ಅತ್ತಾ ಇತ್ತಾ ಸುತ್ತಾ ಮುತ್ತಾ
ವ್ಯರ್‍ಥ ತಿರುಗಿದೆ ಗಣಗಣಾ
ನನ್ನ ಅರಮನೆ ಶಿವನ ಸಿರಿಮನೆ
ಮರೆತು ಸುತ್ತಿದೆ ಬಣಬಣ
ಗುಡ್ಡಾ ಹತ್ತಿದೆ ಬೆಟ್ಟಾ ದಾಟಿದೆ
ಶಿವನ ಹುಡುಕುತಾ ತಿರುಗಿದೆ
ಹೊಳೆಯು ಹಳ್ಳಕೆ ಕಡಲು ಕೊಳ್ಳಕೆ
ಶಿವನ ಕೂಗುತಾ ಬಳಲಿದೆ
ಅವರು ಇವರಿಗೆ ಶರಣು ಹೋದೆನು
ಕಲ್ಲು ಶಿವಧೋ ಎಂದೆನು
ಬೀದಿ ಬಂಡೆಗೆ ಮಡಿಕೆ ಕುಡಿಕೆಗೆ
ದೇವರೆಂದು ನಾ ಕರೆದನು
ನಂಬಿ ಕರೆದರೆ ತುಂಬಿ ಬಂದನು
ಕೂಗಿ ಬಂದನು ಶಿವಗುರು
ನನ್ನ ಮಗುವೆ ಮುದ್ದು ಮಗುವೆ
ಎಂದು ಕರೆದನು ನಿಜಗುರು
*****
ಧ್ವನಿಸುರುಳಿ: ಗುರುಗಾಗ ತರಂಗ
ಹಾಡಿದವರು: ಅರ್‍ಚನ ಉಡುಪ
ಸ್ಟುಡಿಯೊ: ಅಶ್ವಿನಿ