
ಅಹೋ ನಕ್ಕ ಬೀಸಿ ಪಕ್ಕ ಗಗನ ದೇವ ಬಂದನು ನಗೆಯ ದೇವ ಹೊಗೆಯ ಮಾವ ಮಗಿಯ ತುಳಿದು ನಿಂದನು ||೧|| ಮುಗಿಲ ತುಂಬ ಬೆಳಗು ತುಂಬಿ ಬೆಳ್ಳಿ ಬಗರಿ ಬೀಸಿತು ನೆಲದ ತುಂಬ ಹಸಿರು ನಂಬಿ ತೆಂಗು ಲಾಗ ಹಾಕಿತು ||೨|| ಆಕೋ ಗುಡುಗು ಇಕೊ ದಿಡುಗು ಎದೆಯ ಡಬರಿ ಒಡೆಯಿ...
ಕಣ್ಣಾಗ ನಗಿ ನಗಿ ಹೊಟ್ಯಾಗ ಹೊಗಿ ಹೊಗಿ ಏನ್ಕಂಡು ಏನಾತು ನನಬಾಳೆ ||ಪಲ್ಲ|| ನೀರ್‍ಲಣ್ಣು ಮರತುಂಬ ಪ್ಯಾರ್‍ಲಣ್ಣು ಗಿಡತುಂಬ ಹರದರ ಭುಸು ಭುಸು ಭುಸ್ಸಣ್ಣಾ ಪೈಪಾಟ ಥೈಥಾಟ ಮೈಮಾಟ ಸೈಸಾಟ ಮುಟ್ಟಂಬ್ಲಿ ಮುಚ್ಚಂಬ್ಲಿ ಮುಳ್ಳಣ್ಣಾ ||೧|| ಗಡಗಡ ಗಮ್ಮತ್...
ನಾನೆ ಮಾಮರ ನಾನೆ ಇಂಚರ ನಾನೆ ಮುಳ್ಳಿನ ಪಂಜರ ನಾನೆ ನೂಪುರ ನಾನೆ ಕರ್‍ಪುರ ನಾನೆ ನಿಗಿನಿಗಿ ನಾಗರ ||೧|| ಎದೆಯ ತೊಟ್ಟಿಲು ಹಾಲು ಬಟ್ಟಲು ಏಕೆ ಕೋಪದ ಕರಗಸಾ ನಾನೆ ಸಕ್ಕರೆ ನಗೆಯ ಕೊಕ್ಕರೆ ಏಕೆ ಕಾಗೆಯ ಕಸಮಸಾ ||೨|| ಚಿಪ್ಪು ಒಡೆಯಲಿ ಚಲುವು ಸಿಡಿಯ...
ಸುಡಗಾಡುಗಟ್ಯಾಗ ಚಂದುಳ್ಳ ಚಲುವೇರು ಕುಂಟಲ್ಪಿ ಹಂಚಲ್ಪಿ ಆಡ್ಯಾರೆ ಹೆಣಗುಂಡ ತೆಗಿನ್ಯಾಗ ಚಕಚಂದ ಕುಂತಾರೆ ಕ್ವಾಡ್ಬಾಳಿ ಗಾರೀಗಿ ತಿಂದಾರೆ ||೧|| ಏಂಚಂದಾ ಭೋಚಂದಾ ಮಾಚಂದಾ ಸುಡಗಾಡು ಗೋರೀಯ ಮ್ಯಾಲ್ಹೂವು ನಕ್ಕಾವೊ ಗಿಡದಾಗ ಗಿಳಿಯಣ್ಣ ಕಂಟ್ಯಾಗ ನರಿ...
ಹಸಿರು ನನ್ನದು ಹೂವು ನನ್ನದು ನಾನು ಹರುಷದ ಹೊಂಗೊಳಾ ಬೆಳಗು ನನ್ನದು ಬಣ್ಣ ನನ್ನದು ನಾನು ನಿನ್ನಯ ಬೆಳ್ಗೊಳ ||೧|| ಮುಗಿಲ ತೋರಣ ಚರಣ ಚರಣಾ ನೋಡು ಬಂದನು ಭಾಸ್ಕರಾ ಕಡಲ ಕಾಮಿನಿ ಇರುಳ ಯಾಮಿನಿ ನೋಡು ಹಾಡಿದ ಸುಸ್ವರಾ ||೨|| ಏನು ಮರಣಾ ಮತ್ತೆ ಜನನ...
