ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ… ಮಸ್ಗೆಲ್ಗೆ ಆಕಿ, ಗಸ್ಗಾಸಾ… ನುಣ್ಗೆ ತ್ವಟ್ವಟ್ಟೇ… ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ… ಕಟ್ದಿ ತುರ್ಬು, ಗಲ್ಗಂಟೆ ಅಲ್ಡಾದಂಗೆ, ಅತ್ತಿಂದತ್ತಾ… ಯಿತ್ತಿಂದತ್ತಾ ಅಲ್ಹಾಡ್ತಿದ್ರೆ, ಕರ್ಮೈ ಯಳ್ಬಿಸ್ಲಿಗೆ ಮಿಣ್ಮಿಣಿ… ತಾರ್ಹೆಣ್ಣಿಂಗೇ ಮಿಂಚುತ್ತಿತ್ತು! ತಾ ಸುತ್ತಿಕೊಂಡಿದ್ದ, ಮಾಸ್ದಿ ಬಿಳ್ಪಿಂಚೆ ಸಜ್ಜಿ ದೋಸಿಯಂಗೇ ವೂರ್ಗಲ್ವಾಗಿ, ಅಲ್ಲಲ್ಲಿ ಗಂಟ್ಗುಂಟು ತೇಪ್ತೇಪೆಯಾಗಿದ್ದರೆ ಕೈಕಾಲ್ಗುಳಲ್ಲಿ… ನಾಯ್ಗುರ್ಬೆಳ್ದು, ಅಲ್ಗೋಳೋ… ಕೊಪ್ಪೇ ಪಾಸ್ಗಾಟ್ಟಿ, ತೂತ್ಗೆ… ಮೂತ್ಗೆ… ನರ್ಬೆಂದು, ಮಳ್ವೆರ್ಗೂನೆ, ಗೂದ್ವೆಂಡ್ಸಿಗಂಡು… ವೂರ್ಗೋ… ಕಾಡ್ಬೂ… ಅನ್ತಿದ್ರೂ, ಕಣ್ಣು ಕಿವಿ ಮಾತ್ರ ದೀಗಿದ್ದಂಗಿದ್ದವು!
ಯದ್ರುಮ್ನೇ ಸೀನಪ್ಪ, ಮೂಲ್ಮಿನೆ ಮಲ್ಲಪ್ಪ, ತಾತಯ್ಯ ಸೀತಯ್ಯ… ಸಿವಪ್ಪನ್ಗಿಂತಾ ಯಾವ್ದುರಲ್ಲಿ… ನಾವೇನು ಕಮ್ಮಿಯೆಂಬಂತೆ, ಅವ್ರು ಯೀಳ್ಗ್ಮೆಣೆ, ಕುಡ್ಗೋಲು. ಚೂರಿ, ಕತ್ತಿ, ಕ್ವಡ್ಲಿನ ಗಢಾನ್ಸಿಬಂಡೆಗಾಕಿ ಪರ್ಪಾರಾ… ತಿಕ್ರಂತೇ ತಿಕ್ಕತೊಡ್ಗಿದವ್ರಿಗೆ ಸರಿಕಾಣಲಿಲ್ಲ! ತ್ವಟ್ಗು ತ್ವಟ್ಗು ಸಣ್ಣಂದು… ವುಸ್ಕಾಕಿ ಮತ್ತ್ಮೆತ್ತೆ… ಮಸೆತೊಡ್ಗಿದ್ರು.
‘ವಬ್ರೂ ಮಾಡ್ದೊ ನೋಡ್ದೆಟ್ಗೆ, ನಿಮ್ದು ವಟ್ಟೆಬ್ರು ಯೆದ್ದಾಳ್ತೇನ್ರೆಲೇ? ಯೆಶ್ಟೊಂದು ನಿಗ್ರಿತ್ತೀರಿ! ನಿಮ್ಯೋಗ್ಯಾತ್ಗೆ ವಂದ್ಮಾಸ್ಗೆಲ್ಲು ಮಾಡ್ಕೊಳ್ಕಾಗಿಲ್ಲ! ನೀವೆಂತಾ ಮಹಾ ಮಣೆಗಾರರ್ಲ್ಲೇ?? ಯೇನೂ… ಜಕ್ಜಾಕಾಲೆ ಮಸ್ಗೆಲ್ಗೆ, ವುಪ್ಗೆ, ವುಣ್ಸಿಣ್ಗೆ, ಸಾರ್ಗೆ, ಚಟ್ನೇ, ಡಬ್ಳಾ… ಸೂಜ್ಗೆ, ದಾರ್ಕೇ… ಥೂ ನಿಮ್ಬಾಳ್ನಾಡಾ! ದಿನ್ಪರ್ತಿ ಯಿಂಗೇ ಬಂದ್ಬುಂದೂ… ಮನೆಬಾಗ್ಲಿಗೆ ನಿಂತ್ಗಾಂಬ್ದಾಲ್ಲಲೇ… ಕಿಸ್ಬಾಯಿದಾಸ್ರೇ… ಯದ್ಮೇಲೆ ಯಿಂಗೆ ನಿತ್ಗಂಡ್ರೆ ಯಂಗೆ ಕೈಕಾಲು ಆಡ್ತಾವ್ಲೇ? ಥೂ! ಯಿಲ್ಲಿಂದ ಮದ್ಲು ತಗಂಡ್ನಡ್ಲೇ… ವಂದಕ್ಷಣ ನನ್ದ್ರೆಗೆ ನಿಲ್ಬೇಡ್ಲೆ ಮೂಳಾ! ಅಂಗೇ ನಮ್ದು ನಮ್ಗೇ ಗರ್ದಿಲಿ… ತಂದು ಕೊಟ್ಬಿಡ್ಲೇ. ನಾನು ನಿನ್ಮಾನ್ತೆಕೆ ಜೋತ್ಗಂಡು ಹಲ್ಕಿಸ್ಗಿಂಡು… ಬರ್ತಾನ್ಕ, ಸುಂಕಿರ್ಬೇಡಾ…’ ಯೆಂದು ಸಿವಪ್ಪ, ಯೆಂದ್ನಿಂತೆ ಅದೇ ರಾಗ, ಹಳೇ ಹಾಡು ಆಡ್ದಿನಲ್ದೆ, ಮಸ್ಗಲ್ನ ಯರ್‍ಡು ಕೈಲಿ, ಯೆತ್ತಿ ಬೀಸಿ… ರ್‍ವಾಸ್ದಲಿ, ಸೀತಯ್ಯನ ಕೈಗ್ಡಿದೆ, ಬೇಕಂತ್ಗೆ ವಗ್ದೆ ಬಜಾರ್‍ಕೆ ವಗ್ದೆ.
‘ಅಯ್ಯಯಾ… ನೀನಂತೂ ಬಲು ಬಿಂಕ್ದವ್ನು, ವುಗ್ರ ಪ್ರತಾಪಿ. ಬೆಂಕಿ ಚೆಂಡು. ಪರ್‍ಸುರಾಮ, ಮಯೂರ ಬಿಡು! ನಿಧನಾವಾಗಿ… ನಿನ್ದಾದ್ಮೇಲೆ ನನ್ಗೆ ಮಸ್ಗೆಲ್ಲು ಕೊಡೆಣೇ ಅಂತಾ ವಂಟಿ ಕಾಲ್ಗಾ ನಿಂತಿದ್ದು! ಯೀ ಮಾತ್ಗೆ, ನೀಯಿಷ್ಟು ತೆಗ್ವಿಲಿ, ಕಾಲ್ಮಲ್ಬಿಳಂಗೆ ವಸ್ದೆರೆಂಗೆ? ಯಿಡೀ ಕೇರ್ಯಾಗೆ ವಳ್ಳೆ ಅರಾಯಿದ್ದಂಗಿರಾದು… ನಿನ್ನಾತ್ರೊಂದೇ!! ಅದ್ಕೆ ಬರ್ತಿವಪ್ಪಾ. ಯಂತ್ಕೊಟ್ಗೆ ಬದ್ಕಿರ್ಲೀ, ಅಕ್ಪಾಕ್ದಾವ್ರತ್ರ ಕೈಯೊಡ್ತಾರ್ಪಾ… ನಿನ್ಗಂತೂ ನಿನ್ಮಾಕ್ಳು ನಾಕಾಳು ಸರಕಾರಿ ಪಗಾರ್ದಾಗಿದ್ದಾರೆ! ಮನೇಗೆ ಟಿ.ವಿ. ಗಡಿಯಾರ, ಕುರ್ಚಿ. ಮಂಚ, ಬ್ಯಾಟ್ರಿ, ಕರೆಂಟು… ಬಾಳ್ಸವಲತ್ತು… ಯೆಲ್ಲ ಐತಿ!’ ಯೆಂದು ಸೀತಯ್ಯ, ಮೆಲ್ಗೆ ಬಿಂಕ್ದ ಮಾತ್ಗುಳ್ನ ಹರ್ಬಿಟ್ಟ.
’ತಡಾಯ್ಮಿದ್ಲು ನೀನಿಂಗೇ ಬಂದ್ಮೇಲೇ… ನಿನ್ಮಾಕ್ಳುನ ವೋದ್ಸಿ ನಿಗ್ರ್ನಾ ಬ್ಯಾಡಂದಾರ್ಯಾರ್ಲೇ? ಸಂಬ್ಳಕ್ಕಿಟ್ಟು ಅರಿಶಿಣ್ದ ಕೂಳ್ಗೆ ಜೋತ್ಬಿದ್ರೀ…! ಯೀಗ ಮೈಯೆಲ್ಲ ಪರ್ಚಿಗಂಡ್ರೆಂಗೆ?! ಮಾತ್ಗುಳ್ಗೇನು ಕೋಟ್ಗೆಳು ದಾಟ್ತವೆ! ಮನ್ಯಾಗೇನೇ ಮಾಡ್ಲಿ… ನಮ್ಬಾಯಾಕೆ, ಮದ್ಲು ಬಿಳಂಗಿಲ್ಲ! ಆಗ್ಲೆ ನಿಮ್ದು ಯಿಕ್ಕಿರ್ತಾತೇ… ಮುಚ್ಳ ಪರಿಯಾಣ, ಮಣ್ಬಟ್ಲಾ ಯಿಡ್ಕಂಡೂ ಮನ್ಮೆಂದಿಯೆಲ್ಲ… ಸಾಲ್ಗೆ ನಮ್ಮ ಮನೆ ಬಾಗ್ಲಿಗೆ ನಿಂತಿರಾದು ಬೇರೆ ಕೇಡು. ಯೀಗ ಬಾಯ್ಗಾ ಬಸ್ವಪುರಾಣ ಬೇರ್ಕೇಡು…’ ಯೆಂದು ಸಿವಪ್ಪ, ಸೀತಯ್ಯನ ಹಂಗ್ಸಿ… ಹಂಗ್ಸಿ… ದೆವ್ವ ಬಿಡ್ಸಿದ.
‘ಯೇ… ಯೀ… ಸುಡ್ಗಾಡ್ಕಲ್ಗೆ, ಬೆಳ್ಗಾ ವಳಿಯೋ ಬಿಳೀ ಯೀ ಮಸ್ಗೆಲ್ಗೆ… ಯೀ ಅಳ್ವೆತಾರ್ನೆ ಕಲ್ಲು ಮುಳ್ಳು ವಯ್ಯಾಕೇ ನಿಂತ್ಗೀಯಲ್ಲಾ…? ನೀ ಆಸ್ವುಲ್ದಾನ್ದಿಗೀ!! ಸತ್ಗಾ ನೀ ಯೆದ್ಮೇಲೆ ಯಿದ್ನ ಯಿಕ್ಕೊಂಡ್ಹೊತ್ತಿಯಂಬಂಗೇ ಬಲು ಪಕ್ರು… ಮಾಡ್ತಿಯಿ! ನಿನ್ಕೈಗೆ ಸಿಗೋದೊಂದೇ, ಆ ಯೆಣ್ಕೆರ್ಡಿಗೆ ಸಿಗ್ದೊಂದೇ… ನಿನ್ಕಾಲ್ಗಾ ತಿಪ್ಪೇಗ್ಳುವುಳಾ ಮನ್ಗೆ ಬಂದ್ವು…! ಅಂಗೆ ಭೀತಿ ಬಿಡ್ಸಿಗಿ. ಯೇನೊ… ನಾನ್ಗಾತಟ್ಗೆಲ್ಲ ಯೀ ಕೇರ್ಯಾಗೆ ಅದೂ… ನಿನ್ನಾತ್ರ… ಬಾಳೇ ಮಾಡ್ತಿದ್ದೀನಿ…! ಯಿನ್ನೊಬ್ರಾಗ್ದಿರೆ ವುರ್ಲು ಆಕ್ಕೊಳ್ತಿದ್ರು…’ ಸೀತಯ್ಯ… ಯಜ್ಮಾನ ಕೇರಿಮಣೆಗಾರ, ಅದೂ ಯಿದೂ, ಯಿಂದ್ಮುಂದೆ ಯೇನ್ಡೊದ್ಲೆ, ಕೆಡ್ಬಾಡಾ… ತಗುದಾಕಿ… ಮಾತಾಡ್ದಿ.
ಯೆದ್ಟೇಗೆ… ವರ್ಕಡ್ಗೆ, ಕುಂಟ್ಕೆಡ್ಗೆ, ಕೆರ್ಕೆಟ್ಗೆ… ವೋಗಿ ಬರಾರ್ಗೆ… ಯಿವ್ರ ಕೋಳಿ ಜಗ್ಳ… ವಳ್ಳೆ ಪುಗ್ಸಟ್ಟೆ ಮನ್ರಾಂಜ್ನೆಯಾಗತೊಡ್ಗಿತು. ಯೆಂಜ್ಲೆಗೆ ಕಾಗೆಗ್ಳು ಸೇರ್ದಿಂಗೆ, ಮೆಲ್ಗೆ ಜನ್ರು ‘ಕವ್ಕಾವ್…’ ಮಾಡ್ತೋಗಿದ್ರು.
‘ಥೂ! ಯೇನ್ಮಾತಂತಾ ಆಡ್ತೀಯಿಲೇ? ಮಸ್ಗೆಲ್ಲು ಮಣೆಗಾರರ ಮಾ…ಲಕ್ಷ್ಮೀ… ಆದಿದೈವ ಯಲ್ಲಮ್ಮ. ಆ ನಮ್ಮ ಆದಿಜಾಂಬ್ವುಂತ, ತನ್ಮಾಗ್ನ ಯೀ ನೆಲ್ಕೆ ಬಲಿಕ್ವಟ್ಟು… ಅವ್ನ ಬೆನ್ನನ್ನೇ, ಮಸ್ಗೆಲ್ಲಾಗಿ ಮಾಡ್ಕೊಟ್ದಿನ ಮರ್ತು, ಆಗ್ಲೇ ಮಜ್ಗ್ಯಾಕೆ ನೀರ್ಹಾಕ್ಬಿಟ್ರೇನ್ರಲೇ? ಯಿದು ಬರೀ ಕಲ್ಲಲ್ಲೋ ತಮ್ಮಾ… ಕೇರಿಯ ಧರ್ಮಾ, ಕರ್ಮಾ, ಕನ್ಸು, ನಂಬಿಕೆ, ಕುಲಾ, ಛಲಾ, ಕಸ್ಬು… ಕಾಣ್ಲೀ… ಯಿದು ಆರಾಽ ಸಿವಾಽ ಸಿವ್ನ ಮೂರ್ನೆ ಕಣ್ಣು! ಕಲ್ಲಿನಿಂದಾಲ್ವೇ ಸಿವ್ಲಿಂಗ ಶಿಲಾಬಾಲ್ಕೆ, ಮನ್ಮೆಠ, ಗುಡಿ, ಗೋಪುರ, ದೇವ್ರು, ಬೀಸ್ಕಾಲ್ಲು, ರುಬ್ಬಾಗುಂಡು, ಪಿರಂಗಿಗುಂಡು…! ಯಿಂಗೇ ಕಲ್ನಿಂದಲ್ವೇ… ಕ್ವಾಟೆ, ಕ್ವತ್ಲು ಬುಡ್ಡೆಕಲ್ಗಾಗಿ ವೋರ್ಟಾ ನಡ್ದಿಲ್ವೇನ್ಲೇ?! ಯಿತಿಹಾಸ, ಪುರಾಣ, ಮಹಾಕಾವ್ಯಗ್ಳು ಸೃಷ್ಟಿಯಾಗಿಲ್ವೇನ್ಲೇ?! ಯಿದೇ ಮಸ್ಗೆಲ್ಗಾಗಿ, ಐವತ್ತು ವರ್ಸುಗಳಿಂದೇ ದ್ವಡ್ಡ ಕದ್ನ ನಡ್ದಿಲ್ವೇನ್ಲೇ?! ಯೀ ಕಲ್ಲು ಅಂದಾಕ್ಷಣ ನನ್ಗೆ ನಾಲ್ಕು ರೀತಿಯ ಜನರು ನೆಪ್ಗೆ ಬರ್ತಾರೆ… ಕರಿಜನ್ರು, ಹರಿಜನ್ರು, ಕಲ್ಲಿನ ಜನ್ರು, ದಾರ್ದಜನ್ರು… ನೀ… ಯೀ ಜನ್ರಲ್ಲಿ ಯಾರಾಗಿ ಕಂಡು ಬರ್ತಿಯಾ? ಅವುದು… ಯೀ ಮಸ್ಗೆಲ್ಲು… ಗ್ವಡ್ಸಲ್ಪಳ್ಳಿಂದಾ ಕಟ್ಮೆನೇ ಪಂಚಾಯ್ತಿ ಮುಗ್ಸಿಗೊಂಡು, ಮನಾರ… ಯೆಂಡ್ಸಾರಾಯಿ… ಕುಡ್ದಿ ಬರ್ವೂಗಾ ಯಿರೇಗ್ರಿತ್ರಾ ಸಿಕ್ಕಿದ್ದು! ಯಿದ್ಕಾಗಿ ತೆಕ್ಮುರ್ಗೆ ಬಿದ್ದು, ವದ್ದು, ಬಿದ್ದು, ನ್ಯಾಯ್ಪಾಂಚಾಯ್ತಿ ನಡ್ದು, ಕೊನ್ಗೆ ಜಿದ್ಗೆ ಬಿದ್ದು ಕಾಳ್ಕಾಡಿ, ರಕ್ಕಾ ಕ್ವಟ್ಟು, ಅದ್ನ ನಾನೇ ಕೊಂಡ್ಕೊಂಡು, ಯಿತಿಹಾಸ ಸೃಷ್ಟಿಸ್ನಿಲೇ… ಕೇರೀಜಂ ಯೆಂದ್ರೆ ಯಿದು…! ಯಿಲ್ಲಿ ಯಿತಿಹಾಸ, ರಾಜ್ಯಶಾಸ್ತ, ಸಮಾಜಶಾಸ್ತ್ರ, ಜನ್ಪದಾ ಶಾಸ್ತ್ರಗ್ಳ ತೌವ್ರು… ಯೀ ಕೇರಿ…’ ಯೆಂದು ಸಿವಪ್ಪ, ಯೆದ್ದು ಕೋಲ್ತಾಗಂಡು ಸೀತಯ್ಯನ ಬಡ್ಬಿಡಿಯಾಕೆ ವೋದ. ಸರಿಕ್ರನ ಅದೂ ಮಣೆಗಾರ್ನ ಬಡ್ದಿರೆ ತಪ್ಪು. ದಂಡ, ಪಾಲ್ಕಟ್ವು ಮಟ್ಟಕೆ ವೋಗಾದು ಗೊತ್ತಿದ್ದೂ ಸಿವಪ್ಪ, ಸೀತಯ್ಯನ್ಮೇಲೆ ಆವೇಶ್ದಲಿ, ‘ಯಡ್ಡೆಂಸೆಡ್ಡೆಂ’ ಅನ್ದಾಲೆಯೇರೇರೀ ವೋದ.
ಯಿಶ್ಟು ಗಲ್ಗಾಲಾ… ಬಾಯಾಗ್ದೆ ತಡಾ, ಜನ್ರು ಯಿರ್ವೆ ಮುಸ್ರಿಕೊಂಡಂಗೆ, ಯಿವ್ರ್ನ ಸುತ್ತಾ… ಮುಸ್ರಿಕಂಡ್ರು! ಕಜ್ಜಿನಾಯ್ಗಿಳ್ನ ಗದ್ರಿಕಂಡು, ವೋಡ್ಸಿದಂಗೆ ಯಿವ್ರಿಬ್ರ್ನಾ ದೂರ್ದಾರಾ ಗದ್ಮಿ… ಅವ್ರಾವ್ರಾ ಮನ್ಸೆರ್ರಿಲಿಲ್ಲ! ಆಗ್ಲೇ ಮತ್ತೆ, ಅವ್ರೆದೆ ಬಾಯಿ, ಕಾಲ್ತುಳಿತ, ದದ್ಬಾಡಾ ಗದ್ಲ, ಬಂದಿದ್ದಲ್ಲ… ಭಾರ್ಸಿದ್ದಲ್ಲ!
‘ಯೇನೇನು ಅಂತಾ… ಜನ್ರು ವುಲ್ಗಿಳ್ನ ಯಿಡ್ಡಂಗೆ’ ವರ್ಬಂದ್ರು… ಯಿವ್ರಿಬ್ರ್ನಾ ತಿನ್ನೋರ್ನಾ ನೋಡ್ದಿಂಗೇ… ನಿಂತು, ನೋಡ್ತೊಡ್ಗಿದ್ರು…
‘ಯೇನಿಲ್ಲ ನಿಮ್ತಲ್ಗೆಳ ಯೇನು! ಮತ್ತೆ ನಿಮ್ತಲೆ! ಯೀಗ ನಿಮ್ಸಲ್ವೂಗಿ ನಾವು ಬೈದಾಡಿ ಜಗ್ಳಾಡಿ ತೋರ್ಸಿಬೆಕೆನ್ರಾಲೇ? ರೆಡ್ಸೆಲು ಮದ್ಲು ಯೆತ್ತಾಗ್ಯಾ… ಯೆಂದು, ಯಿಲ್ಲೇನು ಕೋತ್ಗಿಳು ಕುಣಿತಾವೇನ್ರಾಲೇ… ನಡ್ರಿ… ನಡ್ರಿ’ ಯೆಂದು ಸಿವಪ್ಪ, ಜನ್ರನ ಕಜ್ಜಿ… ನಾಯ್ಗಿಳನ ಗದ್ರಿದಂಗೆ… ಗದ್ರಿ ಕಳ್ಸಿದ.
‘ನಿಮ್ದು ಆವ್ವಾಳಕ್ಕು… ಕೋಳಿ ನಾಯಿ ಜಗ್ಳ ಯಾವಾಗ್ಲು ಯಿದ್ದಿದ್ದೇ ಆರ್ಯಾದಲ್ಲ. ಮುರ್ಯಾದಲ್ಲ. ಯೀಗಾಗ್ಲೆ ಸಂಗ್ನಿಸಲ ದ್ವಡ್ಧಣ್ಗಿಳೇ ಖುದ್ದಾಗಿ ಅದೂ… ಯಿಂದ್ರೆಸೇನ್ರೆಡ್ಡಿನೇ ಕರ್ಕೆರ್ದು ವೋಗ್ಯಾನೆ! ಅಂತ್ದಾರಾಗೆ ಕಾಗೆಗ್ಳೆಕ್ಕಿದಂಗೇ ನಿಮ್ದೊಳ್ಕಿತ್ನೋಡು! ಆಗೋ ಆಯಾಪ್ಪ… ಮತ್ತೆ ಬಂದ್ನೋಡು…’ ಬೇಗ್ಬರ್ರೆಲೇ ಯಿದ್ಕಿದ್ದಂತ್ನೆ ನಮ್ಮಣ್ಣ… ಬಸ್ವಣ್ಣ ತೀರ್ಕಿಂಡ! ಮನ್ಮೆಂದ್ಗೆಲ್ಲ ದುಕ್ಕ ತರ್ಸಿದೆ. ಬೇಗ್ಬಂದು ವತ್ಕೊಂಡ್ಹೋಗ್ರೀ…’ ಅಲ್ಲದ್ದ ಸೀನಪ್ಪನ್ಗೆ, ಮೂಲ್ಮಿನೆಯ ಮಲ್ಲಪ್ಪನ್ಗೆ, ತಾತಯ್ಯ, ಸೀತಯ್ಯನ್ಗೆ, ಕಿವ್ಗಿಳು ಕುಂದ್ಲಿಯಂಗೆ, ನೆಟ್ಗೆ ನಿಗ್ರಿದ್ವು! ಸೀನಪ್ಪ ಯೇಳ್ದಿಕ್ಕೂ… ಯೀಗ ವೂರ್ಧುಣ್ಬಿಂದು, ಕೂಗಿ ವೋಗಿದ್ದಕ್ಕೂ, ಯೆಳ್ಳು ಬೆಲ್ಲ ಮುಳ್ಳಕ್ಕಿ… ಕಲ್ಸಿ ತಿಂಬಾಕೆ ಕ್ವಟ್ಟಾಂಗಾತು!
* * *
ವೂರ್ಧುಣ್ಮಿತ್ನಿಂದಾ… ಯಿಡೀ ಕೇರ್ಕಾರ್ನೆ ಸಡ್ಗರ. ಸಂಭ್ರದಲಿ ತೇಲ್ತೋಡ್ಗಿತು ಯಲ್ರು ಮನ್ಸಿನಲ್ಲೇ ಮಂಡ್ಗೆ ತಿನ್ತೊಡ್ಗಿದ್ರು.
‘ಆಹಾ… ಮುಟ್ದಿರೆ ಮಾಸಂಗೆ, ಸಕಾತ್ ಕೊಬ್ದಿ ಗೂಳೆಂಗೆ, ಐರ್ವಾತ, ಕಾಮ್ದೇನಂಗೆ, ಯೆಶ್ಟು ಸಾವ್ರಿ ಸಾವ್ರಿ… ಕ್ವಟ್ರು ಸಿಗ್ದ, ಅಣ್ಣ ಬಸ್ವಣ್ಣ, ಯಂಗ್ಸೆತ್ತಾ?? ಪಾಪ… ಯೇನಾಗ್ತಿಂತೇ?’ ಕಡ್ಮಾನೆ ಯೀರಣ್ಣ, ದಡ್ದಾಡ್ನೇ ಸೀತಯ್ಯನ್ಗೆ ಪ್ರಶ್ನೆಗ್ಳ್ಮೇಲೆ ಪ್ರಶ್ನೆಗ್ಳನ ಆಕ್ದಿ. ಯಿಡೀ ರಾತ್ರೆಲ್ಲ ಸತ್ತೊಂದಾಂಗೇ, ಮಕಾಡೆ ಬಿದ್ಕೊಂಡ್ದಿ ಯಿಡೀ… ಕೇರ್ಕೇರ್ನೆ ಜಿಂಕ್ಮಿರಿಯಂಗೇ.,. ಛಂಗ್ನೆದ್ದು ಕುಂತ್ಗುಂಡಿದ್ದೇ ತಡ, ಕಣ್ಣು, ಕಿವಿ, ನಾಲ್ಗೆ, ಕೈ, ಕಾಲ್ಗುಳೂ… ಚುರ್ಕುಗೊಂಡ್ವು.
‘ಸತ್ತದನಾನಾ ಯೆತ್ಕೊಂಡೋಗಿ, ಸುಕ್ಪುಡ್ರಿಲೇ ವೂರ್ಮಣೆಗಾರರೆಂದ್ರೇ… ದನಾ ಯಂಗ್ಸಿತ್ತಿತೆಂದು ನನ್ಕೆಳ್ದಿರೆ ನಾನ್ಹೇಳ್ಲಿ?! ನೀರ್ಸೆಲೆಯಾಗಿ, ಯೀಗ ಯಿದ್ಕಿದ್ದಂತೆ ನೆಗ್ದು ಬದ್ಸುತ್ತಿತಂತ್ಲೇ… ಧಣಿ ಯಿಶ್ಟೊತ್ತು ಯೇಳೇಳಿ ತಲ್ತೆಲೆ ಗಟ್ಸಿಗೊಂಡು, ಕಣ್ಣೀರಿಟ್ಟು ಯಲ್ರಿಗೊಂದೊಂದು ಟೇಬಲ್ ಬೀಡಿ, ಬೆಂಕಿ ಪುಳ್ಕೊಟ್ಟು ವೋದ್ನಲ್ಲಲೇ… ಅದ್ಕೆ ಯಿಶ್ಟೊತ್ತು… ತುಕ್ಡಿದ ಯೀಳ್ಗೆಮಣೆ, ಕುಡ್ಗೋಲು, ಚೂರಿ, ಕತ್ತಿ, ಕ್ವಡ್ಲಿನ ಮಸ್ತಿದ್ದಲ್ವೇ?’ ಸೀತಯ್ಯ ಅಲ್ಲಿದ್ದವ್ರಿಗೆ, ಹತ್ತೆಣ್ಣಿನ ತ್ವಳ್ಬಿಡ್ಸಿದಂಗೆ, ಬಿಡ್ಸಿ ಬಿಡ್ಸಿ… ಯೇಳೇಳಿ… ಮತ್ತೆ ಜ್ವಲ್ಸುರ್ಸಿತೊಡ್ಗಿದ.
