ಚಿಂತೆ ಜಾರಲಿ

ಚಿಂತೆ ಜಾರಲಿ ಚಿತೆಯು ಹೋಗಲಿ ಒಲವು ಮಾತ್ರವೇ ಉಳಿಯಲಿ ಸುಖದ ಸಾಗರ ಶಿವನ ಮಿಲನಕೆ ಪ್ರೀತಿ ಮಾತ್ರವೆ ಬೆಳೆಯಲಿ ಪ್ರಭುವಿಗೆಲ್ಲವ ಕೊಟ್ಟ ಮೇಲಕೆ ಒಳಗೆ ಚಿಂತೆಯು ಯಾತಕೆ ಪ್ರೀತಿ ತಂದೆಗೆ ಸಕಲ ಅರ್‍ಪಿಸಿ ಮತ್ತೆ...

ಪ್ರೇಮ ಪೂರ್‍ಣನೆ ಶಿವಶಿವಾ

ರೂಪ ವಸಂತ ರೂಪ ಸುಂದರ ಪ್ರೇಮ ಪೂರ್‍ಣನೆ ಶಿವಶಿವಾ ನೀನೆ ಶೀತಲ ನೀನೆ ಕೋಮಲ ನೀನೆ ನಿರ್‍ಮಲ ವರಪ್ರಭಾ ಸುಖದ ವರ್‍ಷಾ ಪ್ರೀತಿ ಹರ್‍ಷಾ ಶಾಂತ ಸುಂದರ ವಸುಂಧರಾ ನಗುವ ಚಂದಿರ ಚಲುವ ಮಂದಿರ...

ಮಂಜುನಾಥನೆ ಬಂದನು

ಮಂಜು ಕೇವಲ ಮಂಜು ಅಲ್ಲಾ ಮಂಜುನಾಥನೆ ಬಂದನು ಮಂಜಿನೊಳಗೆ ಪಂಜು ಹಿಡಿಯುತ ನಂಜುಗೊರಳನೆ ನಿಂದನು ಗುಡ್ಡ ಮುಚ್ಚಿದೆ ಬೆಟ್ಟ ಮುಚ್ಚಿದೆ ಮಂಜು ಸೂರ್‍ಯನ ನುಂಗಿದೆ ಕೊಳ್ಳ ಕಂದರ ದರಿಯ ತಬ್ಬಿದೆ ಮಂಜು ಸೆರಗನು ಹೊಚ್ಚಿದೆ...

ದೇವರ ಕರುಣೆ

ಸುಖಪಡುವ ಕಾಲದಲಿ ನಿದ್ರೆಯಾತಕೊ ಗೆಳೆಯ ನಿನ್ನ ಗೆಳತಿಯ ಮರೆತು ಯಾಕೆ ಹೋದೆ ಬೇಲಿ ಬನಗಳ ಆಚೆ ನೂರು ಕೆರೆಗಳ ಆಚೆ ಅಡಗಿರುವ ಸುಂದರಿಯ ಯಾಕೆ ಮರೆತೆ ಓ ಗೆಳೆಯ ಬಾ ಇಲ್ಲಿ ಈ ಮಳೆಯ...

ಗಗನ ಹಕ್ಕಿಯು ಗಾನ ತುಂಬಿತು

ಗಗನ ಹಕ್ಕಿಯು ಗಾನ ತುಂಬಿತು ಪ್ರೇಮ ಪರ್‍ವತ ನಗಿಸಿತು ಮುಗಿಲು ಹನಿಹನಿ ಗಂಧ ತೂರಿತು ಪ್ರೀತಿ ಗಮಗಮ ಹರಡಿತು ಬೀಜ ಒಡೆಯಿತು. ಚಿಗುರು ಚಿಮ್ಮಿತು ಮೊದಲ ಚುಂಬನ ನೀಡಿತು ರಸದ ಮಾವಿನ ಮಧುರ ಸೋನೆಯು...

