ಟೆ? ದ್ರವ್ಯ ಹೊರಗಣ್ಣು ದ್ರವ್ಯಸಂಪತ್ತೆಂಬ ಹೊರಗಣ್ಣು ಮುಚ್ಚಿದರೆ ಉಳಿದ ದಿವ್ಯಸಂಪತ್ತುಗಳು ಕಣ್ಣಮುಂದೆ ಬರುತ್ತವೆಂದು, ತಿಳಿದ ಅನೇಕ ಸತ್ಪುರುಷರು, ದ್ರವ್ಯವ ತ್ಯಾಗಕ್ಕಿಂತ ಬಡತನದ ಸ್ವೀಕಾರಕ್ಕೆ ಹೆಚ್ಚಾಗಿ ಕೈಯೊಡ್ಡಿದರು. ಬಡತನವು ಆತಿಶಯ- ವಾದಂತೆ ಐಶ್ವರ್ಯಯುಕ್ತನಾದ ಈಶ್ವರನ ಸಾನ್ನಿಧ್ಯವು ಹೆಚ್ಚಾಗಿ ಸನ್ನಿಹಿತವಾಗುವದೆಂದು ಬಗೆದರು ಅಂತೆಯೇ-
ಒಡೆದೋಡು ಎನ್ನ ಮನೆಯಲಿಲ್ಲದಂತೆ ಮಾಡಯ್ಯ:
ಕೊಡುದೇವಾ, ಎನ್ನ ಕೈಯಲ್ಲೊಂದು ಕರಿಕೆಯನು
ಮೃಡದೇವಾ, ಶರಣೆಂದು ಭಿಕ್ಷಕ್ಕೆ ಹೋದರೆ,
ಅಲ್ಲಿ ನಡೆ ದೇವಾ ಎಂದೆನಿಸೋ ಕೂಡಲಸಂಗಮದೇವಾ.

ಎಂದು ಪ್ರಾರ್ಥಿಸಿದರು; ಬೇಡಿಕೊಂಡರು. ಜೀವನೋಪಾಯವು ಕಠಿಣವೆಂದು ಅವರು ಬಗೆಯಲಿಲ್ಲ. ಉಪಜೀವನದ ಮಾರ್ಗವು ಎವೆಗೆಡಿಸುವುದು ಅಳ್ಳೆದೆಯವರಿಗೆ ಮಾತ್ರ. ಕೆಚ್ಚೆದೆಯವರಿಗೆ ಎಲ್ಲಿಲ್ಲಿಯೂ ಅನ್ನ ಸಂಪತ್ತು ಚೆಲ್ಲುವರಿದಿರುತ್ತದೆ. ಎಲ್ಲೆಲ್ಲಿಯೂ ಜೀವನಸೌಕರ್ಯವು ಸೂರೆಗೊಂಡಿರುತ್ತದೆ; ಏತರ ಕೊರತೆಯೂ ಇಲ್ಲ; ಯಾವ ಕೊರತೆಯೂ ಇಲ್ಲ. ಯಾವ ಒಂದನ್ನು ಪಡೆದರೆ ಸರ್ವವೆಲ್ಲವೂ ಸಿಕ್ಕಂತಾಗುವುದೋ ಆ ಒಂದಕ್ಕಾಗಿ ಬಡತನವನ್ನು ಬರಮಾಡಿಕೊಳ್ಳಬಹುದು; ಉಪಲಬ್ಧವಿರುವ ಸಂಪತ್ತುಗಳನ್ನು ದೇವನಡಿಯ ಹುಡಿಯಲ್ಲಿ ಚೆಲ್ಲಿಹಾಕಬಹುದು. ಚೆಲ್ಲಿದ್ದು ಬೀಜವಾಗಿ ಬೆಳೆಯನ್ನು ಕೊಡುವದು. ಹಿಡಿಗೆ ಪಡಿಯಾಗಿ ಮನೆತುಂಬುವುದು, ಮನ ತುಂಬುವುದು. ತನ್ನದಾಗಿ ಏನೂ ಇಲ್ಲದಿದ್ದರೂ, ತನ್ನದಲ್ಲದ್ದು ಯಾವುದೂ ಇರಲಾರದು. ಎಲ್ಲೆಲ್ಲಿಯೂ ತನ್ನ ಮನೆ ಏನೆಲ್ಲವೂ ತನ್ನ ವಸ್ತು; ಯಾರೆಲ್ಲರೂ
ತನ್ನವರು.
ಹಸಿವಾವಡೆ ಭಿಕ್ಷಾನ್ನಗಳುಂಟು.
ತೃಷೆಯಾದಡೆ ಕೆರೆಹಳ್ಳ ಬಾವಿಗಳುಂಟು.
ಶಯನಕ್ಕೆ ಹಾಳು ದೇಗುಲಗಳುಂಟು.
ಚೆನ್ನಮಲ್ಲಿಕಾರ್ಜುನಯ್ಯ, ಆತ್ಮಸಂಗಾತಕ್ಕೆ
ನೀನೆನಗುಂಟು.

