ಬಯ್ಯುವಿ ಯಾಕೆ

ಮಣ್ಣು ಮಣ್ಣೆಂದು ಹಳಿದರೆ ಬಂತೆ
ಎಲ್ಲಿಂದ ಮರ ಹುಟ್ಟಿ ಬೆಳೆಯಿತಯ್ಯಾ
ಸಾವು ಸಾವೆಂದು ಅಂಜೀಕೆ ಯೇಕೆ
ಜೀವವು ಹುಟ್ಟಿದೆ ಸಾವಿನಿಂದಯ್ಯ ||

ನಿದ್ದೆ ಮಬ್ಬಂತಾ ಗೊಣಗುವಿಯಾಕೆ
ನಿದ್ದೇನೆ ಇಲ್ದಂಥ ಎಚ್ಚರೆಂತು
ದೌರ್ಬಲ್ಯ ದೌರ್ಬಲ್ಯ ಎಂದೇಕೆ ಕೊರಗುವಿ
ದೇವರ ರಾಜ್ಯವೆ ದುರ್ಬಲರದ್ದು ||

ಸುಡುಗಾಡು ಕಾಡೆಂದು ಬಯ್ಯುವಿಯಾಕೆ
ಸುಡದೆಯ ಸಂಸ್ಕಾರ ಹುಟ್ಟುವುದೇ
ಕತ್ತಲು ಕತ್ತಲು ಅದರಲ್ಲಿ ಭಯ ಯಾಕೆ
ಬೆಳಕಿನ ಗರ್ಭವು ಕತ್ತಲಿನದೇ ||

ಗಲಭೆ ಗೊಂದಲ ಕಂಡು ಮೂಗು ಮುರಿಯುವಿಯಾಕೆ
ಸುಲಭವೆ ಶಾಂತಿಯು ಗಲಭೆಯಿಲ್ದೆ
ಕಾಯಿ ಕಾಯೆಂದು ಬಾಯ್ ಬಿಡುವಿಯಾಕೆ
ಕಾಯದೆ ಹಣ್ಣಾಗಿ ಬೀಳೋದ್ಹೆಂಗೆ ||

ಕೀಲಿಕರಣ : ಎಂ.ಎನ್.ಎಸ್‌. ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಡಾ|| ಅಂಬೇಡ್ಕರ್ ಆಶಯ ಅರಳುವ ಬಗೆ ಹೇಗೆ?
Next post ದ್ರವ್ಯದ ಬಡತನ

ಸಣ್ಣ ಕತೆ