ಆಗಾಗ ಭೂ ಕಂಪಗಳು ಯುದ್ಧಗಳು ಸುನಾಮಿಗಳು ಮುಗಿಯದ ತಾಪ ತ್ರಯಗಳು ಗೋಜು ಗೊಂದಲಗಳು ಶರಧಿಯ ತಿಮಿಂಗಿಲಗಳು ಅಲ್ಲಲ್ಲಿ ಮಿಂಚು ಹುಳುಗಳು ದ್ವೀಪಗಳು ಕಾಪಾಡ ಬಂದ ಹಡಗುಗಳು ಸಿಡಿಸುತ್ತಿರುವ ಮತಾಪುಗಳು ಅನವರತ ಸಾಗುವ ಈ ಪ್ರಯಾಣ...
ತಿದ್ದುವುದೆಂದರೆ ಸುಮ್ಮನೆ? ತಿದ್ದಲೇ ಬೇಕಿದೆ ಈಗ ಅಕ್ಷರ ಮಗ್ಗಿ ಬಿಟ್ಟು ಕಂಡ ಕಂಡ ವರನ್ನು ಆಗೀಗ ಎದುರಾಗು ವವರನ್ನು ಹೇಳದೇ ಮಾಡು ವವರನ್ನು ಹೇಳಿಯೂ ಮಾಡದವರನ್ನು ಬೆಲೆ ತಿಳಿಯದವರನ್ನು ತಿಳಿದೂ ಬಿಸುಟವರನ್ನು ಆತು ಹತ್ತಿರ...
ಎಂತಹ ಒಳ್ಳೆ ಅವಕಾಶ ಸಿಕ್ಕಿತ್ತು. ಆದರೂ ನಾನು ಆರರ ಮೇಲೆ ಏರಲಿಲ್ಲ ಮನುಷ್ಯರೆಂದರೇ ವಾಕರಿಕೆ ಅದೇ ಮುಗುಳ್ನಗೆ ಅದೇ ನಮಸ್ಕಾರ ಅದೇ ಪ್ರಶ್ನೆ ಹೇಗಿದ್ದೀರ? ಅದೇ ಉತ್ತರ ಚೆನ್ನಾಗಿದ್ದೇನೆ. ಕೇಳೀ ಕೇಳೀ ಹಳಸಿ ಹೋಗಿರುವ...
ಕಾಲ ನಿಲ್ಲುವುದಿಲ್ಲ ಎಂದು ಕಣವಿ ಹೇಳಿದರು ಸುಮ್ಮನೆ ಕಾಲ ನಿಲ್ಲುತ್ತದೆ ಮೋಡದೊಳಗೆ ವಿಮಾನ ಹೊಕ್ಕಾಗ ಗಕ್ಕನೇ ಮೊನ್ನೆ ಕುಳಿತೆ ಜೀವಮಾನದ ಮೊದಲ ವಿಮಾನಾಂತರಂಗ ಪ್ರವೇಶ ಮನೆ ಮರಗಳು ಆಗುತ್ತಾ ಚಿಕ್ಕ ಬೆಂಕಿ ಪೊಟ್ಟಣ ಯಂತ್ರ...
ಕಾಯುವುದೊಂದು ಕಾಯಕ ಹಾಲು ಕಾಯುವುದು ಊಟಕ್ಕೆ ಕಾಯುವುದು ಬಸ್ಸಿಗಾಗಿ ಕಾಯುವುದು ಹಣ ದೊರೆಯುವುದೆಂದು ಚಳಿ ಬೇಗ ಮುಗಿಯಲೆಂದು ಮಳೆ ಚೆನ್ನಾಗಿ ಸುಲಿಯಲೆಂದು ಕೊನೆಗೆ ಅವರಿವರನ್ನು ಕಂಡು ಮನಸ್ಸಿನಲ್ಲೇ ಕಾದು ಹೋಗುವುದು. ಇದೆಲ್ಲದಕ್ಕಿಂತ ಚೆನ್ನ ನಿನ್ನ...
ಮತ್ತೆ ಮೋಹಿಸುವ ಬಯಕೆ ತೃಷೆ ತೀರದು ಹಲವು ಸಲ ಜಗಿದರೂ ಈ ರಸ ತೀರದು, ಒಸರಿ ಬರುವ ಒರತೆ ನಿಲ್ಲದೆಂದೇ ತೋರಿದೆ, ಬದುಕೇ ಬಾಯಾರಿದೆ ಸ್ವೀಕರಿಸು ಓ ಬದುಕೇ ನನ್ನದೆಲ್ಲವೂ ನಿನ್ನದೇ ಏಕಿನ್ನೂ ಸಂಕೋಚ,...