‘ವೂರ್ಗಾ ದನ್ಸತ್ರೆ, ನೀ ಕೇರ್ಯಾಗೆ ಜ್ವಲ್ಸರ್ಸಿತ್ತೀಯಲ್ಲಲೇ? ಅವ್ರಿಗಲ್ಲಿ ಪ್ರಾಣ್ಸಂಕಟ! ನಿನ್ಗಿಲ್ಲಿ ಚಲ್ಲಾಟ್ವೇನ್ಲೆ? ಮನ್ಗೆ ಕಾರ್ಹುಣ್ಮಗೆ ಕರ್ಹೇರ್ಹುದ ಯೆತ್ತದು! ಯೇಳಳ್ಳಿಯಲ್ಲೀ ಅಣ್ಣ ಬಸ್ವಣ್ಣ, ಕ್ರಾಂತಿಕಾರಿಯೆಂದೇ ಖ್ಯಾತಿ ಪಡೆದು, ಮಹಾನ್… ಶಕ್ತಿಮಾನ್… ಯೆಂದೇ ಸಿದ್ಧಿ… ಪ್ರಸಿದ್ಧಿ! ಐವತ್ತು ಚೀಲ ರಾಗಿ, ಐವತ್ತು ಜನ್ರಾನ ಯಳ್ದೆ, ಪಡ್ದೆ ಯೆತ್ತಾದು! ಟ್ರ್ಯಾಕ್ಟ್ರಿನ ವಂದೇ ವುಸ್ರಿಗೆ ಯೆಳ್ದು ಬೆಳ್ಳಿಕಪ್ಪು, ಬೆಳ್ಳಿ ರೂಪಾಳ್ಗುಳ್ನಾ ಬವುಮಾನ್ವಾಗಿ ಗೆದ್ದು, ವೂರ್ತುಂಬಾ ಮೆರ್ವಣ್ಗೆ ಮಾಡ್ಸಿಗಂಡ, ಕ್ರಾಂತಿಕಾರಿ ನಮ್ಮಣ್ಣ ಬಸ್ವಣ್ಣ ವುರೂಫ್… ಕೋಟೆ ಜನ್ರಾ ಸಾಟಿಯಿಲ್ದ, ಮೇಟಿ ಜನ್ರಾ ಯೆತ್ತದು! ಯೀಗದು, ಯಿದ್ದಕ್ಕಿದ್ದಂಗೇ ಸಾಯ್ದೆಂದ್ರೇನು??’ ಸಿವಪ್ಪ ಪಿತ್ಪೂತ್ರು… ವುಡ್ಕತೊಡ್ದಿದ.
‘ನೀ ಮಸ್ರಾಲ್ಲಿ ಕಲ್ಲು ವುಡ್ಕಿ, ಹಾರಾಡೋ ಕಾಗೆ ಕೂಡ, ಹಾದ್ರ ಕಟ್ಟೋನು! ಅವ್ನ ಪಾತಣ್ಣ ಬಾಯ್ತಪ್ಪಿ… ತಾತಾಽ… ನಾಳೆ ಸಳ್ಳೆಪಲ್ಲೆ, ಅಕ್ಕಿಬಾನ ವುಂಬ್ತೀಯಿ! ಯೀವತ್ತು ಐದಾರು ನೋಣ್ಗಳು ಬಾಯ್ಬಾಯ್ಗೆ ಬಡ್ದಿವೆ! ಸಜ್ಜಿ ಮುದ್ದಿ, ಮಜ್ಜಿಗೆ, ವುಣ್ಸೆಕಾಯಿ ಯಿಂಡ್ನಿ ಕಲ್ಸುಗುಂಡು ವುಂಬಾಗ, ಯಲ್ಡು ನೊಣ್ಗುಳು ವುಂಬಾಗ್ಲುಲಾಕೆ ಬಿದ್ದವಂತೆ! ನೀ ಮುಂದಾರ್ಗುಟ್ಟಿ ಮಾತಾಡಿದೀಗ ನಿಜ್ವಾಯ್ತೆಂದ್ರೆ ಅವ್ನೆಲ್ಲಿಗ್ಹೋಗಿ ಸಾಯ್ಬೇಕು?’ ಸೀತಯ್ಯ ತನ್ಮುಗ್ನ ಪರ್ವಾಗಿ, ನಿಂತು ಛತ್ರಿ ಯಿಡ್ದಿ.
‘ಯೇ ನಾನೇನು ಪುಟ್ಟರ್ತಿ ಸಾಯಿಬಾಬಾನೇ? ದೇವ್ರೇ? ನನ್ಗೇನನ್ನಾ ಮೈಮೇಲೆ ಅಮ್ಮ ದುರುಗಮ್ಮ ಬರ್ತಾಳಾ? ನೀವೆಲ್ಲ ಯಿಂಗೆ, ನನ್ನ ಕಣ್ಣು ಕಿಸ್ರಾಗಿ, ನೋಡ್ದಿರೆ… ನಾನೆಲ್ಲಿ ಸಾಯ್ಲಿ? ಯೇನೋ ದೊಡ್ಡಾಸ್ಥಿಕ್ಗೆ ನಾನೇನೋ… ಅವ್ಳಾಕ್ಕು ಅಂಗೆಂದ್ರೆ… ನನ್ನೀಗ ಹತ್ತಿ ಅಲೇಲೇ ಅನ್ತೀರಿ! ಕಾಗೆ ಕುಂದ್ರಾಕು, ಟೊಂಗೆ ಮುರ್ಯಾಕು ಸರಿವೋಗಿದೆಯಶ್ಟೆ…’ ಪಾತಣ್ಣ, ಬಾಯ್ನಿ ’ತ್ವದ್ಲೂಬದ್ಲೂ’ ಮಾಡ್ತೋಡ್ಗಿದ.
‘ಕುರ್ಡಿಕ್ದಿ ಕುರ್ಗೋಡ್ಗೆ ಬೆಂಕಿ ಅಂಬಂಗೆ, ನೀವೇನೋ… ವೂರ್ಕೇರ್ಗೆ ಕಡ್ಡಿಗೀರ್ಡಿಂಗ್ದೀರಿ! ನಾನಾಗ್ಲಿ ನನ್ಮಾಕ್ಳಿಬ್ರು ಯೇನ್ಮಾಡಿಲ್ಪಾ! ಅವ್ರು ಮನ್ಯಾಗೆ ಆಳ್ಮೂಕ್ಳಾಗಿ ನಾವೆಲ್ಲ ಮೂಗ್ಬಾಯಿ ಮುಚ್ಗಂಡು ದುಡ್ತೀವಶ್ಟೆ…’ ಸೀತಯ್ಯ, ವುರಿಯೋ ಬೆಂಕ್ನಿ ಮೆಲ್ಗೆ ತಣ್ಗೆ ಮಾಡ್ದಿ.
‘ಕುಂಬ್ಬಕಾಯಿ ಕಳ್ನೆಂದ್ರೆ, ಯೆಗ್ಲು ಮುಟ್ಗೊಂಡ್ನೆಂತೆ! ಯೀಗ ವೂರ್ಗಾ ದನ್ಸಾತ್ತಿದ್ಕೂ, ಯಿವ್ರು ತಾರ್ಹಾಡ್ತಿರ್ದೋಕೂ…, ಕೈಕಾಲು ಮೂಡ್ತಿರ್ವೂ ಪರ್ನೇ, ನನ್ಗೆ ಅನ್ಮೂನ್ವಾಗ್ತಿದೆ’ ದೊಡ್ಡೆಲ್ಲೆಪ್ಪ ತನ್ನ ಕಣ್ಗುಡ್ಡೆಗಳೆರ್ಡನ ಮೇಲ್ಕೆಳ್ಗೆ ತಿರ್ವಿ, ತನ್ನಾರ್ನೇ ಯಿಂದ್ರಿಯ ಕೆಲ್ಸ… ಮಾಡ್ತೆಂಬ್ದುನಾ ತೋರಿಸಲು, ಸಿವಪ್ಪನ್ಮುಂದೆ ಗುಸ್ಗೂಸೂ… ಮಾಡ್ದಿ.
‘ಯಿ ವೂರು ವೋಗಂಬ್ತೆ! ಸುಡ್ಗಾಡೂ ಬಾ ಅಂಬ್ತೆ ತಮ್ಮಾ! ವಬ್ರಿಗ್ದೆಗ್ಹೊದ್ದಂಗ್ದೀನಿ! ಥೂ! ಯೀ ಜನ್ರಾ ತಂತ್ರ, ಕುತಂತ್ರ, ವಳ್ಮಾರ್ಮಾ ದಿಕ್ತಾಪ್ಸಿತ್ತಿವೆ. ಯೀ ಜನ್ರೇ… ತಾಯ್ಗಿಂಡ್ರು! ಯೆಂಡ್ತಿ, ಮಕ್ಳುನ ತಲ್ಹೆಯಿಡ್ದು ತಲ್ವೆಡಿದ್ದು… ಬದುಕ್ತಾರೆ. ಕಾಲ ಮಾರಿಂದಿ. ತಬ್ಬಿಬ್ಬಿನ ಕಾಲ. ಯಿವ್ರ್ನಾ… ತೂಕುಕ್ಕಾಕ್ಹಾದೂ ಬಲು ಕಶ್ಟ. ಕಪ್ಪಿಗಳಂತ್ವಿರು, ಕೋತ್ಗಿಳು. ಕಂಕ್ಳಾಗೆ ದೊಣ್ಣೆ, ಬಾಯಲ್ಲಿ ಬೆಣ್ಣೆ! ಯೆದೆಯಲ್ಲಿ ವಿಶ, ಬಾಯಲ್ಲಿ ಸಿಯಿ! ವರ್ಗೆ ಕಾವಿ, ವಳ್ಗೆ ಕಾಮಿ! ಯೇನೋನೋ… ಕರ್ಮಾತ್ತು, ಮಸ್ಲಾತ್ತು… ಮಾಡೋ ಯಿಂತಾ ಸೂಳೇ ಮಕ್ಳಾನ ಕಾಲ್ಮರಿಲಿ ಕುಲ್ಗೆಡ್ಸಿ, ತಲ್ಬೊಳ್ಸಿ… ಕತ್ತ್ಮೇಲೆ… ಮೆರ್ವಣ್ಗೆ ಮಾಡ್ಬೇಕ್ಪಾ…’ ಸಿವಪ್ಪ ವಯಸ್ಗೆ ತಕ್ನಾಗಿ, ಮಾತ್ಡಾತೊಡ್ಗಿದ.
ಯಿತ್ತಾ ಕೇರಿ ಮಣೆಗಾರರು… ಹಗ್ಗ, ಬಡ್ಗೆ, ರಗ್ಗು, ಗೋಣಿಚೀಲ್ಗಳ್ನಾ… ತಲ್ಮೆಟ್ಟೆ, ಬಂಬು, ಗಳ್ಗಳನ್ನು ಯೆಗ್ಲ್ಮೇಲ್ಹೊತ್ತು, ಸಿಪಾಯ್ಗಿಳಂಗೇ… ವೂರ್ಕಾಡ್ಗೆ ವಂಟ್ರು. ಯಿವ್ರಿಂಗೆ ವಂಟ್ರೆಂದ್ರೆ…, ವೂರ್ಗಾ ಯಾರ್ದೋ ಮನ್ಯಾಗೆ, ದನ್ಸಾತ್ತಾಂತ್ನೇ…! ಯಿಡೀ ವೂರ್ಕೇರ್ಗೆ ಸುದ್ದಿ ಕಾಡ್ಡಿಚ್ನಂತೇ ಬಲ್ಬೇಗ ಹಬ್ಬಿತು. ಜನ್ರಿಗೆ ಯಿಶ್ಟು ಸಿಕ್ರೆ ಸಾಕು… ವೂರ್ಧಿಣ್ಗೆಳ ಮನ್ಮುಂದೆ, ಯಲ್ಲಾ ವಗ್ತಾನ್ಬಿಟ್ಟು ಜಂಗ್ಳುದನ್ಗಳಂಗೆ, ಸೇರಿದ್ರು.
* * *
ಧಣ್ಗಿಳ ಮನೆಯಲ್ಲಿ, ಅಣ್ಣ ಬಸ್ವಣ್ಣನ್ಗೆ… ಮನ್ಮೆಂದಿಯೆಲ್ಲ ಪೂಜ್ಸೆಲ್ಸಿ, ಜೋಡ್ಗಾಯಿ ವಡ್ದು, ವೂದ್ಕಡ್ಡಿ ಬೆಳ್ಗಿ, ಕುಂಕ್ಮು, ಯೀಭತ್ತಿ ಯಿಟ್ಟು, ವೂವ್ನಿ ಹಾರ್ಹಾಕಿ, ಕಣ್ಣಿರ್ನಿ ಅಭಿಶೇಕ ಮಡ್ದಾನಾ… ನೋಡ್ತಾ ನೋಡ್ತಾ… ಮಣೆಗಾರರ್ಗೆ ಬಾಯ್ಬಾಯಿ… ಗಂಟ್ಲೇ ಗಂಟ್ಲೂ… ವಣ್ಗೆ ಬಂತು. ಕಾಲ್ಗುಳೆಂಬಾ ಕಾಲ್ಗುಳೆಲ್ಲ… ‘ಜೋಮು’ ಬಂದ್ವು.
‘ಅಯ್ಯೋ ಯಿನ್ಯಾಕೆ ತಡ್ಮಾಡ್ತಾರೋ… ಯೀ ಅಣ್ಣ ಬಸ್ವಣ್ಣನಾ… ಯಾವ್ಗಾ ವತ್ತೆವೋ…? ಯಾವ್ಗ ಕ್ವಯ್ದೆವೋ…? ಯಾವ್ಗ ತಿಂದು ನೀರ್ಕುಡ್ದಿವೋ…?’ ಅಂತಾ ಬಜ್ಜಿಯ, ಸೀತಯ್ಯ, ಪಾತಣ್ಣ, ಸೀನಪ್ಪ, ಕ್ಯಾತಣ್ಣ, ಮಲ್ಲಪ್ಪ… ಬಾಯ್ಬಾಯಿ ತಡ್ಪಿ, ಜ್ವಲ್ಜೊಲ್ಲು ಸುರ್ಸಿ, ನಾಲ್ಗೆ ಸವ್ರಿ, ಗುಟ್ಕು ನೀರ್ಕುಡ್ದು ಕಣ್ಕಾಲ್ಬಿಡ್ತೊಗ್ದಿರಲ್ದೆ…
‘ದಣ್ಗಿಳೇ… ಬಾಳಾ ಆನ್ಯಾಯವಾತು! ಬಿಳೆತ್ತು ಮಾಲಿಂಗ. ಅದ್ರಂದಾ… ಚಂದಾ… ಭೀಮಬಲ, ಯದ್ರು ಸುಳಿ, ಕಳೇನೇ, ಅದ್ಕೆ ಮೂಳ್ವೂತು. ನಮ್ಮಣ್ಣ ಬಸ್ವಣ್ಣನ್ಗೆ ಮಾಯ್ದಾ ಮಗ್ರಾ ಬಂತು! ಕಣ್ಸಾರ್ವಾತು! ನಮ್ಗೇಽ… ಯಿಶ್ಟು ದುಕ್ಕವೆಂದ್ರೆ… ನಿಮ್ಗೆ ಕೇಳ್ಬೇಕೆ ಬುದ್ಧೀ? ನೀವು ಅಪ್ಣೆ ಕ್ವಡ್ರೀ ಗಂಚಿಗಾರ, ಗಂಚ್ಗಿತ್ತಿ… ಬಾಳತ್ರೆ ನಮ್ಮಣ್ಣ ಬಸ್ವಣ್ಣನ್ಗೆ… ಸದ್ಗತ್ಸಿಗಲ್ಲ. ಮೋಕ್ಷ ಲಭಿಸಲ್ಲ… ಆತ್ಮ, ಜೀವಾತ್ಮ, ಪರ್ಮಾತ್ಮಾ, ಮುನಿತಾನೆ…’ ಯೆಂದು, ಕೇರಿ ಮುಖಂಡ ಬಜ್ಜಿಯ, ಸೀತಯ್ಯ, ಸೀನಪ್ಪ, ಕ್ಯಾತಣ್ಣಾ, ಮಲ್ಲಪ್ಪ… ಧಣ್ಗೆಳ್ಮುಂದೆ ಕೈ ಕೈ ಮುಗ್ದು, ಖಾಲಿ ಬುಡ್ಬೂಡ್ಕೆನಾ ಅಲ್ಲಾಡ್ಸಿ, ಕಂಬಿಲ್ದ ರೈಲು ಬಿಟ್ರು. ಕಣ್ಣು, ಮೂಗೂ ವರ್ಸಿಗಂಡ್ರು, ಬಾಯ್ಗೆ ಟುವ್ವಾಲು ಅಡ್ಟಿಗೆಂಡ್ರು! ಅತ್ತಂತೆ, ಸತ್ತಂತೇ ನಾಟ್ಕಾವಾಡ್ದಿರು.
‘ಸತ್ತ ದನಾ ತಿನ್ನಾರ್ಯಾವ್ಗಾ… ವಗ್ಳುಭಟ್ರಾದ್ರಿಲ್ರೇ? ಪ್ರಾಸ್ಬಾದ್ಧವಾಗಿ, ಹಾಡ್ವಿಗ್ಳುವ ಕವಿಚಕ್ರವರ್ತಿಗಳ್ಯಾವ್ಗಾದ್ರಿಲ್ರೇ? ನಪ್ನಾ, ತಲೆನ್ಹಾಡಾ, ತಡ್ಕಾಳ್ರಾಲ್ರೆ… ಯಾಕಿಶ್ಟು ಅವ್ಸಾರಾಲ್ರೇ? ಲಕ್ಷಾ ಕ್ವಟ್ರು ಸಿಗ್ಲಾರ್ದಾ ಅಣ್ಣ ಬಸ್ವಣನವ್ರು! ಮನ್ಮೆಗ್ನೆಂದು, ವಿಶ್ವಜ್ಯೋತೆಂದು ಊರುಕೇರಿಯ ಕಿರಣವೆಂದೂ… ತಿಳ್ದಿದ್ದೇ… ಯೀಗಾ ವಮ್ಮಿದೊಮ್ಮೆಲೆ ಸತ್ತಿದ್ದು… ಯದ್ವೆಡ್ಕಂಡಾಂಗಿರ್ವೂಗಾ ನಿಮ್ದೇನ್ರಾಲ್ರೇ? ನಾವು ಕರ್ತೆನ್ಕಾ… ಧಂದಾಕ್ಲಿವರ್ಗೆ ಬಿದ್ದಿರ್ರೀ… ಯಿದ್ನಾ ಕೊಯ್ಯತನ್ಕಾ ನಾನಿರ್ತೇನೆ! ನನೆದ್ರುರ್ಗೆ ಯಲ್ಲಾ ಆಗ್ಬೇಕು! ಆಽ ಬರ್ರೀ ಯೀಗಾ ಅಣ್ಣ ಬಸ್ವಣ್ಣನಾ… ಯೆತ್ರಿ…’ ಯಿಂದ್ರಸೇನ್ರೆಡ್ಡಿ, ಬಾಳಾ ಬಿಕ್ಟೆಲೇ, ಮಣೆಗಾರರ್ಗೆ… ಕವಣೆಕಲ್ಲಿಲಿ… ವಗ್ದೆಂಗೆ ಮಾತ್ಗುಳ್ನ ವಗ್ದೆ.
ಕಲ್ತು ಜನ್ರ್ಮುಂದೆ, ಮಕುಕೆ ಮಂಗ್ಳಾರ್ತಿ ಯೆತ್ತಿದ್ದರಿಂದ, ಮಣೆಗಾರರೆಲ್ಲ ಶಾನೇ ಅವಮಾನ್ತಿರಾದ್ರು. ಆ ಕ್ಷಣ ಯಲ್ರಿಗೆ ತಣ್ಣಗಾಯಿತು! ಕೆಂಜ್ಗೆದ್ಗೂಡ್ಕೆ ಕೈಯಿಕ್ದಿಂಗಾತು. ಮದ್ಲೆ ಆ ಪಾಟಿ ಮನುಶ್ಯ! ಯಿನ್ನು ಯೀಗ ಅಣ್ಣ ಬಸವಣ್ಣ… ಸತ್ಮೇಲೆ ಕೇಳ್ಬೇಕೆ?? ಗ್ವಾಡ್ಗೆಳ್ದು ತೆಗ್ದು ಮುಗ್ಳಾಕೆ ಬಂಡ್ಕೊಂಡಂಗಾತು. ನಿಂತೂ… ನಿಂತೂ… ಕೈ, ಕಾಲು, ಪದ್ಹೆಳ್ತೊಡ್ಗಿದವು. ದೊಡ್ವಾರ್ಸವ್ಸಾ ದವ್ಡಿಗೇ ಮೂಲ! ಯಿದೊಳ್ಳೆ ಗ್ರಚಾರ್ವೆಂದು… ಮುಳ್ಮೇಲ್ತೆಪಸ್ಸು ಮಾಡ್ತಾ… ಸಣ್ಗೆ ಬೆವ್ರತೊಡ್ಗಿದ್ರು. ’ಆಹಾಽ…’ ಅಂತಾಽ ಗುಟ್ಕು ನೀರ್ಕುಡಿತ್ತಿದ್ದವ್ರೆಲ್ಲ… ಯೀಗ ವುಳ್ಳು ನುಂಗಿ, ಜೀವವುಳ್ಸಿಕೊಳ್ಳಲು, ಕೇರಿ ಮುಖಂಡ್ರು, ಸೀತಯ್ಯನ್ಮಕ ನೋಡ್ತಾ… ವುಳ್ದಿ ಮಣೆಗಾರರೆಲ್ಲ ನಿಂತ್ರು…
ಶಾನೆ ಧೈರ್ಯ ಮಾಡಿ, ಸೀತಯ್ಯ, ಸೀತಯ್ಯನ ಮಕ್ಳಿಬ್ರು ಸೇರಿ, ಯಿಂದ್ರಸೇನ್ರೆಡ್ಡಿ ಮುಂದೆ ಯಿಲಿಯಂಗೆ ನಿಂತು… ‘ನಿಮ್ಮ ಮನ್ಯಗ್ಳು ಆಳ್ಮಾಗ, ನಂಬ್ಕಿಸ್ಥ ಸಂಬ್ಳದಾಳು, ನಾನಿರ್ವೂಗ ಅಣ್ಣ ಬಸ್ವಣ್ಣನ… ಕ್ವಯ್ಯತಾಕೆ, ಅದೂ ಸುಡ್ಗೂಡು ಯೇಲ್ಹೋಗುಂಡೆತಾಕೆ, ವೂರ್ಧುಣೀ ನೀವ್ಯಾಕೆ ಬರ್ತಿರ್ಹೇಳಿ?! ನಾವಿಲ್ವೇನು…? ಯೇನ್ದಿರೂ ಕಿವ್ಕಿಚ್ತೀನಲ್ಲ, ಯಾರು ಕಿಮ್ಕೆಂದ್ರೂ ತಂದು ವೂದ್ತೀನಲ್ಲ! ಯಿದ್ಕೆ ನೀವೇ ಬರ್ಬೇಕೇನು? ಜನ್ರಾ ಬದ್ಲು ಯೀ ದನ ಬಲಿಯಾದಂಗಿದೆ… ಧಣೀ…!! ನಿಮ್ಗಾಂಡಾಂತ್ರ, ಶನಿಕಾಟ ಬಿಟ್ತೇನ್ರಿ… ನೀವು ಮನ್ಸು ಮಾಡಿದ್ರೆ… ನಾಳ್ನೇ ಯಿಂತಾ ಹತ್ತು ಯೆತ್ತು ತಂದಿಲ್ಲಿ ಕಟ್ತೀರಿ…’ ಯೆಂದು, ರಬ್ರು ಪೀಪ್ಗೆ ಗಾಳಿ ತುಂಬಿ, ಆಕಾಶಕ್ಕೆ ಬಿಟ್ರು! ವುಳ್ದಿವ್ರು ಕೋಲೇ ಬಸ್ವನಂತಾದ್ರು. ಸಧ್ಯ, ವುಲಿಬಾಯಿಂದ, ತಪ್ಸಿಗಂಡ್ರೆ ಸಾಕೆಂದು ಕೈಕಟ್ಟಿ, ರೆಡ್ಡಿ ಮಾತ್ಗೆ, ಕಿವಿ ತೆರ್ಕಂಡು ಬಕ್ಪಾಕ್ಷಿಯಂಗೇ ವಂಟಿಕಾಲೀಲಿ… ನಿಂತ್ರು.
‘ಯೇ ಬನ್ರೆಲೇ ಧಂದಕ್ಲಿಯಿಂದ ಮೆಲ್ಗೆ ನಮ್ಬಸ್ವನ ವುಶಾರಾಗಿ ವತ್ತು ನಡ್ಬಿರ್ರೀ… ಧರ್ಧರಾ… ಅಂಗ್ಳಕೆ ಯಂಗ್ಬೆಕಾದ್ರೆ ಯೆಳ್ಬೆಡ್ರಿ…’ ಯಿಂದ್ರಸೇನ್ರೆಡ್ಡಿ, ಸಂಣ್ಣವುಡ್ರುಂಗೇ ಅಳುತ್ಲೇ… ಮಣಿಗಾರರ್ಗೆ ಮತ್ತೂ ವಿನಂತ್ಸಿದ.
ಯಿಶ್ಟೊತ್ತು ಜಂಗ್ಳುದನ್ಗುಳ್ನಿಂತಂಗೆ, ನಿಂತಿದ್ದಪ್ರಾ ಕಣ್ಣಾಲ್ಗಿಳೂ… ಯೀಗ, ಕೋಡಿ ಬಿದ್ವು ವೂರ್ದನ್ಗಳ ಪುಣ್ಯದ ಫಲವಿಂದು, ಪುರಜನ್ರ ಕಣ್ಣ ಹನ್ಗಿಳ ರೂಪದಿ, ನೆಲ ತೊಳಿಯತೊಡಗ್ದಿವು!
ಕೇರಿಯ ಮಣೆಗಾರರು… ಬುದ್ಗುನೆ ಧಂದಕ್ಲಿಗೆ ನುಗ್ದಿರು. ಆರಡಿ ವುದ್ನೇ ಬಡ್ಗೆ ಯೆತ್ನಿನ ಯೆದ್ಬಿಡ್ಗೆಯಾಗಿ, ನಾಲ್ಕು ಕಾಲ್ಗುಳನ್ನು, ವಂದೇ ಹಗ್ಕೆ ಸೇರ್ಸಿ ಬಿಗಿಯಾಗಿ ಮಾದ್ಗಿಂಟು ಕಟ್ಟಿ, ಅದ್ಕೆ ಯರ್ಡು ಸರ್ಬಾಡ್ಗೆಗಳನ್ನು ಆಕಿ, ಯಿಂಭಾರ್ದಲಿ ನಾಲ್ಕು ಮಂದಿ, ಮುಂಭಾರ್ದಲಿ ನಾಲ್ಕು ಮಂದಿ, ವಂದಂದೂ ಬಡ್ಗೆಗಳನ್ನು ಯಗ್ಲ್ಮೇಲೆ ಅಂತ್ರಿಲೇ ವತ್ತು, ಕಿತ್ಲಾರಾದ ಕಾಲಲಿ ಯೆಜ್ಜೆ ಕಿತ್ರು! ಐರ್ವಾತ, ಕಾಮಧೇನ್ವಿಗೂ ವಂದ್ಕೈ ಮಿಗಿಲ್ದಾ ನಮ್ಮಣ್ಣ ಬಸ್ವಣ್ಣನ… ಭಾರ್ಕೆ, ಮಣೆಗಾರರು ಅಷ್ಟದಿಕ್ಪಾಲ್ಕರಂತೆ ತತ್ತರ್ಸಿ ಅರ್ಕು ತುಂಡೂ ಪಂಚೆಯಲಿ, ಬುತ್ತಿ ಕಟ್ಗಿಂಡ್ರು ಅಬ್ಬಾ! ನೆಲ್ನೆಲಾ ತರ್ತಾರಾಗುಟ್ಟುವುದೇನು? ನೆಲ್ಬಾಯ್ಬಿಟ್ಟಿತು! ಮಣೆಗಾರರ ಯೇಳೇಳು ಜಲ್ಮದ, ಪಾಪ್ದ ಕರ್ಮ, ಬೆರ್ವಾಗಿ ಜಟ್ಜಟಾ… ನೆಲಕ್ಳಿತು! ಕರ್ಳುಕಿತ್ಬಂದುವು. ನರ್ಕವೆಂದ್ರೆ… ಯಿದೇನೋ… ಪಾಪ್ಗಿಳ್ಗೆ ಶಿಕ್ಷೆ, ಯೀ ರೀತಿ ಕಾದಿರ್ವುದೋ…?! ಮಣೆಗಾರರು ಹಲ್ಲಾಲ್ಲು ತೆರ್ದೆರು. ಕೈಕಾಲು ಸೋತು, ಯೆಗ್ಲು ನೋವು ಬಂದು, ಬಾಯಿ ವಣ್ಗೆ, ಬೆನ್ಬಾಗಿ, ಫರ್ಲಾಂಗು ದೂರ್ಕೆ ಅಣ್ಣ ಬಸ್ವಣ್ಣನೊಂದ್ಗೇ ಕುಸ್ದಿರು…
ಯಿರ್ವೆಯಂಗೇ ಆದ್ಬಿದ್ಲೀ ಮುತ್ತಿದ್ವರೂ… ‘ಕೈಕಾಲ್ಗಾ ಸಕ್ತಿಯಿಲ್ದಾರು ಮಾಡ್ದಿಂಗೇ ಮಾಡ್ತಿರಲ್ರಾಲೇ… ವಬ್ಬಬ್ರು ಕರ್ರೆಗೆ ತ್ವಲೆ ತುಂಡಾಗಿರಿ! ಸಿಗ್ದರೆ ವಬ್ಬಬ್ರು ಯಿಬ್ರಾಗ್ತೀರಿ! ಸತ್ತು ದನಾ ತಿಂದೂ… ತಿಂದೂ ಸಲ್ಗಾಗಿರಿ! ಕೇರ್ಯಾಗ್ನಿ ಯಿನ್ನಾ ೧೨ ಜನ ಮಣೆಗಾರರೂ ಯೆಲ್ಲಿ ವೋಗಿ ಸತ್ರಲೇ?? ನಲ್ಕೆ ಯೆಲ್ಲಿನೂ ಯಿಕ್ದೆ, ವಂದ್ಸೂರ್ಗೇ ಕುಂಟ್ಬೆಯ್ಲಿಗೆ ವಯ್ಯರ್ರೆಲೇ… ಯೆಂಗ್ಸ್ರೇ… ವೂರೆಲ್ಲ ವಲ್ಸು, ಮೈಲ್ಗೆ ಮಾಡ್ಬೇಡ್ರಿ… ದರಿದ್ರ ಸೂಳೇಮಕ್ಳೀ… ವಲ್ಸು ತಿನ್ನೋ… ಮಾದ್ಗಿಮುಂಡೇ ಮಕ್ಳೇ… ಬೇಗ ಕಣ್ಮೆರೆಯಾಗ್ರೀ…’ ಮಕ್ಸಿಂಡ್ರಿಸಿಗಂಡು… ರ್‍ವಾಸ್ಪಂಥದ್ಮಾತ್ಗುಳ್ನಾಡಾದು, ಸಿವಪ್ಪನ್ಗೆ ವಟ್ಯಾಗ, ಕಾರ್ಕಲ್ಸಿವಯ್ಯದಂಗಾಯಿತು! ಯೀ ಜನ್ರಿಗೆ ನಮ್ಮೇಲೆ ಕರುಣೆ, ಅಂತಃಕರುಣ, ಅಭಿಮಾನ, ಕನಿಶ್ಟಪಕ್ಷ ಸೇವೆಯಂಬಾ, ಭಾವ್ನೇ ಕೂಡಾ, ಯಾರಲ್ಲಿ ಯಿದ್ದಂತಿಲ್ಲ! ಥೂ! ಗನ್ನಾಗಾತ್ಕು ಜನ್ರು! ಆ ಕ್ಷಣ… ಸಿವಪ್ಪ ಕ್ಯಾಕ್ರಿಸಿ ವುಗ್ದಿ.