ಕಣಕಿ ಕೊಬ್ಬರಿ ಆತು ಹೊಟ್ಟು ಹುಗ್ಗಿಯು ಆತು ಏನ್ಕಾಲ ಬಂತವ್ವ ಕಂಗಾಲ ||ಪಲ್ಲ|| ರೊಟ್ಟೀಯ ಬೇಸಾಕ ಚಕಿಚೂರು ಇಲ್ಲಾತು ಹ್ಯಾಂಗವ್ವ ಮುಂದವ್ವ ಈ ಕಾಲ ಆರು ವರುಸಕ ಒಮ್ಮೆ ಬರಗಾಲ ಬರುತಿತ್ತು ಈಗೀಗ ವರುವರುಸ ಬರಗಾಲ ||೧|| ಏನು ಇಲ್ಲಾ ಅಂದ್ರು ಕಲ್ಲು ...
ತೆರೆಯ ಮೇಲೆ ತೆರೆಯು ನೊರೆಯು ತೊರೆಯ ಬುರುಗು ನಿಲ್ಲಲಿ ಆಳ ಆಳ ಆಳ ಕಡಲು ಮುತ್ತು ಹವಳ ತೆರೆಯಲಿ ||೧|| ಮೇಲೆ ಮೇಲೆ ಜೊಂಡು ಪಾಚಿ ಒಳಗೆ ವಜ್ರ ಸಂಕುಲಾ ತೆರೆಯ ಮೇಲೆ ಗಾಳಿ ಗೂಳಿ ಒಳಗೆ ಶಾಂತಿ ಸಮತಲಾ ||೨|| ನನ್ನ ಒಳಗೆ ನಾನು ಇಳಿದು ನನ್ನ ನಾನು ಹು...
ಕಾರಚುಮ್ಮರ್‍ಯಾಕ ಮಿರ್‍ಚೀಯ ಭಜಿಯಾಕ ನೋಡೀಕಿ ಸಣ್ಣಾಕಿ ನಕ್ಕಾಳಾ ಗಿಡತುಂಬ ಗಿಳಿಯಾಕ ನೆಲತುಂಬ ಹೊಳಿಯಾಕ ಚನ್ನಂಗಿ ಹೂವಾಗಿ ಹೊಕ್ಕಾಳಾ ||೧|| ಸುರ್ರೆಂದು ಕಡದಾಂಗ ಕೆನಿಮೊಸರು ನಕ್ಕಾಂಗ ಈ ಹುಡಿಗಿ ಬೆಣ್ಯಾಗಿ ಜಿಗದಾಳಾ ಕೊಕ್ಹೊಕ್ಕ ಕ್ಯಾಕೀಯ ಯಕ್ಕೀ...
ಹಸಿರು ಬಳೆಯ ಹೊಗರು ಕಳೆಯ ಚಂದ್ರ ಚಲುವ ಮೋಹಿನಿ ಹೂವು ಮುಡಿಯ ಹಾವು ಜಡೆಯ ಕೂಹು ಕೂಹು ಕಾಮಿನಿ ||೧|| ನೀನೆ ವೀಣೆ ನೀನೆ ಮೇಣೆ ನೀನೆ ನೀನೆ ಕೋಮಲೆ ತನನ ತನನ ಮನನ ಮನನ ಕಾವ್ಯ ಮಾಲೆ ಊರ್ಮಿಳೆ ||೨|| ಯಾವ ಕನಸು ಯಾವ ಮನಸು ತುಂಬಿ ತುಂಬಿ ತುಳುಕಿದೆ ...
ಭಜನಿ ಕೇಳಿದಿಯೇನ ನನಸಜನಿ ರಜನಿ ಹೂಳಿದಿಯೇನ ||ಪಲ್ಲ|| ಗುರುರಾಯ ಬಂದಾನ ಗಂದ್ಹೆಣ್ಣಿ ಎರದಾನ ಜಡಿತುಂಬ ಕ್ಯಾದಿಗಿ ಹೆಣೆದಾನ ರುದ್ರಾಕ್ಷಿ ಹೂವಿಲ್ಲ ವಿಭೂತಿ ಪತ್ರಿಲ್ಲ ಹೊಸ ಸೀರಿ ನಡಮುಟ್ಟಿ ಉಡಿಸ್ಯಾನ ||೧|| ಎಂಥ ಚಂದನ ಭಜನಿ ಸಂಗಮ ಶಿವಭಜನಿ ಬಾಲ...














