ಕುಡಕರ್ ಮಾತ್ವ

ಕುಡಕರ್ ಮಾತ್ವ ತಿಳಕೊಳ್ದೇನೆ
ನೂಕ್ಬಾರ್ದ್ ಔರ್‍ನ ಕೆಳಗೆ;
ಯಾವ್ ಚಿಪ್ನಾಗ ಯಾವ್ ಮುತ್ತ್ ಐತೊ
ಒಡದಿ ನೋಡ್ಬೇಕ್ ಒಳಗೆ! ೧

ಕೊಚ್ಚೆ ನೀರೀನ್ ಸೋದೀಸ್ತ್ ಅಂದ್ರೆ
ಸಿಕ್ಕೋಕಿಲ್ವ ಗಂಗೆ?
ಸಾಜಾ ಯೋಳೋನ್ ಯಾರಾದ್ರೇನು?
ಸತ್ಯ ಕಣ್ ಕಂಡೌಂಗೆ! ೨

ಅರ್‍ತ್ ಇಲ್ಲಾಂತ ನೆಗಬೇಡಾಣ್ಣ
ನಾ ಕುಡದಾಡೋ ಮಟ್ಟು!
ಕುಡಕನ್ ಪದಗೋಳ್ ಒಕ್ಕ್ ನೋಡಿದ್ರೆ
ಮಸ್ತಾಗ್ ಅವೆ ಗುಟ್ಟು! ೩

‘ರವ್ವಿ ಕಾಣದ್ ಕವ್ವಿ ಕಂಡ ’
ಅಂದ್ರೆ ಕವಿಗೊಳ್ ತತ್ವ-
‘ಕವಿ ಕಾಣದ್ ಕುಡಕ ಕಂಡ’
ಅನ್ನೋದ್ ಕುಡಕರ್ ಮಾತ್ವ! ೪
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕ್ರೀಡೆ : ಸಂಸ್ಕೃತಿ ಮತ್ತು ತಾತ್ವಿಕತೆಯ ಒಳಗೆ
Next post ಬೇಲಿಯ ಹೂಗಳು ನಾವು

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…