ವೂರ್ಕೇರ್ಗಿರ ಮುಂದೆ, ಮಣೆಗಾರರ ಮರ್ಯಾದೆ, ಸಕ್ತಿ, ಯುಕ್ತಿಗೆ ಕುಂದೆನ್ಸಿತು. ‘ಯಿಂದ್ಲಾವ್ರು ಮುಂದಾಗ್ರೀ! ಮುಂದ್ಲಾರು ಯಿಂದ್ಲಾ ಬಡ್ಗೆ ವೊರ್ರೀ… ಲೇ ಪಾತಣ್ಣ, ಯೆತ್ತಿನ ತಲೇನ ಸೀದಾ ನಿನ್ಹೇಗ್ಲು ಮೇಲ್ರೀಲಿ… ತಮ್ಮಾ ಸೀನಾ ಯರ್ಡುಕೈಲಿ ಯಿನ್ನಾ ಯತ್ತಿಡಿಲೇ… ವುಳ್ದಿವ್ರಿಗೇ ಭಾರ ರವ್ವಾಟು ಕಮ್ಮಿಯಾಗ್ತೆ!’ ಸಿವಪ್ಪ, ಮಣೆಗಾರರ್ಗೆ ಅಲ್ಲಲ್ಲಿ ಸಲಹೆ, ಸೂಚ್ನೆ, ವುರ್‍ಪು, ವುತ್ತೇಜ್ನ ನೀಡುತ್ತಲೇ… ಯಿಂದಿಂದೇ ಕೋಲ್ರೂತಾ… ನಡ್ದಿದ್ದ. ಯೇನೆಲ್ಲ ಕಸ್ರಾತ್ಮಾಡ್ದಿರೂ… ಸತ್ತ ಅಣ್ಣ ಬಸ್ವಣ್ಣ ಮಾತ್ರ… ಭೂಭಾರವಾಗತೊಡ್ಗಿದ್ದ. ಗೋವರ್ಧನ ಗಿರಿಗೂ ಭಾರ! ಯಿಂದ್ರಕೀಲ ಪರ್ವತಕೂ ಅಧಿಕ, ಸಂಜೀನ್ನಿ ಪರ್ವತಕೂ… ವಂದ್ಕೈ ತೂಕ್ವೆನ್ಸಿ… ಮಣೆಗಾರರು ಮತ್ತೇ ತಿಣ್ಕಿ, ತತ್ತರ್ಸಿ ಕುಸ್ದಿರು!! ಜನ್ರು ಗೊಳ್ಳೆಂದ್ರು, ಆ ಕ್ಷಣ ರಾವಣಸುರರಾದ್ರು ವಮ್ಮೇಲೇ ಅಣ್ಣ ಬಸ್ವಣ್ಣನಾ… ಅಂತ್ರಿಲೇ ವತ್ತರು.
ಯೀ ಕೇರಿಯ ೧೨ ಜನ ಮಣೆಗಾರರು, ಸತ್ತ ದನಾ ವೂರ್ವೂಗೆ ಕೊಯ್ದು ಪಾಲ್ಹಾಕ್ವೂಗ, ಯೆಂಡ್ಸಾರಾಯಿ ಸೆಂಡ್ವೂಗಾ… ಸಳ್ಳೆಪಲ್ಲೆ, ಅಕ್ಕಿ ಬಾನಾ, ವುಂಬ್ವೂಗ… ತೋರ್‍ವು ವಮ್ಮತ, ವಗ್ಗಟ್ಟು, ಸಕ್ತಿ ಪ್ರದರ್ಶನ, ವುರ್ಪೂ, ವುತ್ಸಾಹ, ಉಲ್ಲಾಸ್ದಲ್ಲಿ… ರವ್ವಾಟೇ ರವ್ವಾಟ್ನ… ದಿನ ನಿತ್ಯದ, ಯೆಲ್ಲ ಕೆಲ್ಸ ಕಾರ್ಯಗಳಲ್ಲಿ, ಆಸಕ್ತಿ ತೋರ್ದಿರೆ… ಯೀ ನೆಲ, ಜಲೇನು? ವಿಧಾನ ಸೌಧಾ, ಪಾರ್ಲಿಮೆಂಟು ಭವ್ನಾನೇ ಯಾವತ್ತೋ… ಯೀ ದೇಶದ ಶೂದ್ರದಾಗುತ್ತಿತ್ತು!… ಯಿಂಗೆ ಸಿವಪ್ಪ, ಯೇನೇನೋ… ಯೋಚ್ಸಿತ್ತಲೇ… ಆಗ್ಲೇ ವೂರ್ದಾಟಿ, ಕೇರಿಂದ್ಲಾ… ಕುಂಟ್ಬೆಯ್ಲಿಗೆ, ಪಟ್ರು, ಕಲ್ಲು, ಜಾಲೀಮುಳ್ಳು ದಾಟಿ, ತಗ್ಗು, ದಿನ್ನೆ, ಸೀಳ್ದಾರಿಯ ಕುಟ್ರೆನ್ಹಾತ್ತಿಳಿದು, ಜಾರಿ, ಯೇರಿ, ಬುಸ್ಗರಿತಾ… ತಿಣಿಕ್ಯಾಂತಾ… ಸಳ್ಳೆಬಂಡ್ಗೆ, ಯೆತ್ತು ವತ್ತು ‘ದಪ್ಪಂತಾ’ ತಂದ್ಹಾಕಿ… ‘ಬದ್ಕಿದಿವಾ… ಬಡಜೀವಾ…’ ಅಂತಾ… ಮಣೆಗಾರರೆಲ್ಲ… ಜಾಲ್ಮಿರ್ದ ಕೆಳ್ಗೆ ‘ವುಸ್ಸಪ್ಪಾ…’ ಅಂತಾಽ ಅಡ್ಬಿದ್ರು. ಮುಂಜಾಲ್ತಿಂದಾ ಮುಟ್ಗಿ ಮುದ್ದೆ, ಕುಡ್ದಿ ಗುಟ್ಕು ನೀರು, ಗಾಳ್ಗಿಂಟಾಗಿ ವೋಗಿ, ಯೀಗೆಲ್ಲರು ಹಸ್ದಾ ತಸ್ತಾಗಿ, ಸುಸ್ತಾಗಿ, ಖಾಲಿ ಮುದ್ದೆ ಸ್ವಾರೆಯಂಗೇ ವುಳ್ಳಾಡಾತೊಡ್ಗಿದ್ರು…
ಯಿಶ್ಟೊತ್ತಿಗಾಗ್ಲೆ… ಕೇರಿಯ, ಕೊನ್ಮೆನೆಯ ಕುಂಟ ಕಲ್ಗಾ, ಕುಂಟ್ಗ್ಯಾಂತ್ಲೇ… ಯಿಲ್ಲಿ ಸಳ್ಬಂಡೆಯ ಸುತ್ಲೂ… ಅಸನ್ಮಾಡಿ, ನೀರ್ಸಿಮ್ಕಿಸಿ, ಸ್ವಾರೆ, ಗಡ್ಗೆ, ಬಾನ್ತುಂಬಾ… ಕುಂಟ್ಗೆಳ್ನೇರ್ತೊಂಬ್ಸಿ, ಬಂಡ್ನೆಲ್ಲ ತ್ವಳೆದು, ವಾರ್ಣ, ವಪ್ಪ ಮಾಡಿ. ತಡಿಹಾಸ್ದಿಂಗೆ ಮೆತ್ತೆಗೆ ಯಳಿಯ ತಂಗ್ಡಿಸಪ್ನ ಮುರ್ದು ತಂದ್ತಾಂದೂ ಹಾಸಿ, ಬೀಗ್ರಾನ ಬಿದ್ದಿರ್ರಾನ ಯದ್ರುದುಂಬ್ದಿಂಗೆ ಯೀ ಮಣೆಗಾರರ್ನೆಲ್ಲ ಸ್ವಾಗತ್ಸಿಗೊಂಡ.
‘ಥೂ… ಯಿಂತಾದ್ಕು ಲಾಯಕ್ಕು ನೀಽ…! ಹಳೇ ಸೀರೆ, ಹಳೇ ಕುಬ್ಸಾ… ಬಳೆ ವುಟ್ಗೋಲೇ… ಸರಿ ವೋಗ್ತೀಯಿ! ಯೆಶ್ಟು ವೈನಾಗಿ ಮಾಡ್ದೇನೋಡು! ಮುಗ್ಳಿಹರೆಂಗೆ ದನ್ವಾತ್ತಿದ್ರೆ ಗೊತ್ತಾಗ್ದು. ಯೆಂಗ್ಸು ಮಾಡ್ದಿಂಗೆ ಯಂಗೆ ಮಾಡಿಯಿಲೇ…’ ಕಲ್ಗಾನ ಸೀತಯ್ಯ ನಗ್ಸಾಟ್ಗೆ ಮಾಡಲು ಮುಂದಾದ.
‘ಆವ್ನು ನಮ್ಮ ಮಣೆಗಾರ! ಪಾಲ್ದೂರ! ಯಿಂಗೆ ದನಾ ವೋರ್ವಾಗ ಹತ್ತು ವರ್ಸುದ ಕೆಳ್ಗೆ ದನ್ದ ಕೆಳ್ಗೆ ಕಾಲ್ಸಿಕ್ಕಿ ಮುರ್ದು ಕಾಲ್ಕುಳ್ಕಂಡ! ಪಾಪಾಽ… ಆವತ್ಲಿಂದಾ ದನಾ ವೋರ್ದಾನ ಕೈ ಬಿಟ್ಟು, ಯೀ ಕೆಲ್ಸನ ಅಚ್ಕಾಟ್ಟಾಗಿ ಮಾಡ್ಕಿಂಡು ವಂಟಾನೆ. ಯೀ ಕೆಲ್ಸ ಮಾಡ್ಕೊಬ್ರು ಯಂಗಿದ್ರು ಬೇಕಲ್ಲಾ… ವಂದ್ಸಮಸ್ಯೆ ಬಂದ್ರೆ… ಯಿನ್ನೊಂದ್ಸಮಸ್ಯೆ ಬಗೆಹರಿತ್ತೆ!’ ಸಿವಪ್ಪ. ಕಲ್ಗಾನ ಪರ ನಿಂತು ಮಾತಾಡ್ದಿ.
‘ಯೀ ಕಲ್ಲಣ್ಣನ ಯಿಂದೆ, ಯಿಂತಾ… ಕರುಣಾಜನಕವಾದ ಕತೆ, ವ್ಯಥೆ, ಯಿದೆಯೆಂದೂ ನನ್ಗೆ ಗೊತ್ತಿರಲಿಲ್ಲ’ ಪಾತಣ್ಣ, ಕೋಲ್ನಾಕ ಕೋಲ್ಹಾಕ್ದಿ.
‘ಪ್ರತಿಯೊಬ್ಬರ ಜೀವ್ನದಿಂದೆ ಜೀವನಾನುಭ್ದ ಕಥೇ-ವ್ಯಥೇಯಿರುತ್ತೆ. ಅದರಿಂದೇನು, ಲಾಭ… ಪ್ರಯೋಜ್ನವೆಂದ್ರೆ… ಅಶ್ಟೆ! ಅವ್ರಾ ಅನುಭವ ನಮ್ಗೆ ಶ್ರೀರಕ್ಷೆ… ಅಮೃತ ವರ್ದಾನವಾಗುವುದಾದರೆ… ಜೀವ್ನ, ಸಾರ್ಥಕ… ಆದ್ರೆ ಅನ್ಯರ ಜೀವ್ನಗಾಥೆ ಬಗ್ಗೆ ಅದೆಶ್ಚು ಜನ್ರು ಚಿಂತ್ಸಿಯಾರು?’ ಸಿವಪ್ಪ ವೇದಾಂತಿಯಂತೆ ಮಾತ್ಗುಳ್ನ ಹರ್ಬಿಟ್ಟ.
‘ಯಿದು ಅರ್ಥವಾಗ್ದ ಕಥೆ. ನನ್ನ ಕಣ್ಣ ಮುಂದ್ನಿ ಕುಲ್ಕಾಸ್ಬು… ಯಕ್ಕುಟ್ಟಿ ವೋಗಿ, ಮಣೆಗಾರರ ಶಕ್ತಿ ಕೇಂದ್ರವೆನ್ಸಿದ, ಯೀ ಸಳ್ಬೆಂಡೆ, ಹಾಳ್ಬಿದ್ದ ಹಂಪಿ, ಸುಡ್ಗಾಡು ಕೊಂಪಿಯಾಗಿರುವುದಕ್ಕೆ ಮದ್ಲು ಚಿಂತ್ಸಿರಿ. ಯೀಗೀಗಾ ತಿಂಗ್ಳಾದ್ರು, ವಂದು ದಾನಾ ಸಾಯ್ವಲ್ಲುವು! ನಮ್ಮ ನೀಸ್ಕಳ್ದಿಂಗೇ? ವಟ್ಟೆಪಾಡೆಂಗೆ? ಖರ್ಚುವೆಚ್ಚ, ತ್ವಗ್ಲುಗಳಿಲ್ದೆ ಯೆಂಗೇ ಜೀವ್ನ?? ಮದ್ಲು ವೂರ್ಕೇರ್ತುಂಬಾ, ದನ್ಕಾರ್ಗುಳ್ನ ಯಲ್ರು ಸಾಕ್ತಿದ್ರು ಯೇನಾನ್ನ ರ್‍ವಾಗರುಜ್ನಿಗ್ಳು ಬಂದು ದಿನಾ ವಂದಲ್ಲೊಂದು ಸಾಯಾವು!! ಯೀಗ ಸಾಕಾರು ಕಮ್ಮಿ. ಸಾಯಾವು ಯಿಲ್ವೆಯಿಲ್ಲಾ! ಯಿಂಗ್ಯಾದ್ರೆ… ನಮ್ಗತಿ ಯೆಂಗೇ??’ ಸೀತಯ್ಯ… ವಟ್ಗೆಳ ಸಂಗ್ಟಾನ, ಕೇರ್ಗಿರ್ಮುಂದಿಟ್ಟ.
‘ಗುಡ್ಗಾಳು ದ್ಯಾವ್ರೇ, ದವ್ನ ತಿನ್ತಿದ್ರೆ… ನಿನ್ಗೆ ತಿಂಬಾಕೆ, ದನವೆಲ್ಲಿ ಸಿಕ್ಕೀತು? ಯೇ ಯೀ ಕಾಲ್ಕೆ ಮುಗ್ಯೋ ಪರಿಯಲ್ಲ ಯಿದು!! ಯತ್ಲಾಗ ವತ್ತೋಗುತ್ಲೇ? ಯಲ್ರು ಯದ್ಬುರ್ರೀ ಮನ್ಗೋಗಿ ಪುಟ್ಟಿ, ತಟ್ಟಿ, ಚಾಕು, ಚೂರಿ, ಕುಡ್ಗೋಲು, ಕ್ವಡ್ಲಿ, ಯಿಳ್ಗೆಮಣೆ ವತ್ತು ಬರಾನಾ… ಬರ್ರನೇ ಬರ್ರೀ…’ ಯೆಂದು ಸಿವಪ್ಪ ಹಂದ್ಗಿಳು ಕ್ವಚ್ಛೆಗೆ ಬಿದ್ದು, ವದ್ದಾಡಂಗೇ ವುಳ್ಳಾಡ್ತಿದ್ದವ್ರನಾ… ಯೇತ್ಗಂಬಂಗೇ ಗದ್ರಿಕ್ಯಾಂತ, ಮಲ್ಲಪ್ಪ ಕೇರ್ಕಿಡ್ಗೆ ರವ್ದೆ ವಂಟ್ಹಂಗೆ ವಂಟಿದ್ದು ಕಂಡು, ವುಳ್ದಿವ್ರು ಯೆದ್ದೆವೋ ಬಿದ್ವೋ ಅಂತಾ ಅವ್ನ ಕಾಲ್ತುಳಿದ್ರು…
ಸೀತಯ್ಯ ತನ್ಮನೆಯ ಸಪ್ರದಾಕೆ, ಕಾಲಿಟ್ದೇ ತಡಾ… ಪಡ್ಗುದಾಗಿನ ನೀರ್ತಾಗಂಡು ಗಟ್ಗಾಟ್ನೇ ಸೆಂಡ್ದಿ, ತತ್ರಾಣಿ ತುಂಬಾ ನೀರ್ತುಂಬ್ಕಿಂಡ. ಪುಟ್ಟಿ… ತಟ್ಟಿನಾ… ವಂದ್ರಾಕ್ವಂದ್ಕಾಡು, ಅದ್ರಾಕೆ ಕ್ವಡ್ಲಿ, ಕುಡ್ಗೋಲು, ಕತ್ತಿ, ಚೂರಿ, ಚಾಕು, ಯೀಳ್ಗೆ ಮಣೆ… ಸಳ್ಬೆಟ್ಟೆ, ಗೋಣಿಚೀಲ ಹಾಕ್ಹೊಂಡು, ಕಂಕ್ಳಾಕೆ ಸಿಗ್ಸಿಗೊಂಡು…
‘ಯೆಣ್ಣೆ ಸಿವಣ್ಣ, ತಾತಯ್ಯ, ಮಾರೆಣ್ಣ, ಬನ್ರೆಣೆ… ಬಿಸ್ಲೇರ್‍ತು! ಲೇ ತಮ್ಮಾ ಪಾತಣ್ಣ, ಕಲ್ಗಾ, ಮಲ್ಗಾ, ಸೀನಾ, ಗಿರಿಯಾ, ಬರ್ರೋ ಬಿರ್ಯಾನಾಽ ವತ್ತೇರ್ತು!’ ಯೆಂದು, ಕೂಗ್ತಾ… ಹುಲಿನಾ ಯಿಡ್ಯಾನು ಮಾಡ್ದಿಂಗೇ ಗಲ್ಗಾಲಾ ಬಾಯ್ಬಾಯಿ ಮಾಡ್ತಾ ಬಕ್ಣದಿಂದ ಯಲ್ಡಿಕೆ, ಸುಣ್ಣ, ವೆಗ್ಸೆಪ್ಪಿನ ಯಸ್ಲು ತೆಗೆದು, ಯೆಲ್ಲ ಸೇರ್ಸಿ, ಮುಟ್ಟಿ ಮಾಡ್ಕೊಂಡು ವಂದ್ಟೆಗೆ ಬಾಯ್ಗಾಕ್ಕೊಂಡು, ಕಚ್ಪಿಚಿ ನಮ್ಲುತಾ… ಸಳ್ಬೆಂಡ್ಕೆಡ್ಗೆ ಬಿರ್ಬಿರ್ನೆ ಕಾಲೆಳಿಯತೊಡ್ಗಿದ್ನ… ವುಳ್ದಿವ್ರು ಕಿನ್ನರಿ ಜೋಗಿಂದೆ ನಡ್ದೆಂತೇ ನಡೆಯತೊಡ್ಗಿದ್ರು.
ಅಂತೂ ಯಿಂತೂ ಸಳ್ಬೆಂಡ್ಗೆ ಮುಟ್ದಿರು. ಕೋಲ್ರೂತಾ… ಹರ್ದೆ ವುಡ್ಗುನಂಗೆ, ನಡ್ದು ಸುಸ್ತಾಗಿದ್ದ ಸಿವಪ್ಪ…
‘ಯಿಶ್ಚು ವೇಳ್ಗೇ ಸರ್ಗೆ ಭಯಭಕ್ತಿಲಿ, ಯಿಸ್ಕೊಲ್ಗೋಗ್ದಿರೆ… ಭೇಶ್ ಕಲ್ತು ಶ್ರಮ್ಸಿದ್ರೆ… ನಾವೆಲ್ರು ಯೀಗ ನೌಕ್ರಿಯಲ್ಲಿದ್ದು ನಿವೃತ್ತಿ ಸಂಬ್ಳ ತಿಮ್ಮಿತ್ತಿದ್ದೀವಿ…’ ಯೆಂದು, ತನ್ನ ಬಾಲ್ಯದ ಸವಿನೆನಪುಗಳನ್ನು ಯೆಲ್ಲರೆದ್ರುಗೆ ಮೆಲ್ಗೆ ಬಿಚ್ಚಿದ.
ಸಿವಪ್ಪನ್ಮಾತ್ಗೆ ಯಾರೂ ಸೊಪ್ಪಾಕ್ಲಿಲ್ಲ! ಯೆಲ್ರ ಗಮ್ನ, ಯೆತ್ನ ಕ್ವಯ್ದು, ಪಾಲು ತಿನ್ನುವುದರಲ್ಲಿದ್ದಂತೆ ಕಂಡ್ಬುಂದ್ರು. ಸಣ್ಣವರಿದ್ದಾಗ ವೋದ್ನಿ ಮೇಲೆ ಯಿಲಾಯಿಲ್ದೆ, ದನ ತಿಂಬಾದ್ರು ಮೇಲಿದ್ರಲಿಂದ್ಲೇ, ಯೀಗ್ದಿಕೆ ಸೋಪ್ತಿಯಾಗಿರ್ದೆಂದು, ಸಿವಪ್ಪ ಮತ್ತೂ ಬಾಲ್ಯದ ನೆನಪ್ಗೇ ವೋದ.
* * *
ಸೀತಯ್ಯ… ಆ ಕ್ಷಣ ಕಣ್ಣು ಮುಚ್ಚಿ, ತುಟಿ ಪಿಟ್ಪಿಟಿ ಮಾಡಿ, ’ಜೈ ಆದಿಜಾಂಬ್ವುಂತ! ಜೈ ಆದಿಶಕ್ತಿ!’ ಯೆಂದು, ಸ್ಮರ್ಸಿ… ಕೈಗೆ ಚೂರಿ ತಗೊಂಡು ಶಾಸ್ತ್ರದ್ಪ್ರಕಾರ ಮದ್ಲು, ಯೆತ್ತಿನ ದುಬ್ಬಾ ಚಪ್ರಿಸಿ ಮಗ್ನಿ ಸೀಳ್ದಿ. ವುಳ್ದಿವ್ರು ಯತ್ನಿಕಾಲ್ಗುಳ್ನ ಮಟ್ಸಾಗಿ ನಾಲ್ಕು ಜನ್ರು ಯಿಡಿದು ನಿಂತ್ರು. ಮಲ್ಲಪ್ಪ ಸೀತಯ್ಯನಂತೆ ಕಣ್ಣು ಮುಚ್ಚಿ, ತುಟ ಪಿಟ್ಪಿಟಿ ಮಾಡಿ, ‘ಜೈ! ಜೈ!’ ಅಂದ! ತಾನೊಂದು ಚೂರ್ಹಿಡ್ದು… ನಿಯಮ್ದಂತೆ, ಯತ್ನಿ ಯದ್ಕೆಡಿಯಿಂದ… ತ್ವಗ್ಲು ಬಿಡ್ಸಿತ್ತಾ ನಡ್ದೆ. ಸೀತಯ್ಯ ಯೆತ್ನಿ ಮುಗ್ಳಿ ಕಡೆಯಿಂದಾ ತ್ವಗ್ಲು ಬಿಡ್ಸಿತಾ… ‘ಲೇಽ… ತ್ವಗ್ಲು ಆನೆ ತ್ವಗ್ಲಿನಂಗೇ ಅಂಗೈ ದಪ್ಪನಾಗಿ, ದ್ವಡ್ದು ಗುಡಾರವಾಗಿದೆ! ವುಶಾರು… ಯೆಲ್ಲಿ ಚೂರಿಯ ಮೂತ್ಗೆ ತಗ್ಗುಬಾರ್ದು… ತೂತ್ಬಾಬಾರ್ದು ಯೆಚ್ರಾ…’ ಯೆಂದು ಯೇಳ್ವುದಾ ಮೆರ್ಲಿಲ್ಲ.
‘ಯೇನ್ಲೆ ವೂರ್ಹರ್ಕು… ಮನ್ಸುರ್ಮೇಲೆ ‘ಕವ್’ ಅನ್ನೊದೊಂದೇ ಗ್ವತ್ತು! ಕಿಳ್ಳೆಕ್ಯಾತ! ನೀ ಮಾದ್ಗಿಬುದ್ದಿ ತೋರ್ಸಿತನ್ಕಾ ಬಿಡ್ಲಿಲ್ಲ… ನಾ ಯೀವತ್ತು ವಸ್ದಾಗಿ ವೋನಾಮ ಕಲಿಯಾಕೆ ಬಂದಿನೇನ್ಲೇ? ಮೀನ್ಗೆ ಯೀಜಾದು ಯೇಳ್ಬೇಕೇನ್ಲೇ? ಯೀ ಕಸ್ಬಿಗೆ ವಸ್ಬಾನೇನ್ಲೇ? ಯೀ ಕೇರ್ಯಾಗೇನು… ಸುತ್ತಾ ಯೇಳಳ್ಳಾಗೆ ಕುರಿ, ಮೇಕೆ, ದನ್ದಿರ್ಲಿ ಮಟ್ಸಾಗಿ ತ್ವಗ್ಲು ಬಿಡ್ಸಿ, ವಪ್ಪಾ, ವಾರ್ಣಾ ಮಾಡ್ಕೊಡಾ ಭೂಪತಿ ಗಂಡೆಂದ್ರೆ… ನಾನೊಬ್ನೆಲೇ…’ ಮಲ್ಲಪ್ಪ, ತನ್ಬೆನ್ನಾನ್ನ ತಾನೇ ತಟ್ಗೆಂಡು, ಯೆಲ್ಲರೆದ್ರುಗೇ… ಬೀಗ್ದಿ.
‘ಯೀ ಕಸ್ಬಿನಾಗೆ ಯಂತಾ ಸಮ್ರವಂತ್ನಿದ್ರೂ… ವಮ್ಮಮ್ಮೆ ಜೋಲ್ಗೊದು ಯಿದ್ದಿದ್ದೇ… ಯಿದೊಂದು ಕಲೆ, ವಿಜ್ಞಾನ, ವೇದ, ಶಾಸ್ತ್ರ, ಸಂಗೀತ, ಪುರಾಣ, ಆಗಮವಿದ್ದಂತೆ! ಅದ್ಕೆ ಸೀತಯ್ಯ, ಅಂಗೆಂದಿರ್ಬೇಕು’ ಸಿವಪ್ಪ, ಅನ್ಬುವಕ್ಕೆ ತಕ್ಕಂತೆ ಅಂದ.
ಅಬ್ಬಬ್ಬಾ… ಯೀ ಯೆತ್ನಿ ಕ್ವಂಬ್ಗುಳು ಆನ್ದಿಂತಾಗಿವೆ ಯಿದ್ರಾ ಗಗ್ರಿ, ಕೊಡಾಣ್ಸು, ಕುಚ್ಚು, ಬಾರು, ಜೋಲು, ಹಣ್ಕೆಟ್ಟು… ವೋಹೋ… ಯೇನ್ಸಿಂಗಾರವೋ? ವೈಭವವೋ? ಯಿರೋತನ್ಕ ಮೇರೆಯೋದೇ… ಯಾವ್ಗಾ ಗುಟ್ಕೋ…?! ಯಾರ್ಗೆ ಗೊತ್ತು?? ಯೀ ಜೀವಾ ನೀರ್ಮೆಲ್ನಿ ಗುಳ್ಳಿ…’ ಸಿವಪ್ಪ, ಗುನ್ಗುತಾ ಎತ್ನಿ ಕ್ವಂಬೆರ್ಡುಗ್ಳನ್ನು ಗೇಣಾಕ್ಗೇಣಾಕಿ, ನೇಮ್ದಂತೆ ಕ್ವಡ್ಲಿಯಿಂದ ವಂದೆ ಕಚ್ಛಿಗೆ… ಕಚಕೆಂಬಂಗೇ ಯೆಲ್ರಿಗೇ ತೋರ್ಸಿ ತೋರ್ಸಿ… ಕಡ್ದಿ. ತ್ವಟ್ಗು ಯೆಚ್ಚು ಕಮ್ಮಿ ಕಡ್ದಿರೆ, ರೇಟ್ಕೂಡಾ ಯಂಗೆಚ್ಚು ಕಮ್ಮಿಯೆಂಬುದನ್ನು ವಿವ್ರಣೆ ನೀಡ್ದಿನಲ್ದೆ, ಅಂಗೇ ಯುತ್ತಿನ್ವಟ್ಟೆಗ್ನಿ ’ವಿಷಕಟ್ಟು’ಯಿರ್ವು ಗೂಡ್ತೋರ್ಸಿ, ಅದ್ನ ಚುರಿಯಿಂದ ಕ್ವಯ್ಯದು, ದೂರ ಬಿಸಾಕ್ದಿ. ಅದ್ನ ರಣಹದ್ಗುಳು… ಕಾಗೆಗಳೂ… ಕುಕ್ಕಿ ಕುಕ್ಕಿ ತಿನ್ತೊಡ್ಗಿದವು! ಯಿಗ್ಗೋ ನೋಡ್ರಿಲ್ಲಿ ಯಿಭೂತುಂಡೆ ಗಾತ್ರದ ನಾಲ್ಕು ಗೋರಿಜಣ್ದ ಗಡ್ಡೆಗಳಿರೋ… ಜಾಗವಿದು! ಕೆಲವು ಯೆತ್ತಿಗೆ ವಂದೇ ಗೋರೆಜಣ್ದ ಗಡ್ಡೆಯಿರುತ್ತೆ. ಆದ್ರೆ ಯೀ ಯೆತ್ತಿಗೆ ನಾಲ್ಕು ಯಿವೆ. ಮಣೆಗಾರರ ಅದೃಶ್ಟ!’ ಯೆಂದು ಸಿವಪ್ಪ ಚೂರಿಯಿಂದ ಯೆಚ್ರಿಕೆಯಿಂದ ಕ್ವಯ್ದು ಬಿಡ್ಸಿ ಬಿಡ್ಸಿ ತೋರಿ, ಯಿವು ಬಲು ತುಟ್ಟಿವು! ಔಷಧಕ್ಕೆ ಬರ್ತಾವೆ! ವಡ್ದಿಂತೆ, ಯಾರ್ಕೈಗೆ, ನಾಯ್ಗೆ ಹದ್ದು, ಕಾಗೆಗೆ… ಸಿಗ್ದಂತೆ, ಬಿಳ್ಬಿಟ್ಟೇಲಿ ಜತ್ನ ಮಾಡ್ಲು. ಸಿವಪ್ಪ ಸೀತಯ್ಯನ್ಕೈಗೆ ಯೇಳೇಳಿ ಯಲ್ರೆದ್ರುಗೆ ಕ್ವಟ್ಟ.
