ಬಾಳೆಹೊನ್ನೂರಿನಲ್ಲಿ ಜೇನು ತುಪ್ಪದ ಹಾಡು
ಶಿವಯೋಗದಾನಂದ ಗಾನ ಕೇಳು
ಗುರುಲಿಂಗ ಜಂಗಮದ ಶಿವತತ್ವ ಸಂಗೀತ
ವೀರಭದ್ರನ ಬಳಿಗೆ ಬಂದು ಕೇಳು
ಗಗನವೆ ಗುರುಲಿಂಗ ಭೂಮಿಯೆ ಶಿವಲಿಂಗ
ವೀರಸೋಮೇಶ್ವರನ ಪೂಜೆ ನೋಡು
ಶ್ರೀವೇದ ವೇದಾಂತ ಸಿದ್ದಾಂತ ಭಾಷ್ಯಗಳ
ಪರಮ ಜಗದ್ಗುರು ಕೊಟ್ಟ ಸಾರ ಕೇಳು
ನಡೆಚನ್ನ ನುಡಿಚನ್ನ ಚೇತನ ಚಲುವು
ಬೆಳಕು ಬಂದಿತು ಬೆಳಕು ಲಿಂಗ ಬೆಳಕು
ಗುರುಶಕ್ತಿ ಶಿವಶಕ್ತಿ ಉನ್ನತೋನ್ನತ ಶಕ್ತಿ
ವೇದಾಂತ ಶಿಖಾಮಣಿ ಘೋಷಕೇಳು
ಮಠದಲ್ಲಿ ಮಹತತ್ವ ಘಟದಲ್ಲಿ ಶಿವತತ್ವ
ರಂಭಾಪುರೀ ಪೀಠ ಉಘೇ ಉಘೇ
ಕೋಟಿ ಕೋಟಿಯ ಜನರ ಜಡದ ಕೋಟೆಯ ಒಡೆದ
ಆದಿ ರೇಣುಕ ಪೀಠ ಉಘೇ ಉಘೇ
*****
ಧ್ವನಿಸುರುಳಿ: ಗುರುಗಾನ ತರಂಗ
ಹಾಡಿದವರು: ಹೇಮಂತ
ಸ್ಟುಡಿಯೊ: ಅಶ್ವಿನಿ




















