ಮುಗಿಲ ಗಂಟೆಯು ನಿನಗೆ ಸೂರ್‍ಯ ದೀಪವು ನಿನಗೆ
ವಿಶ್ವ ಪತ್ರಿಯು ನಿನಗೆ ರೇಣುಕಾರ್‍ಯಾ
ಓ ಯೋಗಿ ವರಯೋಗಿ ಶಿವಯೋಗಿ ಸಿದ್ದೇಂದ್ರ
ಕಡಲು ನಿನ್ನಯ ತೀರ್‍ಥ ರೇಣುಕಾರ್‍ಯಾ
ತಂಪು ನಿನ್ನಯ ಶಕ್ತಿ ಸೊಂಪು ನಿನ್ನಯ ಯುಕ್ತಿ
ವಿಶ್ವಲಿಂಗನೆ ನೀನು ರೇಣುಕಾರ್‍ಯಾ
ಆದಿ ಲಿಂಗನೆ ನೀನು ವೇದ ಲಿಂಗನೆ ನೀನು
ಓಂಕಾರ ಶ್ರೀಮಂತ್ರ ರೇಣುಕಾರ್‍ಯಾ
ನೀನೆ ನಮ್ಮಯ ಭಾಗ್ಯ ನೀನೆ ಸರ್‍ವರ ಭಾಗ್ಯ
ಸೌಭಾಗ್ಯ ಸರ್‍ವಸ್ವ ರೇಣುಕಾರ್‍ಯಾ
ನಿನ್ನ ಭಜನೆಯ ಭಕ್ತಿ ನಿನ್ನ ಗಾನವೆ ಜ್ಞಾನ
ಸರ್ವ ಆತ್ಮರ ತಂದೆ ರೇಣುಕಾರ್‍ಯಾ
ಜಯಜಯಾ ಜಯಜಯತು ಕೋಟಿ ಜಯಜಯಕಾರ
ಶ್ರೀ ಜಗದ್ಗುರು ಲಿಂಗ ರೇಣುಕಾರ್‍ಯಾ
ಜಗತುಂಬ ಜಯಜಯಾ ಯುಗತುಂಬ ಜಯಜಯಾ
ರಂಭಾಪುರೀಶ್ವರನೆ ರೇಣುಕಾರ್‍ಯಾ
*****
ಧ್ವನಿಸುರುಳಿ: ಶ್ರೀ ರಂಭಾಪುರಿ ಭಕ್ತಿಗೀತೆಗಳು
ರಚನೆ: ಪ್ರೊ. ಜಿ.ಎಚ್. ಹನ್ನೆರಡುದುರ
ಹಾಡಿದವರು: ನರಸಿಂಹ ನಾಯಕ ಪುತ್ತೂರ ಹಾಗೂ ಬಿ.ಕೆ. ಸುಮಿತ್ರಾ
ನಿರ್‍ಮಾಣ: ಅಶ್ವಿನಿ