‘ವಂದೂರ್ಗೆ ಬುಡ್ಡೆಕಲ್ಹೋಗೋ, ಯೀ ಕೇರ್ಗೆ ಯೀ ಸಿವಪ್ಪ! ಯೀ ಕಸ್ಬಿನ ವಳ್ಮಾರ್ರಮ್ಗಳನ್ನು ಯಿಂಗೆ ತೆರ್ದಿಡ್ವುದ್ರಲ್ಲಿ, ವಳ್ಳೆ ಮನಿಗಾರ! ನಿಸ್ಸೀಮ! ಬರೀ ಮಣೆಗಾರೆನ್ಸಿಕ್ವಂಡ್ರೆ ಸಾಲ್ದು. ಮನಿಗಾರೆನ್ಸಿಕ್ಬೋಕು. ಆಗ ವುಟ್ದಿಕೂ ಸಾರ್ಥಕ್ವಪ್ಪಾ’ ಯಿದು, ಯೀ ಸಿವಪ್ಪನ್ಮಾತ್ಗುಳಪ್ಪಾ! ಯೀ ಮಾತ್ಗುಳ ಕೇಳ್ದಿರೆ, ಬೆಕ್ಕಿಗೂ ಛಳಿ, ಜ್ವರ, ಬರ್ಬೇಕು! ಯೆಂಥಾ ಶತ್ರುವಿಗೂ ಪ್ರೀತಿ ವುಕ್ಬೇಕು! ಯಿವ ಯಿಂಥಾ ಗಂಡ್ದೆಯ ಗುಂಡ್ಗೆಯ್ವ ಯೀಗೀಗಾ… ಕೈಕಾಲು ನಡ್ಕುಬರ್ತಾವೆಂದು, ತ್ವಗ್ಲು ಬಿಡ್ಸಾದು ಕೈಬಿಟ್ಟು, ನಮ್ಗೆಲ್ಲ ದೀಪವಾಗೈನೆ…’ ಯೆಂದು ಮಲ್ಲಪ್ಪ, ಮೆಲ್ಗೆ ಸಿವಪ್ಪನ ಗುಣ್ಗಾನಾ ಮಾಡಿ, ಪೀತಿ ಮೆರ್ದೆ.
‘ಅದ್ಕೆ… ನಾ ಮೂರ್ಹೊತ್ತು, ಯಲ್ರುಗೂ ಬಡ್ಕೊಂತ್ನಿ. ಯೀ ಕಸ್ಬು ಭೇಶ ಕಲ್ರೀ, ಬಿಡುಬ್ಯಾಡ್ರೀ. ಮಕ್ಳಿಗೆ ಕಲ್ಸಿರಿ. ಸರ್ಕಾರ್ದ ಜೀತ್ದ ಸಂಬ್ಳವೂಂದ್ನೆ ನಚ್ಗಿಂಡಿರ್ಬೇಡಿ. ಪ್ರತಿಯೊಬ್ರ ಯಿಂದೆ ಗುರುವಿರ್ಲಿ. ಮುಂದೆ ಗುರಿಯಿರ್ಲಿ. ಅಂಥಾವ್ರು ಜೀವ್ನದಲ್ಲಿ ಸೈಯೆನ್ಸಿಕೊಳ್ತಾರೆ’ ಯೆಂದು, ಸಿವಪ್ಪ ಪುಟ್ಟ ಭಾಶಣಾನೇ ಬಿಗ್ದಿ.
* * *
ಯಿತ್ತ… ಕೊನ್ಮೆನೆಯ ಕುಂಟು ಕೊಲ್ಗಾ, ನಡ್ವುಲ್ಮನೆಯ ಭರ್ಮಾಗ, ಸಾಬಣ್ಣ, ಯೀಳ್ಗೆಮಣೆ, ಕುಡ್ಗೋಲು, ಚಾಕು, ಚೂರಿಂದ… ಯೀರಿ, ಲಲ್ಡಿ, ಗುಂಡ್ಗೆ, ಪಚ್ಚಿ, ಕಳ್ಳು, ಶರ್ಬಿ, ನಾಲ್ಗೆ… ಯಿವುಗಳನ್ನು ಸಣ್ಗೆ ಕ್ವಯ್ದು, ಮತ್ತೆ ತ್ವಳೆದೂ… ಅಲ್ಲಿದ್ದ, ಆನ್ವೂದಾ ಸಳ್ಳೆಗಡ್ಗೆಗೆ ತುಂಬಿ, ಅದ್ರಾಕೆ ರುಚ್ಗೆ ತಕ್ಕ ವುಪ್ಪು, ಅರ್ಸಿನ ಪುಡಿ, ಸಣ್ಣಗೆ ಹಚ್ದಿ ವುಳ್ಳಾಗಡ್ಡೆ, ಬೆಳ್ಳಾಗಡ್ಡೆ ಹಾಕಿ, ಮುಚ್ಳಾ ಮುಚ್ಚಿ, ಮೂರ್ಕಲ್ಲಿನ ವಲ್ಮೇಲಿಟ್ಟು, ಧಗಾಲ್ಬಗಾಲು ವುರಿ ಹಚ್ಚಿ, ಕುಚ್ಚತೊಡ್ಗಿದ್ರು. ವಲೆ ಮುಂದೆ ವಟ್ಟಿದ್ದ ಸಪ್ಪೆದಂಟು, ಕಟ್ಗೆಪುಳ್ಳೆ, ಬೇಲಿಯಟ್ಟಾ, ಕತ್ತಾಳೆಪಟ್ಟೆ, ಚಾಲಿಕ್ವಲ್ಡು, ಕಳ್ಳಿಬಡ್ಗೆ… ಯೆಲ್ಲ ವಲ್ಗೆ ತುರ್ಕಿ ತುರ್ಕಿ… ಆಲೆಮನೆಯಂಗೆ, ಉರಿ ಮುಗ್ಲು ಮುಟ್ಟಿದ್ದೇ ತಡಾ, ಸಳ್ಳೆಗಡ್ಗೆಯೊಳ್ಗಿನ ತುಂಡ್ಗುಳು ಫಳ್ಫಳಾ ಕುದ್ದು… ನೀಸ್ವಾಸ್ನೇ ಸುತ್ತೆಲ್ಲ ಗಮ್ಗಿಮ್ಸಿ ತೊಡ್ಗಿ ಮಣೆಗಾರರ ಮೂಗಿಗೆ ನಾಥ ಬಡ್ದು, ಯಲ್ಡು ವೊಳ್ಳೆಗ್ಳನ ವೂರ್ಗಾಲ ಮಾಡಿತು. ಯಲ್ರ ಹಸಿವು ಯಿಮ್ಮಡಿಯಾಯಿತು. ಯಲ್ರ ದ್ಯಾಸ ಅತ್ತನೇ ವೋಯ್ತು!
ಲೇ ಕುಂಟಽ… ಕಲ್ಗಾಽ… ಅದೇನ್ಲೇ ಕತ್ತೆ, ಕುದ್ರೆ, ಕ್ವತ್ತಿ, ಹಂದಿ, ನಾಯಿದೂ… ಕುಚ್ದಿಂಗೇ ಸಂಗ್ನವತ್ಲಿದ್ದಾ ಯೆಣ್ಗೆತ್ತೀಯಾ?? ನೀ ಭಾರೀ ನಳ, ಭೀಮಽ… ಆಗೀಗಿ! ತತ್ತಾರ್ಲೇ ಯಿಲ್ಲೀ… ವಟ್ವೆಳ್ಗೆ ಕುದ್ಸಿತ್ತೀವಿ! ಯಿಲ್ಲಿ ಯಲ್ರು ಗುಟ್ಕು ನೀರ್ಕುಡ್ತಾರೆ…’ ಸಿವಪ್ಪ ತಡಿಲಾರ್ದೆ, ಕೊಲ್ಗಾನ ಕೂಗಿಯೇ ಬಿಟ್ಟ!
ಕುಂಟುಕೊಲ್ಗಾ… ಗಡ್ಗೆಯಲ್ಲಿ ಘಳಾಡ್ಸಂಗೆ ಕುದ್ತಿದ್ದ, ಶಾಕ್ನನ ವುಗ್ಳುನುಂಗಿಕ್ಯಾಂತಾ… ಟೆಂಗನಿ ಚಿಪ್ಲಿ ತೊಡ್ಕಿಂಡು, ‘ವುಸ್ಸುಬುಸ್ಸು’ ಅಂದ್ಕಾಂತಾ… ಸಿವಪ್ಪನ್ಮುಂದಿಟ್ಟ.
‘ಯೇ… ಯಿನ್ನೊಂದೆಬ್ಬೆ ಕುದ್ಯಾಯಾತನ್ಕ ನಿಮ್ಗೆ ನಿರ್ಮುಳಿಲ್ಲ! ವುಟ್ಟುತ್ಲೆ ನಿಮ್ಮಪ್ಪಾ ಅಮ್ಮಾ… ಚಿಚ್ಚಿ ತುಂಡ್ನಾ ಅರ್ದು… ಅರ್ದು… ಸವ್ಟಿಲಿ ಕುದ್ಸಿರ್ಬೇಕು! ನೀಸಂದ್ರೆ ಅರ್ಕಾಂಬುತ್ತೀರಿ… ಭರ್ಗೆಟ್ಟಾರು…’ ಸಾಬಣ್ಣ, ಯಣ್ಣಾಡ್ಗೆತನ್ದಲಿ ನುಲಿತಾಽ… ಸೆಡ್ವಿಲಿ, ಯಳದೆಳೆದು… ಮಾತಾಡ್ತಾ ನಿಂತ.
ಸಿವಪ್ಪ, ಸೀತಯ್ಯ, ಮಲ್ಲಪ್ಪ… ಬಗ್ಗಿ ಸಿಪ್ನ ಅನ್ಮಾತ್ತಾಗಿ ತಗಂಡು, ಬಲ್ಗೈಯಾಕೆ ಶಾಕ್ನನ ಬಗ್ಗಿಸಿಗೊಂಡು… ‘ವುಫ್ ವುಫ್… ’ ಅಂತಾ… ಗಾಳಿಯೂಪ್ಗಿಂಡು, ಅಂಗೇ ಬುಕ್ದಿರು.
‘ಆಹಾ! ಮಾದ್ಲುಪುಡಿ ಬುಕ್ದಿಂಗಾತು!’ ಯೆಂದು, ಸೀತಯ್ಯ ಬಾಯ್ತುಂಬಾ ನಮ್ಲಿ, ಯರ್ಡು ತುಟ್ಗಿಳನ್ನು ಸವ್ರತಾ… ನಿಂತ! ‘ಅಬ್ಬಾ! ಲಡ್ಡುನ ನಮ್ಲಿದಂಗಾತು ಬಿಡು’ ಸಿವಪ್ಪ ಕಣ್ಣು, ಬಾಯ್ನಿ ತಿರ್ವಿದ. ಯಿನ್ನು ಮಲ್ಲಪ್ಪ ‘ಯೇನ್ ಮರ್ಗಿಡ್ಬು ಮೆಕ್ದಿಂಗಾತು! ಸಾಕ್ಸಾಕು ಯಿನ್ನೆಲ್ಲ ರಾಡಿಯಾಗಂಗೆ ಕುಚ್ಚಾದು ಬೇಡ! ಯೆಲ್ಲ ಸರೈತಿ. ಯೀ ಭುಗಿ ಆದೆಟ್ಗೆ, ಯಿಳ್ಸಿ ಯಿಲ್ಲಿ ತಾ! ಅಹಾ… ಗದ್ಗದಾ… ನಡ್ಗುತೈತಿ…’ ಯಲ್ರ ಪರ್ವಾಗಿ, ತೀರ್ಪಿತ್ತಿದ್ದೇ ತಡಾ, ಯಲ್ರ ಮಕ್ಗಳು ಅರ್ಳಿದ ಕಮ್ಲವಾದ್ವು! ವುರಿಯೋ ಬೆಂಕ್ನಿ ತಮ್ನಿ ಮಾಡಿ, ಸಳ್ಳೆಗಡ್ಡೆ ಮೇಲಿದ್ದ ಮುಚ್ಳನ ತೆಗ್ದು, ಸ್ವಾರೇನ ಸಳ್ಳೆ ಬಂಡ್ಮೇಲೆ ತಂದು, ಸಾಬಣ್ಣ ಕುಕ್ದಿ. ಸುಡಾ ಟುವ್ವಾಲ್ನ ಕ್ವಡ್ವಿ… ಯೆಗ್ಲ್ಮೇಲ್ಯಾಕಿಕೊಂಡ. ಟೆಂಗ್ನಿ ಸಿಪ್ನಿ ಸೌಟು ತಂದು, ಸೀತಯ್ಯನ್ಮುಂದಿಟ್ಟು… ನುಲ್ತಿ ವುದ್ದೂಕೆ ಗರ್ಡುಗಂಬ್ದ ದಾಸಯ್ಯನಂಗೆ ನಿಂತ.
ಸೀತಯ್ಯ, ಸಳ್ಳೆಬಂಡ್ಮೇಲೆ… ಶಾಕ್ಣದ ಹನ್ನೆಂದ್ಪಾಲ್ಗಾಳ್ನಿಡ್ತಾ ವೋದ. ಪ್ರತಿ ಪಾಲ್ನಿ ಮುಂದೆ, ವಬ್ಬಬ್ರು ಕಾದು ಕುಂತ್ರು. ಹಣ್ಣು, ವೂವು, ಕ್ವಬ್ರಿ ಹಂಚ್ದಿಂಗೇ ಹಂಚಿಟ್ಟಿದ್ದೇ ತಡಾ… ಯಲ್ರು ಗೆಲ್ವಿಲಿ ದುಂಡ್ಗೇೕ… ದುಂಡ್ಮೇಜ್ನಿ ಪರಿಶತ್ತ್ನಿಂಗೆ… ತುಂಡ್ಗುಳ್ನಾ ವಂದಾಂದಾಗಿ, ನಮ್ಲುತಾ… ‘ಆಹಾ! ಕೈ ಬಾಯೆಲ್ಲ ತುಪ್ಪಾನೇ… ದಿರ್ಬೇವು ತಿಂದಂಗೇ… ಯೇನ್ಸಾತ್ವು, ಯೇನ್ರುಚಿ, ಯೇನ್ಕಾತೆ! ಯಿಂಥಾ ಗಣ್ಧಿರ್ಗಿದ್ನಾ… ಯಾವತ್ತು… ಯಿನ್ನೆಲ್ಲಿ, ಯಿಂದೆಲ್ಲಿ ತಿಂದಿರಲಿಲ್ಲ…’ ಸಿವಪ್ಪ, ಸಣ್ಗೆ ನಮ್ಲುಕ್ಯಾಂತಾ ಯಲ್ರ ಮುಂದೆ, ಸಂತ್ಸನ ಹಂಚ್ಕಿಂಡ.
‘ಅಹಾ… ಹಸೀಸೀ… ಸೆರ್ಬಿ, ಕಿವಿಗುರ್ಮು, ಬಾಲ್ದಕೊನೀನೇ… ಯಿಶ್ಟು ಐಕ್ಳಾಸು ಬೆಂಡು, ಬತ್ತಾಸು, ಅಲ್ಲಿಪಾಕ್ನಿಂಗಿರ್ವೂಗ, ಯೀ ಶಾಕ್ಣದ್ಗತ್ತು, ಗಮ್ಮತ್ತು, ಆಹಾ… ಕೇಳ್ಬೇಕೆ?? ಯಿಗೋ… ಬಂಡ್ಬೆಂಡೆಲ್ಲ ಜಿಡ್ಡೇ ಜಿಡ್ಡು. ಬೆರ್ಸುಬೆರ್ಸಿಣಿನೇ…’ ಮಲ್ಲಪ್ಪ, ಹಲ್ಸುಳೆಂಗೇ… ಯೇಳ್ತಾ… ತಿನ್ತಾ ಯಿದ್ದ.
‘ಅಬ್ಬಬ್ಬಾ… ತಂಬಿಟ್ಟು, ಸಿಗ್ಳುಂಡೆ, ಎಳ್ಳುಂಡೆ… ಪಾಲ್ಕೋವಾ… ಯೀ ಸಳ್ತುಂಡೆ, ರಸ್ಗುಲ್ಲೇ…’ ಸೀತಯ್ಯ… ಬಾಯ್ಸಿಪ್ರಸ್ಗ್ಯಾಂತ ಅಂದ.
ಯೀ… ಸಳ್ಬೆಂಡೆಂದ್ರೆ, ಯಾವ ವಿಧಾನ್ಸಾಭೆ, ಲೋಕ್ಸಾಭೆ, ಪರಿಶತ್ತು, ಅನುಭವ ಮಂಟ್ಪಕ್ಕಿಂತ ಕಡ್ಮೆಲ್ಲ. ಶತಶತಮಾನ್ಗಳ ಯಿತಿಹಾಸವಿದೆ. ಕೇರ್ಗಿರ ಹಸಿವು, ಆಹಾರ ಸಮಸ್ಯೆ, ಅರ್ಥಿಕ ಅಸಮಾನ್ತೆ ಅಸಹಾಕಾರ್ನ… ಪರ್ಸಿರ ಮಾಲಿನ್ಯ ಕಾಪಾಡ್ವುಲ್ಲಿ ಯೀ ಮಣೆಗಾರರ ಪಾತ್ರ ಮಹತ್ವದ್ದು! ಯಲ್ನಿ ಗುಟ್ಟು, ಮಾತ್ಕುತ್ಗೆಳ್ನ ಗೌಪ್ಯವಾಗಿಡ್ರೀ. ಮಣೆಗಾರರ ಮಾನ ಹರಾಜಿಗ್ಡಿಬೇಡ್ರೀ… ಸೀತಯ್ಯ ಬಲು ಸೂಟ್ಲಿ, ಮಕಕರ್ರೆಗೆ ಮಾಡ್ಕೊಂಡು, ಯೆಂದೂ ಯೇಳ್ದ ಮಾತ್ಗುಳನ್ನು ಯಿಂದು ಯೇಳ್ದಿ.
‘ಅವ್ದು… ಅವ್ದು… ಮಣೆಗಾರರೆಂದ್ರೆ… ಮಧ್ಯಾನ್ದ ಬ್ರಾಂಬ್ರು. ಯೀ ನೆಲ್ದ ಮೂಲ್ಗಿರು. ವಾರ್ಸುದಾದರು. ಆದಿಜಾಂಬ್ವುಂತ್ನ ಮಕ್ಳು. ಕೇರಿಗೌಡ್ರು, ಕುಲ್ಕರ್ಣಿಗಳು, ತಳ್ವಾರ್ರು. ಪೂಜಾರ್ಗಿಳು, ನ್ಯಾಯ, ನಿರ್ಣಾಯ್ಕಿರು… ವಕ್ಲಿಗ್ರು… ಯೀ ಸೀತಣ್ಣ ಯೇಳ್ದಿಂತೆ, ಯಲ್ಲರು ಯಿನ್ಮುಂದೆನೂ… ತಪ್ದೇ ಕೇಳ್ರೀ…’ ಮೇಟ್ಮೆನೆಯ ಮಲ್ಲಪ್ಪ, ಮಾತ್ಗ್ಮೇತೂ ಪೋಣ್ಸಿ, ಯಲ್ರ ಮಕ ನೋಡ್ತಾ… ಶಾಕ್ಣನ ನುಂಗ್ದಿ.
‘ಅಯ್ತು ಯಿದೆಲ್ಲ ಯಿಂಬ್ಡಿಕ್ಲೇ. ನೀರ್ಕುಡೀ. ಕೈತ್ವಳ್ರೀ. ಅಗ್ಲೇ ಬಿಸ್ಲು ನೆತ್ತಿಗೇರಿತು. ಸಳ್ಳೆ ಪಾಲ್ಹಾಕ್ರೀ, ಯಲ್ಲ ಕ್ವಯ್ದು, ತುಂಡಾಕಿ, ಗುಡ್ಡೆವಟ್ದಿಂಗೆ ವಟ್ದಿನಾ… ಸಳ್ಳೆ ಬಂಡ್ಮೇಲೆ ೧೨ ಪಾಲ್ಹಾಕು ಸೀತಯ್ಯ’ ಯೆಂದು, ಸಿವಪ್ಪ ಬಾಯ್ಸಿಟ್ಗೆಂತಾ… ಅಂಗೆಂದ.
‘ಯೇ ಪರ್ಪಾಟು ಬಿದ್ದೀಯಿ…! ಅನ್ನಂದೇ ಪಾಲ್ಹಾಕ್ರೀ. ಆ ನಡ್ವುಲ್ಮಾನೆಯ ರಂಗಪ್ಪಣ್ಣನ ಪಾಲ್ಕಟ್ದಿನ ಯಲ್ರಿಗೆ ಪಾಲ್ಹಾಕು! ಕಟ್ಮೆನೆಯವ್ರು ಯಾವ್ಗಾ ಬಂದು, ನ್ಯಾಯ ತೀರ್ಮಾನಿಸ್ತಾರೋ… ಆವ್ಗಾ ೧೨ ಪಾಲು! ಯೀಗ್ಗ್ಮಾತ್ರ ಹನ್ನೊಂದೇ…’ ಸೀತಯ್ಯ, ವುಡ್ನು ಪಟ್ಪುಯಿಡ್ದು ಕುಂತ.
ಸಿವಪ್ಪ ಅಡ್ಕತ್ರಿಗೆ ಸಿಕ್ಕಿದ. ಅತ್ತ ರಂಗಪ್ಪ! ಯಿತ್ತ ಸೀತಯ್ಯ! ವುಗ್ರ ಪ್ರತಾಪಿ ಯಡ್ವಟ್ನಿ ವಂಟ್ಬೆಟ್ನಿ, ಮನುಷ್ಯ. ತಲ್ತೆಲೆ ಕೆರ್ಕಾಂತಾ ನಿಂತು… ನಿಂತು…’ ಯೀಗಾಗ್ಲೇ ರಂಗಪ್ಪನ್ಗೆ ರವ್ವಾಟು ಶ್ಯಾನೇನೇ ಶಿಕ್ಷೆ, ದಂಡ್ನೇ, ನಾಚಿಕೆ, ಪಶ್ತಾತ್ತಾಪವಾಗಿದೆ! ವರ್ಸುವಾಗಿದೆ!! ಸಾಕು. ಯಿದ್ಕಿಂತಾ ಯೆಚ್ಗೇ ಅವ್ನಿಗೆ ತಲ್ಬೆಡ್ದಿದೆ. ಮದ್ವೆ… ಸೋಬ್ನಾ, ದ್ಯಾವ್ರು, ಸಾವು… ಯೀಗೆ ಯಲ್ದಕೂ ಅವ್ನಿಗೆ ಬಯಿಸ್ಕಾರವಾಗಿ, ಯಲ್ಡಿಕೆ, ವೂವು, ಹಣ್ಣು, ಪ್ರಸಾದ, ಕಾಳ್ಕಡಿ, ದಕ್ಷಿಣೆ, ಅಣ್ಣತಮ್ಗಳ ಬಾಬಿತ್ತು, ಕಬ್ರಿಬಟ್ಲಾ, ತೆರವು… ಯೆಲ್ಲಾ ಪಾಲ್ಕಾಟ್ಟಿದೆ! ಯಿದ್ಕಿಂತಾ ಯಿನ್ನೇನ್ಬೇಕು ಸೀತಯ್ಯ?? ಯಿನ್ನು ಹಗ್ಗ ಹರ್ಯಾತನ್ಕಾ ಸರ್ತಿ, ಸೇಡು… ಛಲ, ವೈಮನಸ್ಸು ಬೇಕೆ?? ಸಾಕು ಮಾಡಾನ್ರೀ… ಚಿತ್ರ ಹಿಂಸೆ ಸಾಕು!’ ಸಿವಪ್ಪ. ಯಲ್ರಿಗೆ ಮನಮುಟ್ಟುವಂತೆ, ಕಣ್ಗಿಕಟ್ವುಂತೇ… ಕರ್ಮಿಣಿ ಸರ್ದಂತೇ… ಮಾತು ಪೋಣ್ಸಿದ.
‘ಯೀ ಸತ್ತದನ್ದ ಸಳ್ಳೆಪಲ್ಗೆ… ನಾ ಆಸ್ಪೆಡ್ತೀನೆಂದು ನೀವೆಲ್ಲ ತಿಳ್ದಿರೇನು? ಯೀ ನಮ್ಮ ಮಣೆಗಾರರ ತನಕ್ಕೆ, ಕಸ್ಬು, ಸ್ವಾಭಿಮಾನಕ್ಕೆ, ಕುಲ, ಛಲ, ಕೇರೀಜಂಗೆ ತಲೆಬಾಗೀನಿ! ಯಿಲ್ಲಾ ತಲೆ ತಗ್ತೀನಿ! ನನ್ನ ಸ್ವಂತ ಅಣ್ಣನ ಯೆಂಡ್ತಿಯ ಮಾನಭಂಗಕ್ಕೆ ಗುರಿಯಾದ ಪಾಪಿ… ಯಿಬ್ರ ಯೆಂಡ್ಹಿರ ಮುದ್ನಿ ಮುದಿ ಮಾಡಿ ರಂಗಪ್ಪಣ್ಣನ ಯೆಸ್ರು ಕೇಳ್ದಿರೆ ಸಾಕು.. ನನ್ನ ನರನಾಡಿಯೆಲ್ಲ ಸೆಟ್ದೆ ನಿಲ್ತಾವೆ! ರಕ್ತ ಕತ್ಕತ್ನೇ ಕುದ್ದು, ಮೈಕೂದ್ಲು ನೆಟ್ಗೆನಿಲ್ತಾವೆ. ಯಿಂಥಾ ಕಚ್ಛೆ ಹರ್ಕಾನಿಗೂ, ಬೆದ್ಗೆ ಬಿದ್ದ ನಾಯಿಗೂ… ಯೇನ್ವೆತ್ಯಾಸ ಸಿವಪ್ಪಾ? ಬರೀ ವಯಸ್ಸಾದ್ರೆ ಸಾಲ್ದು. ಘನ್ತೆ, ಗೌರ್‍ವ, ವಳ್ಳೆತ್ನವಿರ್ಬೇಕು’ ಸೀತಯ್ಯ ಕಿಡ್ಕಿಡಿ ಭಸ್ಮಾಸುರ್ನಾದ.
‘ಆಯ್ತು! ವಂದ್ಮಾತ್ಗೆ ಯಿಲ್ಗೆ ಕೈ ಬಿಡ್ರಿ. ಮಣೆಗಾರರೆಂದ್ರೆ… ಭಂಡ್ರು, ಭಂಡಾರ್ದಾರು! ಜಗಮೊಂಡ್ರು. ಯೀಗ ಸೀತಯ್ಯ ಹಾಕ್ದಿ ಯೇಳ್ಮಂಡ್ಲಾನ ಯಾರ್ದಾಟ್ಬಾರ್ದು, ನೊಂದ್ವನ, ಬೆಂದ್ವನ, ನ್ಯಾಯಾಸ್ಥಾನದಲ್ಲಿರ್ವೂ ಸೀತಯ್ಯನ್ಮಾತ್ಗೆ ನಯಾಪೈಸದಶ್ಟಾದ್ರು ಕಿಮ್ಮತ್ತು ಕೊಡಾಣ್ರೀ…’ ಯೆಂದು ಕುಂಟುಕೊಲ್ಗಾ, ಸಾಬಣ್ಣ, ಮಲ್ಲಪ್ಪ, ಧಗ್ಗನೆದ್ದು ವುರಿಯೋ ಬೆಂಕಿನಾ ಆರ್ಸಿದ್ರು.
ಅಗ ಸೀತಯ್ಯನ ವುಳ್ಕು ಮಕ್ದಲ್ಲಿ ನಗೆಯ ನವಿಲು ತಾಂಡ್ವಾವಾಡ್ತೊಗಿತು!
‘ಯಿದು ಜನ್ರ ರಾಜ್ಯ. ಮೆಜಾರ್ಟಿ ಯಂಗೋ ನನ್ದೂ ಅಂಗೇ… ಗೆದ್ದೆತ್ತಿನ ಬಾಲ!’ ಸಿವಪ್ಪ, ಮಕ ತೂತ್ಬುಟ್ಟು ಮಾಡ್ಕೊಂಡು ಯಿಶ್ಟಾಂದ.
ಸಳ್ಬೆಂಡ್ತುಂಬಾ.. ಅನ್ನೊಂದು ಪಾಲ್ಗುಳು, ಸಾಲ್ಗೇ ಯೆತ್ರ… ಯಿಮಾಲಯಪರ್ವತ್ದಂತೆ ಬಿದ್ಡವು!