ಮೈಮೇಲೆ ಸಿರಿವಂತಿಕೆಯ ಉಡುತೊಡಿಗೆಗಳು ಇಲ್ಲದಿರಬಹುದು. ಒಡಲಿಗೆ ರಾಜಾನ್ನವು ಉಣ್ಣಲಿಕ್ಕೆ ಇಲ್ಲದಿರಬಹುದು. ವಾಸಿಸಲು ಸೊಗಸಾದ ಮನೆಯಿಲ್ಲದಿಬಹುದು. ಇದು ಬಡತನದ ಕುರುಹೆಂದು ತೋರಬಹುದು. ಆದರೆ ಅದೆಲ್ಲವೂ ಆಂಗದ ಬಡತನವೇ ಸೈ. ಆದರೆ ಮನಕ್ಕೆ ಬಡತನವೆಲ್ಲಿ ?  ಬಾಹ್ಯ ಸೌಕರ್ಯಗಳು ಬೇಕಾದಷ್ಟು, ಸಾಕಾದುಷ್ಟು ಇದ್ಧರೂ ಮನಸ್ಸು ತೆರೆದಿಲ್ಲವಾದರೆ ಅದು ಘೊರ ಬಡತನ;  ಅಷ್ಟದಾರಿದ್ರ್ಯವು, ಅದು ನೀಗಲಾರದ ಕುತ್ತು; ನಿಗ್ಗರದ ತುತ್ತು.

ಆಂಗಕ್ಕೆ ಬಡತನವಲ್ಲದೆ, ಮನಕ್ಕೆ ಬಡತನವುಂಟೇ?
ಬೆಟ್ಟಬಲ್ಲಿತ್ತೆಂದರೆ ಉಳಿಯ ಮೊನೆಯಲ್ಲಿ
ಬಡತನ ಉಳ್ಳರೆ ಒಡೆಯದೇ?
ಘನ ಶಿವಭಕ್ತರಿಗೆ ಬಡತನವಿಲ್ಲ.
ಸತ್ಯರಿಗೆ ದುಃಕರ್ಮವಿಲ್ಲ.

