ಹಸಿರು ನನ್ನದು ಹೂವು ನನ್ನದು

ಹಸಿರು ನನ್ನದು ಹೂವು ನನ್ನದು
ನಾನು ಹರುಷದ ಹೊಂಗೊಳಾ
ಬೆಳಗು ನನ್ನದು ಬಣ್ಣ ನನ್ನದು
ನಾನು ನಿನ್ನಯ ಬೆಳ್ಗೊಳ ||೧||

ಮುಗಿಲ ತೋರಣ ಚರಣ ಚರಣಾ
ನೋಡು ಬಂದನು ಭಾಸ್ಕರಾ
ಕಡಲ ಕಾಮಿನಿ ಇರುಳ ಯಾಮಿನಿ
ನೋಡು ಹಾಡಿದ ಸುಸ್ವರಾ ||೨||

ಏನು ಮರಣಾ ಮತ್ತೆ ಜನನಾ
ಮಂಚ ತೂಗಿದೆ ನಾಟಕಂ
ಮತ್ತೆ ಹೂಟಂ ಮತ್ತೆ ಬೇಟಂ
ಮತ್ತೆ ಬೇಟೆಯ ಸ್ಫೋಟಕಂ ||೩||

ಯಾಕೆ ಈಪರಿ ಗೋಳು ಗೋಪುರ
ಸಾಕು ಸಾವಿನ ಸಂಪುಟಂ
ಕಾಮ ಹೋಗಲಿ ನೋವು ಹಾಡಲಿ
ಪ್ರೇಮ ಜೋಗುಳ ರಸಪುಟಂ ||೪||
*****

ಕೀಲಿಕರಣ : ಕಿಶೋರ್‍ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆತೀರ-ಈತೀರ
Next post ಮೊದಲ ಅನುಭವ

ಸಣ್ಣ ಕತೆ