ಇದು ಯಾವ ಜನ್ಮದ ಮೈತ್ರಿಯೋ

ಇದು ಯಾವ ಜನ್ಮದ ಮೈತ್ರಿಯೋ
ಇದು ಯಾವ ಬಂಧವೋ|
ನೀ ಯಾವ ಜನ್ಮದ ಗೆಳೆತಿಯೋ
ಅದಾವ ಜನ್ಮದ ಬಂಧುವೋ|
ಇದೇನು ಮುಂದಿರುವ ಭವಿಷ್ಯದ
ಶುಭ ನಾಂದಿಯ ಸೂಚನೆಯೋ||

ಎಲ್ಲಿಯ ನಾನು ಎಲ್ಲಿಯ ನೀನು
ಒಂದಾಗಿ ಪ್ರೀತಿ ಹೆಸರಲಿ
ಪ್ರೇಮಜೀವನದಿ ಸೇರಿ|
ಬಾಳಸಾಗಿಸುತ್ತಿರುವೆವು ಸಂತಸದಲಿ
ಎಷ್ಟು ಸುಂದರವೀ ಪ್ರೇಮ ಸಮಾಜ||

ಕಷ್ಟವೇ ಬರಲಿ ದುಃಖವೆ ಇರಲಿ
ಸುಖದಲಿ ಮೀಯ್ಯಲಿ
ಜೊತೆಯಾಗಿಯೇ ಈ ಪ್ರೇಮದೋಣಿ ಸಾಗಲಿ|
ಬಾಳ ಕಡಲಾಚೆಗೂ ಜೀವನ ಸಾಗಲಿ
ಪ್ರೇಮ ಸಾಮರಸ್ಯತೆ ಚಿರವಾಗಲಿ||

ಪ್ರೀತಿ, ಪ್ರೇಮದಲಿ ಸುಖವುಂಟು
ಎಂಬುದ ಸಾರಿ ಸಾರಿ ಹೇಳೊಣ
ಪ್ರೀತಿಸುವರಿಗೆ ಸ್ಫೂರ್ತಿಯ ನೀಡೋಣ|
ಪ್ರೀತಿಯೇ ಜೀವನ, ಪ್ರೀತಿಯೇ ಪಾವನ
ಪ್ರೀತಿಯಿಂದಲಿ ಈ ಬದುಕಿಗೊಂದು
ಗಂಗಾಸ್ನಾನ ಮಾಡಿಸೋಣ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂರ್ಯನ ಕಿರಣಗಳಿಂದ ಚಲಿಸುವ ಸ್ಕೂಟರ್
Next post ಕರಿ ಕಣಿವೆ

ಸಣ್ಣ ಕತೆ