ಬಡತನವು ಪೂರ್ವ ಕರ್ಮವೆನ್ನುವರು. ಆಂದುಕೊಳ್ಳಲೊಲ್ಲರೇಕೆ. ಬಡತನವು ಸಾಮಾಜಿಕ ದೋಷವೆನ್ನುವರು ಗೊಣಗಲೊಲ್ಲರೇಕೆ. ಆದರೆ ಬಡತನ ನಿವಾರಣೆಗೆ ಮನಶುದ್ಧಿಯೇ ತೀವ್ರೋಪಾಯ. ಮನಶುದ್ಧಿಯು ಭಗವದ್ ಭಕ್ತಿ- ಯಾಗಿಯೂ, ಭಗವದ್ ಭಕ್ತಿಯು ಘನತರ ಭಗವದ್ ಭಕ್ತಿಯಾಗಿಯೂ ಮಾರ್ಪಟ್ಟರೆ ಅಲ್ಲಿ ಬಡತನ ಉಳಿಯ- ಬಲ್ಲವೇ? ಭಾಷೆ ತೀರಿದಾಗ ಮಾತ್ರ ದಟ್ಟ ದಾರಿದ್ರ್ಯ. ಘನಶಿವಭಕ್ತನು ತನ್ನ ಮನಶ್ಶುದ್ಧಿಯಿಂದ ಶಿವಮನೆಯ ಶಿಶುವೇ ಆಗಿರು- ತ್ತಾನೆ..ಶಿವನ ಸಕಲೈಶ್ವರ್ಯದಲ್ಲಿ ಶಿವನ ಶಿಶುವಿಗೆ ಒಡೆತನವಿರಲಾರದೇ ? ಶಿವನ ಅತುಲವಾದ ಮಹಾ ಐಶ್ವರ್ಯಕ್ಕೆ ಪಾಲುಗಾರನಾದವನಿಗೆ ಇರಬಲ್ಲದೇ? ಮನದ ಮಹಾ ಸಂಪತ್ತಿನಲ್ಲಿ  ಬಡತನವು ಹೇಳಹೆಸರಿಲ್ಲದಂತಾಗುತ್ತದೆ.

ಮನಶುದ್ಧವಿಲ್ಲದವರಿಗೆ ದ್ರವ್ಯದ ಬಡತನವಲ್ಲದೆ
ಚಿತ್ತ ಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿತಾನಾಗಿಪ್ಪಳು,
ಮಾರಯ್ಯಪ್ರಿಯ ಅಮಳೇಶ್ವರ ಲಿಂಗದ ಸೇವೆಯುಳ್ಳನ್ನಕ್ಕ.

ಮನಸ್ಸು ಶುದ್ಧನಾಗಿದ್ಧರೆ ಸಾಲದು; ಚಿತ್ತ ಶುದ್ಧಿಯಿಂದ ಕಾಯಕ ಮಾಡುತ್ತಿರಬೇಕು. ಅದರಿಂವ ಎಲ್ಲೆಲ್ಲಿಯೂ ಐಶ್ವರ್ಯವು ನಲಿಯುವುದು. ಹಿಡಿದದ್ದು ಹೊನ್ನಾಗುವದು, ಮುಟ್ಟಿದ್ದು ಮಾಣಿಕವಾಗುವದು. ಮಣ್ಣು ಹಿಡಿದರೂ ಹೊನ್ನಾಗುವದು.

ಗಳಿಸುವುದೇ ಜೀವನೋದ್ದೇಶವಾಗಬಾರದು. ಕಾಯಕ ಮಾಡಬೇಕೆಂದರೆ ಬಹು ಗಳಿಕೆಯ ದಾರಿಯನ್ನೇ ಹಿಡಿಯ- ಬೇಕೆಂದು ಎಣಿಕೆ ಬರುವುದು ಸಹಜವಾಗಿವೆ. ಕಾಯಕಕ್ಕೆ ಪ್ರತಿಫಲವೆಂದರೆ ದುಡ್ಡು ಮಾತ್ರ ಎಂದು ತಿಳಿದವರೇ ಬಹುಜನರಿದ್ದಾರೆ. ಕಾಯಕದಿಂದ ಪ್ರತಿಫಲವಾಗಿ ದುಡ್ಡು  ಬರಬೇಕಲ್ಲದೆ, ಅದರೊಂದಿಗೆ ಸತ್‍ಸಹವಾಸಪು ಲಭಿಸಬೇಕು. ಈಶ್ವರ ಸೇವೆ ಒದಗಬೇಕು; ಮನಶ್ಶಾಂತಿಯು ಪ್ರಾಪ್ತವಾಗಬೇಕು. ಯಾವ ದುಡಿಮೆಯಿಂದ ದುಡ್ಡು ಮಾತ್ರ ಪ್ರಾಪ್ತವಾಗುವದೋ ಆದು ಕಾಯಕವಾಗಲಾರದು. ಅದು ದುಡ್ಡು ಗಳಿಸುವ ದಾರಿಯೆನಿಸುತ್ತದೆ. ಕಾಯಕದಿಂದ
ದ್ರವ್ಯದ ಬಡತನ ಹಿಂಗಬೇಕಲ್ಲದೆ, ದಿವ್ಯ ಸಂಪತ್ತುಗಳು ಬೆಳೆದು ಬರುತ್ತಿರಬೇಕು. ಅಂಥ ದುಡಿಮೆ ಯಾವುದು? ಯಾವ ಕಾಯಕ ಗ್ರಾಹ್ಯ ವಾದದ್ದು?
ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ
ಭಕ್ತರ ಮನೆಯಲ್ಲಿ ತೊತ್ತಾಗಿಪ್ಪುದು ಕರಲೇಸಯ್ಯ!
ತಾರೌ ಅಗ್ಗವಣಿಯ, ನೀಡೌಪತ್ರೆಯ,
ಲಿಂಗಕ್ರೈ ಬೋನವ ಹಿಡಿಯೌ ಎಂಬರು.
ಕೂಡಲಸಂಗನ ಮಹಾಮನೆಯಲ್ಲಿ ಒಕ್ಕುದನುಣ್ಣೌ
ತೊತ್ತೇ-ಎಂಬರು.

