ಬೆಂಗಳೂರು ಮತ್ತು ಮೈಸೂರು ಚೆನ್ನಾಗಿದ್ರೆ ಸಾಕ

ನಾನು ಕಳೆದ ೬೦ ವರ್ಷಗಳಿಂದಲೂ ಮೈಸೂರು ಬೆಂಗಳೂರು ನಡುವೆ ಪ್ರಯಾಣ ಮಾಡುತ್ತಿದ್ದೇನೆ. ಹಿಂದೊಮ್ಮೆ ಶ್ರೀ ಲಾಲ್‌ಬಹದ್ದೂರ್ ಶಾಸ್ತ್ರಿಯವರು ಮೈಸೂರಿನಿಂದ ಹಿಂತಿರುಗಿ ಬಂದು ದಕ್ಷಿಣ ಬೆಂಗಳೂರಿನ ಎಂ. ಎನ್. ಕೃಷ್ಣರಾವ್ ಪಾರ್ಕ್‌ನಲ್ಲಿ ಭಾಷಣ ಮಾಡಿದರು. ಆಗ ಅವರು ಪ್ರಧಾನಮಂತ್ರಿಯಾಗಿರಲಿಲ್ಲ. ಒಂದು ಸುಂದರನಗರದಿಂದ ಇನ್ನೊಂದು ಸುಂದರ ನಗರಕ್ಕೆ ಪ್ರಯಾಣಮಾಡಿದೆನೆಂದು ಅವರು ಹೇಳಿದರು. ಹೌದು, ನಾನು ಅದನ್ನೇ ೬೦ ವರ್ಷಗಳ ಕಾಲ ಮಾಡಿದ್ದೇನೆ. ಆದರೆ ಈ ಎರಡು ಮಹಾನಗರಿಗಳ ನಡುವೆ ಪ್ರಯಾಣ ಮಾಡುವಾಗಲೆಲ್ಲ ನನಗೆ ದಃಖವೆನಿಸುವುದೇನೆಂದರೆ ಬೆಂಗಳೂರು ಮತ್ತು ಮೈಸೂರು ಇವೆರಡರ ಮಧ್ಯೆ ಒಂದೂ ಸುಂದರ ನಗರಿಯಿಲ್ಲವಲ್ಲಾ ಎಂಬುದು. ಇದು ೧೯೫೦ ರಲ್ಲೂ ನಿಜ, ೨೦೧೦ ರಲ್ಲೂ ಅಷ್ಟೇ ನಿಜ. ಬಹಳ ಹಿಂದೆ ಮೈಸೂರಿಗೆ ಹೋಗುವಾಗ ರಾಮನಗರದ ಊರೊಳಗೆ ಹೋಗಲು ನಿರ್ಧರಿಸಿದೆವು. ಊರೊಳಗಿನ ರಸ್ತೆಗಳು ಎತ್ತಿನಗಾಡಿಗಳಿಗೆ ಮಾತ್ರ ಯೋಗ್ಯವಾಗಿದ್ದವೆಂದು ನಮಗೆ ಗೊತ್ತಿರಲಿಲ್ಲ. ನಮ್ಮ ವ್ಯಾನ್ ಬಲಕ್ಕೆ ತಿರುಗಿದಾಗ ರಸ್ತೆಯಲ್ಲಿ ಸಿಕ್ಕಿಕೊಂಡಿತು. ಅದು ಬರ್ಮುಡ ಟ್ರಯಾಂಗಲ್ ಎಂದು ಗೊತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬೇರೆಯೇ ಇದೆ. ಲೋಕ ಸಭೆಯ ಮಾನ್ಯ ಸದಸ್ಯರೂ, ಮಾಜಿ ಮುಖ್ಯಮಂತ್ರಿಗಳೂ ಮತ್ತು ಪ್ರಿಯ ನಾಯಕರೂ ಆದ ಶ್ರೀಯುತ ಕುಮಾರಸ್ವಾಮಿಯವರು ರಾಮನಗರವನ್ನು ಒಂದು ಸುಂದರ ನಗರವನ್ನಾಗಿಮಾಡಲು ಆಶೆಪಟ್ಟಿದ್ದರು. ಈಗಾಗಲೇ ರಾಮನಗರವನ್ನು ಜಿಲ್ಲೆಯ ಮುಖ್ಯ ಪಟ್ಟಣವನ್ನಾಗಿ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್. ಎಂ. ಕೃಷ್ಣ ಅವರು ನಮಗೀಗಾಗಲೇ ಬೆಂಗಳೂರು ಮೈಸೂರು ನಡುವೆ ಸುಂದರವಾದ ನಾಲ್ಕು ಪಥಗಳ ಹೆದ್ದಾರಿಯನ್ನು ಕೊಟ್ಜಿದ್ದಾರೆಂಬುದನ್ನು ನೆನೆಯೋಣ. ನಮ್ಮ ಪ್ರೀತಿಯ ಶ್ರೀ ಬಿ. ಎಸ್. ಯೆಡ್ಯೂರಪ್ಪ, ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ರಾಮನಗರ, ಚನ್ನಪಟ್ಟಣ, ಮಂಡ್ಯ ಊರುಗಳನ್ನು ಸುಂದರನಗರಗಳನ್ನಾಗಿ ಪರಿವರ್ತಿಸಲು ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಾರೆಂದು ನನಗೆ ಖಚಿತ ಭರವಸೆಯಿದೆ. ಈ ಪ್ರದೇಶದಲ್ಲಿ ಮುಂದಿನ ಮುಖ್ಯ ಯೋಜಿತ ಕಾರ್ಯವೆಂದರೆ ರಾಮನಗರದಿಂದ ಮೈಸೂರಿಗೆ ಎರಡನೇ ರೇಲ್ವೆದಾರಿಯನ್ನು ಸಿದ್ದಗೊಳಿಸುವುದು. ನಮ್ಮ ಪ್ರೀತಿಯ ಮುಖ್ಯಮಂತ್ರಿ ಶ್ರೀ ಯೆಡ್ಯೂರಪ್ಪ ನವರು ಕೇಂದ್ರದ ರೇಲ್ವೆ ವಿಭಾಗದ ರಾಜ್ಯ ಸಚಿವ ಶ್ರೀ ಕೆ. ಎಚ್. ಮುನಿಯಪ್ಪನವರಿಗೆ ಈ ಯೋಜನೆಯಲ್ಲಿ ಮಾತ್ರವಲ್ಲದೆ ರಾಜ್ಯದ ಇನ್ನಿತರ ರೇಲ್ವೆ ಯೋಜನೆಗಳಲ್ಲಿಯೂ ಸಂಪೂರ್ಣ ಸಹಕಾರವನ್ನು ನೀಡುವರೆಂದು ನನಗೆ ನಿಜವಾದ ನಂಬಿಕೆಯಿದೆ.