‘ಸಳ್ಳೆಯೆಂದ್ರೆ… ಯಿಂಗೆ… ಅತ್ತೆಣ್ಣೆನ ತ್ವಳಿಯಂಗೆ, ಕೆಂಪಾಗಿ, ರಕ್ತರಂಜಿತ, ವರ್ಣರಂಜಿತವಾಗಿ… ಗದ್ಗಾದಾ… ನಡ್ಗಿತ್ತಿರ್ಬೇಕು’ ಮಲ್ಲಪ್ಪ, ವಂದಂದೇ ತುಂಡ್ನಾ, ಮುಟ್ಟಿ ಮುಟ್ಟಿ… ಯೀ ರೀತಿ ವುದ್ಗಾರ ತೆಗ್ದೆ.
‘ಅತ್ತೆಣ್ಣೇನು? ಹಲ್ಸಿನಾತ್ವಳ್ನೀ! ಯಿಂದ್ಕಿಂಡಿರ್ಲಿಲ್ಲ. ಮುಂದೆ ಕಾಣುತ್ತೇವೋ ಯಿಲ್ಲವೋ?’ ಸೀತಯ್ಯ, ತನ್ನ ಸಂತ್ಸನ ಹಂಚ್ಕಿಂಡ. ಯಲ್ರು ತಲ್ತಿಲ್ಗೊಂದು ಮಾತಾಡ್ತಿರ್ವೂಗ, ತಾನೇನು ಮಾತಾಡ್ದಂಗಿದ್ರೆ, ಯೀಗ ಯಿವ್ರೆಲ್ಲ ನನ್ಬಾಗ್ಗೆ ತಪ್ತಿಳ್ಕಾಂತಾರೆಂದು ಸಿವಪ್ಪ ಭಾವ್ಸಿ, ‘ಅಬ್ಬಬ್ಬಾ! ಯೀ ಕಂಡಾ, ಗುಂಡ್ಗೆ, ಮೂಳ್ಗೆ, ಸರ್ಬಿ, ಪಕ್ಕೆಮ್ಕಿ… ಯೆಲ್ಲ ನೋಡ್ತಿದ್ರೆ… ಪರಂಗಿಹಣ್ಣೇನು? ಗೆಣ್ಸಿನ ಗೆಡ್ಗೆಳ್ನ, ದಾಳಿಂಬ್ರೆನ… ನೋಡ್ದಿಂಗಾಗ್ತಿದೆ… ಮನ್ಜಳ್ಗಾ… ಹಸ್ಹಿಸೀದೇ ತಿಂದು ಮೋಜು ತೀರಿಶ್ಯಾಬೇಕೆನ್ಸಿದೆ’ ಯೆಂದು, ತನ್ಗಿಂಗಿತ್ನ ತೋಡ್ಕಾಂಡ.
ಬಗ್ಸಿ ಬಾಳೆಣ್ಣು ತಿಂದಂಗೇನು? ಕಡುದ್ರಣ್ಣು, ಕಾರೆ, ಕೌಳಿ, ಲೇಬಿ, ಬಿಕ್ಕೆಣ್ಣು… ಜಿಬ್ಬೆಣ್ಣುವಿಗೂ ಸವೀಸವೀ… ಬಿಡು?’ ಎಂದ… ಸೀತಯ್ಯ.
‘ಅವ್ದುವ್ದು… ಯೆಶ್ಟು ಕೊಂಡಾಡ್ದಿರೂ… ಸಳ್ಳೆಪಲ್ಲೆ ಯಿವತ್ತಂಗಿದೆ ಕಣ್ಲಿಲೇ…’ ವುಳ್ದಿವ್ರುಽಽ… ತಮ್ಮತಮ್ಮಲ್ಲಿ, ಮನಸ್ಸು ಬಿಚ್ಚಿ ಮಾತಾಡಿಕೊಂಡ್ರು.
‘ಅವುದು… ಯೀ ತಲ್ಕಾಯ್ಸಿಳ್ಳೆ, ಕಾಲ್ಗೆಟ್ವೆ, ತ್ವಗ್ಲು, ಯರ್ಡು ಕ್ವಂಬ್ಗುಳೂ, ಯೀ ನಾಲ್ಕು ಗೋರೇನಣಗ್ಳ ಪಾಲೆಂಗೆ?’ ಕುಂಟ್ಗಾ ಹದಿನಾರು ಚೇಶ್ಟೆಯೆಂಬಂತೆ ಕುಂಟುಕಲ್ಗಾ, ಪುಟ್ಗೆ ಸಳ್ಳೆ ತುಂಬ್ತಾ… ತುಂಬ್ತಾ… ಜೀವ ತಡಿಲಾರ್ದೆ, ಮೆದ್ಯಾಗ್ಳು ಚೇಳ್ನಿಂಗೆ ಮೆಲ್ಗೆ ಸೀತಯ್ಯನ ಕುಟ್ಕಿದ.
‘ಯೇನ್ಲೆ ವಸ್ದಾಗಿ, ಕಣ್ಕೀಳ್ದಿಂಗೆ ಕೇಳ್ತೀಗಿ? ಕೇರ್‍ಜಿಂ ಯೆಂದ್ರೆ… ನಿನ್ಗೆ ಅರ್ವಿಲ್ಲೇನ್ಲೇ? ಮಾದ್ತಿನ ನನ್ದು! ಯೆಣ್ಣಾಳು, ಗಂಡಾಳು, ಮಕ್ಳಿಬ್ರು ಅಗ್ಲುರಾತ್ರಿ ಜೀತ ಬೊಗ್ಳೋದು ನಾವು! ಅಂದ್ಮೇಲೆ ಯಿದ್ರಾ ಮಿಂಡ್ಗಾರ ನಾನಲ್ವೇನ್ಲೆ?’ ಯೆಂದು… ಸೀತಯ್ಯ ಕಣ್ಣುಕಿಸ್ರಾಗಂಗೆ, ಯಲ್ರನಾ ಮಾತ್ನಿ ಯೀಟಿ, ಭರ್ಜಿಯಿಂದ, ಕಾಡು ಪಂದಿಗೆ… ತಿವ್ದಿಂತೆ ಸಿಟ್ಲೇ ತಿವ್ದಿ.
‘ಅವ್ನಾ ತಡಾಯಿ ಮದ್ಲಿಂದಾ ನೋಡಿಲ್ವೇನ್ರಲೇ?! ತ್ವಾಳಯಿದ್ದಂಗೇ. ಕೇರ್ಗೆ ರಾಜ. ಅವ್ನಾ ತಡುವಾದೊಂದೇ… ಬಿಸ್ಲಾಗೆ ಯೆಜ್ಜೆನ್ಗೆ ಕೈ ಹಾಕ್ಹೋದೊಂದೇ…’ ಮಲ್ಲಪ್ಪ, ಕುಂಟುಕಲ್ಗಾನ, ಬಾಯಿನೇನು… ಯೆಲ್ಲ… ಮುಚ್ಸಿದ.
‘ಯೇ ಯಕಂಗಾಡ್ತೀರಿ! ಅದ್ಕಲ್ವೆ ನಮ್ಮ ಮಣೆಗಾರರ ಕುಡಿತ, ಕರ್ಚು, ವೆಚ್ಚ, ಯಿವತ್ತು ಸೀತಯ್ಯನೇ ನೋಡ್ಕೊಳ್ತಾನೆ!’ ಯಿದು ಪದ್ಧತಿ. ಸಂಪ್ರದಾಯ, ಕೇರ್‍ಜಿಂ…’ ಯೆಂದು, ಸಿವಪ್ಪ ಯಲ್ರನ ಶಾಂತಿ ಮಾಡ್ದಿ.
‘ಅಂಗಾದ್ರೆ… ಯಿದೆಲ್ಲ ನನ್ಗೇ ಕೊಡ್ರೀ! ಯಲ್ಲ ಕರ್ಚು, ವೆಚ್ಚ, ಕುಡಿತ ಭರಿಸ್ತೇನೆ!’ ಯೆಂದು ಛಂಗ್ನೆ ಸಾಬಣ್ಣ, ಕುಸ್ತಿ ವಗ್ದೆ.
‘ಥೂ! ನೀ ಅಡ್ತುರ್ಕು ಅದ್ಗೀ. ನೆರ್ತೆಣ್ಣು ನನ್ಗೆ ಬೇಕೆಂದ್ರೆ… ಯಾರು ಕೊಡ್ತಾರೆ ಯರ್ಪುಕ್ಕಾ! ನೀ ತೆಬ್ಬಾರ್ಕು ಅದ್ಗೀ! ಅದಲ್ಲ ಪದ್ಧತಿ! ನಿಯಮಾವಳಿ! ಕೇರಿಜಂ…! ಅಂದ್ರೆ… ಪಾಲ್ಗುರ್ಕೆ ಯಂಗೋ ಅಂಗೇ ಮಾದ್ತಿನ ಯಾರ್ದೋ ಅವ್ರಿಗೇ….’ ಸಿವಪ್ಪ, ಮೆಲ್ಗೆ ಜಾಂಬು ಪುರಾಣ, ವೂದಿದ.
‘ಅವ್ದು… ಅಚಾರ್ದಂತೆ, ಯಿವತ್ತಿನ ಸಂಜೆ ಕರ್ಚು, ವೆಚ್ಚ, ಕುಡ್ತಾ… ಯಲ್ಲ ನನ್ದೇ’ ಯೆಂದ… ಸೀತಯ್ಯ! ಸಪ್ರಿಸಿ ತನ್ಪಾಲ್ನಿದೆಲ್ಲ ಯರ್ಡು ಪುಟ್ಟಿ, ಜಲ್ಲೇತಟ್ಗೆ ಗೋಣಿ ಚೀಲ್ಗಳ್ಗೇ ತುಂಬ್ಕಿಂಡ. ಯಿಬ್ರು ಮಕ್ಳ ತಲ್ಮೇಲೆ ಜಿಗ್ದಿ ವರ್ಸಿ, ಅವ್ರಿಂದೆ… ಬೀಗ್ತಾ… ಮನ್ಕೆಡ್ಗೆ, ಯಿದ್ಧದಲ್ಲಿ ಗೆದ್ದವ್ನಂತೆ ಸಿವ್ದಾನ್ಸು ಮುರ್ದು ಸ್ವಯಂವರ್ದಲ್ಲಿ… ಗೆದ್ವೆನಂತೇ… ನಡ್ದೆ.
* * *
ಬದ್ಕು, ವಗ್ತಾನ ಬಿಟ್ಟು ಮನೇಲಿ ಯೆಂಡ್ತಿ ಮಲ್ಲವ್ವ. ಮಕ್ಳು, ಮಮ್ಮಕ್ಳಿಬ್ರು, ಕೇಕೆ ಹಾಕ್ತಾ… ತೇರ್ನಾ… ಯೆದ್ರುಗೊಂಬ್ದಿಂತೆ, ಸೀತಯ್ಯನ ಅಂಗ್ಳದಾಗೆ ಕುಣ್ಕೊಣಿದು, ಮನ್ದುಂಕೊಂಡು… ಗೋಣಿಚೀಲ, ಜಲ್ಲೆಪುಟ್ಟಿ, ತಟ್ಗೆಳೆರ್ಡನ್ನು ಭಯ ಭಕ್ತಿಯಿಂದ. ಜ್ವಲ್ಸುರ್ಸಿಗೊಂತಾ… ಯಿಳ್ಸಿಗೊಂಡು. ಬಡ್ಬಡಾ… ತಂಗ್ಡಿಸಪ್ಪು, ಸಳ್ಳೆಬಟ್ಟೆ ಸರ್ಸಿ ನೋಡ್ದಿರು! ಬೆಕ್ಕಸಬೆರಗಾದ್ರು!! ನಿಧಿ ಕಂಡಶ್ಟು ಖುಷಿಯಲ್ಲಿದ್ದರು. ಮೆತ್ಮೆತಂದು ಸಳ್ಳೆಪಧಾರ್ಥನ ಪುಟ್ಟಿ, ತಟ್ಟಿಯಿಂದ ಆರ್ಸಿ ಆರ್ಸಿ, ಮೂಳ್ಗೆ, ಯೀಲಿ, ಸೆರ್ಬಿ, ಯೆಮ್ಕೆಗಳನ್ನೆಲ್ಲ… ಅನ್ವೂದ ಸಳ್ಳೆಗಡ್ಗೆ ತುಂಬಾ ಕೊಯ್ದು… ಕೊಯ್ದು… ತೊಳೆದು, ಅದ್ಕೆ ತಕ್ಕನಶ್ಟು ಹರುಳುಪ್ಪು, ಅರ್ಸಿಣ, ಬಳ್ಳುಳ್ಳಿ ಸಣ್ಗೆ ಹೆಚ್ಚಿದ ವುಳ್ಳಾಗಡ್ಡಿ ಹಾಕಿ, ‘ದಗಾಲ್ಬುಗಾಲು’ ವುರ್ಹಿಚ್ಚಿ, ವಲ್ಮೇಲೆ ಗಡ್ಗೇನಾ ಕುಚ್ಚಾಕಿಟ್ಲು. ಮತ್ತೆ… ದ್ವಡ್ದೊಂದು ಕಡ್ದಿಪುಳ್ಗೆ ತಗಂಡ್ಲು, ಅದ್ಕೆ ಸಣ್ಣಸಣ್ಣಾಗಿ ಕ್ವಯ್ದಿಟ್ವಿ ಯೀರಿ, ಲಲ್ಡಿ, ಗುಂಡ್ಗೆ, ಪಚ್ಚಿ, ಕಳ್ಳು, ಶರ್ಬಿನಾ ವುದ್ದೂಕೆ ಪೊಣ್ಸಿ… ಪೊಣ್ಸಿ ನಂದಿಕೋಲ್ನಂಗೆ ಯರ್ಡು ಮೂರು ಕಡ್ಡಿ ತುಂಡ್ಗುಳನ್ನು ವುರಿಯ ವಲೆಗೆ ಹದ್ವಾಗಿ ತರ್ತಿರ್ವಿ ಸುಡ್ತಾ… ಸುಡ್ತಾ… ವೋದ್ಲು. ಯಿಂಗೆ ಸುಟ್ಟ ತುಂಡ್ಗುಳನ್ನು ವುಡ್ರುಗೆ ಆರ್ಸಿ… ಆರ್ಸಿ… ಕ್ವಟ್ಲು! ಅಶ್ಟ್ರಾಗೆ… ಮಲ್ಲವ್ವನ ಮೂಗು ಬಾಯಿಂದ ಜ್ವಲ್ಲು, ಗ್ವನ್ಣಿ, ನೀರೂ… ಯೆಲ್ಲ ಕಿತ್ಬಂತು! ತಡಿಯಾಕಾಗ್ದೆ… ತಾನೂ ಗಬ್ಕನೇ, ಯರ್ಡು ತುಂಡ್ಗುಳನ್ನ, ಬಾಯಾಕೆ ತುರ್ಕಿಕೊಂಡ್ಲು.
ಸಳ್ಳೆ ಬಟ್ಟೇಲಿ… ತನ್ಗಂಡ ಕಟ್ಕೆಂಡು ತಂದಿದ್ದ, ಕುಚ್ದಿ… ನವ್ರ್ನಿವ್ರಾದ, ಶಾಕ್ಣನ, ಮೆಲ್ಗೆ ಮಾದ್ಲಿಪುಡಿ ಬುಕ್ದಿಂಗೆ ವಂದ್ಟೆಗೆ ಬಾಯಾಕೆ ತುರ್ಕಿಂಡು… ಕಚ್ಕಾಚಾ ಸಣ್ಗೆ ನಮ್ಲಿ ‘ಗುಳುಂ’ ಅಂತಾ ನುಂಗ್ದಿಲು. ವುಡ್ರುಗೆ ರವ್ವುರವ್ವಾಟೇ ಬಾಯ್ಗಿಟ್ಲು. ವುಡ್ರು… ಕೈಕೈಯೇ, ಬೆಳ್ಬೆಳ್ಳೆ ಸೀಪಿ, ಸೀಪಿ… ‘ಯಿನ್ನೂ… ಯಿನ್ನೂ…’ ಅಂತಾ ಬಟ್ಟೆ, ಬರ್ನೆಲ್ಲ ತಡ್ಪಿ, ಭಂಗೆಬ್ಸಿ ಲಿಂಗ್ಕಟ್ದಿರು.
‘ಕರತಿಂತು ವರುಲ್ಲು… ಅಂಬಂಗೆ! ಯೀ ವುಡ್ರುರೇ ಯಿಶ್ಟು! ಯೆಶ್ಟು ತಿಂದ್ರೂ ಕೋಳ್ಕೆದ್ರಿದಂಗೇ… ಯಿನ್ನೂ ಕೆದ್ರತಾರೆ! ಯಿನ್ನು, ಯಲ್ಡು ವಾರ್ದ ತನ್ಕಾ, ಯೀಜು ಯೀಜಾಡಂಗೇ ಅಗ್ಲುರಾತ್ರೆ, ಮೂರ್ಹೊತ್ತು, ಮನ್ಮೆಂದಿಯೆಲ್ಲ ಕೆತ್ತಿಂದ್ರೂ ಸವ್ಲಾರ್ದಾಶ್ಟು ಸಳ್ಳೆ, ಸಿಬ್ಕೆ, ಸೆರ್ಬಿ, ತಲ್ಕಾಯಿ, ಕಾಲ್ಗಾಟ್ಗೆಳೂ… ಅಬ್ಬಾ! ಅದ್ನೆಲ್ಲ ಆರ್ಬಾಡ್ಸಿ… ಆರ್ಬಾಡ್ಸಿ… ಬೆನ್ನುರ್ಬಿಂದು, ಬಗ್ಗೆದ್ದು ನೆಲ್ಲಗುಣ್ಗಿ, ನೆರ್ಕಿಸಂದ್ಗೆ, ಬೇಲ್ಮಿರ್ಗೆ, ವಣ್ಗಿವಣ್ಗೀ… ರಿಬ್ಬನ್ನು, ಸವ್ರೆಕೂದ್ಲೂ…, ಗವ್ಲವುಗ್ಗಿ, ಮರ್ಗಿಡ್ಬು, ಅಪ್ಳು, ಸಂಡ್ಗೆ… ಆಕ್ದಿಂಗೆ ಆಕೀದ್ರೆ! ಯಿನ್ನೂ ಯಿದೇ!! ಆಗ್ಲೇ… ಯೀಳ್ಗೆ ಮಣೆ ಮಂಡಾತು! ಕುಡ್ಗೋಲು ಹರ್ವಿಲ್ದು! ದನ ಕ್ವಯ್ಲು ಸಿವ್ನಲ್ಗು ಸಾಲ್ದೇನೋ?! ಬಿಸ್ಲು, ಗಾಳ್ಗೆ, ತಿರ್ತೀರ್ವಿ ವಳ್ಳೆ, ತಳಿರು ತ್ವಾರ್ನಾದಂಗೆ, ಸಾಲ್ಗೇ ಆಕೀ ಆಕೀ ಸುಸ್ತಾದ್ಲು. ಥೂ! ಅಕ್ಷಯ ಪಾತ್ರೆಯಂಗೆ ಮತ್ತ್ಮೆತ್ತೆ… ಚಿಚ್ಚಿಪಲ್ಲೆ ವೂಟ್ತೊಡ್ಗಿತು! ಮಲ್ಲವ್ವ ಸುತ್ತಾ ನೋಡ್ದಿಳು… ವಸಂತ ಕಾಲ್ದಲಿ, ಮುತ್ಗುದ ಹೂವು, ಶೃಂಕೇಸ್ರಿ ಹೂವು ಬಿಟ್ಟು ನಳ್ನಳಿಸ್ವುಂತೆ ಕಂಡ್ಬಂತು!
ಯರ್ಡುಮೂರು ಭುಗಿ ವುರ್ಗೆ, ಸಪ್ಪೆಬಾಡು ಫಳ್ಫಾಳಾಡ್ಸಿ… ಕತ್ಕತ್ನೇ… ಸುಣ್ಣ ಕುದ್ದಂಗೇ ಕುದ್ಕುದ್ದು, ಮನ್ಮೆನೆಯೆಲ್ಲ ಸಳ್ಳೆಪಲ್ಲೆ, ಸಪ್ಪೆಬಾಡ್ನಿ ಗರ್ಗಿರಿಯಾದ, ಯಿತ್ವಾದ ವಾಸ್ನೇಗೆ ಮನ್ಮೆಂದಿಯ ಮೂಗೆಲ್ಲ ವೂರ್ಗಲವಾದ್ವು. ಗೆರೆಕೊರ್ದೆಂತೆ ಯರ್ಡು ಸಾಲ್ಸಾಲು ವಲ್ಗೆಳು ವಲ್ತುಂಬಾ ಆಲ್ಮೆನೆಯಂಗೆ ಕತ್ತಾಳ್ಪೆಟ್ಗೆಳ, ಸಪ್ಪೆದಂಟ್ಗುಳ, ಹತ್ಕಿಟ್ಗೆ, ತ್ವಗ್ರಿಕಟ್ಗೆ, ರಿಜ್ಲುಬೇಲಿಯ ಪುಳ್ಗೆಳ ಬೆಂಕಿಜ್ವಾಲೆಲಿ ಸಳ್ಳೆಪಲ್ಲೆ ಸುಡೋದೂ, ವುರಿಯಾದೂ, ಕದಿಸಾದೂ… ಘಮ್ಗಾಮಾ… ನಾತಕ್ಕೆ ಬೀದಿನಾಯ್ಗಿಳ ಯಿಂಡೂ ಕೂಡಾ… ಅಂಗಳದ್ತುಂಬಾ ನಿಂತು, ಕುಂತು, ಮೂಗರ್ಳಿಸಿ ಜಿಣೆ ಜಿಣೆ… ಚಿನ್ನಾಟವಾಡ್ತಾ… ಮುಗ್ಲಿಗೆ ಮಕಕ್ವಟ್ಸು, ಕೂಗ್ವು ಪರಿ ವಿಪರೀತ… ಕುತೂಹಲ್ವನ್ನುಂಟು ಮಾಡಿತ್ತು!
ಅಶ್ಟ್ರಾಗೇ… ಕಿವ್ಗಿಂಪು ತರ್ವು, ಯಿಂಪಾದ, ಸೊಂಪಾದ, ಜನಪದ ಹಾಡೊಂದು ಪದ್ರು ಪದ್ರಾಗಿ ತೇಲಿ, ತೇಲಿ, ಬರ್ತೊಡ್ಗಿದರತ್ತಾ… ಮಲ್ಲವ್ವ ಕಿವಿತೆದಿಟ್ಲು…
‘ಸಪ್ಪೆ ಬಾಡ್ನಿ ಮುಂದೆಽ…
ತುಪ್ಪ ಬಾನಾ ಕೂಡಾ ಯಿಂದೇಽ…
ವೊಳ್ಗೆ ಸೀಕರಣೇನ ನಿವ್ಳಿಸಿ ವಗಿರೆಂದೆಽ…
ನನ್ಮಡ್ದಿ ಮೂಳ್ಗೆ ಯೆಮ್ಕಿ ಬಲು ಸವಿಯೆಂದೇಽ…’
ತನ್ಗಂಡ ಸೀತಯ್ಯ… ಭಟ್ಟಿ ಸಾರಾಯಿ, ಯೇರ್ಸಿಗಂಡು ಜನ್ಪದಾ ಪದ್ಹಾಡ್ಕೊಂಡು, ವಾಲ್ಹಾಡ್ಕೊಂತಾ, ತೇಟು ವೀರಬಾಹುವ್ನಿಂಗೇ… ಯರ್ಡು ಕೈಯಲ್ಲಿ, ಯರ್ಡು ಯೆಂಡ್ಸಾರಾಯಿ, ಸಿಸ್ನಾ ಯಿಡ್ಕೊಂಡು, ಸಪ್ರದಾ ಮೂಲ್ಗೆ ಬಂದ್ಕುಂತ್ಗಂಡ!
ಯೆಡ್ತಿ ಮಲ್ಲವ್ವ ಪರ್ಯಾಣ್ಡ ತುಂಬಾ ಯೆಮ್ಕೆ, ಮೂಳ್ಗೆ, ಯೀರಿ, ಲಲ್ಡಿ, ಶರ್ಬಿ, ಗುಂಡ್ಗೆ, ಪಚ್ಚಿ, ತ್ವಡಿ… ಯೀಗೆ ಯೆಲ್ಲ ದೆವ್ದೇವಿ… ಗೋಪುರ್ದಾಂಗೇ… ತಂದ್ಗುಡ್ನ ಮುಂದಿಟ್ವು, ಯೆಂಡ್ಸಾರಾಯ್ಸೀಸ್ನಾ ಯಲ್ಡು ಕೈಗಳಿಂದ. ಸಳ್ಳೆಕ್ವಾಣ್ಗೆ ವಯ್ಯದ್ಲು. ಗಳಾಸಿನ್ಯಾಕೆ ಯೆಂಡ ಬಗ್ಸಿಗೊಂಡು, ಗಟ್ಗಾಟ್ನೆ ಕುಡ್ದಿ ಮಲ್ಲವ್ವ, ಮೆತ್ನೆ ತುಂಡೊಂದ್ನ ಬಾಯಲ್ಲಿಟ್ಗೊಂಡು, ಅಡ್ಸಾಬ್ಬಡ್ಸಾಲಾ ನಮ್ಲು ‘ಗುಳುಂ’ ಅಂತಾ ನುಂಗಿ, ಗಂಡ ಸೀತಯ್ಯ, ಕರ್ದೆ ಕರೆಗೆಂಟ್ಗೆ ಸರ್ಗನೆ ಬಂದು ಯೆದ್ರಿಗೆ ನಿಂತ್ಲು!
‘ಯೇ… ನನ್ಗೂಂದಿಶ್ಟು ಸಾರಾಯ್ನಿ ವಯ್ಕೊಡೆ’ ಎಂದು, ಸೀತಯ್ಯ ಯೆಂಡ್ತಿ, ಮಲ್ಲವ್ವನ್ಗೆ ಕೇಳ್ದಿ.
‘ಅಯ್ತು!’ ಯೆಂದು, ಸಳ್ಳೆಕ್ವಾಣೆಗೋಗಿ, ಗಳಾಸ್ನಿ ತುಂಬಾ, ಸಾರಾಯ್ನಿ ಬಗ್ಸಿ ತಂದು, ಗಂಡ್ನಿ ಮುಂದಿಟ್ಟು, ವುಡ್ರುತಾಕೆ ವೋಗಿ ‘ಯಿಂಗೆ ಯೆಮ್ಕೆ ಸಿಕ್ಬೇಕು! ಚಿಚ್ಚಿ ತುಂಡ್ನಾ ಯಿಂಗ್ಡಿದು ಕಿತ್ಬೇಕು! ಯೀ ಮೂಳ್ಗೆನಾ ಅಡ್ಗಲ್ಗೆ ಯಿಂಗೆ ಕುಟ್ಟಿ ಕುಟ್ಟಿ… ಅದ್ರೊಳ್ಗಿನ ಕಣ್ಣೀನ ಯಿಂಗ್ಳಿಬೇಕು!’ ಯೆಂದು, ತೋರ್ಸಿ ತೋರ್ಸಿ… ತಾನೂ ತಿಂದೂ, ವುಡ್ರುಗೆ ತಿನ್ಸಿ… ಮೂಗ್ನೇಳ್ದೆ ಹಚ್ಚನೇ ಗ್ವಣ್ಣಿನ ವರ್ಸಿಕೊಳ್ಳತಾ… ವಲ್ಗೆ ಕಟ್ಗೆ ಪುಳ್ಗೆಳನ್ನು ಮುರ್ದಿಕ್ಕಿ, ವೂದ್ಗೊಳ್ವಿಯಿಂದ ‘ವುಫ್ಽ… ವುಫ್ಽ…’ ಅಂತಾ… ಬಗ್ಗೆದ್ದು ವೂದಿ ವೂದಿ, ವುಗೀನ ಯೆಚ್ಗೆ ಮಾಡಿ, ಕಣ್ಗಾಳು ಪಿಸ್ರು, ಮಕ್ದ್ಮೇಲ್ನಿ ಬೂದ್ನಿ ಸೆರ್ಗಲಿ. ವರ್ಸಿಕೊಳ್ತಾ ಕುಂತ್ಲು.
‘ಲೇ… ಮಲ್ಲು, ಯಿಲ್ಲಿ ಅಗ್ಲು ನೋಡೇ…! ಆನ್ಕೈಗೆ ಹಪ್ಳಾ ಕ್ವಟ್ಟಾಂಗಾತು! ಯಿನ್ನೊಂದ್ಕೈ ಯಿತ್ತಾ ನೋಡೇ… ನೀಸಿಲ್ದೆ ಬಾಳಾ ದಿನ್ಗುಳಾದ್ವು! ಬಾಯೆಲ್ಲಾ ಕುಲ್ಗೆಟ್ಟು, ಕೆಟ್ಟು ಕೆರ್ಹಿಡ್ದಿ ವೋಗೇತೇ…’ ಸೀತಯ್ಯ, ಸಪ್ರದಾ ಮೂಲ್ಯಾಗ್ಳಿಂದ, ಕೂಕ್ಕೊಂಡ.
