ಒಂದು ಮನಸ್ಸು ಬೇಸತ್ತು ಓಡೋಡೀ ದಿಗಂತದಲ್ಲಿ ನಿಂತಿತು. ಅಲ್ಲಿ ಕಂಡದ್ದೇನು? ಗಿಡದ ವ್ಯಾಮೋಹ ಬಿಟ್ಟು ಅರಳಿದ ಹೂ ಕಳಚಿ ಬೀಳುತಿದೆ. ಮರದ ವ್ಯಾಮೋಹ ಬಿಟ್ಟು ಹಣ್ಣು ಉದರಿ ಮಣ್ಣಿನಲ್ಲಿ ಸಮಾಗಮವಾಗುತ್ತಿದೆ. ಹಕ್ಕಿ ಹಾರಿ ನೀಲಗಗನ ಸೇರುತ್ತಿದೆ. ಎಲ್ಲವೂ ನೋಡುತ್ತಾ ಸಂಸಾರದಲ್ಲಿ ಬಂಧಿತವಾಗಿದ್ದ ಮುದುಕನ ಮನಸ್ಸು ಅವನ ಹೆಂಡತಿ, ಮಕ್ಕಳು ಮತ್ತೂ ಎಲ್ಲರ ವ್ಯಾಮೋಹದಿಂದಲು ಬಿಡುಗಡೆಯಾಗಿ ದಿಗಂತದಲ್ಲಿ ಲೀನವಾಯಿತು.
*****