ಕಣ್ಣಾಗ ನಗಿ ನಗಿ

ಕಣ್ಣಾಗ ನಗಿ ನಗಿ ಹೊಟ್ಯಾಗ ಹೊಗಿ ಹೊಗಿ
ಏನ್ಕಂಡು ಏನಾತು ನನಬಾಳೆ ||ಪಲ್ಲ||

ನೀರ್‍ಲಣ್ಣು ಮರತುಂಬ ಪ್ಯಾರ್‍ಲಣ್ಣು ಗಿಡತುಂಬ
ಹರದರ ಭುಸು ಭುಸು ಭುಸ್ಸಣ್ಣಾ
ಪೈಪಾಟ ಥೈಥಾಟ ಮೈಮಾಟ ಸೈಸಾಟ
ಮುಟ್ಟಂಬ್ಲಿ ಮುಚ್ಚಂಬ್ಲಿ ಮುಳ್ಳಣ್ಣಾ ||೧||

ಗಡಗಡ ಗಮ್ಮತ್ತು ನಡನಡ ಮಸಲತ್ತು
ಜಡಿಜಡಿ ಕ್ಯಾದಿಗಿ ಹೊಡಿಯಣ್ಣಾ
ಎದಿಗುಂಡ ಮನಗಂಡ ಬಿಂಗ್ರೇನ ಸಿಂಗ್ರೇನ
ಸುತ್ತಾರ ಸೆಳುವೇನ ಸಂಗಣ್ಣಾ ||೨||

ಪಾತರಗಿತ್ಯಾಗ ತಂಬಾಕು ತುಂಬ್ಯಾರ
ಹೂವಿಗಿ ಕುಡಿಸ್ಯಾರ ಹುಳಿಹೆಂಡಾ
ಕೂಸೀನ ಬಾಯಿಗೆ ಭುಸುಭುಸು ಬೀಡೆಣ್ಣಾ
ಹಣಕೊಂದು ಮಣಕುಂಡಿ ಹೆಣ್ಣಣ್ಣಾ ||೩||

ತುಟಿತುಂಬ ತಂಬೂರಿ ಎದಿತುಂಬ ನಗಾರಿ
ನೌಬತ್ತು ನಾರಂಗಿ ನಾರಿಯಣ್ಣಾ
ಬಿಚಬಿಲ್ಲಿ ಬಸವಣ್ಣಾ ಹುಚಬಿಲ್ಲಿ ಹನುಮಣ್ಣಾ
ಅಡಚಾಪಿ ಗುಡಚಾಪಿ ಕಟ್ಟಣ್ಣಾ ||೪||

ಮುಗಲಾಗ ಪಲ್ಲಕ್ಕಿ ಜಡಿಯಾಗ ಅವಲಕ್ಕಿ
ಹಕ್ಯಾಗಿ ಹಾರಣ್ಣಾ ಮ್ಯಾಲಮ್ಯಾಲ
ಎತ್ತಾರ ಬಿತ್ತಾರ ಉತ್ತಮರ ಹತ್ತಾರ
ಉತ್ತತ್ತಿ ಗೊನಿಯಣ್ಣಾ ಮ್ಯಾಲಮ್ಯಾಲ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅತ್ತೆಯ ಸಲಹೆ
Next post ಸೀಟಿ

ಸಣ್ಣ ಕತೆ

 • ಪ್ರಥಮ ದರ್ಶನದ ಪ್ರೇಮ

  ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಎರಡು…. ದೃಷ್ಟಿ!

  ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…