‘ಅಯ್ತು ಯಿಗಾ ಬಂದೇ…’ ಯೆಂದು… ಮಲ್ಲವ್ವ, ಮಣ್ಬಟ್ಲಾ ತುಂಬಾ ಮತ್ತೇ ಯೆಮ್ಕೆಗಳ್ನಾ, ಮೆತ್ತು ಮೆತ್ತಮವು ತುಂಡ್ಗುಳನ್ನು ತೋಡಿ ತೋಡೀ… ತಂದ್ತಾಂದು ಯಲ್ಡು ಸಲ ಆಕಿದ್ಲು! ಸಾಕೆಂಬ್ದಂಗೆ, ಬೀಕೆಂಬ್ದಂಗೆ ಪಲ್ಲಾಮೂಟೆ ಕುಂತಂಗೆ, ಕುಂತಿದ್ದ, ಭೂಪತಿ, ಗಂಡ್ನಾವತಾರ್ವ ಅಂಗೇ ನೋಡಿ… ‘ಅಬ್ಬಾ! ವಳ್ಳೆ ಕಬ್ನಾ ಸೀಕ್ದೆಂಗೇ ಯಮ್ಕೆ, ಮೂಳ್ಗೆಗಳನ್ನು ಯಿಂಡ್ಪೆ ಮಾಡಿ, ನುಣ್ಗೆ… ನಮ್ಲಿ… ಸಣ್ಗೆ ಅರ್ದು, ಗಾಣಾತಿರ್ವಿದಂಗೇ… ನುಂಗಿಗೆ ಭೂಪ! ಯಿನ್ಬೇಕಾದ್ರೆ… ಯೀಗ್ಲೆ ಯಾರ್ಬೇಕಾದ್ರು ಕೇಳ್ರೀ… ಯಿಗಾ… ಲವಂಗ, ಚಕ್ಕೆ, ಮೆಣ್ಸು, ಗಸ್ಗಾಸೆ, ಹಸಿಶುಂಠಿ, ಕ್ವತ್ತಂಬ್ರಿಸಪ್ಪು, ಪುದಿನಾ, ವುಳ್ಸಿಕ್ಕಿ ಪಲ್ಲೆ, ಟಮಾಟ, ವುಣ್ಸೆ ವುಳಿ, ವಣಾಕೊಬ್ರಿ, ವಣಮೆಣ್ಸಿನ್ಕಾಯಿ, ಬೆಳ್ಳುಳ್ಳಿ, ಅರ್ಸಿಣಾ… ವುಪ್ಪು… ಯೆಲ್ಲ ಸಣ್ಗೆ ಗಂಧಾರುಬ್ದುಂಗೆ ರುಬ್ಬಿದ ಸನ್ನಾಯ್ನಿ ಯಿಗ್ಹಾಕಿ ಸಳ್ಗೆಗಡ್ಗೆಯ ಮುಚ್ಳ ಮುಚ್ತೀನಿ, ಭೇಶ್ ಭಳ್ಮಾಳಾ ಕುದೇತನ್ಕಾ, ಯಾರೂ ವಲೆ ಮುಂದೆ, ಅಡ್ಡಾಡಂಗಿಲ್ಲ! ಕಿಮುಕ್ಕು…… ಅನ್ನಂಗಿಲ್ಲ… ನಡ್ರೀ ಯಲ್ರು ಗಾಳ್ಗೆ… ಅಂಗೇ ಅಂಗ್ಳದ್ಕಡ್ಗೆ ನಡ್ರೀ…’ ಯೆಂದು, ಮಲ್ಲವ್ವ ಮೆಲ್ಗೆ ತಾಕತ್ಮಾಡಿ, ಯಲ್ರೂನು ವರ್ಗೆ ದಬ್ಬಿ… ವಳ್ಗೆ… ಅಕ್ಕಿ ಬಾನ ಮಾಡ್ಲು, ದಾಸೆ ವಯ್ಯಲು, ವಲೆ ಮುಂದೆ, ನೀರ್ನೀರ್… ಅದ್ಲು!
ಗಂಟ್ಲ್ಮಾಟ್ವಾ ತಿದ್ತಿಂದು, ಸೆಂಬ್ನಿ ತುಂಬಾ ನೀರ್ಕುಡಿದು, ಬಕಾಸುರ್ನಾಂಗೆ ಢರ್ರಾನೇ… ಕೇರ್ಕೇರ್ನೇ ಅಡಲ್ಲಾಗಂಗಾ ಡೇಗಿ, ಪರಿಯಾಣ್ದಲಿ ತಿಕ್ತಿಕ್ಕೀ… ಕೈ, ಬಾಯಿ ತ್ವಳ್ದೆ… ಸಂಣ್ಣ ಅನ್ಮೆರಿಯಂಗೇ ಯೇಳ್ಲಾರ್ದೆ ಯೆದ್ದು. ಅಲ್ಲೇ ನೆರ್ಕೆ ಸಂಧಿಲ್ದಿ ಹಳೇ ‘ಅರ್ಕೂ ಪರ್ಕೂ…’ ಸಳ್ಬಟ್ಗೆ ಕೈ, ಬಾಯಿಯ ಜಿಡ್ಡು… ಬೆರ್ಸಿಣಿನಾ ಭೇಶ್ ತಿಕ್ಕೆಂಡ. ಸಳ್ಳೆವಲ್ಗೆ ಜೋಲ್ವಿಡಿದೂ… ಬಗ್ಲಾರ್ದಾ ಬಗ್ಗಿ. ಟೇಬಲ್ ಬೀಡ್ನಿ ಹಚ್ಚಿಗಂಡು ‘ಬುಸ್ ಬುಸ್…’ ಅಂತಾ ವಗೆ ಬಿಡ್ತಾ, ಅಂಗ್ಳದ್ಕಟ್ಗೆ ಅಂಗೇ… ಸಣ್ಣಂಗಿಪದಾ ಗುನ್ಗುತಾ… ಅಡ್ಡಾದ.
ಅಂಗ್ಳದಾಗೆ… ಐದಾರು ನಾಯ್ಮಿರ್ಗಿಳು ಕುರ್ರೋ… ಮುರ್ರೋ… ಮಾಡ್ತಾ, ಸೀಕ್ಬಿಸಾಕ್ದಿ ಯಮ್ಕೆ, ಮೂಳ್ಗೆ, ಹಸ್ಹೀಸೀ ಗ್ವಳ್ಳೆ, ಬಡ್ದು ಸಳ್ಳೆ, ಸತ್ತೆ, ಯಿಂದ್ಲುದೂ… ಮುಂದ್ಲುದೂ… ಬಿಸಾಕ್ದಿನಾ… ಆಡ್ಯಾಕೆ ಮ್ಯಾಕೇ ಬಿದ್ಬಿದ್ದು… ತಿನ್ತೊಡ್ಗಿದ್ದ ನಾಯ್ಗಿಳ ಸಿನ್ನಾಟ್ನಾ ನೋಡ್ತಾ ನೋಡ್ತಾ… ಗುನ್ಗುತ್ತಿದ್ದ ಸಣ್ಣಂಗಿಪದ್ಗಳನ ಅಂಗೇ ಮರ್ತೋದ! ಯಾವಾಗ ನಿದ್ಹೋದನೋ ಯೇನೋ… ಕೇರಿಯ ೧೦ ಜನ ಮಣೆಗಾರರೆಲ್ಲ ಬಂದು, ಯದೆಮ್ಯಾಲೆ ನಿಂತು…
‘ಯೇ ಸೀತಯ್ಯ… ವತ್ತಾತು! ಯದ್ದೇಳು… ರಾಮಾಪುರ್ದ ಯೆಂಡ್ಗೇರ್ಗೆ ವೋಗಲು ತಡವಾತು ಯೆದ್ದೇಳೆಂದು’ ಅಂದಾಗ್ಲೇ ಸೀತಯ್ಯನ್ಗೆ ಯೆಚ್ರಾಗಿದ್ದು! ಅಶ್ಟು ಯೆಚ್ರಾದಪ್ಪಿ, ಸಂಗ್ನಿವತ್ಲಿಂದಾ… ಮಲ್ಗಿದ್ವನು ದಿಡ್ಗಿನೆದ್ದು, ಕೈಕಾಲ್ಮಾಕತ್ವಳ್ವೆ ಶಾಸ್ತ್ರ ಮಾಡಿ, ಮನೆಯ ಮೂಲೆಯಲ್ಲಿ, ಬಿಚ್ಚಿಟ್ಟಿದ್ದ… ತ್ವಗ್ಲು, ಕ್ವಂಬೆರ್ಡು, ನಾಲ್ಕು ಗೋರೇಜಣ್ದ ಗೆಡ್ಗೆಗಳನ್ನು ವತ್ತು. ರಾಮಾಪುರ್ದ ದಾರ್ನಿ… ಯಿಂದೆ, ಮುಂದೆ, ಮಣೆಗಾರರೆಲ್ಲ ಯಿಡ್ದುರು.
* * *
ಯಿದೀಗ ತಾನೇ ಸೂರ್ಯ ಮುಳ್ಗಿ, ಕೇರ್ಕೇರ್ನೇ ತಂಪಡ್ರಿದಾವತ್ತು, ಯಿಂಥಾ ವೇಳೆಯಲ್ಲೂ ವೂರ್ಕೇರಿ ಬಿಸಿಯೇರರ್ತೊಡ್ಗಿತು! ರಂಗಪ್ಪಣ್ಣ, ರಂಗಪ್ಪಣ್ಣನ ಯರ್ಡನೇ ಯಂಡ್ತಿ ರಂಗವ್ವ, ಮಕ್ಳು, ಮಮ್ಮಕ್ಳು, ಮರಿಮಮ್ಮಕ್ಳು ಗುಂಪಾಗಿ, ಹಂದ್ಗಿಳ ಯಿಂಡ್ನಿಂತೆ, ವೊರ್ಕೇರಿ ತುಂಬಾ… ಬೆಕಂತ್ಲೆ ‘ಗಬ್ಗಾಬಾ…’ ಮಾಡ್ತಾ… ಬೈದಾಡ್ತಾ, ಕೂಗಾಡ್ತಾ, ಸಿಡ್ಸಾಪ್ಸಾತಾ… ಕಲ್ಲು, ಮಣ್ಣು ತೂರ್ತಾ… ‘ಯೇನ್ವಾಂದ್ಕಾಲ್ನೇ… ದಿನ್ಮಾನಾನೇ… ನಮ್ ಮಕ್ಳು ಮರಿ, ಕೇರ್ಗೀರ… ಅನ್ಗಿರ್ಮುಂದೆ, ಮಣ್ಬಟ್ಲಾ, ಮುಚ್ಳಾ, ಪರಿಯಾಣ, ಚಿಪ್ಪು, ಕಪ್ಡಿದೂ… ಮನ್ಮೆನ್ಗೋಗಿ ವುದ್ಕಾ, ಸಾರ್ಗೆ, ಚಿಚ್ಚಿಪಲ್ಗೆ… ವೋಗಾ ಸೊಪ್ತಿ ಮಾಡ್ದಿವ್ರಾ ಮನ್ಹಾಳಾಗ್ಲಿ ನಿಸಾತ್ರಾಗ್ಲಿ! ಅವ್ರಿಗೆ ಬರ್ಬಾರ್ದು ಬರ್ಲೀ! ಪೆಂಜ್ರೆ ಕಡ್ಲೀ. ಮಧ್ಯಾನ್ದಾಗೆ ಹೂವು, ಮುಡ್ಸಿಲಿ. ಸತ್ತಲ್ಲಿ ಕತ್ತೆವಳ್ಲಿ, ವುಂಬಾ ಬಾನ ನಲ್ಕೆ ಬೀಳ್ಲಿ, ಅವ್ರಾ ಮಕ್ಳು ವಕ್ಲಿಕ್ಲೀ, ನಮ್ಗತಿ ಅವ್ರಿಗ್ಬೆರ್ಲೀ…’ ಯೆಂದು, ಕಾಗೆಗ್ಳು ’ಕವ್ಽ ಕವ್ಽ…’ ಮಾಡ್ದಿಂಗೇ ತಾಸ್ಗಾಟ್ಲೆ ಮಾಡಿದ್ರು.
ಸುದ್ದಿ ಸಿಡ್ಲಾರ್ಗಿದಂಗೆ ವೂರ್ಕೇರ್ಗೇನು? ರಾಮಾಪುರ್ದ ಕಟ್ಗುರ್ಗೇನು? ಯೆಂಡ್ದಗೇರಿಯಲ್ಲಿ… ತಂಪಾಗಿ, ಅನಂದ್ವಾಗಿ, ಯೆಂಡ್ಸಾರಾಯ್ನಿ ಯೀರ್ತಿದ್ದ ಸೀತಯ್ಯ ಯಿತ್ರೇ… ಮಣೆಗಾರರ್ಗೆಲ್ಲಾ… ವಡೆದಾಟ, ಬಿಡಿದಾಟ, ಕೈ ಕೈ ಮಿಲಾಯಿಸ್ವು, ಪ್ರಸಂಗ ಕೇರಿಯಲ್ಲಿಂದು ರಾತ್ರಿ, ಯೆದ್ರಾಗ್ವೂ ಅತಂಕಕಾರಿ ವಿಶಯ ಯಲ್ರುನೂ ದಂಗ್ಬುಡ್ಸಿತು!
ಅನ್ನೊಂದು ಜನ, ಮಣೆಗಾರರೊಳ್ಗೆ ರಂಗಪ್ಪಣ್ಣನ ಪರಾ, ವಿರೋಧದ ಬಿಸ್ಬಿಸೀ ಚರ್ಚೆ, ವಾದ, ವಿವಾದ್ಗಳೂ ವರ್ಬಿದ್ವು. ಯೆಂಡ್ಸಾರಾಯ್ನಿ ಯೀರ್ತಾ ಯೀರ್ತಾ… ಕಟ್ಗುರಗೇರಿಯಲ್ಲಿ ಮಾರಾಟವಾದ ತ್ವಗ್ಲಿನ, ಗೋರೇಜಣ್ದ, ಕ್ವಂಬ್ಗಿಳ ರಕ್ಕ ಯೆಣಿಸ್ತಾ… ಸೀತಯ್ಯ ತ್ವದ್ಲುಬದ್ಲಾದ. ತಲ್ತೆಲೆ ಕೊಡ್ವಿ, ಹಲ್ಲಾಲ್ಲು ಕಟಿದು, ಕಣ್ಣುಗುಡ್ಗೆಳ್ನಾ… ಗರ್ಗರ್ನೇ… ತಿರ್ವೊಕೆ ಶುರುಮಾಡ್ದಿವ್ನೇ… ‘ನನ್ಸಂಗ್ತಿ ಆ ರಂಗ್ನಿಗೆ ಗ್ವತ್ತಿಲ್ಬಿಡ್ರೀ… ನಾ ವಮ್ಮೆ ಸೇಡಿಡ್ದಿರೆ ಮುಗೀತು! ಧಣ್ಗಿಳ ಮನೆಯಲ್ಲಿದ್ದ, ಅಣ್ಣ ಬಸವಣ್ಣನಾ ಯಿವತ್ತು, ಕೊಂದಿದ್ದು ನಾನೇ! ಅಣ್ಣ ಬಸ್ವಣ್ಣನ ಗತಿನೇ… ಆ ರಂಗ್ನಿಗೆ, ಬರ್ತೇ ಯೇಳ್ಬಿಡ್ರೀ…! ನನ್ನ ಮಣೆಗಾರ್ನ ಮಕ ಮಾತ್ರ ಕಂಡಾನೇ. ನನ್ನ ಯರ್ಡನೇ ಅವ್ತಾರ ನೋಡಾದು ಬ್ಯಾಡನ್ರೀ…’ ಕುಡ್ದಿ ಅಮ್ಲಲ್ಲಿ ಮಣೆಗಾರರ್ಮುಂದೆ… ಯದಿವುಬ್ಸಿ, ಬಿಳಿ ಮೀಸ್ನೆ ತಿರ್ವಿ, ಬಿಂಕ್ದಲಿ ಕೆಂಡದಂಥಾ… ಸತ್ಯನ ವರ್ಗಿಟ್ಟ!
ಕುಡಿದು ಗಾಳಿಯಲ್ಲಿ ಅನಂದ್ವಾಗಿ ತೂರಾಡ್ತಿದ್ದ ಮಣೆಗಾರರೆಲ್ಲ, ಬಾಲ ಮುರ್ದಿಕೊಂಡ ಕೋತಿಯಾದ್ರು. ಕುಡ್ದಿ ಅಮ್ಲು ಜರ್ರಾನೆ ಯಿಳಿದು, ಪಂಚೆಯೆಲ್ಲ ತಣ್ಗಾಯ್ತು! ಕಕ್ಕಾಬಿಕ್ಕಿಯಾಗಿ ಕಣ್ಣು… ಕಣ್ಣು, ಕಾಲು ಬಿಡ್ತಾ… ಕಣ್ಣು ಬಿಡ್ತಾ ಕಮಂಗಿಗಳಂತೆ ಕುಂತ್ರು.
‘ಅಲ್ಲಾ… ಯಿವಿನ್ಯಾವಾಗ ಕೀಚಕ, ದುಶ್ಯಾಸನ, ರಾವಣ, ಕಂಸ, ಮಾರೀಚನಾದ್ನಪ್ಪಾ!’ ಸಿವಪ್ಪ ಕುಡೇದ್ಬಿಟ್ಟು, ತಲ್ಮೆಲೆ ಕೈವತ್ತು ಕುಂತ!!
‘ಯೆಂಡ್ಳಿಯ್ದ ಗಂಟ್ಲಿಗೆ ಕಾಲ್ಗಟ್ಟೆ ತುರ್ಕಿದಂತಾಯ್ತು!’ ಮಲ್ಲಪ್ಪ, ಸುಸ್ತಾಗಿ ಕುಂತ!
‘ರಾತ್ರಿ ಕಂಡ ಬಾವ್ಗೆ ಹಗ್ಲು ಬಿದ್ದಂತಾಯ್ತು!’ ಕುಂಟಕಲ್ಗಾ, ವುದ್ಗಾರ ತೆಗ್ದೆ.
‘ಲೇಽ… ಸೀತಣ್ಣ, ಮೈಮ್ಯಾಲೆ ಗ್ಯಾನ್ವಿದ್ದು, ಯೀ ಮಾತಂದಿಯೇನ್ಲೇ? ನಮ್ಮ ಅಣ್ಣ ಬಸ್ವಣ್ಣನ ಕೊಂದಿದ್ದು ನೀನೇನ್ಲೇ ?! ಯಿನ್ನಂದ್ಸಾರಿ, ಯಿಂಗಂದದ್ದು ಬೊಗ್ಳೆಲೇ??’ ಸಿವಪ್ಪ, ಸೀತಯ್ಯನ ಯಿಡಿದು, ಅಲ್ಸಾಡ್ಸಿ… ಅಲ್ಲಾಡ್ಸಿ… ಕೇಳ್ದಿ. ಯಿಶ್ಟತ್ತು ಸಂತೆಯಾಗಿದ್ದ ಯೆಂಡ್ದೆಗೇರಿ, ಸೀತಯ್ಯನ ಮಾತ್ನಿ ದೆಬ್ಗೇ… ಚಿಂತೆಯ ಗೂಡಾತು! ಸುಡ್ಗೂಡು ಸಿದ್ಧರ್ಮಾಟ್ಯಾಯ್ತು! ನೂರಾರು ಜನ್ರ ವೃದಯ ಬಡ್ತಿನೂ ಕೇಳಿಸ್ವುಂತಾಯಿತು!
‘ಯೇ… ಥೂ! ಕೈಲ್ಗಾದ ಮಾದ್ಗಿ ಮುಂಡೇ ಮಕ್ಳೆ! ಸತ್ತ ದನಾ ತಿಂದೂ… ತಿಂದೂ… ಯೀಗಾಗ್ಲೆ ಸತ್ತು ವೋಗ್ಬಿಟ್ಟಿರೇಲೇ… ಅದೇ ವರ್ದೇಶ್ದಾಗೆ ಸತ್ತ ದನ್ಗಳ ತಿಂದೂ ತಿಂದೂ…. ಬುದ್ಧಿವಂತರಾಗೇರೆ… ವಿಮಾನ, ರೈಲು, ಟೀ ವಿ, ರೇಡಿಯೋ, ಫೋನು, ಬಲ್ಪು, ಕರೆಂಟು, ಯೇನೆಲ್ಲ… ಕಂಡಿಡ್ದಿವರೆಲ್ಲ ಸತ್ತ ದನ, ಕರ, ಮೀನು, ಮೊಸಳೆ, ಕಪ್ಪೆ, ಹಾವು, ಚೇಳು, ಕತ್ತೆ, ಕುದ್ರೆ ನಾಯಿ, ಕೋತಿ, ತಿಂದೇ ವಿಶ್ವದಾಖಲೆ ಮುರ್ದಿವರಾಗಿದ್ದಾರೆ!
ಯಿಲ್ಲಿ: ಯಿಂಡಿಯಾದಲ್ಲಿ: ಸತ್ತ ದನಾ ತಿಂಬಾರೆಂದ್ರೆ ಯೇಳ್ಪಾಪ್ಗಿಳು! ವೂರು ಪಾಪ್ಗಳು! ವೂರು ವರ್ಗಿನವ್ರು! ನಮ್ಮಣ್ಣ ಬಸ್ವಣ್ಣನ ಕೊಂದ್ವನು ನಾನೇ! ರೆಡ್ಡಿ ಮೇಲ್ನಿ ಕ್ವಾಪ್ನ… ಅ ಬಸ್ವನ್ಮೇಲೆ! ಯೀ ಮನ್ಸುರ್ಗೆ ಬರ್ದೆ ಅ ಮರ್ಕೆ ಕಷ್ಟಗಳು ಬರುತ್ತವೇನು? ಯಾರ್ಗೆ ಯೆದ್ರುಸ್ವು ಗುಂಡಿಗೆಯಿದ್ದವ್ರಿಗೇ ಕಷ್ಟಗ್ಳು ಬರಾದು. ಯೆದ್ರಿ ಯೆದ್ರಿನೇ ಯೀ ಕೇರಿನೇ ನಮಗಿಂದೂ… ಗತಿಯಾಯ್ತು! ಯಿಗಾ ತಗಳ್ರೀ… ಯಿನ್ನೂ ನೂರು ರೂಪಾಳು! ಯಿನ್ನೂ ಯಲ್ಡು ಸೀಸಾ ಯೆಂಡ್ಸಾರಾಯ್ನಿ ತತ್ತಾರ್ಲೇ!’ ಎಂದು, ಸೀತಯ್ಯ… ಜೋಲ್ವಿಡಿತಾ ಬಕ್ಣಾದಿಂದ ಕಿತ್ಕಿತ್ತಿ… ಸರಿಯಾಗೇ ರಕ್ಕನಾ ಯೆಸ್ದಾ.
ಅವ್ನಾ ಮಾತ್ನಿ ಅಮ್ಲು, ವುಳ್ದಿವ್ರಿಗೆ ಯೆಂಡ್ಸಾರಾಯ್ಗಿಂತಾನೇ ಜಾಸ್ತಿಯಾಯಿತು! ಅಲ್ಲೇ ಯಿವ್ರಾ ಬೆನ್ನಿಂದೆ ಕಾಣ್ದಂತೆ ಕೂತು, ಮಗಿಯಲ್ಲಿ ಯೆಂಡಾ ಗುಟ್ಕರ್ಸಿ, ಯಕ್ಕೆ ಯೆಲ್ಯಾಗೆ… ಶಾಕಣ ನೆಕ್ಕುತ್ತಿದ್ದ, ಕೇರಿಯ ರಂಗಪ್ಪಣ್ಣನ ಕಿವ್ಗಿಳೆರ್ಡು ಕುಂದ್ಲಿಯಂಗೇ… ನಿಗ್ರದ್ವು! ಯೆಲ್ಲ… ತಾಸಿನಿಂದ ಕೇಳ್ಸಿಕೊಳ್ತಿದ್ದವ್ನಿಗೆ ನಿಧಿ ಸಿಕ್ಕಶ್ಟು ಖೂಷಿಯಲ್ಲಿ… ‘ಆಹಾಽ… ಯಿಶ್ಟು ದಿನ್ಕೆ ನನ್ಕೈಗೆ ಸಿಕ್ಬಿದ್ರಿಲೇ… ಕುಡ್ದಿವ್ನ ಬಾಯಲ್ಲಿ ಕಟುಸತ್ಯ ನಿಲ್ಲುವುದಿಲ್ಲ. ಕುಡ್ಕುನ್ಗೆ ನೀತಿ, ನಿಜಾತಿ ನಿಯತ್ತು… ಜಾಸ್ತಿ. ಯಿವತ್ನೋಡ್ರಿ… ಯಿದೇ ದೊಡ್ಪಾ! ಬಯ್ಲಾಟ! ಕಡ್ಡಿಗೀರಿ… ಆಹಾಽ… ಯಂಗ್ಡಿತ್ತೀನಿ ಬೆಂಕಿನಾಽ…? ಕ್ವಳ್ಕು. ಕಟ್ಕು ಮಣೆಗಾರರೇ… ಹಸೀದು, ವಣ್ಗೆದ್ದು ಯಂಗೆ ಸುಟ್ಟು ಸುಟ್ಟು ಸುರ್ರುಸುಮ್ಮಾಗೆ ವೋಗ್ತೇ! ಯೀಗ್ಲೆ ವೂರು ಧಣ್ಗಿಳ್ಗೆ ಸಿಹಿ… ಸಿಹಿ ಬಿಸ್ಬಿಸೀ… ಸುದ್ದಿ ಮುಟ್ಸಿ… ನಿಮ್ಗೆಲ್ಲ ಮದ್ವೆ ಮಾಡ್ಸಿತ್ತೀನಿ…’ ಯೆಂದು, ರಂಗಪ್ಪಣ್ಣ ಬಯ್ಲಾಟ್ದ ಪದ್ಗಳನ್ನು ವಪ್ಸಿ, ಮುಗ್ಳಿಡ್ಗಿ ಯಿದ್ದ. ತನ್ನ ಹರ್ಕು ಟುವ್ವಾಲ್ನ ಜಾಡ್ಸಿ, ಕ್ವಡ್ವಿಕ್ಯಾಂತಾ… ತ್ವಡ್ತಿಟ್ಟಿ, ಬಿಳಿಮೀಸೆ ವುರಿ ಮಾಡಿ, ಬೆಳ್ಳು ತೊರ್ಸಿ, ತುಟಿ ಅವ್ಡುಗಚ್ಚಿ, ಚಿರ್ತೆಯಂತೆ ವಂದೇ ವುಸ್ರಿಗೇ… ಕಣ್ಮರೆಯಾದ.
ಕುಡಿದು, ತುಗುತ್ತಿದ್ದ ಜನ್ರು, ತಬ್ಬಿಬ್ಬಾದ್ರು… ‘ಭಪ್ಪಿರೇ ರಂಗಪ್ಪಣ್ಣ ವಡೀ ವಡಿಲೇ ರಥಾವ ಬಿಡ್ಬೇಡಾ… ರಣಭೇರಿ ಭಾರ್ಸಿ, ಕಹಳೆಯಂ… ವೂದಿಬಿಡಲೇ… ಕುರುಕ್ಷೇತ್ರ ಮಹಾ… ಯುದ್ಧಕ್ಕೆ ಸನ್ನಾದ್ಧನಾಗ್ಲೀ… ಕೆಹೇಹೇ…’ ಯೆಂದಿತು.
‘ಲೇ… ಲೇ… ತಮ್ಮಾ… ರಂಗಾ… ವಿಠಲಾ… ಪಂಡ್ರಾಪುರ್ದಾ… ಪಾಂಡುರಂಗಾ… ರಂಗಪ್ಪಣ್ಣಾ… ತಡಿಯೋ ತಂದೇ… ಪುಟ್ಟದ್ಯಾವ್ರೇ… ರವ್ವಾಟು… ತಡ್ಕು…’ ಕೇರ್ಗಿರೆಲ್ಲ ಟುವ್ವಾಲ್ಹೊಡ್ಡಿ, ಅವ್ನಾ ತೆಕ್ಬೆಡಿದು, ಬಿಗ್ದಿಪ್ಪಿಕೊಳ್ಳಬೇಕೆನುವಶ್ಟರಲಿ, ಪುಸ್ಕಿಂಡು, ಬೆಣ್ಣೆಯಂಗೇ… ಮೀನು ಜಾರಿ ವೋದಂತೆ, ರಂಗಪ್ಪಣ್ಣ ವೂರ್ಕಡ್ಗೆ ಛಂಗ್ನೆ ಮಾಯಾದ… ಜಿಂಕೆಯಂಗೆ, ಯಾರ್ಕೈಗೆ ಸಿಗ್ದಂಗೇ ಮರೆಯಾದ.
ಯಿತ್ತ ಮಣೆಗಾರರೆದೆ ಧಸ್ಕೆಂದಿತು. ಮೂಗ್ಬಸ್ವನಾ ಥರಾ… ವಬ್ರ್ಮಕ ವಬ್ರು ನೋಡ್ತಾ… ನಿಂತ್ರು. ನಮ್ಬೆನ್ನು ನಮ್ಗೆ ಕಾಣಲ್ಲ! ಯಿದ್ನಾ ಯಲ್ರು ಮದ್ಲು ತಿಳ್ಕೋಬೇಕು. ಶತ್ರುಗ್ಳು ಬೆನ್ನಿಂದಿರ್ತಾರೆ. ಆಪ್ತಮಿತ್ರರು ಯೆದ್ರಿಗಿರ್ತಾರೆ. ನಮ್ಬೆನ್ನಿಂದೇ ರಂಗಪ್ಪಣ್ಣನಿದ್ದ ಯೆಂಬ ಸತ್ಯ ಯಾರ್ಗಿ ತಿಳಿಲಿಲ್ಲ! ಯೀಗೇನು ತಳ್ಳಿ ತರ್ತಾನೋ ಯೇನೋ…?!’ ಗುಸ್ಗೂಸು ಆದ್ರು…
‘ಥೂ… ನಿಮ್ನ! ಯೇನೋ ಗಂಟ್ಕಳ್ಕೊಂಡಾರು… ಯೆಳ್ರಾಂಡೆ ಮುಂಡ್ಯಾರು ನಿಂತಂಗೇ ಗುಂಪ್ಲಿ ಹಂದ್ಗಿಳು ನಿಂತಂಗೆ ಯೇನ್ ಯಳ್ವೆರೆ ಗೂನೇ, ಗೂದ್ವೆಂಡ್ಸಿಗಂಡು ನಿಂತ್ರಿಲೇ? ಅವ್ನೇನು ಕಿಸ್ತಾನೋ, ವೋಗಿ ಕಿಸ್ಲೀ… ಡಬ್ಬಾ, ತಗ್ಡು. ಕಿತ್ತೋದ ಹಳೇ ಕಾಲ್ಮರಿಯಂತ್ವನು! ಅವ್ನೆಂಡ್ತಿ ತಾಗೆ, ಅವ್ನಿಗೆ ಮಕ್ಕಾಂಬಾದೆಂಗೆ, ಅಂತ್ಲೇ ಗ್ವತ್ತಿಲ್ಲ! ಯಿನ್ನು, ಅವನ್ಕೈಲೇನಾಗುತ್ತೇ… ಬಿಡ್ರೀ…’ ಸೀತಯ್ಯ, ವಂಟಿ ಪಟ್ಲಿಯಂಗೆ, ನಿಗ್ರಿದ್ದೇ ನಿಗ್ರಿದ.