ದ್ರವ್ಯದ ಬಡತನಕ್ಕೆ ಬೆದರಿ, ಮನಕ್ಕೂ ಬಡತನ ತಂದುಡಿಸಿದರೆ ಅದು ಹಣಕ್ಯಾಗಿ ಹಸಿದು ಹಂಬಲಿಸಿ, ತಿನ್ನಲಾಗದ ಕಸಕ್ಕೆ ಕೈಹಾಕುವದು. ಕಣ್ಣಿಗೆ ಕಂಡ ಬದುಕಿಗೆಲ್ಲ ಬಾಯಿ ಹಾಕುವದು. ದುಡ್ಡು ಗಳಿಸಿದ ಒಡೆಯನಾಗಬೇಕಾದವನು, ದುಡ್ಡಿಗಾಗಿ ಬಾಗಿಕೊಂಡಿರುವ ಕಂಗಾಲನಾಗುವನು. ಕಂಗಾಲತನವನ್ನು ಈಡಾಡುವುದೇ ಕಾಯಕದ ಘನೋದ್ದೇಶ- ವಾಗಿರುವಾಗ, ಕಂಗಾಲತನವಲ್ಲಿ ಕಟ್ಟಿಹಾಕುವ ಹೀನಾಯಕ್ಕೆ ಮನವಳಿಸಕೂಡದು. ದುಡ್ಡು ಪರಮಾತ್ಮನ ಪೂಜೆಗಾಗಿ  ಹೂ ಇದ್ಧಂತೆ. ಆದರೆ ಎಲ್ಲಿ ಬೆಳೆದರೂ ಹೂ ಪೂಜೆಗೆ ಸಲ್ಲುವುದೆಂವೇ ತಿಳಿಯ ಬಾರಮ.

ದೂಷಕನವನೊಬ್ಬ ದೇಶವಕೊಟ್ಟರೆ
ಆಶೆಮಾಡಿ ಆತನ ಹೊರೆಯಲ್ಲಿರಬೇಡ.
ಮಾದರೆ ಶಿವಭಕ್ತನಾದರೆ ಆತನ ಹೊರೆಯಲ್ಲಿ
ಭೃತ್ಯನಾಗಿಪ್ಪುದು ಕರೆಲೇಸಯ್ಯ.
ಕಾಡುಸೊಪ್ಪು ತಂದು ಓಡಿನಲ್ಲಿ ಹುರಿದಿಟ್ಟು
ಕುಂಡಿಕೊಂಬುದೀಗ ಕೂಡಲಸಂಗನ ಶರಣರ