ಶಿವಸಮಾಗಮ

ಕಂಡೆ ಕಂಡೆನು ನಿನ್ನ ಕಂಡೆನು ಕಡೆಗೆ ಉಳಿದು ಕೊಂಡೆನು ನಿನ್ನ ಕಂಡಾ ಮೇಲೆ ಕಾಣಲು ಏನು ಇಲ್ಲಾ ಎಂದೆನು ನೀನು ಎಲ್ಲಾ ಎಂದೆನು ಮುಗಿಲ ಮೇಘಾ ಕರಗಿ ಜಾರಿತು ಪ್ರೇಮ ವರ್‍ಷಾ ಸುರಿಯಿತು ನಿನ್ನ...

ಕೌರವನೆದೆಯಲಿ ಕಮಲವು ಅರಳಲಿ

ಕೌರವನೆದೆಯಲಿ ಕಮಲವು ಅರಳಲಿ ರಾವಣನಾಗಲಿ ಗಿಳಿಹಕ್ಕಿ ಭುವನದ ಮನುಜರು ಜೇಂಗೊಡವಾಗಲಿ ಮೂಡಲಿ ಮಿನುಗಿನ ಹೊಸ ಚುಕ್ಕಿ ಮಂದರ ಗಿರಿಯಲ್ಲಿ ಮಧುಮಯ ಸಿರಿಯಲಿ ವಧುವಾಗಿರುವಳು ಋಷಿಕನ್ಯೆ ನವೋದ್ಯಾನದ ತೂಗುಯ್ಯಾಲೆಗೆ ಬಾಗುತ ಬಂದಳು ರಸಕನ್ಯೆ ಪಡೆಯುವದೇನಿದೆ ಎಲ್ಲಾ...

ನಾವು ಮನೆಯ ಮಕ್ಕಳು

ಯಾಕೆ ಗುಂಡು ಗಜಗದಾಟ ನಮ್ಮ ನಾವು ಮರೆತೆವೆ ಯಾಕೆ ರಕ್ತ ರುಂಡ ಮುಂಡ ನಮ್ಮ ಮನೆಯ ಸುಟ್ಟೆವೆ ನೋಡು ಒಂದೆ ನೀಲ ಗಗನ ಒಂದೆ ತಾಯಿ ಧರಣಿಯು ಒಂದೆ ಕುಲವು ಮನುಜ ನೆಲವು ಯಾಕೆ...

ಸತ್ತವನು ಶಿವಯೋಗಿ ಆಗಲಾರ

ನರಸತ್ತ ಶಿವಧರ್‍ಮ ಬ್ಯಾಡ ಬ್ಯಾಡೋ ಯಪ್ಪ ಸತ್ತವನು ಶಿವಯೋಗಿ ಆಗಲಾರ ಇದ್ದವನು ಬಿದ್ದವನು ಎದ್ದೋಡಿ ಹೋದವನು ಶಿವಶಿವಾ ಶಿವಯೋಗಿ ಆಗಲಾರ ಪಟ್ಟೆ ಭಸಿತವ ಇಟ್ಟು ಲಿಂಗಬೆಟ್ಟವ ಕಟ್ಟಿ ಕಟ್ಟೀಯ ವಾಚಾಳಿ ಶರಣನಲ್ಲ ಹಗಲೊಂದು ಪರಿನಿದ್ರಿ...

ಮಳೆಯ ನಾಡಿಗೆ ಬಂದೆನೆ

ಮಳೆಯ ನಾಡಿಗೆ ಚಳಿಯ ನಾಡಿಗೆ ಹಸಿರ ಕಾಡಿಗೆ ಬಂದೆನೆ ಹೂವು ಹೂವಿಗೆ ದುಂಬಿ ದುಂಬಿಗೆ ಮುತ್ತು ಕೊಡುವುದ ಕಂಡೆನೆ ಚಿತ್ರ ಚಲುವಿಯ ಕಂಡೆನೆ || ನೀಲ ಗಗನದಿ ಮೇಘ ಮಯೂರಿ ಕುಣಿವ ರಾಸವ ಸವಿದೆನೆ...