೨೧ನೇ ಶತಮಾನವು ಕನ್ನಡಜನರಿಗೆ ಮುಖ್ಯವಾದೊಂದು ಶತಕ. ಹೊಸ ಹೊಸ ಸಲಕರಣೆಗಳೊಂದಿಗೆ, ನಂಬಲಾಗದಂತಹ ಹೊಸ ಹೊಸ ತಂತ್ರಜ್ಞಾನದಿಂದ ಕೂಡಿ ವಾಣಿಜ್ಯ ಪ್ರಪಂಚದಲ್ಲಿ ಸ್ಪರ್ಧಾತ್ಮಕವಾದ ಶತಕ. ಅದನ್ನು ನಾವು ಇಪ್ಪತ್ತನೇ ಶತಮಾನದ ಎರಡನೆ ಅರ್ಥವಾಗಿ ಪುನರಾವರ್ತನೆ ಮಾಡಬಾರದು. ವಿಶೇಷವಾಗಿ ಕನ್ನಡ ಸಮಾಜಕ್ಕೆ ಸಾಂಸ್ಕೃತಿಕ, ವ್ಯಾವಹಾರಿಕ, ವಾಣಿಜ್ಯ, ನಿರ್ಮಾಣ ಕಾರ್ಯ ಚಟುವಟಿಕೆಗಳಲ್ಲಿ ನಿಷ್ಕ್ರಿಯತೆಯ ಕಾರಣ ಆ ಅರ್ಧ ಶತಮಾನವು ಅತ್ಯಂತ ವಿಲಂಬಗತಿಯಲ್ಲಿ ಕಳೆಯಿತು.

