ಪಕ್ಷಿ ಇಂಚರ ಚಂದ ಪಂಚ ಪೀಠವೆ ಅಂದ
ಬಾಳೆಹೊನ್ನೂರಿನಲಿ ಮನಕೆ ಆನಂದ
ರಂಭಾಪುರಿ ಪೀಠ ನೋಡು ತಂಗಿ ||ಪಲ್ಲವಿ||

ತಾಯಿಯೆಂದರು ಗುರುವು ತಂದೆಯೆಂದರು ಗುರುವು
ಅರುಹು ಮರೆತರೆ ಹೆಂಗ ಹೇಳೆ ತಂಗಿ
ಕುಣಿಯೋಣ ಕೂಗೋಣ ಮಾಡೋಣ ಗುರುಗಾನ
ಸತ್ಯ ಈಶ್ವರ ಜ್ಞಾನ ತಿಳಿಯೆ ತಂಗಿ

ರಂಭಾಪುರಿ ಪೀಠ ರಸದ ಋಷಿಗಳ ಪಾಠ
ಜ್ಞಾನಯೋಗದ ಶಿಖರ ಶ್ರೇಷ್ಠ ತಂಗಿ
ಬಾಳೆಹೊನ್ನೂರಿನಲಿ ಬಂಗಾರ ಯುಗ ಬಂತು
ಮಹಲಿಂಗವಾಗಿಹುದು ಬೆಟ್ಟ ತಂಗಿ

ಉಸಿರು ಉಸಿರಲಿ ಶಿವನ ಹೆಸರು ಬರೆಯೆ ತಂಗಿ
ಹೃದಯ ಪಟಲದಾ ಮಂತ್ರ ಗುರುವೆ ತಂಗಿ
ಗುರುಬಂದ ಶಿವಬಂದ ಹರಬಂದ ವರತಂದ
ಭಕ್ತಿ ಭಾವದಿ ಪೂಜೆ ಮಾಡು ತಂಗಿ
*****
ಧ್ವನಿಸುರುಳಿ: ಗುರುಗಾನ ತರಂಗ
ಹಾಡಿದವರು: ನಂದಿತಾ
ಸ್ಟುಡಿಯೊ: ಅಶ್ವಿನಿ