ಪಂಚಪೀಠದ ಶಿವನ ಮಠದಲಿ
ಬನ್ನಿ ಬನ್ನಿರಿ ಕುಣಿಯುವಾ
ಹೆಜ್ಜೆ ಹೆಜ್ಜೆಗೆ ಗೆಜ್ಜೆ ಕುಣಿಸುತ
ಯೋಗ ನರ್ತನ ಮಾಡುವಾ…
ಶಿವಧೋಂ ಶಿವಧೋಂ ಶಿವಧೋಂಽಽ

ಮಾವು ಮಲ್ಲಿಗೆ ಬಕುಲ ಸಂಪಿಗೆ
ಚಂಗುಲಾಬಿಯ ತೂರುವಾ
ಆತ್ಮಸಂಯಮ ಯೋಗ ಸ೦ಯಮ
ಲಿಂಗ ಸತ್ಯವ ಸಾರುವಾ

ನಾವು ಪ್ರೇಮದ ಶಿಖರ ಹೊಳೆಗಳು
ರಭಸ ತು೦ಬಿ ನುಗ್ಗುವಾ
ಪ್ರೀತಿ ಪರಿಮಳ ಸ್ನೇಹ ಸಡಗರ
ಶಿವನ ಢಮರುಗ ಢಮಿಸುವಾ

ತ್ಯಾಗದಿ೦ದಲೆ ಸಕಲ ಭಾಗ್ಯವು
ಶಿವನ ಜ್ಞಾನವ ಬೆಳೆಸುವಾ
ಗುರುವು ಸು೦ದರ ಸತ್ಯ ಸುಮಧುರ
ವಿಶ್ವ ಧರ್ಮವ ಉಳಿಸುವಾ

ನಮ್ಮೊಳೇತಕೆ ಭೇದ ಭಾವವು
ಶಿವನ ಮಕ್ಕಳು ಆಗುವಾ
ನೂರು ಒಡಕು ತೊಡಕು ಯಾತಕೆ
ಶಿವನ ತೇರನು ಎಳೆಯುವಾ
*****
ಧ್ವನಿಸುರುಳಿ : ಗುರುಗಾನ ತರ೦ಗ
ಹಾಡಿದವರು : ಹೇಮಂತ
ಸ್ಟುಡಿಯೊ : ಅಶ್ವಿನಿ