ನಾವು ಈಗಾಗಲೆ ೨೦೧೧ರಲ್ಲಿದ್ದೇವೆ. ಈ ಶತಕದ ಮೊದಲ ಹತ್ತು ವರ್ಷಗಳನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ಕಾರಣ ೨೧ನೇ ಶತಮಾನದ ಪೂರ್ವಾರ್ಧಕ್ಕೆ ಮಹತ್ತ್ವದ ಕಾರ್ಯಕ್ರಮಗಳನ್ನು ಹಾಕಿಕೊಳ್ಳದೆ ಇರುವುದು. ಆದರೆ ೨೦೦೯ ಮತ್ತು ೨೦೧೦ರಲ್ಲಿ ಸ್ವಲ್ಪ ಉತ್ತಮ ಬೆಳವಣಿಗೆಯ ಕೆಲಸಗಳು ನಡೆದಿವೆ. ಪರಿಣಾಮವಾಗಿ, ಕರ್ನಾಟಕಕ್ಕೆ ೨೧ನೇ ಶತಮಾನವು ೧.೧.೧೧ರಿಂದಲೆ ಆರಂಭವಾಗುತ್ತದೆ. ಇತರ ರಾಜ್ಯಗಳು ಆಗಲೇ ತಮ್ಮ ಬೆಳವಣಿಗೆ ಯೋಜನೆಗಳಿಂದ ವೇಗವಾಗಿ ಮುಂದುವರಿಯುತ್ತಿವೆ.

ಇಪ್ಪತ್ತೊಂದನೆ ಶತಮಾನದಲ್ಲಿ ಶೀಘ್ರ ಪ್ರಗತಿಗೆ ಉತ್ತಮ ಮಾದರಿ ಯಾವುದೆಂದರೆ – ಮುಂಬಯಿ, ಪುಣೆ, ರಂಜನ್ಗಾವ್, ಔರಂಗಾಬಾದ್, ನಾಸಿಕ್ ಮತ್ತು ಮುಂಬಯಿಗಳನ್ನೊಳಗೊಂಡ ಮುಂಬೈ ಪೆಂಟಗನ್ ಪ್ರದೇಶದಲ್ಲಿ ಆಗುತ್ತಿರುವ ವೇಗದ ಬೆಳವಣಿಗೆಗಳು, ನಮ್ಮ ಪ್ರೀತಿಯ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪನವರು, ಶೀಘ್ರಬೆಳೆವಣಿಗೆಯೇ ಕರ್ನಾಟಕಕ್ಕೆ ಅವರ ಬೆಳವಣಿಗೆಯ ಮಂತ್ರವೆಂದು ಒತ್ತಿ ಹೇಳುತ್ತಾರೆ.

ಅವರ ಈ ಬೆಳವಣಿಗೆ ಮಂತ್ರ (Development Mantra) ಮಾನ್ಯ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪನವರು ಐದು ಕೋಟಿ ಕನ್ನಡ ಜನರಿಗೆ ಕೊಟ್ಟ ‘ದಿವ್ಯ ಮಂತ್ರ’ ಎಂದು ಕನ್ನಡ ಜನರಿಗೆ ಒತ್ತಿ ಹೇಳಲು ಇಷ್ಪಪಡುತ್ತೇನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಗಸ
Next post ಕೈ ಸಾಲ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…