‘ಯಲ್ಡು ಕಾಡು ಕೋಣ್ಗಳ ಮಧ್ಯೆ, ಸಿಕ್ಕಿದ ತಂಗ್ಡಿ ಗಿಡ! ಅತ್ಕೇರಿ, ಯಿತ್ತೂರು. ಯರ್ಡರಾ ನಡ್ವೆ, ಜಾಸ್ತಿ ಅಂತ್ರಾ ಅಪಾಯಕ್ಕೆ ದಾರಿ. ಸಮತೋಲ್ನ ಬೇಕು. ಯೀ ಜೀವ್ನಾದ್ವಂಬ್ರಾಟ್ದಾಂಗೇ. ಹಗ್ಗ ಹರಿಬಾರ್ದು, ಕೋಲುಮುರಿಬಾರ್ದು. ಯಿಶ್ಟು ದಿನ್ದ ತಪಸ್ಸು ನೀರ್ಗಾ ಹೋಮ ಮಾಡ್ದಿಂಗಾತು…! ನುಂಗುಲಾರ್ದ ಬಿಸಿ ತುಪ್ಪಾತು…!’ ಯೆಂದು ಸಿವಪ್ಪ, ಯೆಂಡ್ದಗೇರಿ ತುಂಬಾ ಬುಡ್ಬುಡ್ಕೆ ಆಡ್ಸಿತೋಡ್ಗಿದ.
ವುಳ್ದಿ ಮಣೆಗಾರರೂ ಕಣ್ಣು ಕಾಣ್ದ ಗಾವಿಲರಾದ್ರು ಗಂಟ್ಲ ಮಟ್ಟ ಕುಡ್ದಿದ್ದೆಲ್ಲ… ಯದ್ಮಿಟ್ಪ ತಿಂದಿದ್ದೆಲ್ಲ, ಗಾಳಿಗ್ಹೊಂಟೋಯ್ತು! ಜಲ್ಜಾಲಾ… ಬೆಮ್ತರು, ಚಿಮ್ಮಿದ್ರೂ, ಯಾರ ಮಕ್ದಲಿ, ತ್ವಟ್ಗು ರಕ್ತವಿಲ್ಲ. ಗಾಳಿ ವೋದಾ ಪೀಪಿಯಂತಾದ್ರು…
‘ಮಾಡ್ಬಾರ್ದು ಮಾಡ್ದರ, ಆಗ್ಬಾರ್ದು ಆಗುತ್ತೇ… ಯಿನ್ನೇನಾಗುತ್ತೇ?? ನೀವೆಲ್ಲ ನನ್ಜೊತ್ಗಿರ್ರೀ… ಶತ ಶತಮಾನ್ಗಳ ಸೇಡ್ತೀರ್ಸಿನಾ… ನಮ್ಮಣ್ಣ ಬಸ್ವಣ್ಣ ನಮ್ಮವ! ಅದ್ನ ತಾನೇ, ಬಾಳಶ್ಟು ಕಡ್ಗೆ ವಚ್ನಾಗಳಲ್ಲಿ… ಯೇಳಿಕೊಂಡಾನೆ. ಯಿಂದಿಗೂ ಕೇರಿಯಲ್ಲಿ, ಬಸ್ವಣ್ಣನ ಬಗ್ಗೆ, ಪದ ಮಾಡಿ ಆಡುತ್ತಿಲ್ವೇ? ನಾಯ್ಕನಟ್ಟಿ ತಿಪ್ಪೇಸ್ವಾಮಿ ನಮ್ಮವ! ಶಬರಿ.. ಒನಕೆ ಓಬವ್ವ… ಬಾಲನಾಗಮ್ಮ, ಮರುಳಸಿದ್ಧ, ವೀರಬಾಹು, ಪರಮೇಶ್ವರಪ್ಪ ನಮ್ಮವರು. ಮುಕ್ಕೋಟಿ ದೇವಾನುದೇವತ್ಗೆಳೆಲ್ಲ ನಮ್ಮ ಅಪ್ಪ ಆದಿಜಾಂಬ್ವ, ಆದಿಶಕ್ತಿಯ ಮಕ್ಕಳು. ಅಂಬೇಡ್ಕರ್ ನಮ್ಮವ. ಸಂವಿಧಾನ ನಮ್ಮ ಪರವಾಗಿಯೇ… ರಚಿಸಲಾಗಿದೆ! ಯೀಗಿರುವಾಗ… ನಾವ್ಯಾಕೆ, ಕೇರ್ಬಿಟ್ಪು… ಕೂಡಲ ಸಂಗಮಕ್ಕೆ, ವೋಡಿ ವೋಗ್ಲಿ?? ಸೀತಯ್ಯ, ಕುಡ್ದ ಮತ್ತಲಿ, ಗತ್ತಲಿ, ಹಸ್ದಿ ವುಲಿಯಂಗೇ ಆರ್ಭಟ್ಸಿತೊಡ್ಗಿದ.
‘ಯಿನ್ನೆಲ್ಲಿಯ ವಗ್ಗಟ್ಟು? ವಗ್ಗಟ್ಟೆಂಬ್ದು ಕಗ್ಗಂಟಾಗಿದೆ!! ಬ್ರಿಟಿಷರು ನಮ್ಗೆ ಸ್ವತಂತ್ರ್ಯ ಕೊಟ್ಟ ದಿನಾನೇ ನಮ್ಮೊಗ್ಗಟ್ಟು, ನೆಮ್ಮದಿ, ಕನಸ್ಸು, ಮನೆ, ಮನಸ್ಸು, ಹಾಳಾತು! ಆಗ್ಲೇ ಪಾಂಡ್ರಂಗ್ವಿಠಲ ಫಂಡ್ರಾಪುರಕೆ, ಪುಟ್ಟ ಪಾದನೂರಿ, ದಿಟ್ಟತ್ನದಿ ಯಿಂದ್ರಸೇನ್ರೆಡ್ಡಿ ಮನ್ಗೆ ವೋದ್ನಲ್ಲಾ…!? ಯೇನು ಅವಾಂತ್ರ ಮಾಡಿರುತ್ತಾನೋ? ತಲ್ಹೆಡ್ಕು… ಬೆಂಕಿಟ್ಪು ಅಲಾಯಾಡ್ತಾನೋ? ಅವ್ನಾ ಯೆಂಡ್ತಿ ಬಾಯ್ಬಿಡ್ಕಿ! ಯಿಡಂಬಿ ರಕ್ಕಸಿ! ಮಂಥರೆ, ತಾಟ್ಗಿತ್ತಿ… ಮಕ್ಕಳಿಬ್ರು ಐರಾವಣ, ಮಹಿರಾವಣ್ರು… ವಂಶ ಕೌರ್ವಪಡೆ… ಅದೇ ಭಯಾ…’ ಯೆಂದು, ದೊಡ್ಡೆಲ್ಲಪ್ಪ ದ್ವಡ್ದದಾಗಿ, ಮುಸಿಣುಬ್ಸಿ, ಕಣ್ಣು, ಸ್ವಾಟ್ನೆ ತಿರ್ವಿದ.
‘ಯೆದ್ರಾರ್ನಾ ಕಂಡ್ರೆ, ಯಿನ್ನೂ ಯೆದ್ರಿಸ್ತಾರೇ! ಯಿನ್ನಾದ್ರೂ ತಲೆಯೆತ್ತಿ, ತ್ವಡ್ತೆಟ್ಟಿ, ಸೆಟೆದು ನಲ್ರೀ…! ಯಿಗೋ ತಗಾರ್ರೀ, ಯಿನ್ನರ್ಧ ಧರಾಮು ಸಾರಾಯ್ನಿ!’ ಅಂತಾ… ಕಟ್ಕಟ್ಟು ರೂಪಾಳ್ಗುಳ್ನ, ತೆಗ್ದೆ ಸೀತಯ್ಯ, ಯಲ್ರಿಗೂ ಮತ್ತೇ ಕುಡ್ಸಿದ. ಶಾಕಣ ತಿನ್ನಿಸಿದ. ಬೆನ್ತಾಟ್ದಿ. ಯಲ್ರಿಗೆ ಬೀಡಿ, ಸಿಗ್ರೇಟು, ಬಿಂಕ್ಪಿಣಾ, ಯಲ್ಡಕೆ, ವಗ್ಸೆಪ್ಪು… ಅಡಿಕೆಸೀಟಿ… ಕೊಡ್ಸಿ, ಗುಂಪ್ಲಿ ಕುರ್ಮಿಂದೆಯಂಗೇ… ಯಲ್ರು ಕೇರ್ಗೆ ಬಂದ್ರು.
* * *
ಕೇರಿಯೆಂದ್ರೆ… ನಾಲ್ಕನೇ ಪಾಪ್ಪಿಳ ಲೋಕ. ನಿತ್ಯಾನಾರಕಿ, ಪಾತಾಳ ಲೋಕ. ಶತಶತಮಾನ್ಗಳ ಹಳೇ ಮಾಸ್ಲು ಮಾಸ್ಲು ಮಾದ್ರಿ! ಸಾಲ್ಸಾಲು, ಗುಂಪು ಗುಂಪು… ಕಪ್ಪು ಮನ್ಗೆಳು. ಮನ್ಗೆಳ್ಗೆ ಅಂಟಿಕೊಂಡಿರ್ವೂ ಸಪ್ರ, ನರ್ಕೆ, ತಡ್ಕೆ, ಸಳ್ಳೆ ಕ್ವಾಣ್ಗೆಳೂಯಿಶ್ಚೇ…! ಅಂಗಳ್ದಲಿ ನಿಂತ್ರೆ… ಸೀದಾ ಕಾಣ್ವು ಸಳ್ಳೆ ವಲ್ಗೆಳ ವುರಿ…! ಆ ವುರಿಗೆ ಕಾದು ನಿಂತಿರ್ವೂ ಹತ್ತಾರು ನಾಯಿಕುನ್ನಿಗ್ಳು… ಆಟ್ವಾಡ್ವೂ ಮಕ್ಳ ಯಿಂಡು… ಹಂದ್ಗಿಳ ಯಿಂಡ್ನಿಂತೆಯೇ…! ಅಂಗ್ಳದ ಗೋಡ್ಗೆ ಆನಿಕೊಂಡು, ಹೆಳ್ವರಂತೆ ಕುಂತಿರ್ವೂ… ಮುದಿಜೀವ್ಗಾಳ ಗೂರ್ಲು… ಗೂರ್ಲು… ದನಿ! ಮನೆಯಲ್ಲಿ ಸಣ್ಣಗೆ ವುರ್ಲೋ… ಬೇಡ್ವೋ… ಅಂತಾ, ನಿತ್ಯಾ ಅಳ್ವು ದೀಪ್ದ ಬುಡ್ಡಿಗ್ಳು…! ಅಲ್ಲೊಂದು ಯಿಲ್ಲೊಂದು, ಜ್ವಾಲಾಮುಖಿಯಂಗೆ, ಧಗ್ಗೆನೇ ಉರಿವಾ ಸರ್ಕಾರ್ದ… ಕರೆಂಟು ಬೆಳ್ಕು!
‘…ನಮ್ಕೇರಿಯಲ್ಲಿರ್ವೂ ಯೀ ಅರ್ವತ್ತು ಮನ್ಗೆಳ್ಗೆಲ್ಲ ಯೆಂದು ಕರೆಂಟು, ಫ್ಯಾನು, ಟೀವಿ, ರೇಡಿ, ಕುರ್ಚಿ, ಟೇಬಲ್ಲು, ಮಂಚಾ, ಕಾರು, ಜೀಪೂ… ಯಿಂಗೇ ಯೆಲ್ಲ… ಬಂದ್ನಿನಾನೇ ಕೇರ್‌ಗಿರ್ಗೆಲ್ಲ… ಹಬ್ಬ… ನಿಜವಾದ ಸ್ವಾತಂತ್ರ್ಯ!! ದೇಶ ಪ್ರಗತಿಯಲ್ಲಿದೆ! ಆದ್ರಿಂದು… ನಮ್ಕೇರ್ಗೇ ನಾವು ಬರಾಕೆ ಯೆದ್ರಿಕಂಡ್ರೆ… ಯೇಸ್ಗೆ ಪಟ್ಗೊಂಡು ಕ್ರಿಸ್ತರಾಗಿ, ಬೌದ್ಧ, ಲಿಂಗವಂತ, ಯಿಸ್ಲಾಮ್ಗಿಳಾಗಿ ಬದಲಾದ್ರೆ… ಯಿದ್ನಾ ನಮ್ಮತ್ನ, ನಮ್ದೇಶ, ವುರ್ಕೇರಿ, ನಮ್ಜೆನ್ರೂ… ಅಂತಾ ಯಾವ ಬಾಯಿಂದಾ ಕರಿಯೋದೇಳ್ರೀ’ ಸೀತಯ್ಯ ಪಂಡಿತ್ನಂತೇ ಮಾತು ಬೆಳ್ಸಿದ್ದ.
ಅಶ್ಟ್ರಾಗೇ… ಸಿವಪ್ಪ, ನಡುವ್ನೇ ಬಾಯಾಕಿ… ‘ನಮ್ಮಪ್ಪ ಆದಿಬ್ರಹ್ಮಾ… ಆದಿಜಾಂಬ್ವಂತ, ಲೋಕ ಕಲ್ಯಾಣಕ್ಕಾಗಿ, ತನ್ನ ಮಗ, ಯೆಪ್ಪುಮುನಿನಾ ಬಲಿಕ್ವಟ್ಟು, ಯೀ ನೆಲ್ನಾ… ಯೆಪ್ಪುಗಟ್ವುಂತೆ ಮಾಡಿ, ಕೊಲ್ಲುವವನೇ ಮಾದ್ಗಿನೆನ್ಸಿಕೊಂಡ! ದೇವಲೋಕದಿಂದ ಬಿಡದೇ ಛಲದಿ, ಕಾಮಧೇನುವನ್ನು, ವತ್ತು ಭೂಲೊಕಕ್ಕೆ ತಂದ, ಯಿದ್ಕೇ ನಮ್ಗಾ ದನಾ ವೋರ್ವುದೇ ಸೊಪ್ತಿಯಾಗಿದೆ. ನೀನ್ಯಾವ ಪುರುಷಾರ್ಥಕ್ಕಾಗಿ ನಮ್ಮ ಅಣ್ಣ ಬಸ್ವಣ್ಣನಾ ಕೊಂದೇಳು?! ಪ್ರತಿ ಕಾರುವುಣ್ಣೆಮೆಯಲ್ಲಿ, ಗೆದ್ದ ಯತ್ತಿಗೆ, ಮೆರ್ವಣ್ಗೆ ಮಾಡಿದಾಗ, ಕೇರಿತನ್ಕಾ ಮೆರ್ವಣ್ಗೆ ಬಂದು, ವೋಗ್ದೆ ಕೇರಿವಳ್ಕೆ, ಅಣ್ಣ ಬಸ್ವಣ್ಣ ನುಗ್ಗಿ ಬಂದು, ಜಗತ್ತಿಗೇ ಅಚ್ಚರಿ ಮೂಡ್ಸಿದ ತಪ್ಪಿಗೆ, ಕ್ರಾಂತಿಗೆ, ನೀ ಕೊಂದೇನ್ಲೇ?? ನೀ ದೊಡ್ಡ ತಪ್ಪು ಮಾಡ್ಬಿಟ್ಟೆ! ಬಸ್ವಣ್ಣನಾ ಯೇನೇ ಅಗ್ಲಿ ನೀ… ಕೊಲ್ಲುವ ಮಟ್ಟಕ್ಕೆ ವೋಗಿ, ಕೊಲ್ಲುವವವೇ ಮಾದ್ಗಿನೆಂಬಾ ಅನ್ವರ್ಥನಾಮಕ್ಕೆ ತಕ್ಕಂತೇ… ವರ್ತಿಸಬಾರ್ದಿತ್ತು!’ ಯೆಂದು, ಮನಸ್ಸಿನಲ್ಲಿದ್ದುದ್ದನ್ನು ವರ್ಗೆ ಕಕ್ಕಿದ!
‘ಮನುಶ್ಯ ತಪ್ಪು ಮಾಡ್ದೆ, ಯಿನ್ಯಾರು ಮಾಡ್ಲು ಸಾಧ್ಯ? ನಾನೂ ಮನುಶ್ಯ ತಾನೇ? ಮರ, ಗಿಡ, ಪಕ್ಷಿಯಲ್ಲ! ಲೋಕಜ್ಞಾನವಿಲ್ದೆ ತಪ್ಪು ಮಾಡಿದೆ! ಆಂಗೆಂದ್ಬಿಟ್ಟು ನನ್ನ ನಡಾನೀರ್ನಾಗೆ ಕೈಬಿಡ್ತಿರೇನು?’ ಸೀತಯ್ಯ ಯಲ್ರ ಮಕ್ನಾ… ಆ ಕತ್ತಲಲ್ಲೂ… ವುಳಿ ವುಳಿ… ನೋಡ್ತೊಗಿದ.
ಅಣ್ಣ ಬಸ್ಡಣ್ಣನ ಕೊಂದಿದ್ದಕ್ಕಿಂತ, ಯೆಂಡ್ದಗೇರಿಯ ವನವಾಸಕ್ಕಿಂತ, ರಂಗಪ್ಪನ್ನನ ಜಗ್ಳಕ್ಕಿಂತಾ… ಯಿಂಗೆ ಅಂಗ್ಳದಾಗೆ, ತಾಸ್ಗುಟ್ಲೆ ನಿಂತ್ಕೊಂಡೇ, ಮಾತಾಡದು ಬಾಳಾ ತ್ರಾಸಾಗಿ, ಕಾಲ್ನೋವು ಬರ್ತೊಡ್ಗಿದವು! ಅವ್ರವ್ರಾ… ಮನ್ಗೆಳ್ಗೆ ಯಾರು ಕದ್ಲಾಕೆ ತಯಾರಿಲ್ಲ! ಮಲ್ಲಪ್ಪನ್ಗೆ ಚಿತ್ರಹಿಂಸೆಯಾಗತೊಡ್ಗಿತು. ಯಿವ್ರುದು ಮುಗಿಲಾರ್ದ ಮಾತ್ಗುಳೆನ್ಸಿದ್ವು..
ಅಶ್ಟ್ರಾಗೆ… ದೇವತೆ ಬಂದಂಗೆ, ಕೊನ್ಮನೆಯ ಶಾಂತಕ್ಕ ಗಲ್ಗಾಲಾ… ಬಾಯಿ ಮಾಡ್ಕಿಂತಾ ‘ಛೇ…ಛೇ… ಯೇನ್ಗಾಂಡ್ಸುರೋ… ಯೀ ದೇಶಾನಾ ಆಳಾರು, ವುದ್ಧಾರ ಮಾಡೋರು… ವಳ್ಳೆ ರಾಜಕಾರ್ಣಿಗ್ಳೂ… ಮಾಡ್ದಿಂಗೇ ಸರ್ವತ್ನಿತನ್ಕಾ ದುಗ್ಗಾಣಿದು ಕುಡ್ಯಾಯಾಕೆ ವೋಗ್ಯಾರೆ! ಯಾವ್ನಾಟ್ಕಾಳ, ದರ್ವಾಲ್ದಾನು… ಯೀ ಕುಡ್ಯಾದು ನೆಲೆ ಆಕ್ದಿನೋ? ಅವ್ನು ವಂಶ ಯಕ್ಕುಟ್ಹೋಗ! ಸೆಂಡ್ಯಾಕಂದ್ರೆ… ಯೇನ್ ಹರ್ಕಂತಾರೋ?! ಥೂ… ಯಿವ್ರಗೆ ದೇಸ, ಭಾಸೆ, ಯೆಂಡ್ರು, ಮಕ್ಳು, ಅಪ್ಪ, ಅಮ್ಮ, ದೇವ್ರು… ಯೇನೇನು… ಯಾರ್ಬೇಡಾ!! ಅಂಥಾವ್ರು ಅದ್ನೇ ಮದ್ವೆಯಾಗಿ, ಯೆಂಡ್ದೆಗೇರ್ಯಾಗಿದ್ದು ಬಿಡ್ಬೇಕಾಗಿತ್ತು! ಅಯ್ಯೋ… ಬಾರೋ… ಕ್ರಿಶ್ಣಯ್ಯ… ಮನ್ಗೆ ಬಾರಯ್ಯ… ಗೋಕ್ಲುದಿಂದಾ… ದೆವ್ವುಗ್ಳು ವುಂಬೋ ವತ್ತಾಯ್ತು ನೀ ಮನ್ಗೆ ಬಾರಯ್ಯ…’ ಯೆಂದು… ರಾಗವಾಗಿ, ಪ್ರಾಸಬದ್ಧವಾಗಿ ದೊಡ್ಡಾಟೇನು ರಂಪಾಟವೇ ತನ್ನ ಗಂಡ್ನೊಂದ್ಲೇ… ಶುರುವಿಟ್ಕೊಂಡಿದ್ದೇ ತಡಾ… ಯಲ್ಲಾ ಮುಚ್ಚಿಗಂಡು, ಗಂಡ್ಸುರೆಲ್ಲ ಕಿಮಕಂಬ್ದಂಗೆ ಅವ್ರುವ್ರು ಮನ್ಗೆಳಲ್ಲಿದ್ರು…
ವುಂಡು, ತಿಂದು, ವೂರ್ಕೇರಿಯಲ್ಲಿ… ಮೆಲ್ಗೆ… ಸದ್ದಡ್ಗಿತು. ಅಂಗ್ಳದಾಗೆಲ್ಲ… ಆರಕ್ಕೊಂಡು ಯಲ್ರಂಗೆ ಯಂದ್ನಿಂತೇ… ಮಲ್ಗಿದ್ದ, ಸೀತಯ್ಯನೆದ್ಮೇಲೆ… ಯಿದ್ದಿಕ್ಕಿದ್ದಂಗೆ, ತಳ್ವಾರು ಸೀನಣ್ಣ, ಯೀರಣ್ಣ, ಯಿಂದ್ರಸೇನ್ರೆಡ್ಡಿ, ಜಗಪತಿರೆಡ್ಡಿ, ಚಿನ್ನರಾಯುಡು, ಯೇಮರೆಡ್ಡಿ ಯೆಲ್ಲಮ್ಮ, ಕಲ್ಲಮ್ಮ… ನಿಂತು…
‘ಲೇ… ಸೀತಯ್ಯ… ಸೀತು… ಸೀತಣ್ಣ… ವೂರ್ಗಾ ದ್ವಡ್ಧುಣ್ಗೆಳು, ನಿನ್ನ ಬಾ ಅಂದಾರೆ! ಯೆದ್ದು ಬೇಗ ಬಾರ್ಲೇ ಮನ್ತಾಕೆ…’ ಯಿಂದ್ರಸೇನ್ರೆಡ್ಡಿ, ಬೆಣ್ಣೆಯಂಗೆ ಸೀತಯ್ಯನತ್ರ ನಿಂತು ಮೆಲ್ಗೆ ಮೃದುವಾಗಿ, ತುಪ್ದಾಂಗೇ… ಕರ್‍ದ.
ಅ ಕ್ಷಣ: ಸೀತಯ್ಯ, ಯೆಗ್ರಿ ಬಿದ್ದ. ಪಾತಾಳ ಕಂಡ. ನರಕ ಕಾಣ್ಸಿತು! ಗರ್ಬಡ್ದಿವ್ನಂತೆ ಸವ್ರಾಡ್ಕಿಂತಾ… ಯೆದ್ದು ಕುಂತ! ಕನಸ್ಸಲ್ಲ! ಭ್ರಮೆಯಲ್ಲ! ಕಣ್ಣುಜ್ಜಿ… ನೋಡ್ದಿ. ಯಲ್ರ ಕೈಗಳಲ್ಲಿ ಮೂರ್ಸೆಲ್ಲಿನ ದ್ವಡ್ಡ ಬ್ಯಾಟ್ರಿಗಳಿವೆ. ಯೆಗ್ಮೇಲೆ, ಬಾರ್ಕೋಲು ನಗ್ಸುತ್ಗುಳು ಯಿಳ್ಬಿದ್ದಿರ್ವು ಪರ್ಗೆ, ಸೀತಯ್ಯ ವುಚ್ಛೆನೇ ವಯ್ಕಂಡ. ಸುತ್ತಾ ಕಣ್ಣಾಡ್ಸಿದ… ಯೆಂಡ್ತಿ, ಮಕ್ಳು ಸಾಲ್ಸಾಲಾಗಿ.. ಗಡ್ದಾಗಿ ಗೂರ್ಕೆವಡ್ತೀ… ಮರ್ನಿದ್ದೆಯಲ್ಲಿದ್ರು! ಕೇರಿಲಿ ನರ್ಪಿಳ್ಳೆಯ ಸುಳ್ವಿಲ್ಲ. ರಣರಂಗದಲಿ, ಯಂಗ್ಬೇಕಂದ್ರೆ ಅಂಗೆ, ಬಿದ್ವಿರ್ವೂ ಯೆಣ್ಗಗಳಂತೆ, ಕೇರ್ಗಿರೂ ಕೂಡಾ, ಅವ್ರಾವ್ರಾ ಅಂಗ್ಳದಲಿ, ಪುಟ್ಟ ಪೂರಾ ವುಂಡು, ಅಂಗೆ ಅಂಗಾತ, ಸತ್ತಂತೇ… ಬಿದ್ದಿರ್ವೂ ದೃಶ್ಯ ಭಯವುಟ್ಸಿತೊಡ್ಗಿತು. ತನ್ನಶ್ಟಕ್ಕೆ ತಾನೇ, ಧೈರ್ಯ ತರಿಸ್ಕೊಂಡು… ‘ಯೇನ್ಪಾ ಗಂಚಿಗಾರ, ಗಂಚಿಗಿತ್ತಿ… ಯಿಂತಾ ಅವೇಳ್ಹೊತ್ಯಾನ್ಗೆ ಯಾಕೇಳ್ರೀ? ನಸೀಗ್ಗೆ ಬರ್ತಿನೆಳ್ರಪ್ಪಾ! ಯೇನಿಂಥಾ ಅವ್ಸಾರ್ವೇಳ್ರೀ?! ವೋಗ್ರಪ್ಪಾ… ವೋಗ್ರೀ… ನಿಮ್ಗೆ ಬುದ್ಧಿಗಿದ್ಧಿ… ನಿದ್ದಿಲ್ಲಾಂದ್ರೆ ನಮ್ಗಿಲ್ಲೇನು? ಯೀಗೊಳ್ಳೆ ಮಾತ್ಲಿ ವೋಗ್ರೀ ಮುಂಜಾಲ್ಕಿ ಯೆದ್ದು ಬರ್ತೀನಿ!’ ಯೆಂದು ಸೀತಯ್ಯ, ತಣ್ಗೆ ಯೇನೂ… ಅರಿಯ್ದ ಮೆಳ್ಳಿಯ, ಸುಪ್ಪಾಣ್ಗಿನಂತೆ, ಕುಂತಲ್ಲಿಂದ್ಲೇ ಕೈ ಕೈ ಮುಗ್ದು, ಸಾಗ್ಹಾಕ್ಲು ಯತ್ನಿಸ್ದಿ.
ಯಿಷ್ಟು ಬಾಯಾದ್ರು… ವಬ್ರು, ಯೆದ್ಧು ಕಿಮ್ಕಂಬ್ಲಿಲ್ಲ! ವಳ್ಳೆ ಮಡ್ಸು ನಿದ್ದೆಯಲ್ಲಿದ್ರು.
‘ಅವ್ದುಲೇ ದನಾ ತಿನ್ನೋ ಸೂಳೇ ಮಗ್ನೇ! ನಮ್ಗೆ ತಿರ್ಮಂತ್ರ ವೊದ್ತಿಯೇನ್ಲೇ? ಯೆದ್ದೀಗ ಬರ್ತೀಯಾ? ಯಿಲ್ಲಾ… ಕೈಕಾಲು ಮುರ್ದು, ಯೆಳ್ಕೊಂಡ್ಹೋಗಾನ್ಲೇ? ಮನೇ… ಮುರ್ಕಾ! ಅಸ್ಲು ತಾಯ್ಗಿಂಡ! ತಿಂದ್ಮಾನ್ಗೆ ಜಂತಿಯೆಣ್ಸ್ಯೆನೇ… ಯೀ ವೂರ್ಕೇರ್ಗೇನು? ದೇಶ, ವಿದೇಶದ ತುಂಬಾ, ನಿನ್ದೇ ಸುದ್ದೀ… ಪ್ರತಾಪ…! ನಮ್ಮ ಅಣ್ಣ ಬಸ್ವಣ್ಣನ, ಕೊಂದ್ವನು ನೀನೆಂದೂ… ಜನ್ರುಗುಲ್ಲೆಬ್ಸಿರ್ವೂಗಾ, ನನ್ನತ್ರ ಸಾಕ್ಷಿ, ಪುರಾವೆ, ದಾಖಲೆಗಳಿರ್ವೂಗಾ, ನೀನೆಂಗೆ ಕುಡಿದೂ, ತಿಂದೂ… ಯೆಂಡ್ತಿ ಪಕ್ಕೇಲಿ ತಣ್ಗೆ ಮಲ್ಗಿಯಲ್ಲಲೇ?? ತಾಯ್ಗಿಂಡಾ ಬಾಡ್ಕಾವು! ಮಿಂಡ್ರಗುಟ್ದಿವ್ನೇ! ವಿನಾ ಕಾರಣ, ಅನ್ಯಾಯವಾಗಿ, ವೃಥಾ ನಮ್ಮಣ್ಣ, ನಮ್ಮ ಮನೆಯ ಜ್ಯೋತಿ ಬಸ್ವಣ್ಣನಾ ಕೊಂದಿಯಲ್ಲೋ!! ಪಾಪಿ, ವೂರ್ಕುಟ್ಕು! ನಿನ್ಗೆ ಕೈಯಂಗೆ ಬಂದ್ವುಲೇ??…’ ಯೆಂದು ಯಿಂದ್ರಸೇನ್ರೆಡ್ದಿ. ಗಲ್ಗಲಾ ಬಾಯ್ಮಾಡಿ, ಬಾರ್ಕೋಲು ತಗೊಂಡು ಛಳಾ ಛಳಾ… ಸೀತಯ್ಯನ್ಗೆ ಬಾರ್ಸಿಬಿಟ್ಟ!
