ಸಾಫ್ಟ್ ವೇರ್ ಇಂಜಿನಿಯರಗಳಾಗಿ ಅಮೆರಿಕಾದಲ್ಲಿ ನೆಲಸಿದ್ದರು ಮಗ ಮತ್ತು ಸೊಸೆ. ಸೊಸೆಯಿಂದ ಒಮ್ಮೆ ಅತ್ತೆಮ್ಮಗೆ ದೂರವಾಣಿ ಕರೆ ಬಂದಿತು. ಸೊಸೆ ಕೇಳಿದಳು- “ಅತ್ತೆಮ್ಮ! ಆಫೀಸಿಗೆ ಹೋಗುವ ಮುನ್ನ ನನ್ನ ದೊಡ್ಡ ಕೂದಲನ್ನು ಬಾಚಿ ಜಡೆ ಹಾಕಿ ಕೊಂಡು ಹೋಗಲು ಕಷ್ಟವಾಗಿದೆ. ನಾನು ಬಾಯ್ ಕಟ್ ಮಾಡಿಸಿ ಕೊಳ್ಳಲೇ?” ಎಂದಳು. ನೀನು ಯಾವ ಕಟ್ ಆದರು ಮಾಡಿಸಿಕೊ ಆದರೆ ನಿನ್ನ ಭಾರತೀಯ ಬುದ್ಧಿಯನ್ನು ಕಟ್ ಮಾಡಿಕೊಳ್ಳ ಬೇಡ. ಕೂದಲು ಕಟ್ ಮಾಡಿದರೆ ಮತ್ತೆ ಬೆಳೆಯುತ್ತದೆ. ನಮ್ಮ ಭಾರತೀಯ ಬೇರಿನ ಸಂಸ್ಕೃತಿ ಮಾತ್ರ ಯಾವರೀತಿಯಲ್ಲೂ ಕತ್ತರಿಸಿಕೊಳ್ಳ ಬೇಡ” ಎಂದರು ಅತ್ತೆ.
*****