ಮನುಷ್ಯನ ಸ್ಮೃತಿ ತಪ್ಪಿಸುವಲ್ಲಿ  ಅಧಿಕಾರದಂತೆ ದುಡ್ಡೂ ಪ್ರಬಲವಾದ ವಿಷವಾಗಿದೆ. ಹಾವಿನ ಕಡಿತದಿಂದ ವಿಷವೇರಿದವನನ್ನು ಮಾತಾಡಿಸುವದಕ್ಕೆ ಕಷ್ಟವಾಗಲಾರದು. ಇನ್ನಾವುದೋ ಭಯಂಕರ ವಿಷಕ್ಕೀಡಾದವನನ್ನು
ಮಾತಾಡಿಸುವುದೂ ಬಿಗಿಯೆನಿಸಲಾರದು. ಆದರೆ ಸಿರಿವಂತಿಕೆಯ ನಂಜೇರಿದವನನ್ನು ನುಡಿಸುವ ಧೈರ್ಯ ಯಾರಿಗಿದೆ? ಅವನನ್ನು ಕೈಹಿಡಿದು ಮಾತಾಡಿಸುವ ಬಂಟು ಬಡತನಕ್ಕೇ ಇದೆ, ಅಂದರೆ ಬಡತನ ಬಂದಾಗಲೇ
ಸಿರಿವಂತಿಕೆಯ ನಂಜು ಇಳಿಯುವುದು. ಬಡತನವೆನ್ನುವುದು ಮಂತ್ರವಾದಿಯಿದ್ದಂತೆ. ಮಂತ್ರವಾದಿ ಮುಂದೆ ಬಂದನಿಂತರೆ, ಸಿರಿವಂತಿಕೆಯ ನೆತ್ತಿಗೇರಿದ ಕಣ್ಣು ಕೆಳೆಗಿಳಿದು ತಮ್ಮ ಸ್ಥಳದಲ್ಲಿ ನೆಲೆಗೊಳ್ಳುವವು. ಕಣ್ಣು
ಮುಗಿದು ಎತ್ತೆತ್ತಲೂ ಕತ್ತಲಾಗಿದ್ದರೂ ಮಂತ್ರವಾದಿಯ ಮಾಟದಿಂದ ಕಣ್ಣು ತೆರೆಯುವವು; ಮಾತು ಮೃದುವಾಗುವದು; ನಾಲಿಗೆ ತಾಳದ ಮೇಲೆ ಬರುವದು.
ನಿಲಿಸಬಹುದಯ್ಯ ಒಂದೇ ಮಂತ್ರದಿಂವ ಕಾಳೋಗರವ
ನಿಲಿಸಬಹುದಯ್ಯ ಒಂದೇ ಮಂತ್ರದಿಂವ ಹಾರುವ ಪಕ್ಷಿಯ,
ನಿಲಿಸಬಹುದಯ್ಯ ಒಂದೇ ಮಂತ್ರದಿಂವ ಹೆಮ್ಮಾರಿಯ,
ಲೋಭವೆಂಬ ಗ್ರಹ ಹಿಡಿದವರ ಏತರಿಂದಲೂ ಬಿಡಿಸಲಾಗದು.
ಈ ಲೋಭಕ್ಕೆ ದಾರಿದ್ರ್ಯವೇ ಔಷದ.
ಹೇಳಿದರೆ ಕೇಳರು, ತಾವು ತಿಳಿಯರು.
ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು.
ಇಂತಹ ಗೊಡ್ಡು ಮೂಳ ಹೊಲೆಯರಿಗೆ
ಕರ್ಮವೆಂಬ ಶರಧಿಯಲ್ಲಿ ಬಿದ್ದು ಉರುಳಾಡುಪುದೇ
ಸತ್ಯವೆಂದಾತ ನಮ್ಮ ಆಂಬಿಗರ ಚೌಡಯ್ಯ..

