ಅಳಬೇಕೆಂದುಕೊಳ್ಳುತ್ತೇನೆ-
ಕಣ್ಣೀರು ಕಣ್ಮರೆಯಾಗುತ್ತದೆ.
ನಗಬೇಕೆಂದುಕೊಳ್ಳುತ್ತೇನೆ-
ಮಂದಹಾಸ ಮಾಯವಾಗುತ್ತದೆ.

ಗೋರಿಯ ಆಳದಲ್ಲಿ ಚೀರಿಡುವ
ನೆನಪುಗಳು;
ಕರುಳ ಬಳ್ಳಿಯ ಕೊಲ್ಲುವ
ಪ್ರೀತಿ ಜಾರೆಯಾದಾಗ ಸೋರೆ
ಬುರಡೆಯಂತೆ ತೇಲುವ
ಭೂತಗಳು.

ನಡೆಯುತ್ತದೆ ಕಾಳಗ
ಸಾವು ನೋವಿನ ನಡುವೆ
ಒಳಗೆ ಬೆಳೆಯುತ್ತದೆ
ಕಾಡುತ್ತಿರುವ ಕರಿ ಕಣಿವೆ.

ಹೇಳು ನೋವೆ, ನಿನಗೆ ಸಾವಿಲ್ಲವೆ?
ನೀನು ಒಳಗೆ ಹರಿದಾಡುವ ಹಾವಲ್ಲವೆ?
*****