ಅದೊಂದು ಯುದ್ದ ರಂಗ, ಸೇನನಾಯಕ ಶತ್ರುಗಳ ಮೇಲೆ ಹೋರಾಡಿ ವಿಜಯಗಳಿಸಿದ. ಸಾವಿರಾರು ಜೀವಗಳು ಹೆಣವಾಗಿ ಉರುಳಿದವು, ರಕ್ತ ಕೋಡಿಯಾಗಿ ಹರೆಯಿತು. ರಾಜ್ಯ ಕೋಶವು ಇವನದಾಯಿತು. ಆದರೆ ಇವು ಇವನ ಹಸಿವನ್ನು ತಣಿಸಲಿಲ್ಲ. ದಾಹವನ್ನು ದಹಿಸಲಿಲ್ಲ. ಮರದಲ್ಲಿ ಬಿಟ್ಟ ಒಂದು ಮಾವಿನ ಹಣ್ಣು ಹಸಿವು ದಾಹ ತೀರಿಸಿತು. ಕೊನೆಗೆ ಅವನಿಗೆ ಅನಿಸಿದ್ದು “ಅಯ್ಯೋ! ಯುದ್ಧ ಬೇಕಿತ್ತೇ?”
*****