ದ್ರವ್ಯವೂ ಒಂದು ವಿಧವಾದ ಪರಮಾತ್ಮ ಶಕ್ತಿ. ಅದಿಂದು ಅಲ್ಲದವರ ಕೈಗೀಡಾಗಿದೆ. ಅವರಿಂದ ಜಗತ್ತಿನ ರಕ್ಷಣೆಯಾಗುವ ಬದಲು ಅದರ ಸುಲಿಗೆಯಾಗತೊಡಗಿದೆ. ಆದ್ದರಿಂದ ಅದರ ಸಹವಾಸವೇ ಬೇಡವೆಂವರು. ಅರಿತು
ಅರಿತು ದ್ರವ್ಯದ ಸಹವಾಸ ತಪ್ಪಿಸಿಕೊಂಡರು ಲೋಭಕ್ಕೀಡಾದವರಲ್ಲ. ಅವರ ಮನೆ ಬಡವರದಾದರೂ ಮನ ಸಂಪನ್ನವಾಗಿರುತ್ತದೆ.

ಹಾಗೆ ಮನವು ಸಂಪನ್ನವಾಗಿರುವುದಕ್ಕೆ ಅವರವರ ಶೀಲವೇಕಾರಣ ವಾಗಿರುತ್ತದೆ. ಯಾರಾವರೂ ಮುಟ್ಟಿದರೆ ಮೈಲಿಗೆಯಾಗಾಗುತ್ತದೆಂದು ಹೆರ ದಾರಿ ಓಡಿಹೋಗುವುದು ಶೀಲವಲ್ಲ.
ಇದ್ದುದ ವಂಚನೆ ಮಾಡದಿಪ್ಪುದೇ ಶೀಲ.
ಇಲ್ಲದುದಕ್ಕೆ ಕಡನ ಮಾಡದಿಪ್ಪುದೇ ಶೀಲ.
ಪರಧನ ಪರಸ್ತ್ರೀಯರ ಮುಟ್ಟದಿಪ್ಪುದೇ ಶೀಲ.
ಪರದೈವ ಪರಸಮಯಕ್ಕೆ ಅಳುಪದಿಪ್ಪುದೇ ಶೀಲ.

ಶೀಲವಂತನ ಮನಸ್ಸು ಸಂಪನ್ನನಾಗುವದರಿಂದ ಅವನು ಬಡವನಾಗಿದ್ದರೂ ಮನಕ್ಕೆ ಬಡತನ ತಂದುಕೊಳ್ಳುವುದಿಲ್ಲ. ಸಿರಿವಂತಿಕೆಯುಂಟಾದರೂ ದಿವ್ಯ ಸಂಪತ್ತಿಗೆ ಕಾವಲುಗಾರನೆಂದು ಬಗೆದು ತನ್ನ ತಳವಾರನ ಕೆಲಸವನ್ನುಹಿಗ್ಗಿನಿಂದ ಪೂರಯಿಸುವನು.

ಜಗಜ್ಜನನಿಯು ಉತ್ಸಾಹಪೂರ್ಣಳಾಗಿ ಈ ವರೆಗೆ ಸಂಗಮ ಶರಣನು ಕಟ್ಟಿದ ಗುಡಿಗೆ ಒಂದು ಬಂಗಾರದ ಕಳಸವವಿಟ್ಟಂತೆ ಎರಡು ಮಹಾ ವಾಕ್ಯಗಳನ್ನು ಕೇಳಿಸುವಳು. ಅವು ಯಾವುವೆಂದರೆ–
“ಬಡತನವು ಒಳ್ಳಿಯದೂ ಅಲ್ಲ, ಕೆಡಕೂ ಅಲ್ಲ. ಬೇಕೆಂದು ಬಯಸಿ ಬರಮಾಡಿಕೊಳ್ಳಬೇಕಾದುದೇನೂ ಅಲ್ಲ. ಸಿರಿವಂತಿಕೆಯು ನಿನ್ನವಲ್ಲ. ಅದರಲ್ಲಿ ಒಡೆಯನು ಎತ್ತಿಕೊಟ್ಟಷ್ಟೇ ನಿನ್ನದು. ಆಳಾಗಿ ದುಡ್ಡು ಗಳಿಸಿದರೂ
ಅದನ್ನು ಒಡೆಯನಾಗಿ ಬಳಸಬಾರದು. ಪ್ರಾಮಾಣಿಕತೆಯಿಂದ ಅದನ್ನು ಕಾಪಾಡತಕ್ಕದ್ದು. ನೀವು ಗಳಿಸಿದ್ದನ್ನೆಲ್ಲ ನನ್ನ ಕೈಗೆ ಒಪ್ಪಿಸಿರಿ. ಬಡತನದಿಂದ ಕಡೆಗಾಗಲು ನನ್ನ ನೆರವು ಕೇಳಿರಿ. ಮಕ್ಕಳು ಕಂಗಾಲಾಗಿರುವುದು ಬೇಡ. ದ್ರವ್ಯದ ಬಡತನವಿದ್ವರೆ ಇರಲೊಲ್ಲದೇಕೆ; ಮನದ ಬಡತನವನ್ನು ಮೊದಲು ಕಳಕೊಳ್ಳಿರಿ.”