‘ನನ್ಮಾನೆ ಬಾಗ್ಲಿಗೆ ಬಂದು, ಕೇರಿಯೊಳ್ಕೆ ಬಂದು… ನನ್ಗೆ ಬಡ್ತಿಯೇನ್ಲೆ ದಕ್ಲೋರ್ಗುಟ್ದಿವ್ನೇ ನಮ್ಮಣ್ಣ ಬಸ್ವಣ್ಣನ ಕೊಂದಿದ್ದಾಯ್ತು! ತಿಂದಿದ್ದಾಯ್ತು! ವೂರ್ರ್ಹಾಳ್ದಾ ಮೇಲೆ ವೂರ್ಬಾಗ್ಲಾಕ್ಹಂಡ್ರು… ಅಂದಂಗೆ, ಯೀಗ ಕಾಳಾಜಿ ಮಾಡ್ದೆರ್‍ನೆಬಂತು? ಯಿದ್ದಾಗ ಯಂಗ ಕಂಡ್ರೀ? ಕಾಲ್ಕಾಸ್ವಾಗಿ. ಶತ್ರುವ್ನಿಂಗೇ… ಅಸಹ್ಯವಾಗಿ, ಅವಮಾನವಾಗಿ ಅಸಹಾಕಾರದಿಂದ, ಕಂಡಿದ್ದು ನನ್ಗೆ ಗ್ವತ್ತಿಲ್ವೇ? ಯೀಗ ಜ್ಯೋತಿ, ಶಕ್ತಿ, ಆಸ್ತಿ, ಮಹಾತ್ಮ….. ಹರಿಕಾರ… ವಿಶ್ವಮಾನ್ವಾ… ಯೆಂದ್ರೆ ಹೆಂಗೆ?? ಅಯ್ಯಯ್ಯೋ… ಬರ್ರೆಪ್ಪೋ… ಕಳ್ರು ಬಂದಾರೆಽ…ಬನ್ರೇಪ್ಪೋ…ಽ’ ಯೆಂದು, ಸೀತಯ್ಯ ಕೂಗ್ದಿ. ಅವ್ರಾ ಗಮ್ನ ಬೇರ್ಕೆಡ್ಗೆ ಸೆಳೆದು, ಅದೇ ಬಾರ್ಕೋಲು ನಗ್ಸುತ್ತು… ಕಸ್ಗೊಂಡು. ಅಂಗ್ಳ ತುಂಬಾ ವೋಡಾಡ್ಸಿಗೊಂಡು… ಅವ್ರ್ನಾ, ಅವೇಳೊತ್ನಿಗೇ… ದೆವ್ವ ಬಿಡ್ಸಿದ.
ಅಕ್ಪಾಕ್ದಾವ್ರು ಅಗಾ ಗಾಬ್ರಿ, ಬಿದ್ದು… ‘ಯಾರೂ…ಯಾರೂ…? ಯೆಲ್ಲಿ? ಯೆಲ್ಲಿ? ಯಿಡ್ರೀ… ಬಡ್ರೀ’ ಯೆಂದು ಕೂಗ್ತಾ, ಯೆದ್ದು ಯೆದ್ದು… ಕುಂತ್ರು…
‘ಅವ್ದುಲೇ… ಕಳ್ಬಡ್ವು… ನಮ್ಮೇಲೇ ಕೈ ಮಾಡ್ವುಶ್ಟು ಸೊಕ್ಕೇನ್ಲೇ? ಧ್ಯೆರ್ಯಾ ಬಂತೇನ್ಲೇ? ಪೊಕ್ರಿ… ಕಳ್ರು ಕಳ್ರು… ಅಂತಾ ಜನ್ರ್ನ ‘ಜೂ’ ಬಿಡ್ತೀಯೇನ್ಲೇ? ಯೇನೈತಿ ನೋಡ್ರಾಲೇ’ ಯೆಂದು, ಚಿನ್ನರಾಯುಡು… ಸೀತಯ್ಯನ ಮನೆ ಸಪ್ರಕೆ, ಕಡ್ಡಿಗೀರಿ ಬೆಂಕಿ ಕೊಟ್ಟ. ಪರ್ಪೂರೂ ಅಂಟಿತು! ತಂಪೊತ್ತಿನಾಗೆ, ಗಾಳಿ ಸುಯ್ಯೆಂದು ತೀಡುತ್ತಿತ್ತು. ಬೆಂಕಿ ಕೆನ್ನಾಲ್ಗೆ ಚಾಚಿ, ಅಗೋ ಯಿಗೋ… ಅಂಬ್ದಾರಾಗೆ ಅಕ್ಪಾಕ್ದಾವ್ರ ಗುಡ್ಸಿಲ್ಗೆ ಮನ್ಗೆಳ್ಗೆ… ಬೆಂಕಿ ಹರಡಿತು. ನೀರೂಗ್ರೀ… ಮರುಳುಗ್ರೀ ಆರ್ಸಿ… ಆರ್ಸಿರ್ರೀ… ಅನ್ನದ್ರಾಗೆ, ಸೀತಯ್ಯ, ಸೀತಯ್ಯನ ಮಗ ಪಾತಣ್ಣ, ಸೀನಪ್ಪನ ಯವ್ರೆಲ್ಲ ಬಿಡ್ದಂಗೆ, ವೂರು ಮುಂದ್ಕೆ ಯಳ್ದೊಯ್ದಿ, ಚಾವ್ಡಿಗಂಬ್ಗಳ್ಗೆ ಸಾಲಾಗಿ ಕಟ್ಟಿ, ಬಾರ್ಕಾಲ್ಲಿಲಿ, ನಗ್ಸುತ್ತ್ನಿಂದಾ, ಬಂಡಿಗೂಟ್ಗಳಿಂದಾ ಕಂಡ್ಬಾಟ್ವೆ.. ಬಲು ಬಿಡ್ದಿರು, ಕಟ್ಟು ಸೋರಿ, ರಾಮಾರಂಪ ರಕ್ತದ ಕೋಡಿ ಹರಿತು!
‘ಅಯ್ಯಯ್ಯೋ… ಕಾಪಾಡ್ರಪ್ಪಾ… ನನ್ಗಾಂಡ್ನಾ… ಮಕ್ಳನಾ… ಸಾಯ್ಸಿದ್ರಪ್ಪಾ… ಬರ್ರೋ ಅಪ್ಪಾಽ… ಅಮ್ಮಾ…’ ಯೆಂದು ಮಲ್ಲವ್ವ, ವೂರ್ಕೇರಿ ತುಂಬಾ ಗೋಳಾಡುತ್ಲೇ… ಕೇರಿಯಿಂದ್ಲಾ… ದಣ್ಗಿಳ ದೊಡ್ದದು ನವ್ನಿ, ನೆಲ್ಲು, ಸಜ್ಜೆ, ಬಿಳಿಜ್ವಾಳ್ದ ಸಪ್ಪೆ, ನೆಲ್ಗಡ್ಲೆ, ವುಳ್ಳಿವಟ್ಲಿನ ಹಟ್ಟೇವು… ಬಣಿವ್ಗೆಳ್ಗೆಲ್ಲ… ಬೆಂಕಿಯಿಟ್ಲು… ಕಾಂಡ್ವವನ್ದ ರೀತಿಯಲ್ಲಿ, ಬೆಂಕಿಯ ವುರಿ ನೆಲಮುಗ್ಲಿನ್ನು… ವಂದ್ಮಾಡಿತು. ಅಗಾ ಯಿಗಾ… ಅಂಬಾದ್ರಾಗೆ… ಹತ್ತಾರೂ ಮನ್ಗೆಳೂ, ದನ್ಕರ್ಗುಳೂ, ಕೋಳಿ, ನಾಯ್ಗಿಳೂ, ಕಾಳು, ಕಡಿ, ಬಟ್ಟೆ ಬರೆ, ಐದಾರು ಹಟ್ಟೇವ್ಗುಳೂ… ಬೇಲಿಯಟ್ಗಳೂ… ಕಣ್ಗಳೂ… ಸುಟ್ಟು ಸುಟ್ಟು…. ಸುರ್ಮೂಂಡ್ಲಾವಾದ್ವು!! ಯಿಡೀ ವೂರ್ಕೇರಿ ‘ಅಲಾಯಿಕುಣಿ’ಯಾಯಿತು!
‘ಕೇರಿಯೊಳ್ಗಿನ ಕಿಚ್ಚು ಕೇರಿಯನ್ನಲ್ದೆ, ವೂರಿನ್ನೇನು ವಿಶ್ವವನ್ನೇ ಸುಡ್ಬಲ್ದು. ಅಂತಾ ಶಕ್ತಿಯಿದೆ. ಯೀ ವೂರ್ನಿ ಬುಡ್ಡೇಕಲ್ನಾ ಬುಡ್ಮೇಲು ಮಾಡ್ವು ಶಕ್ತಿಯಿದೆ’ ಮಲ್ಲವ್ವ, ವೀರ್ಗಚ್ಛೆಯಾಕಿ, ಬೆಳ್ವಡಿಯ ಮಲ್ಲಮ್ಮನಂತೆ, ರಾತ್ರಿಯೆಲ್ಲ ಆರ್ಭಟ್ಸಿದ್ಲು.
‘ಯಿಂತಾ… ಅವೇಳ್ವಾತ್ನಾಗೂ… ವೂರು ಮುಂದೆ, ಜನ್ಸಾಗ್ರ ಜಮಾಯ್ಸಿತು! ಅಳಾದು, ಕೂಗಾದು, ಬೈಯಾದು, ಬಡಿಯಾದು, ತಳ್ಳಾದು, ನೂಕಾದು… ರಾತ್ರಿಯೆಲ್ಲ… ನರ್ಕಾದರ್ಶನ… ನಡೆದೇ ಯಿತ್ತು!
ವೂರು ದಣ್ಗಿಳು: ಸೀತಯ್ಯನನ್ನು, ತಲೇಗ್ಳು ಕೂದ್ಲು ಯಿಂಗ್ಡಿಸ್ದಿಂತೆ, ಯಲ್ಲಾ ಬಾಯ್ಬಿಡ್ಸಿದ್ರು… ಅ ಕ್ಷಣ ಜನ್ರು ಬಾಯಾಕೆ ಅಕ್ಕಿಕಾಳಾಕಿ ಕುಂತ್ರು…
‘ಅವ್ದು… ನಮ್ಮಣ್ಣ ಬಸ್ವಣ್ಣನನ್ನು ಕೊಂದಿದ್ದು ನಾನೇ! ನನ್ನಾ ಕೈಯಾರೇ ವಣ್ಗಿದ್ದು ರಾಗಿ ಮುದ್ದೆಯೊಳ್ಗೆ, ಐದಾರು ವಣ್ಗಿದ, ಕೊಂಡಿಕಾಯ್ಗಿಳನ್ನು ಯಿಟ್ಟು, ಯಿವತ್ತು ಬೆಳ್ಗಿನ ಜಾವ, ಯೆಂದ್ನಿಂತೆ ಸಗಣ್ಕಿಸಾ ಬಳಿಯಲು ಬಂದಾಗ… ಐದ್ಗಂಟ್ಗೆಲ್ಲ… ಆ ಯತ್ತಿನ್ಬಾಯಾಕೆ, ಮೆಲ್ಗೆ ಯಾರ್ಗೆ ಕಾಣ್ದಂಗೆ… ಕ್ವಟ್ಟೆ! ನನ್ನ ಮೇಲೆ ಪ್ರೀತಿ! ನನ್ಗೆ ಅದ್ರ್ಮೇಲೆ ಬಲು ಜೀವ! ಬಸ್ವ ‘ಗುಳುಂ’ ಅಂತಾ ನುಂಗ್ದಿ, ನಾ ಯೇನು ಗ್ವತ್ತಿಲ್ದವ್ನಂತೆ, ನನ್ನ ಕೆಲ್ಸದಲ್ಲಿ ತೊಡ್ಗಿದೆ. ನಿತ್ಯ ನಿಮ್ಮ ಮಕ್ಳುಮರಿಯ ಯೇಲು, ವುಚ್ಛೆ, ಸಗಣಿ, ಗಂಜು, ತಲ್ಮೇಲೆ ವತ್ತಾಕ್ದಿವನು, ಕೈಕಾಲು ಮಕ ತ್ವಳ್ದಿರೆ… ನಿತ್ರಸಂಗಿಲ್ಲ. ಮಗಿ, ಪರಿಯಾಣ ತ್ವಳ್ದಿರೆ ‘ಅಯ್ಯೋ… ಅದೇನ್ತೊಳ್ತೀಯಿ ಸಾಕು ತಗಯ್ಯ ಸೀತಯ್ಯ ಅಲ್ಲಾ ಕೋತಯ್ಯ!’ ಯೆಂದು, ನಿತ್ಯ ‘ಯೆಗ್ಸಟ್ಗೆ’ ಮಾತ್ಗಳು ಕೇಳಿ, ಕೇಳಿ ಬೇಸ್ರಾವಾಗಿತ್ತು! ದಿನಾ ಆರಿದ್ದು, ಬೆಲ್ದ ಟೀ, ಕಾಫೀ, ಕುಡಿದೂ ಕುಡಿದೂ ತಲೆ ನೋವಾಗಿತ್ತು! ಹಬ್ಬಾ… ವುಣ್ಮೆ, ಅಮಾಸೆ ದಿನಾನೂ ನಮ್ಗೆಂದೇ ನವ್ನಿ, ಆರ್ಕಾದ್ಬಾನ! ಕಟ್ಟಂಬ್ಲಿ, ವುಳ್ಳಿಕಟ್ಟು, ಯಿಲ್ಲಾ… ವುಳ್ಳಿ ಕರ್ಗೀಡ್ಬು! ಅಬ್ಬಾಬ್ಬಾಂದರೆ, ಜ್ವಾಳ್ದುಗ್ಗಿ, ಸಜ್ಜೆ ಮುದ್ದಿ… ಹಳ್ಸಿದ್ದು, ಸೀಕು, ಪಾಕು! ಬೊಗ್ಸೆಗೆ ನೀರ್ಹಾಕಿ ಅವಮಾನ್ಸಿ, ವರ್ಗೆ ಕಪ್ಪು, ಚಿಪ್ಪು, ಮಗಿ, ಪರಿಯಾಣವಿಡಾದು! ಗುಡಿಗೆ ಬಿಟ್ಕೊಳ್ದಂಗಿರಾದೂ… ಯಲ್ಲ ಬೇಬಿಟ್ಪಿ… ಕೀಳಾಗಿ ನೋಡಾದೇಕೆ?? ನಮ್ಮೆಂಗ್ಸ್ರು, ಮಕ್ಳು ಮರ್‍ನಿ… ವಲ, ಮನೆ, ಗದ್ದೆಯಲ್ಲಿ, ಬಸ್ರು ಮಾಡ್ವಾಗಾ ಜಾತಿ, ಭೇದವಿಲ್ಲವಲ್ಲಾ?! ಕೈಲ್ಗಾದ್ವರು, ಅಮಾಯ್ಕರು, ಮುಗ್ದರು ವಟ್ಗೆಯಿಲ್ದವ್ರು ಯಿದಕ್ಕಿಂತಾ ಯೆಚ್ಗೇ, ಯೇನ್ತಾನೆ ಮಾಡ್ಲು, ಸಾಧ್ಯವಿದೆ?? ಆದ್ರೆ, ಯಿದ್ರಾ ಅಡ್ಡ ಫಲಿತಾಂಶ ಮಾತ್ರಾ ಯಿಶ್ಟು ಘೋರಾ, ಭೀಕ್ರಾ, ಭಯಂಕ್ರಂತಾ ನನ್ಗೆ ಗೊತ್ತಿರಿಲಿಲ್ಲ!! ಸೀತಯ್ಯ… ಅಮಾಯ್ಕನಂಗೆ, ಸುದೀರ್ಘವಾಗಿ ಶತಶತಮಾನ್ದಗೊಳೆನ್ನೆಲ್ಲ… ವಟ್ಟೆಯೊಳ್ಗಿಂದೆಲ್ಲ, ಬಿಡ್ಸಿ… ಬಿಡ್ಸಿ, ವರ್ಗಿಟ್ಪ! ಗೋಳೋ ಅಂತಾ ಕಣ್ಣೀರಿಟ್ಟ!
ಜನ್ರು ನಿಂತಲ್ಲಿ, ಕುಂತಲ್ಲಿ, ಶನಿಮಾತ್ಮನ ಕತ್ಕೇಳ್ದಿಂಗೆ, ಕವ್ನಿಗ್ರಿಸಿ, ಕಣ್ಣರಳ್ಸಿ, ಕೇಳ್ತಾ ಕೇಳ್ತಾ… ದೊಡ್ದದೊಂದು… ನಿಟ್ಟಿಸ್ರಿಟ್ರು!
‘ಬೊಗ್ಳುಲೇ… ನೀ ಮಾಡಿದ್ದು ತಪ್ಪಲ್ವೇ?’ ಯಿಂದ್ರಸೇನ್ರೆಡ್ಡಿ, ಮತ್ತೆ ಗುಡ್ಗಿದ. ಸೀತಯ್ಯನ ಕಡೆಯಿಂದ, ತಪ್ಟೆನ್ನಿಸ್ಬೇಕೆಂಬಾ ಛಲ್ದಲಿ, ಕೇಳ್ತೊಡ್ಗಿದ.
‘ಅವ್ದು ಬುದ್ಧಿ! ನಾ ನಮ್ಮಣ್ಣ ಬಸ್ವಣ್ಣನ ಕೊಂದಿದ್ದು ತಪ್ಪೇ!’ ಸೀತಯ್ಯ, ಅತ್ಗಾಂತಾ ಯೇಳ್ದಿ. ‘ನೀವು ವೂರ್ಧಣಿಯಾಗಿ, ದ್ವಡ್ವ್ರಾಗಿ, ಬುದ್ಧಿವಂತ್ರಾಗಿ, ವುಳ್ಳೆವ್ರಾಗಿ ತಪ್ಪು ಮಾಡ್ಬವುದೇ??’ ಸೀತಯ್ಯ, ನೋಡ್ತಾನ್ಕಾ ನೋಡಿ, ಯಿಂದ್ರಸೇನ್ರೆಡ್ಡಿಗೇ… ಯದ್ರುರೇಟು ಕ್ವಟ್ಟ.
‘ಅವ್ನ ತೆಗ್ವು ನೋಡ್ರಾಲೇ… ಸಾಯಂಗ್ಬಡ್ಸಿಗಂಡ್ರು, ಯಿನ್ನು ಯೆದ್ಗಿರ್ವಿನ್ಮಾತ್ಗುಳ, ಬಿಟ್ಟು ಮಾತ್ಡಾವಲ್ಲ… ಹೌರೇ ಗಂಡು…’ ಯೆಂದು, ಜನ್ರು… ಬಾಯ್ಮೇಲೆ, ಬಟ್ಟಿಟ್ಗುಂಡ್ರು!
‘ನಮ್ಮ ತಪ್ಪೇನು, ನೀ ತಲ್ಕೇಳ್ತೀಯ್ಲೇ? ದ್ವಡ್ಡವ್ರು ಯಿರಾದೇ… ತಪ್ಪು ಮಾಡೋಕೆ. ಅದ್ಕೆ ಸಣ್ಣವ್ರಿಗೆ, ಯೇಳಾದು ತಪ್ಪು ಮಾಡ್ಬೇಡ್ರಿ ಅಂತಾ…! ಯೀ ದೇಶ, ವಿದೇಶದಲ್ಲಿ ಅಗಿರ್ವೂ ದೊಡ್ತಾಪ್ಪುಗಳೆಲ್ಲ ದ್ವಡ್ವರು ಮಾಡಿರ್ವುಂತವು. ಯಾರೂ ಸರ್ಪಿಡ್ಸಿಲಾರಂತವು! ಯಿನ್ನು ನಮ್ಮೊಲ, ಮನೆ, ಗದ್ದೆ, ತ್ವಾಟ್ಗಳಲ್ಲಿ ದುಡ್ವಿ ಯೆಂಗ್ಸ್ನ, ಮೋಜು ಮಾಡ್ದೇನು, ನಮ್ಗೆ ವಸ್ದೇನ್ಲೇ?? ಅದೆಲ್ಲ… ತಲ್ತಲಾಂತ್ರದಿಂದ, ಬ್ರಿಟಿಶರಿಂದಾ ಬಂದಿದ್ದು! ನೂರೈವತ್ತು ವರ್ಸು, ಆಳ್ದಿ ಬ್ರಿಟಿಶರು, ನಮ್ಮ ಬೇಶ್ ಮಜಾ ವುಢಾಯ್ಸಿನೇ, ನಮ್ಗೆ ಯೀ ಕಾಫಿ, ಟೀ, ಗದ್ದೆ, ತ್ವಾಟಾ, ತೋಪು, ಅಸ್ತಿ… ವಾಡೇನ ಕೊಟ್ಟಿದ್ದು! ಪೆದ್ದರಾಯುಡು ಗುಡ್ಗಿದ.
‘ಯೀ ನಿಮ್ಮ, ಪಾಪ್ದ ಕೊಡಾ ತುಂಬಿ, ತುಳ್ಕಿದೆ ಬುದ್ಧಿ! ನೂರ್ವಾಂದು ತಪ್ಪುಗಳಾಗಿವೆ ಧಣಿ! ಅದ್ಕೆ ಯಿಂಗ್ಯಾಡ್ತೀರಿ. ನಮ್ಮ ಮನೆ, ಮನ, ಕಣ, ಕಣ್ಗುಳನ್ನು ಸುಟ್ಚಿರುವ್ರೀ. ನನ್ನಿಬ್ರು ಮಕ್ಳನ, ಬಡಿದು ಕಂಬಕ್ಕೆ ಕಟ್ಟಿ, ಸಾಯೋತನ್ಕಾ ವತ್ತೆಯಿಟ್ಕೊಳ್ವುದು ತಪ್ಟಲ್ವೇ? ಟಿಪ್ಪುವ್ನಿ ಮಕ್ಕಳಿಬ್ರ್ನಾ ವತ್ತೆಗಿಟ್ಟುಕೊಂಡ್ವರ ಅವನತಿ ಗೊತ್ತಲ್ಲಾ? ಅರ್ಗಿನ್ಮಾನ್ಗೆ ಬಿಂಕಿಯಿಟ್ಟವ್ರಾ ಗತಿ ಗೊತ್ತಲ್ಲಾ? ದ್ರೌಪದಿಯ ಮುಟ್ಟಿದವ್ರು, ಕೆಟ್ಟಿದ್ದು ಪುರಾಣ, ತಿಳಿಯದೇ?…’ ಸೀತಯ್ಯ ತಿರ್ತೀರ್ವಿ ಧಣ್ಗಿಳನ್ನು, ಚುಚ್ಚಿದ.
‘ಬೆಳ್ಗಾಗ್ಲಿ! ಪೋಲೀಸ್ಸಿನವ್ರು ಬರ್ಲೀ ತಪ್ಪು, ವಪ್ಪು, ತೇಲಿ, ನಿಮ್ಮ ಮನೆಯವ್ರೆಲ್ಲ ಸಾಯೋತನ್ಕಾ ಸಂಬ್ಳ ದುಡಿದು, ನಮ್ಮಣ್ಣ ಬಸ್ವಣ್ಣನ ಕೊಂದ ತಪ್ಪಿಗೇ… ಪರಿಹಾರವಾಗಿ ತಿರ್ಸಿವಂತ್ರೆಲೇ!! ಮುಂದುಂದಿ… ಮುಸ್ಲಪಂಡ್ಗಾ…’ ಚಿನ್ನರಾಯುಡು… ಸಣ್ಣದಾಗಿ ಗುಡ್ಗಿ, ಮನೆ ಸೇರ್ದಿ. ಮೆಲ್ಗೆ ಜನ ಕರ್ಗಿತು!
ಸೀತಯ್ಯ, ಸೀತಯ್ಯನ ಮಕ್ಳಿಬ್ರು ಕಂಬ್ದಲಿ ಕಂಬ್ವಾಗಿ, ವುಳ್ದಿರು. ಅವ್ರಾ… ಸುತ್ತಮುತ್ತ… ಕೇರ್ಗಿರೂ, ಮನೆ, ಮಠ, ದನ, ಕರು, ಕಳ್ಕೊಂಡ್ವರೂ… ನಡಾ ಬೀದ್ಲಿ ನಾರಾಯಣರಾಗಿ… ರಾತ್ರೆಲ್ಲ… ಜಾಗರಣೆ ಮಾಡ್ದಿರು!
* * *
ಬಲ್ಬೇಗ ಬೆಳ್ಕರ್ತು. ಸೂರ್ಯ ಕಣ್ಣು ಮುಚ್ಚಿ, ಕಣ್ಣು ತೆಗೆಯಶ್ಟರಲ್ಲಿ. ಕುಗ್ರಾಮವಿಂದು… ಯಿಡೀ ರಾಜ್ಯದ ಗಮ್ನ ಸೆಳಿತು! ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಶ್ಟಾಧಿಕಾರಿ, ಶಾಸ್ಕರು, ಲೋಕಸಭಾ ಸದಸ್ಯರು, ಮಂತ್ರಿಗಳು, ಕಂದಾಯ ಯಿಲಾಖೆಯ ಅಧಿಕಾರ್ಗಿಳು, ಗ್ರಾಮಸೇವಕ್ರು… ಯಿಂಗೇ ಹಂದೀ… ಯಿಂಡಿಂಡು… ನಿದ್ದಿಲ್ದೆ, ರಾತ್ರೋ ರಾತ್ರಿ, ಹಳ್ಳಿಗೆ ಬಂದ್ಳಿದ್ರು!
ಯಿಡೀ ವೂರ್ಕೇರಿ ಗಡ್ಗಾಡಾ ನಡ್ಗಿತು! ‘ದೇಶಕೆ, ಸ್ವಾತಂತ್ರ್ಯ ಬಂದಿ, ಮುಪ್ಪಾಗ್ತಾ ಬಂತು! ನಮ್ಮಳ್ಗೆ, ಪೋಲೀಸ್ಸಿನವ್ರು, ಕಾಲ್ಟಿರ್ಲಿಲ್ಲ! ಯೀಗೆಂಥಾ ಕಾಲ್ಬಂತು?’ ಸಿವಪ್ಪ, ಅಂಗ್ಳದಲಿ ಕುಂತು, ಗುನ್ಗಿದ.
ಕಂಬ್ದಲಿದ್ದ ಸೀತಯ್ಯ, ಸೀತಯ್ಯನ ಮಕ್ಳಿಬ್ರ್ನಾ ಬಿಡ್ಗುಡೆಗೊಳ್ಸಿ… ಯೀ ಗಲಭೆಗೆ, ಹಾನಿಗೆ ಕಾರಣರಾದ್ವರ್ನ ಗುರುತ್ಸಿ… ಬಳ್ಳಾರಿ ಜೈಲ್ಗಿಟ್ಟಿತು! ತುರ್ತು ಗಂಜಿ ಕೇಂದ್ರ ತೆರೆದು, ವಿವ್ರಾವಾದ ತನಿಖೆ ಕೈಗೊಂಡು, ಸೂಕ್ತ ಪರಿಹಾರ ಘೋಶಿಸಿತು. ತನಿಖೆಗೆ ಹೆದ್ರಿದ ಕೆಲ್ರು ತಲ್ಮೆರ್ಸಿಕೊಂಡ್ರು..! ವಾರ, ತಿಂಗ್ಳು ಅದ್ರೂ ಮನ್ವೆಂದ್ಲಿಲ್ಲ… ನಗುನಗ್ತಾಯಿದ್ವರೂ ಮಕೂದ್ಸಿಗೊಂಡು, ಮೈಕ್ವಟ್ಟು ವಗ್ತಾನ ಮಾಡ್ದೆ, ವಲ, ಮನ್ಗೆಳಾ… ಬೀಳ್ಬಿಟ್ರು. ಸಗಣ್ಕಿಸ ಬಳ್ದು, ಗಂಜ್ಹೊತ್ತು, ಮಾದ್ತಿನ ಮಾಡ್ದಾನೇ… ಕೆಲವ್ರು ಕೈ ಬಿಟ್ರು, ಕೇರ್ಗಿರನ್ನು ಕೂಲಿ ಕೆಲ್ಸಕೆ ಕರಿದೆ, ಕಾಳು, ಕಡಿ, ನೀಡ್ದೆ ಕಡ್ಗೆಣ್ಸಿದ್ರು. ಯಿನ್ನು ಕೆಲ್ವು ಮಂದಿ, ಹಳ್ಳಿ ಬಿಟ್ಟು ಪಟ್ಣಾ ಸೇರ್ದಿರು.
‘ವೋದೇವ್ರೆ ನಮ್ಮಳ್ಳಿ ಬಡವಾಯಿತು! ಜನ-ದನ, ಕರು, ಪ್ರಾಣಿ, ಪಕ್ಷಿ ನರಿ, ತೊಳವಾದ್ರು’ ಮಲ್ಲವ್ವ ಕೆದ್ರಿದ ತಲೆ, ಹರ್ಕು ಬಟ್ಟೆಲಿ ಕೂಗ್ದಿಳು!
‘ಅಯ್ಯೋ… ಯಿದೇನ್ತಾಮ್ಮಾ…? ನಮ್ಮಳ್ಳಿ, ಕಳ್ಳಿ, ಡಂಬ್ಗಳ್ಳಿ, ಆತು! ವೂರ್ಕೇರಿ ಯಿಂಡಿಯಾ ಪಾಕಿಸ್ತಾನವಾಯ್ತು! ಹಳ್ಳಿಕ್ವಂಪೆ ಹಾಳಾಂಪೆಯಾಯಿತು! ಯಿದ್ನಾ ನೋಡ್ಕಾಗಿ ನಾ ಬದ್ಕುಬೇಕೇ? ಹದ್ದು, ಗೂಬೆ, ಕಣ್ಕಪ್ಡೆನಾ ನೋಡ್ತಾ ಕಾಲ ಕಳೆಯೋ ವತ್ತು ಬಂತಲ್ಲ…’ ಯೆಂದು, ಮುಳ್ಗೋ ಸೂರ್ಯನತ್ತ, ಮಕಕ್ವಟ್ಟು ಕಣ್ಣೀರ್ಸಿಟ್ತಾ… ಸಿವಪ್ಪ ಕುಂತ!
*****