ವೃಷಭಾವತಿ

ವೃಷಭಾವತಿ ಒಮ್ಮೆ ಹರಿದು ಉಕ್ಕೇರಿ ನೆಲ ಜಲ ಹೊಲ
ಭೇದ ಭಾವವಿಲ್ಲದೇ ಉಣಿಸಿದ್ದಳು ಎಲ್ಲರನೂ ತಣಿಸಿದ್ದಳು
ಈಗೇಕೆ ವಿಷವಾದೆ ನಾನು ಎಂದು ಪರಿತಪಿಸುತ್ತಾಳೆ. ತನಗೆ ವಿಷ
ವೂಡಿದವರ ಕಾಣಲಾಗದೇ ಹಿಡಿಯಲಾಗದೇ ತಡೆಯಲಾಗದೇ ಹೀಗೆ

ತುಂಬಿ ಹರಿಯುತ್ತಿದ್ದ ನದಿಗೆ ವಿಷವಿಕ್ಕಿದವರ್‍ಯಾರು ಕಾಲವೆ?
ಕಾಳಜಿಯೆ? ಸ್ವಾರ್‍ಥವೇ? ಮತ್ಸರವೇ? ಅಥವಾ ಒಳಗಿನದೇ
ಏನೋ ತಾಪವೆ? ತೋಚುವುದಿಲ್ಲ ನನಗಂತೂ ಏನೂ
ಈಗಿಲ್ಲಿ ಮಿಂದವರೇ ಪಾಪಿಗಳು ಅವರ ತಲೆ ತುಂಬ ಹೇನು.

ಉರಿವ ಸೂರ್‍ಯನಿಗೂ ಇಲ್ಲ ಕರುಣೆ
ಆವಿಯಾಗಿಸಿ ಬಿಡುತ್ತಾನೆ ನನ್ನೆಲ್ಲ ಬವಣೆ
ಸುರಿಸುವುದೂ ಇಲ್ಲ ನನ್ನೆದೆಯ ಜಲವ ನನಗೆ
ಮಳೆಯಾಗಿಸಿ ಕೊಂಡೊಯ್ಯುತ್ತಾನೆ ಇನ್ನೊಬ್ಬರ ಮನೆಗೆ

ಕಚ್ಚುವಂತಾದುದೇಕೆ ನಾನು ವಿಷ ಸರ್ಪದಂತೆ
ಕೇಳಿ ಭಾರತದ ಎಲ್ಲ ಕಾರ್‍ಖಾನೆಗಳ ತೆಗೆಸಿ ಅವರ
ಲೆಕ್ಕ ಪತ್ರದ ಕಂತೆ. ಅವರಿಗೆ ಬೇಕಿತ್ತೆ ಹೇಳಿ
ಹರಿವ ಜೀವದಾಯಿನಿಯಲ್ಲಿ ಅವರ ಕೊಳಕು ಜಲಕೇಳಿ

ಅಂದಿನೊಬ್ಬ ಪ್ರಿಯಕರ ಬಂದು ಕೇಳುತ್ತಾನೆ ಮತ್ತೆ ಮತ್ತೆ
ವೃಷಭಾವತಿ ಹರಿಯಲಾರೆಯ ನೀನು ಹಿಂದಿನಂತೆ
ಹರಿವ ಬಯಕೆ ನನಗಿದೆ ಗೆಳೆಯ ಹರಿದೇನು ನಾನು
ತುಂಬಿ ಸುರಿದೇನು ನಾನು ಸೋಸಿಬಿಡು ಈ ಕೊಳೆಯ
ಪಿಸು ಮಾತಿನಲಿ ಉಸುರುತ್ತೇನೆ ನಾನು

ದಿನ ದಿನದ ಧಾರೆಯಲಿ ಕಾಯುತ್ತೇನೆ ಅವನಿಗಾಗಿ
ಮತ್ತೊಮ್ಮೆ ಅಮೃತವಾಗಿ ಹರಿವ ಬಯಕೆ ಅದ್ಯಮವಾಗಿ
ಎತ್ತಿಕೋ ಗೆಳೆಯಾ ಹಿಡಿದಪ್ಪಿಕೋ ಹೀಗೆ, ಒಳಗಿನ ಕಲ್ಮಶ
ಒಳಗೇ ಉಳಿದು ತಿಳಿನೀರು ಬರುವ ಹಾಗೆ ಮತ್ತೊಮ್ಮೆ
ನನ್ನೆದೆಯ ಅಲೆಗಳಲಿ ಈ ಜೋಣ ಹೀಗೆ ಮತ್ತೆಂದೂ
ಒಳಸರಿಯದ ಹಾಗೆ ನೆಲಮುಗಿಲ ನಡುವಣ ಪ್ರಕೃತಿಯ ಹಾಗೆ

ತಡೆದು ನಿಲ್ಲಿಸು ಆ ಕಾರ್‍ಖಾನೆಗಳ ಕೊಳಕು ಧಾರೆ
ಹರಿಯ ಬಿಡು ಅವುಗಳನ್ನು ಆ ಸಮುದ್ರದ ಮೇರೆ
ಆ ದೈತ್ಯನಾದರೋ ಎಲ್ಲವನು ನುಂಗಿ ನೀರು ಕುಡಿದಾನು
ಹಬ್ಬಿಕೊಳ್ಳಲಿ ನಮಗೆ ನಮ್ಮ ನೆಲದಡಿಯ ಬಾನು
*****
-ಕರ್ಮವೀರ ದೀಪಾವಳಿ ವಿಶೇಷಾಂಕ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರೀ’ಯವರನ್ನು ನೆನೆದು
Next post ಮಾತನಾಡಬೇಕು ನಾವು

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…