ಸತ್ತು ಬದುಕಿರುವರು

ಸತ್ತು ಬದುಕಿರುವರು

ಇಲ್ಲಿ ಈ ನೆಲದಲ್ಲಿ ಕೆಲವರು ಬದುಕಿದ್ದಾಗಲೇ ಸತ್ತಂತಿರುವರು. ಇನ್ನು ಕೆಲವರು ಸತ್ತರೂ ಇನ್ನೂ ಬದುಕಿರುವರು.

ನಾನು ೧೯೯೧ರಿಂದಲೂ ತಿರುಪತಿ ತಿಮ್ಮಪ್ಪನ ಬಳಿ ಹೋಗಿ ಬರುತ್ತಲೇ ಇದ್ದೇನೆ. ಪ್ರತಿ ಬಾರಿ. ಅಲ್ಲಿ ನನಗೆ ತೀರಾ ಆಕರ್‍ಷಣೆಯೆಂದರೆ…. ತಿರುಮಲ ಮಂದಿರದ ಪ್ರವೇಶ ಬಾಗಿಲಲ್ಲೇ ಶ್ರೀಕೃಷ್ಣ ದೇವರಾಯ ಭಯಭಕ್ತಿಲಿ ಕರ ಮುಗಿದು ಶೋಭಾಯನಮಾನವಾಗಿ ನಿಂತು ನಮ್ಮನ್ನೆಲ್ಲ ಸ್ವಾಗತಿಸುತ್ತಿರುವ ಪರಿಗೆ ತನ್ನ ಎಡ ಮತ್ತು ಬಲಭಾಗದಲ್ಲಿ ಧರ್‍ಮಪತ್ನಿಯರೂ ಕೂಡಾ ಕರ ಮುಗಿದು ಪ್ರಸನ್ನವದನರಾಗಿ ನಿಂತಿರುವ ಭಂಗಿಗೆ ಬೆರಗಾದೆ.

ವಿಜಯನಗರ ನಿರ್‍ಮಾಣ ತೇಜ ಕನ್ನಡ ರಾಜ್ಯ ರಮಾರಮಣನೆಂದೇ ಖ್ಯಾತಿ ಪ್ರಖ್ಯಾತಿ ಪಡೆದಿದ್ದ ಶ್ರೀಕೃಷ್ಣದೇವರಾಯನ ಕಾಲದಲ್ಲಿ ಮುತ್ತುರತ್ನ ವಜ್ರವೈಡೂರ್‍ಯಗಳನ್ನು ರಾಶಿರಾಶಿ ಹಾದಿಬೀದಿಯಲ್ಲಿ ಬಳ್ಳದಿಂದ ಅಳೆದು ಮಾರಿದ ಕಾಲದಲ್ಲಿದ್ದನೆಂಬುದಕ್ಕಿಂತ ಈಗ ಹೇಗೆ ಅಲ್ಲಿ ನಿಂತಿದ್ದಾನೆ. ಅಲ್ಲಿಯು ಸಲ್ಲಿದವ ಇಲ್ಲಿಯೂ ಹೇಗೆ ಸಲ್ಲುತ್ತಿರುವವನೆಂಬುದಿಲ್ಲಿ ಬಹಳ ಮುಖ್ಯವಾಗುವುದು!

ಶ್ರೀಕೃಷ್ಣದೇವರಾಯನಿಲ್ಲಿ ಜೀವಂತವಿದ್ದಾನೆ ಅನಿಸುವುದು, ಬಾಳಿ ಬದುಕಿ ಸತ್ತಿಲ್ಲ. ಸತ್ತು ಇಲ್ಲಿ ಬದುಕಿದ್ದಾನೆ ಎಂದು ನಮ್ಮ ಕಣ್ಣಿದುರಿಗೆ ಮೆರವಣಿಗೆ ಹೊರಡುವನು. ಇದಕ್ಕಿಂತ ಭಾಗ್ಯ ಇನ್ನಿಲ್ಲವೆನಿಸುವುದು.

ಶ್ರೀಕೃಷ್ಣದೇವರಾಯ ತಿರುಪತಿ ತಿಮ್ಮಪ್ಪನ ಪರಮ ಆರಾಧಕನಾಗಿದ್ದನಲ್ಲದೆ, ಇಬ್ಬರು ಸತಿಯರೊಂದಿಗೆ ಪ್ರತಿ ತಿಂಗಳಿಗೊಮ್ಮೆ ಬಂದು ಅಮೂಲ್ಯವಾದ ಪಚ್ಚೆ ಮುತ್ತು ರತ್ನ, ವಜ್ರ, ವೈಡೂರ್‍ಯ, ಚಿನ್ನವನ್ನರ್‍ಪಿಸಿ ತೆರಳಿದ್ದಕ್ಕೆ ಇಲ್ಲಿ ದಾಖಲೆಗಳಿವೆ! ಬರೀ ಚಿನ್ನದಿಂದ ನಿರ್‍ಮಿಸಿಕೊಟ್ಟ ಆನಂದ ನಿಲಯಂ ಕೂಡಾ ಇವರ ಕೊಡುಗೆಯಾಗಿದೆ.

– ಹೀಗೆ ಶ್ರೀಕೃಷ್ಣದೇವರಾಯ ಹಾಗೂ ಇಬ್ಬರು ಧರ್‍ಮಪತ್ನಿಯರೂ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಇಂದಿಗೂ ಜೀವಂತಿರುವರು. ಎಲ್ಲರ ಮನೆ ಮನಗಳಲ್ಲಿ ನೆಲೆ ನಿಂತಿರುವರು, ಜೀವನವೆಂದರೆ… ಇದಕ್ಕಿಂತ ಹೆಚ್ಚಿನದು ಇರುವುದಿಲ್ಲವಲ್ಲವೇ??
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇಕು-ಬೇಡ
Next post ಕಣ್ಣ ರೆಪ್ಪೆಯ ಕೆಳಗೆ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…