ಅಮ್ಮ ಮಗನ ಮನೆಗೆ ಇಂಗ್ಲೆಂಡ್ ಹೋಗಿದ್ದರು. ಅವರು ದಿನಚರಿಯ ಪೂಜೆ ಸಮಯದಲ್ಲಿ ದೇವರಿಗೆ ಎಣ್ಣೆ ದೀಪದ ಬದಲು ಮೊಂಬತ್ತಿ ದೀಪ ಹಚ್ಚಿಟ್ಟಿದ್ದರು. ಅಜ್ಜಿಯ ತೊಡೆಯ ಮೇಲೆ ಬಂದು ಕುಳಿತ ಮೊಮ್ಮಗಳು “ಹ್ಯಾಪಿ ಬರ್ಥ್ ಡೇ ಗಾಡ್” ಎನ್ನುತ್ತ ಅಜ್ಜಿ ಹಚ್ಚಿಟ್ಟಿದ್ದ ಮೇಣದ ದೀಪವನ್ನು ಉಫ್ ಅಂತ ಆರಿಸಿಬಿಟ್ಟಳು. ಏಕೆ ಆರಿಸಿಬಿಟ್ಟೆ ಪುಟ್ಟಾ? ಎಂದು ಅಜ್ಜಿ ಕೇಳಿದಳಿದಾಗ “ಅಜ್ಜಿ! ಅಯ್ ಡಿಡ್ ಹ್ಯಾಪಿ ಬರ್ಥ್ ಡೇ ಟು ಗಾಡ್. ಗಾಡ್ ಈಸ್ ಸ್ಮೈಲಿಂಗ್ ಸೀ ಅಜ್ಜಿ” ಎಂದಳು. ನಾ ಕಾಣದ ದೇವರ ನಗುವನ್ನು ಮಗು ಕಂಡದ್ದು ನನಗೆ ಸಂತಸ ತಂದಿತ್ತು.
*****