ಓ ಯೋಗಿ ಶಿವಯೋಗಿ ಶಿವಶಿವಾ ಗುರುಯೋಗಿ
ಶ್ರೀ ಜಗದ್ಗುರು ಯೋಗಿ ರೇಣುಕಾಚಾರ್‍ಯಾ
ಮಲಯ ಪರ್‍ವತ ಶಿಖರ ಜ್ಞಾನಯೋಗದ ಮುಕುರ
ಭಕ್ತ ಬಾಂದಳ ಸೂರ್‍ಯ ರೇಣುಕಾಚಾರ್‍ಯಾ

ಯುಗದ ಸತ್ಯವು ಒಂದೆ ಜಗದ ಸತ್ಯವು ಒಂದೆ
ಶಿವಾದ್ವೈತ ಸಿದ್ಧಾಂತ ನಿನ್ನಮಾರ್‍ಗಾ
ನೂರು ದಾರಿಯು ಬೇಡ ಚೂರು ದೇವರು ಬೇಡ
ನೀ ಕೊಟ್ಟ ಶಿವತತ್ವ ಶ್ರೇಷ್ಠ ಮಾರ್‍ಗಾ

ಆದಿ ಲಿಂಗೋದ್ಭವನೆ ಜ್ಞಾನ ಲಿಂಗೋದ್ಭವನೆ
ಜಗದ ಕಂಬನಿ ಕಳೆವ ಶಿವಾಚಾರ್‍ಯಾ
ಉಸಿರು ಉಸಿರಲಿ ಶಿವನ ಹೆಸರು ಬರೆದಾ ಋಷಿಯೆ
ವಿಶ್ವ ಸತ್ಯದ ಶಿಖರ ಶಿವಾಚಾರ್‍ಯಾ

ಪಂಚ ಪೀಠದ ಗುರುವೆ ಪಂಚ ತತ್ವದ ಗುರುವೆ
ಮುಳ್ಳು ಮಲ್ಲಿಗೆ ಮಾಡಿ ನಮ್ಮನಗಿಸು
ಕಲ್ಲು ಕರ್‍ಪುರ ಮಾಡಿ ಕೆಂಡ ಸಂಪಿಗೆ ಮಾಡಿ
ಶ್ರೀ ಸತ್ಯ ಶಿವಯುಗದ ಬೆಳಕು ಸುರಿಸು
*****
ಧ್ವನಿಸುರುಳಿ: ಗುರುಗಾನ ತರಂಗ
ಹಾಡಿದವರು : ಶಂಕರ ಶಾನಭಾಗ
ಸ್ಟುಡಿಯೊ : ಅಶ್ವಿನಿ