ಡಾ || ಆನಂದ (ಜಾನಕಿತನಯಾನಂದ)

ಕವಿ, ಸಾಹಿತ್ಯ ಕೃಷಿಕ, ವೃತ್ತಿಯಲ್ಲಿ ಸಾಪ್ಟ್‍ವೇರ್ ಇಂಜಿನೀಯರ್ ಆಗಿ ಅಮೋಘ ಸಾಧನೆ ಮಾಡಿರುವ ಆನಂದ ಹೆಬ್ಬಾಳು ಎಂದು ಗುರುತಿಸಿಕೊಂಡಿರುವ ಇವರ ಹೆಸರು ಆನಂದಾಚಾರ್.ಟಿ. ಇವರ ಕಾವ್ಯನಾಮ "ಜಾನಕಿತನಯಾನಂದ". ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅನೇಕ ಕವನಗಳನ್ನು ರಚಿಸಿ, ಸುಗಮಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಶ್ರೀಯುತ ಮೈಸೂರು ಅನಂತಸ್ವಾಮಿಯವರ ಸಲಹೆಯಂತೆ ಹೆಚ್ಚಿನ ವಿದ್ಯಾಭ್ಯಾಸಮಾಡಿ, ಜೀವನ ತರಂಗಗಳು, ಮಂಥನ, ಚಕ್ಷು ಹಾಗು ಅಕ್ಷಯ ಎಂಬ ಕವನ ಸಂಕಲನ ರಚಿಸಿದ್ದಾರೆ.

ಬರಗಾಲ ಬಂದೈತೆ

ಬರಗಾಲ ಬಂದೈತೆ ಭೂ ತಾಯಿ ಒಡಲು ಸುಡುತೈತೆ|| ರೈತನ ಭವಣೆಗೆ ಕೊನೆಯಿಲ್ಲಾ ಜನ ಜಾನುವಾರುಗಳಿಗೆ ನೀರು ನೆರಳಿಲ್ಲ| ಉಣಲು ಬಣವಿಯಲಿ ಹುಲ್ಲಿಲ್ಲ ಮನೆಯಲಿ ಬೇಳೆ ಕಾಳುಗಳಿಲ್ಲ|| ಹಸುಗೂಸಿಗೆ […]

ಅಮ್ಮ ನಿನ್ನ ನಾನು

ಅಮ್ಮ ನಿನ್ನ ನಾನು ಸರಿಯಾಗಿ ನೋಡಿಕೊಂಡೆನೆ?|| ಹಿರಿಯ ಅಣ್ಣ ನಿನಗೆ ನೆಚ್ಚಿನವನೆಂದು ಕಿರಿಯ ತಮ್ಮ ನಿನಗೆ ಮೆಚ್ಚಿನವನೆಂದು ನನಗೆ ನಾನೇ ಅಂದುಕೊಂಡು| ಅವರೇ ನಿನ್ನ ನೋಡಿಕೊಳ್ಳಲೆಂದು ಮಧ್ಯಮನಾದ […]

ಬರುತಿ‌ಎಂದೆಯಲ್ಲೊ

ಬರುತಿ‌ಎಂದೆಯಲ್ಲೊ ಬಾರದೆಹೋದೆ ಎಲ್ಲೊ| ಮಗು ಲೋಹಿತಾಶ್ವ|| ಬಿಸಿಲ ಜಳಕೆ ನಿನಗೆ ಬಾಯಾರಿಕೆಯಾಗಿಹುದೋ| ನಿನ್ನ ಹಸಿವು ಬಾಧಿಸಿಹುದೋ? ನಿನ್ನ ಜೊತೆಗಿದ್ದವರು ನೀನು ಸಣ್ಣವನೆಂದು ನಿನ್ನ ಕಾಡಿನಲಿ ಹಿಂದೆಬಿಟ್ಟರೇನೋ?|| ಅರಮನೆಯಲಾಡಿ […]

ಬೇಲಿಯ ಹೂಗಳು ನಾವು

ಬೇಲಿಯ ಹೂಗಳು ನಾವು ಬೆಳದಿಂಗಳ ಬಾಲೆಯು ನೀನು|| ತರತರಹದ ಬಣ್ಣಗಳಲಿ, ತರತರದ ನೋವುಗಳಲಿ ನಾವು| ಸಂತಸದಲಿ ಮೈತುಂಬಿ ಸ್ವಚ್ಚ ಬಿಳಿಯ ಬಣ್ಣದಲಿ ಕಾಣಸಿಗುವೆ ನೀನು|| ಪ್ರತಿ ತಿಂಗಳಿಗೊಮ್ಮೆ […]

ಅಣ್ಣ ಎನ್ನ ಬಸವಣ್ಣ

ಅಣ್ಣ ಎನ್ನ ಬಸವಣ್ಣ ಕಲ್ಯಾಣ ಬಸವಣ್ಣ| ಕ್ರಾಂತಿಯೋಗಿ ಬಸವಣ್ಣ|| ಕಾಯಕಯೋಗಿ ಬಸವಣ್ಣ ಕರ್ಮಯೋಗಿ ಬಸವಣ್ಣ| ಕರುಣಾಳು ಬಸವಣ್ಣ ಅಂತರಂಗ ಬಹಿರಂಗಶುದ್ಧಿ ಬಸವಣ್ಣ ನಮ್ಮಯ ಆತ್ಮೋದ್ಧಾರಿ ಬಸವಣ್ಣ|| ತನುವ […]

ಬದುಕ ಬೆಳವಣಿಗೆಯ

ಬದುಕ ಬೆಳವಣಿಗೆಯ ಜೊತೆಗೆ ಜೊತೆಗೆ ಭಾಗ್ಯ, ಬವಣೆ, ಬದಲಾವಣೆಗಳ ಬೆಸುಗೆ|| ಇಲ್ಲದ ಭಾಗ್ಯವ ನೆನೆದು ಇರುವುದ ಪಕ್ಕಕ್ಕಿರಿಸಿದರೆ ಬಾಳು ಸಾಗದು ಮುಂದೆ| ಕಾಲನ ಜೊತೆ ಸೇರಿ ಹೊಂದಿಕೊಳ್ಳುವುದೊಂದೇ […]

ಆಸೆಯು ಮುಂದೆ

ಆಸೆಯು ಮುಂದೆ ನಿರಾಸೆಯು ಹಿಂದೆ| ಆಮಿಷದಿಂದೆ ಬೇಸರ ಮುಂದೆ| ತಿಳಿದೂ ಅದರ ಹಿಂದೆ ಹೋದರೆ ನಾವೂ ಕುರಿ ಮಂದೆ|| ಬೆಳಕ ಜೊತೆಯಲಿ ನೆರಳಿರುವಂತೆ ದೀಪದ ಕೆಳಗಡೆ ಕತ್ತಲಿರುವಂತೆ […]

ಬರಿಯ ಮಣ್ಣ ಹಣತೆ ನಾನು

ಬರಿಯ ಮಣ್ಣ ಹಣತೆ ನಾನು ಅದರ ಜ್ಯೋತಿ ಪ್ರಕಾಶಕನು ನೀನು| ನಿನ್ನ ಕಾಂತಿಯ ಕರುಣೆ ಬೆಳಕಲಿ ಕಾಣಿಸುತ್ತಿರುವೆನು ನಾನು|| ನೀನು ಬೆಳೆಗುವವರೆಗೂ ನಾನು ಮಿನುಗುವೆನು| ನೀನು ಹೊಳೆಹೊಳೇದಂತೆ […]