ಅಹೋ ನಕ್ಕ ಬೀಸಿ ಪಕ್ಕ

ಅಹೋ ನಕ್ಕ ಬೀಸಿ ಪಕ್ಕ
ಗಗನ ದೇವ ಬಂದನು
ನಗೆಯ ದೇವ ಹೊಗೆಯ ಮಾವ
ಮಗಿಯ ತುಳಿದು ನಿಂದನು ||೧||

ಮುಗಿಲ ತುಂಬ ಬೆಳಗು ತುಂಬಿ
ಬೆಳ್ಳಿ ಬಗರಿ ಬೀಸಿತು
ನೆಲದ ತುಂಬ ಹಸಿರು ನಂಬಿ
ತೆಂಗು ಲಾಗ ಹಾಕಿತು ||೨||

ಆಕೋ ಗುಡುಗು ಇಕೊ ದಿಡುಗು
ಎದೆಯ ಡಬರಿ ಒಡೆಯಿತು
ಚೂರು ಚೂರು ಚೂರು ಪಾರು
ತಲೆಯ ಗಡಿಗೆ ಸಿಡಿಯಿತು ||೩||

ಅಕಾ ಯಾಕ ಇಕಾ ಸಾಕ
ಚಿಂತಿ ಸಂತಿ ಸುರಿಯಿತು
ಬಂತು ಬಂತು ಬಂತು ಮಳೆಯು
ದೇವ ಗಂಗೆ ಕರೆಯಿತು ||೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹ್ಯಾಪಿ ಬರ್ಥ್ ಡೇ
Next post ಮೇಲ್

ಸಣ್ಣ ಕತೆ