ಬೇಲಿಯ ಹೂಗಳು ನಾವು

ಬೇಲಿಯ ಹೂಗಳು ನಾವು
ಬೆಳದಿಂಗಳ ಬಾಲೆಯು ನೀನು||

ತರತರಹದ ಬಣ್ಣಗಳಲಿ,
ತರತರದ ನೋವುಗಳಲಿ ನಾವು|
ಸಂತಸದಲಿ ಮೈತುಂಬಿ
ಸ್ವಚ್ಚ ಬಿಳಿಯ ಬಣ್ಣದಲಿ
ಕಾಣಸಿಗುವೆ ನೀನು||

ಪ್ರತಿ ತಿಂಗಳಿಗೊಮ್ಮೆ
ನಿನಗೆ ಮರುವಸಂತದ ಸಂತಸ|
ನಮಗೆಲ್ಲಾ ವರ್ಷಕ್ಕೊಂದೇ ವಸಂತ ಮಾಸ|
ಯಾರ ಸೇವೆಗೂ ಮುಡಿಪಾಗಿರದ
ಯಾವಲೆಕ್ಕಕೂ ಸಿಗದ ಜೀವನ ನಮ್ಮದು|
ಸೂರ್‍ಯಚಂದ್ರರಿಬ್ಬರಿಗೆ ನಮ್ಮ ಸತ್ಯ
ತಿಳಿದಿಹುದು||

ಗಾಳಿಗೆ ತೂಗಿ ಬಿಸಿಲಿಗೆ ಬಾಗಿ
ದುಂಬಿಗಳಿಗೆ ಹಸಿವ ನೀಗಿ
ದಣಿಯದಲೆ ಸಾಯುವ ಜೀವನ ನಮ್ಮದು|
ಮುಡಿಗೆ ಏರದ ಹೂಹಾರಕ್ಕೆ ತಾ ಸಿಗದ
ಪ್ರಕೃತಿಯ ಮಾತೆಯ ಮಡಿಲ ಸೇರುವ
ಬೇಲಿಯ ಹೂಗಳು ನಾವು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಡಕರ್ ಮಾತ್ವ
Next post ಸೆಟ್ಟಿಯ ಲೆಕ್ಕಾಚಾರ

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…