ಸಂಗಮಶರಣನು ಜಗದೀಶ್ವರೀ ಮಾತೆಗೆ ಕೈಮುಗಿದು, ಶಿರಬಾಗಿ, ತಾನು ಹೇಳಬೇಕಾದ ಇನ್ನೆರಡು ಮಾತುಗಳನ್ನು ಹೇಳಿ ಮುಗಿಸಿದ್ದು ಹೇಗೆಂದರೆ-

“ದುಡ್ದು ದುಡಿಮೆಗೆ ಬಂದ ಪ್ರಾಪ್ತಿ. ದುಡಿಯದೆ ಬಂದ ಪ್ರಾಪ್ತಿ ನಮ್ಮದಲ್ಲ. ಅದನ್ನು ನಮ್ಮ ದೇಹರಕ್ಷಣೆಗೆ ವ್ಯಯಿಸಕೂಡದು. ದೇಹರಕ್ಷಣೆಯು ಅದರ ದುಡಿತದ ಪ್ರಾಪ್ತಿಯಿಂದಲೇ ಆಗುವುದು ನ್ಯಾಯ. ದಾನ ಸ್ವೀಕರಿಸಿ.
ದೇಹರಕ್ಷಣೆ ಮಾಡುವುದಾಗಲಿ, ಬಹುಮಾನವಾಗಿ ಸಿಕ್ಕ ವಸ್ತುವಿನಿಂದ ದೇಹರಕ್ಷಣೆ ಮಾಡುವುದಾಗಲಿ ನರಕದ ದಾರಿ.

ಬಟ್ಟೆಯಲ್ಲಿ ಹೊನ್ನವಸ್ತ್ರ ಬಿದ್ದದ್ದಿದ್ದರೆ ನಾನು ಕೈಮುಟ್ಟಿ
ಎತ್ತಿದೆನಾದಡೆ,
ನಿಮ್ಮಾಣೆ, ನಿಮ್ಮ ಪ್ರಮಥರಾಣೆ
ಅದೇನು ಕಾರಣವೆಂದರೆ, ನೀವಿಕ್ಕಿವ ಭಾಷೆಯಲ್ಲಿಪ್ಪೆ ನಾಗಿ,
ಇಂತಲ್ಲದೆ ನಾನು ಅಳಿ ಮನವ ಮಾಡಿ, ಪರದವ್ಯಕ್ಕೆ
ಆಶೆಮಾಡಿದೆನಾದಡೆ
ನೀನಾಗಲೇ ಎನ್ನ ನರಕದಲದ್ದಿ, ನೀನೆದ್ದು ಹೋಗಾ
ಶಂಭು ಜಕ್ಕೇಶ್ವರಾ.

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಯ್ಯುವಿ ಯಾಕೆ
Next post ನಗೆಡಂಗುರ- ೧೫೦

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

cheap jordans|wholesale air max|wholesale jordans|wholesale jewelry|wholesale jerseys